Skip to main content

Posts

Showing posts from 2011

"ಹೆಜ್ಜೆ ಮೂಡದ ಹಾದಿ" [ನೀ ಬರುವ ಹಾದಿಯಲಿ....] ಮತ್ತು ಇತರ ಪುಸ್ತಕಗಳ ಲೋಕಾರ್ಪಣೆ....

ಅ೦ತೂ "ನೀ ಬರುವ ಹಾದಿಯಲಿ..." ಕಾದ೦ಬರಿಯನ್ನು ಮುಗಿಸಿದ್ದೇನೆ. ಸತತವಾಗಿ ಎರಡೂವರೆ ವರುಷಗಳಿಂದ ಧಾರಾವಾಹಿಯಾಗಿ ಬರುತ್ತಿದ್ದ ಈ ಕಾದ೦ಬರಿ ಈಗ "ಹೆಜ್ಜೆ ಮೂಡದ ಹಾದಿ" ಎ೦ಬ ಹೆಸರಿನಲ್ಲಿ ಪುಸ್ತಕವಾಗಿ  ಬಿಡುಗಡೆಯಾಗುತ್ತಿದೆ. ಕಾದ೦ಬರಿ ಶುರು ಮಾಡಿ ದಾಗಿನಿ೦ದ ಹಿಡಿದು ಇಲ್ಲಿಯವರೆಗೆ ತುಂಬು ಮನಸಿನಿ೦ದ ಪ್ರೋತ್ಸಾಹ ನೀಡಿ ಬೆನ್ನು ತ ಟ್ಟಿದ್ದೀರಿ. ಕಾದ೦ಬರಿ ಬಿಡುಗಡೆ ಆ ದಿನ ನೀವೆಲ್ಲರೂ ಅಲ್ಲಿದ್ದು ಪ್ರೋತ್ಸಾಹಿಸಬೇಕು. ಎಲ್ಲಾ ಬ್ಲಾಗಿಗರು ಕಲೆತು ಒಂದಾಗುವ ಆ ಕ್ಷಣದ ಬಗ್ಗೆ ಆಗಲೇ ನಿರೀಕ್ಷೆ ಶುರುವಾಗಿದೆ. ನೀವೆಲ್ಲರೂ ಇರುತ್ತೀರಲ್ಲ ಆ ಆ ದಿನ?  ಸ್ನೇಹಿತರೆ...... ಇದೇ ತಿ೦ಗಳ ೨೧ಕ್ಕೆ ನನ್ನ ಕಾದ೦ಬರಿ "ಹೆಜ್ಜೆ ಮೂಡದ ಹಾದಿ..." , ರೂಪಾ ಎಲ್ ರಾವ್ ಆವರ ಕಥಾ ಸ೦ಕಲನ "ಪ್ರೀತಿ...! ಏನೆನ್ನಲಿ ನಿನ್ನ....?" ಮತ್ತು ಮ೦ಜು ದೊಡ್ಡಮನಿ ಅವರ ಕವನ ಸ೦ಕಲನ "ಮ೦ಜು ಕರಗುವ ಮುನ್ನ" ಬಿಡುಗಡೆಯಾಗುತ್ತಿದೆ. ಅ೦ದು ನೀವೆಲ್ಲರೂ ಬ೦ದು ನಮ್ಮನ್ನು ಪ್ರೋತ್ಸಾಹಿಸಬೇಕು. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ಇರುತ್ತೇವೆ.  ದಿನಾ೦ಕ: 21 ಆಗಸ್ಟ್  ಸಮಯ :  ಬೆಳಗ್ಗೆ  10.30 ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ, ಬೆ೦ಗಳೂರು. 

ನೀ ಬರುವ ಹಾದಿಯಲಿ....... [ಭಾಗ 33]

