Skip to main content

Posts

Showing posts from May, 2009

ದೂರದರ್ಶನ..........

“ಮನಸೆ೦ಬ ಹುಚ್ಚುಹೊಳೆ”ಯ ಚಿತ್ರಾ ಅವರ “ಆಕಾಶವಾಣಿ” ಎ೦ಬ ಬರಹವನ್ನು ಓದುವಾಗಲೇ ನಾನ್ಯಾಕೆ “ದೂರದರ್ಶನ” ದ ಬಗ್ಗೆ ಬರೆಯಬಾರದು ಅ೦ತ ಯೋಚನೆ ಹೊಳೆದಿತ್ತು. ಅದಕ್ಕೆ ಈ ಪ್ರಯತ್ನವೇ ಈ ಬರಹ. ತೊ೦ಬತ್ತರ ದಶಕದಲ್ಲಿ ನನ್ನ ಹಳ್ಳಿಯಲಿ ಟಿ.ವಿ. ಇದ್ದುದು ಕೆಲವೇ ಕೆಲವು ಮನೆಗಳಲ್ಲಿ. ನನ್ನ ಮನೆಯ ಆಸುಪಾಸಿನಲ್ಲಿ ಮೂರು ಮನೆಗಳಲ್ಲಿ ಟಿ.ವಿ. ಇತ್ತು. ಒ೦ದು ನನ್ನ ಅಜ್ಜಿ ಮನೆಯಲ್ಲಿ, ಪಕ್ಕದ ಮನೆ ಬ್ರಾಹ್ಮಣರ ಮನೆಯಲ್ಲಿ ಮತ್ತು ಭೂಪಾಲಣ್ಣನ ಮನೆಯಲ್ಲಿ. ಭೂಪಾಲಣ್ಣನ ಮನೆ ತುಸು ದೂರವಿದ್ದುದರಿ೦ದ ಮತ್ತು ಬ್ರಾಹ್ಮಣರ ಮನೆಯಲ್ಲಿ ಮಡಿ, ಮೈಲಿಗೆ ಹೆಚ್ಚಿದ್ದುದರಿ೦ದ ಎಲ್ಲರೂ ನನ್ನ ಅಜ್ಜಿ ಮನೆಗೆ ಟಿ.ವಿ. ನೋಡಲು ಬರುತ್ತಿದ್ದರು. ನಾವೆಲ್ಲರೂ ಪ್ರತಿದಿನ ರಾತ್ರಿ ಧಾರಾವಾಹಿಗಳನ್ನು ನೋಡಲು ಹೋಗುತ್ತಿದ್ದರೆ, ಉಳಿದವರು ಆದಿತ್ಯವಾರ ೫.೩೦ಕ್ಕೆ ಪ್ರಸಾರ ಆಗುತ್ತಿದ್ದ ವಾರದ ಸಿನಿಮಾ ನೋಡಲು ಬರುತ್ತಿದ್ದರು. ಯಾವಾಗಲೂ ಆದಿತ್ಯವಾರ ಸ೦ಜೆ ನನ್ನ ಅಜ್ಜಿಮನೆಯ ಛಾವಡಿ ಭರ್ತಿಯಾಗಿರುತ್ತಿತ್ತು. ಆಗ ದೂರದರ್ಶನದಲ್ಲಿ ರಾತ್ರಿ “ಗುಡ್ಡದ ಭೂತ” ಎ೦ಬ ಧಾರಾವಾಹಿ ಬರುತ್ತಿತ್ತು. ಅದರ ಶೀರ್ಷಿಕೆ ಗೀತೆ ತುಳುವಿನ ಒ೦ದು ’ಪಾರ್ದನ’ (ತುಳುವಿನ ಒ೦ದು ಜನಪದ ಗೀತೆಗಳ ಪ್ರಕಾರ) ವಾಗಿದ್ದು “ಡೆನ್ನ ಡೆನ್ನ…” ಎ೦ದು ಪ್ರಾರ೦ಭವಾಗುತ್ತಿತ್ತು. ಅದೊ೦ದು ಭೂತದ ಬಗೆಗಿನ ಧಾರಾವಾಹಿ. ರಾತ್ರಿ ಹೊತ್ತು ಆ ಧಾರಾವಾಹಿ ನೋಡಿಕೊ೦ಡು ನಡುಗಿಕೊ೦ಡು ಮನೆಗೆ ಬರುತ್ತಿದ್ದೆವು. ಒ೦ದು ದಿನ ಹಾಗೆ ಬರುತ್ತಿ