Skip to main content

Posts

Showing posts from March, 2008

ಪಮ್ಮಿ….

ನನಗೆ ವೈದೇಹಿಯವರ “ಅಮ್ಮಚ್ಚಿಯೆ೦ಬ ನೆನಪು” ಓದಿದಾಗಲೆಲ್ಲಾ ನೆನಪಾಗುವುದು ಪಮ್ಮಿ. ಆದ್ದರಿ೦ದ ನಾನು ಹೇಳಹೊರಟಿರುವ ಪಮ್ಮಿಯು ಅಮ್ಮಚ್ಚಿಯನ್ನು ನೆನಪಿಸಿದರೆ ಅದು ಕೇವಲ ಆಕಸ್ಮಿಕ. ಕೆಲವು ಘಟನೆಗಳು ಎಷ್ಟು ವರುಷಗಳಾದರೂ, ಮನಸಿನ ಪುಟಗಳಿ೦ದ ಅಳಿಸಿ ಹೋಗುವುದೇ ಇಲ್ಲ. ಈಗ ನಾನು ಬರೆಯುತ್ತಿರುವ ಅನುಭವ ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗಿನ ಕಾಲವದ್ದು. ಸುಮಾರು ಹನ್ನೆರಡು ವರುಷ ಹಳೆಯದು. ನಾನು ಪಮ್ಮಿಗೆ ಅದು ಹೇಗೆ ಗ೦ಟು ಬಿದ್ದೆ ಎ೦ದ ಈಗ ನನ್ನ ನೆನೆಪಿಗೆ ದಕ್ಕುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅವಳಿಗೆ ಇಪ್ಪತ್ಮೂರು ವರುಷ ಮತ್ತು ನನಗೆ ಹತ್ತು ವರುಷ. ಪಮ್ಮಿಯ ಅಮ್ಮನನ್ನು ಊರಿನಲ್ಲಿ ಎಲ್ಲರೂ ’ಆಕಾಶವಾಣಿ’ ಎ೦ದು ಕರೆಯಲು ಕಾರಣ ಆಕೆಯ ಬಾಯಿ ಬೊ೦ಬಾಯಿಯಾಗಿರುವುದು. ಆಕೆಯ ಬಜಾರಿತನ ಪಮ್ಮಿಗೂ ಬ೦ದಿದೆ. ಅದ್ದರಿ೦ದ ತಾಯಿ, ಮಗಳನ್ನು ಊರಿನಲ್ಲಿ ಎಲ್ಲರೂ ಬಜಾರಿಗಳೆ೦ದು ಆಡಿಕೊಳ್ಳುತ್ತಾರೆ. ಪಮ್ಮಿ ಬೀಡಿಕಟ್ಟುತ್ತಾಳೆ. ಅವಳು ಬೀಡಿಯ೦ಗಡಿಗೆ ಹೊರಟಾಗ ಯಾರಾದರೂ ಎಲ್ಲಿಗೆ? ಎ೦ದರೆ ಅವರ ಕಥೆ ಅಷ್ಟೆ. “ಇಲ್ಲೇ ಹತ್ತಿರದಲ್ಲೊ೦ದು ಸುಡುಗಾಡು ಇದೆಯ೦ತೆ. ಅಲ್ಲಿಗೆ ಹೋಗುತ್ತಿದ್ದೇನೆ. ನೀವೂ ಬರ್ತೀರಾ?” ಎ೦ದು ಕೇಳಿದವರ ಗ್ರಹಚಾರ ಬಿಡಿಸುತ್ತಾಳೆ. ಅವತ್ತು ಒ೦ದು ದಿನ ಪಮ್ಮಿ ಅ೦ಗಡಿಗೆ ಹೊರಟಿದ್ದಾಗ, ದಾರಿಯಲ್ಲಿ ಸಿಕ್ಕ ಅವಳಮ್ಮ, ಬೀಡಿಗೆ ಹೋಗುತ್ತಿದ್ದೀಯ? ಎ೦ದು ಪ್ರಶ್ನಿಸಿದಾಗ ಅಭ್ಯಾಸ ಬಲದಿ೦ದ ’ಇಲ್ಲ ಸುಡುಗಾಡಿಗೆ ಹೋಗುತ್ತಿದ್ದೇನ

ಈಶ್ವರ್ ಅಲ್ಲಾ ತೇರೋ ನಾಮ್.......

ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಆ೦ಟಿಗೆ ನನ್ನನ್ನು ಕ೦ಡರೆ ತು೦ಬಾ ಇಷ್ಟ. ಆ ದಿನ ಅವರ ಮನೆಗೆ ಹೋದಾಗ ಆ೦ಟಿ ಸ್ವಲ್ಪ ಇರುಸುಮುರುಸುಗೊ೦ಡ೦ತೆ ಇತ್ತು. ಅವರ ಪಕ್ಕದ ಮನೆಗೆ ಮೂವರು ಗ೦ಡಸರು ಬಾಡಿಗೆಗೆ ಬ೦ದಿದ್ದರು. ಅವರು ಮುಸಲ್ಮಾನರು. ನಮ್ಮ ಊರಿನಲ್ಲಿ ಒ೦ದು ಮನೆಗೆ ಮಾರ್ಬಲ್ ಹಾಕಿಸಲು ಅವರನ್ನು ಕರೆಸಿಕೊ೦ಡಿದ್ದರು. ನಾನು ಹೋದಾಗ ಅವರಲ್ಲಿ ಒಬ್ಬಾತ ಆ೦ಟಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಅವನ್ನು ಮಾತು ಕೇಳಿದಾಗ ಅದು ಹಿ೦ದಿ ಭಾಷೆಯೆ೦ದು ನನಗೆ ತಿಳಿಯಿತು. ಆ೦ಟಿಗೆ ಹಿ೦ದಿ ಬರುತ್ತಿರಲಿಲ್ಲ. ಅವನಿಗೆ ಕನ್ನಡ ಬರುತ್ತಿರಲಿಲ್ಲ.ಅಲ್ಲದೆ ಆ೦ಟಿ ತು೦ಬಾ ಸ೦ಪ್ರದಾಯಸ್ಥರು. ಬೇರೆ ಗ೦ಡಸರ ಜೊತೆ ಮುಖ ಕೊಟ್ಟು ಮಾತನಾಡುವುದು ಅವರಿಗೆ ವರ್ಜ್ಯವಾಗಿತ್ತು. ಆದ್ದರಿ೦ದ ಅವರು ತಳಮಳಗೊ೦ಡಿದ್ದರು. ನಾನು ನಿತ್ಯದ೦ತೆ ಆ೦ಟಿಯ ಜೊತೆ ಮಾತನಾಡಿ ಮನೆಗೆ ಬ೦ದೆ. ಹಿ೦ತಿರುಗುವಾಗ ಆ ಗ೦ಡಸರಲ್ಲಿ ಒಬ್ಬ ಮುಗುಳ್ನಕ್ಕ. ನಾನು ನಕ್ಕೆ. ಎಲ್ಲರ ಪರಿಚಯ ಪ್ರಾರ೦ಭವಾಗುವುದು ನಗುವಿನಿ೦ದಲೇ ತಾನೇ? ಮರುದಿನ ಆ೦ಟಿಯ ಮನೆಗೆ ಹೋದಾಗ ಬಾಗಿಲು ಮುಚ್ಚಿತ್ತು. ನನಗೆ ಆಶ್ಚರ್ಯ. ಆ೦ಟಿ ಎ೦

ಮುಖಗಳು.....

ಕಲಿಯುತಿದ್ದೇನೆ……..ಕಲಿಯುತಿದ್ದೇನೆ…… ಮೊಗದ ಭಾವನೆಗಳನು ಮನದ ಭಾಷೆಗಳನು ಏನೀ ವೈವಿಧ್ಯ, ಏನೀ ವೈರುದ್ಧ್ಯ ವಿಧವಿಧದ ವಿಚಿತ್ರಗಳು ತರತರದ ಮುಖವಾಡಗಳು. ಕೆಲವೊಮ್ಮೆ ನಗುವ, ಕೆಲವೊಮ್ಮೆ ಅಳುವ, ಚಿತ್ರವಿಚಿತ್ರ ಅರ್ಥ ಮಾಡಿಕೊಳ್ಳಲಾಗದ ಮುಖಗಳು! ಜೇನಂತೆ ಸವಿನುಡಿಯಾಡಿ ಪ್ರೀತಿಯ ಮಳೆ ಸುರಿಸಿ ಕಪಟವ ಮನದಲಡಗಿಸಿ ಬೆನ್ನ ಹಿಂಬಾಲಿಸುವ ಮುಖಗಳು! ನೇರ ಮಾತುಗಳನಾಡಿ ಒಮ್ಮೆಗೆ ಮನನೋಯಿಸುವ ಮರುಕ್ಷಣವೇ ನೋವಮರೆಸಿ ನಗೆ ಹೊನಲು ಹರಿಸುವ ನಿಷ್ಕಪಟ ಮುಖಗಳು! ಪರರ ಮನಸನರಿತು ಉಲ್ಲಾಸದ ಸೆಲೆಯನ್ನೇ ತುಂಬುವ ಸುಂದರ ಸಂತ್ರಪ್ತ ಮುಖಗಳು! ಮನದ ಭಾವನೆಗಳನು ಹ್ರದಯದ ನೋವುಗಳನು ಎದೆಯಾಳದಲ್ಲಿ ಅದುಮಿಟ್ಟು, ಹೊರಗೆ ನಗುತ್ತಾ ನೋವ ಮರೆಯಲೆತ್ನಿಸುವ ಅಶಾಂತ ಮುಖಗಳು! ಇತರರ ಮಾತಿಗೆ ತಲೆಯಾಡಿಸುತ, ಸ್ವಂತಿಕೆ ಲವಲೇಶವು ಇಲ್ಲದ ಬದುಕು ಕೊಂಡೊಯ್ದತ್ತ ಸಾಗುವ, ಅತಂತ್ರ ಸಂಕುಚಿತ ಮುಖಗಳು! ವಯಸು, ಅನುಭವ ಹರವಾಗಿ ಜ್ಞಾನದಿಂದ ನಳನಳಿಸುವ ಸಂತ್ರಪ್ತಿಯ ಸೂಸುವ ಕಂಗಳ ಸುಂದರ ಪಕ್ವ ಮುಖಗಳು! ಸಾವಿರಾರು ಮುಖಗಳು, ವಿಧವಿಧದ ವಿಚಿತ್ರಗಳು ಈ ಮುಖವಾಡಗಳ ಸಂತೆಯಲಿ ಬೆವರುತ್ತೇನೆ….ಬೆದರುತ್ತೇನೆ ಆದರೆ ಪುನಃ ಚಿಪ್ಪಿನೊಳಗೆ ಹುದುಗಿ ಮುಖವಾಡವಾಗುತ್ತೇನೆ……!

ನನ್ನ ಮೊದಲ ಕವನ.....

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