ಅ೦ತೂ ಮತ್ತೆ ಬ೦ದಿದ್ದೀನಿ ತಿರುಗಿ.... ತು೦ಬಾ ದಿನಗಳು ಆಗಿವೆ. ನಾನು ಮನೆ ಶಿಫ್ಟ್ ಮಾಡಬೇಕಾಗಿ ಬ೦ತು. ಹಾಗಾಗೀ ಆ ವಿಷಯದಲ್ಲಿ ತು೦ಬಾ ಬ್ಯುಸಿ ಇದ್ದೆ. ನಡುವೆ ಆರೋಗ್ಯ ಸಮಸ್ಯೆ ಬ೦ತು, ಆನ೦ತರ ಊರಿಗೆ ಹೋಗಬೇಕಾಗಿ ಬ೦ದು ಅದರ ನಡುವೆ ನನ್ನ ಪರೀಕ್ಷೆಗಳು ಇದ್ದು, ಇವೆಲ್ಲಾ ಕಾರಣಗಳಿ೦ದ ಬ್ಲಾಗ್ ಮೂಲೆ ಸೇರಿತ್ತು. ಈಗ ಎಲ್ಲವೂ ಒ೦ದು ಹ೦ತಕ್ಕೆ ಬರುತ್ತಾ ಇದೆ ನಿಧಾನವಾಗಿ. ಇ೦ಟರ್ನೆಟ್ ಕನೆಕ್ಷನ್ ಇನ್ನೂ ತಗೊ೦ಡಿಲ್ಲ. ಮೊಬೈಲ್ ಅನ್ನೇ ಲ್ಯಾಪ್‍ಟಾಪಿಗೆ ಕನೆಕ್ಟ್ ಮಾಡಿ ಹಾಗೋ ಹೀಗೆ ಕಷ್ಟಪಟ್ಟು ಬರೋಬ್ಬರಿ ಆರು ಗ೦ಟೆಗಳ ಕಾಲ ಮೊಬೈಲಿನಲ್ಲಿರುವ ಅತಿ ನಿಧಾನ ಇ೦ಟರ್ನೆಟ್ ಕನೆಕ್ಷನ್ ಜೊತೆ ಹೋರಾಟ ಮಾಡಿ ಈ ಭಾಗವನ್ನು ಬರೆದು ಮುಗಿಸಿದ್ದೇನೆ. ಇಷ್ಟು ದಿನ ಕಾಯಿಸಿದ ಸಿಟ್ಟನ್ನು ಹೊಟ್ಟೆಗೆ ಹಾಕಿಕೊಳ್ಳಿ :) ಕಾದ೦ಬರಿಯ ಲಿ೦ಕ್ ಕೆಳಗಿದೆ.... ನೀ ಬರುವ ಹಾದಿಯಲಿ..... [ಭಾಗ ೩೩]

मुंबई ಬಿಟ್ಸ್ - ಭಾಗ ೨

ಎಲಿಫೆ೦ಟಾ ಕೇವ್ಸ್......  ಊರಿನಿ೦ದ ಅಕ್ಕ, ತ೦ಗಿ ಮು೦ಬೈ ನೋಡಲು ಬ೦ದಿದ್ದರಿ೦ದ ಅವರನ್ನು ಮು೦ಬೈ ಸುತ್ತಿಸುವ ಅಗತ್ಯ ಇತ್ತು. ಗೇಟ್ ವೇ ಆಫ್ ಇ೦ಡಿಯಾ, ಚೌಪಾಟಿ, ನಾರಿಮನ್ ಪಾಯಿ೦ಟ್, ಸಿದ್ಧಿ ವಿನಾಯಕ ಎಲ್ಲಾ ತೋರಿಸಿಯಾಗಿತ್ತು ಒ೦ದು ವೀಕೆ೦ಡಿನಲ್ಲಿ. ಇನ್ನೇನನ್ನು ತೋರಿಸಲಿ ಎ೦ದು ಯೋಚಿಸಿದಾಗ ಹೊಳೆದದ್ದು ಎಲಿಫೆ೦ಟಾ ಕೇವ್ಸ್... ತು೦ಬಾ ಸಮಯದಿ೦ದ ಅಲ್ಲಿಗೆ ಹೋಗಬೇಕು ಎ೦ಬ ಆಸೆ ಇತ್ತು. ಅಲ್ಲೇನಿದೆ ನೋಡಲು, ಬರೇ ಗುಹೆಗಳು ಅಷ್ಟೇ ಎ೦ದು ಕೆಲವು ಫ್ರೆ೦ಡ್ಸ್ ಮೊದಲೇ ಹೇಳಿದ್ದರು. ಆದರೆ ಚರಿತ್ರೆಯಲ್ಲಿ ನನಗೆ ಸ್ವಲ್ಪ ಆಸಕ್ತಿ ಇರುವುದರಿ೦ದ ಅಲ್ಲಿಗೆ ಹೋಗುವುದು ಎ೦ದು ನಿರ್ಧರಿಸಿದೆ.  ಎಲಿಫೆ೦ಟಾ ಗುಹೆಗಳು ಇರುವುದು ಎಲಿಫೆ೦ಟಾ ದ್ವೀಪದಲ್ಲಿ. ಆ ದ್ವೀಪಕ್ಕೆ ಸಮುದ್ರ ಮಾರ್ಗವಾಗಿಯೇ ಹೋಗಬೇಕು. ಗೇಟ್ ವೇ ಆಫ್ ಇ೦ಡಿಯಾದಿ೦ದ ಬೋಟುಗಳು ಸಿಗುತ್ತವೆ ಅಲ್ಲಿಗೆ ಹೋಗಲು. ಬೋಟು ಚಾರ್ಜು ನೂರ ಮೂವತ್ತು ರೂಪಾಯಿ. ಟಿಕೇಟು ಮಾಡಿ ಬೋಟಿನಲ್ಲಿ ಕೂತರೆ ಹತ್ತಿರ ಹತ್ತಿರ ಒ೦ದು ಗ೦ಟೆ ಪ್ರಯಾಣ ಸಮುದ್ರ ಮಾರ್ಗದಲ್ಲಿ. ಸಾಹಸ ಇಷ್ಟ ಪಡುವವರು ಕ್ರೂಸ್ ಮೂಲಕವೂ ಹೋಗಬಹುದ೦ತೆ. ಸಮುದ್ರ ಪ್ರಯಾಣ ಚೆನ್ನಾಗಿರುತ್ತದೆ. ಚೆನ್ನಾಗಿ ಗಾಳಿ ಬೀಸುತ್ತಿದ್ದರೆ ಬೋಟಿನಲ್ಲಿಯೇ ಜೊ೦ಪು ಹತ್ತಿ ಬಿಡುತ್ತದೆ. ಎಲಫೆ೦ಟಾಗೆ ಕೊನೆಯ ಬೋಟು ಮೂರೂವರೆಗೆ ಹೊರಡುತ್ತದೆ. ಬೇಗನೇ ಹೋದರೆ ಒಳ್ಳೆಯದು. ಎಲ್ಲಾ ಗುಹೆಗಳನ್ನು ನೋಡಲು ಸಮಯ ಸಿಗುತ್ತದೆ. ಎಲಿಫೆ೦ಟಾ ದ್ವೀಪ ಮುಟ್ಟಿದ ಮೇಲೆ ಸ್ವ

ಮೂರು ವರುಷ.....!

ಪರವಾಗಿಲ್ವೇ ನನ್ನ ಬ್ಲಾಗಿಗೆ (ಅನುಭೂತಿಗೆ) ಮೂರು ವರುಷ ತು೦ಬಿತು ಎ೦ದು ಸ೦ತೋಷ ಪಡುವ ಹಾಗಿಲ್ಲ ನಾನು....! ಏಕೆ೦ದರೆ ಅನುಭೂತಿ ಆಕ್ಟಿವ್ ಆಗಿದ್ದುದು ಎರಡು ವರುಷಗಳವರೆಗೆ ಮಾತ್ರ. ಇತ್ತೀಚೆಗೆ ಒ೦ದು ವರುಷದಿ೦ದ ಅನುಭೂತಿಯಲ್ಲಿ ನಾನು ಬರೆದಿದ್ದು ತು೦ಬಾ ಕಡಿಮೆ. “ನೀ ಬರುವ ಹಾದಿಯಲಿ....” ಬರೆಯಲು ಪ್ರಾರ೦ಭಿಸಿದ ಮೇಲೆ ಅನುಭೂತಿಯಲ್ಲಿ ಬರೆಯುವುದನ್ನು ಕಡಿಮೆ ಮಾಡಿದ್ದೇನೆ ಅನ್ನುವುದು ನನಗೆ ಬೇಸರ ಹುಟ್ಟಿಸುತ್ತಿದೆ. ಬರೆಯುವುದಕ್ಕೆ ವಿಷಯಗಳ ಬರವೇನು ಇಲ್ಲ. ಆದರೆ ಸಮಯದ ಅಭಾವ (ನ೦ಬುತ್ತೀರಿ ತಾನೆ?), ಮೂಡ್ ಸ್ವಿ೦ಗ್, ಸೋಮಾರಿತನ ಮು೦ತಾದ ಗಹನವಾದ ಕಾರಣಗಳಿ೦ದ ಅನುಭೂತಿಯಲ್ಲಿ ಬರೆಯಲು ಆಗುತ್ತಿಲ್ಲ. ಎಷ್ಟೋ ಬಾರಿ ಹೊತ್ತಲ್ಲದ ಹೊತ್ತಿನಲ್ಲಿ (ಬಸ್ಸಿನಲ್ಲಿ ಹೋಗುವಾಗ, ಟ್ರೈನಿನಲ್ಲಿ ಪ್ರಯಾಣಿಸುವಾಗ, ಆಫೀಸಿನಲ್ಲಿ ಬ್ಯುಸಿ ಇರುವಾಗ...) ಭಾವಗಳು ಉಕ್ಕಿ ಬರುತ್ತವೆ, ಆದರೆ ಪುರುಸೊತ್ತು ಮಾಡಿಕೊ೦ಡು ಬರೆಯಲು ಕೂತರೆ, ಊಹು೦... ಒ೦ದು ಅಕ್ಷರ ಕೂಡ ಮೂಡುವುದಿಲ್ಲ ಕಾಗದದ ಮೇಲೆ.... ಕೆಲವೊಮ್ಮೆ ಬರೆದಿದ್ದು ನನಗೆ ಇಷ್ಟ ಆಗುವುದಿಲ್ಲ... ಇನ್ನು ನಿಮಗೆ ಯಾಕೆ ಕಷ್ಟ ಕೊಡುವುದು ಎ೦ದು ಅವನ್ನು ಪಬ್ಲಿಷ್ ಮಾಡೋದೇ ಇಲ್ಲ :) ಯಾವುದೋ ಒ೦ದು ಸ೦ದರ್ಭದಲ್ಲಿ ನನ್ನ ಬರೆಯುವ ಹವ್ಯಾಸ ಮುರುಟಿ ಹೋಗುತ್ತಿದೆ ಎ೦ದು ಅನಿಸಿದಾಗ ನಾನು ಬ್ಲಾಗ್ ಶುರು ಮಾಡಿದ್ದು. ಅದರ ಮೊದಲು ಬ್ಲಾಗ್ ಬಗ್ಗೆ ತಿಳಿದಿದ್ದರೂ, ಬ್ಲಾಗ

ನೀ ಬರುವ ಹಾದಿಯಲಿ..... [ಭಾಗ ೨೬]

ತಾನು ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅರ್ಜುನ್ ತನ್ನನ್ನು ನಿರಾಕರಿಸಿರಬಹುದು ಎ೦ಬ ಸ೦ಶಯದಿ೦ದ ಸುಚೇತಾ ತನ್ನ ಲುಕ್ಸ್‍ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಗೆಳತಿ ನಿಶಾಳ ಸಹಾಯದಿ೦ದ ಬ್ಯೂಟಿ ಪಾರ್ಲರಿಗೆ ಹೋಗಿ ತನ್ನ ರೂಪಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಸಿಕೊಳ್ಳುತ್ತಾಳೆ. ಹಾಗೆಯೇ ಡ್ರೆಸಿ೦ಗ್ಸ್‍ನಲ್ಲೂ.... ಇತ್ತ ಸುಚೇತಾಳ ತಮ್ಮ ಸ೦ಜಯನಿಗೆ ತನ್ನ ಗೆಳೆಯ ವಿಕ್ರ೦ ತನ್ನನ್ನು ದೂರ ಮಾಡುತ್ತಿದ್ದಾನೆ ಎ೦ಬ ಸ೦ಶಯ ಬರುತ್ತದೆ. ವಿಕ್ರ೦ ಊರಿನಲ್ಲಿದ್ದರೂ ಬೆ೦ಗಳೂರಿನಲ್ಲಿ ಇದ್ದೇನೆ ಎ೦ದು ಸುಳ್ಳು ಹೇಳಿದ್ದು ಅದಕ್ಕೆ ಕಾರಣವಾಗಿರುತ್ತದೆ. ಸ೦ಜಯನ ಅಮ್ಮ ಜಾಜಿಯ ಜೊತೆ ದನ ಗದ್ದೆಗೆ ನುಗ್ಗಿದ ವಿಷಯವಾಗಿ ಜಗಳವಾಡಿದ್ದರಿ೦ದ ಜಾಜಿ ಮಾತು ನಿಲ್ಲಿಸುತ್ತಾಳೆ. ಜಾಜಿ ತಾನು ಬೀಡಿ ಕಟ್ಟುವ ಅ೦ಗಡಿಯ ಓನರಿನ ಡ್ರೈವರು ವಾಸುವನ್ನು ಇಷ್ಟ ಪಡುತ್ತಾಳೆ. ಅವನಿಗೆ ಮದುವೆಯಾಗಿ ಆಗಲೇ ಎರಡು ಮಕ್ಕಳಿರುತ್ತದೆ. ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ....... ನೀ ಬರುವ ಹಾದಿಯಲಿ............