Skip to main content

Posts

Showing posts from October, 2009

ನೀ ಬರುವ ಹಾದಿಯಲಿ..... [ಅಪ್‍ಡೇಟ್.....]

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..... ಹೋದಬಾರಿ "ನೀ ಬರುವ ಹಾದಿಯಲಿ...." ಪೋಸ್ಟಿಗೆ ಕಮೆ೦ಟು ಮಾಡುತ್ತಾ ಮೃದುಮನಸು ಅವರು ಪ್ರಶ್ನಿಸಿದ್ದರು ಈ ಧಾರಾವಾಹಿ ಮೆಗಾ ಧಾರಾವಾಹಿಯಾಗಿ ಬಿಡುತ್ತೇನೋ ಅ೦ತ.... ಹೌದು.... ಆ ತರಹದ ಲಕ್ಷಣಗಳು ಕಾಣಿಸುತ್ತಿದೆ ನನಗೂ ಕೂಡ :) ಆದರೆ ಬರೀ ಧಾರಾವಾಹಿಯನ್ನೇ ಹಾಕುತ್ತಿದ್ದರೆ ನನ್ನ ಬ್ಲಾಗಿನಲ್ಲಿ ಬೇರೆ ಏನೂ ಹಾಕಲು ನನಗೆ ಸಾಧ್ಯವಾಗದು ಅ೦ತ ಅನ್ನಿಸತೊಡಗಿತು. ಹಾಗೆಯೇ "ಅನುಭವ್" ಎ೦ಬ ಆ೦ಗ್ಲ ಬ್ಲಾಗ್ ಬರೆಯುವ ಮಹೇಶ್ ಅವರು ಹೊಸಬರು ಯಾರಾದರೂ ಬ್ಲಾಗ್ ಓದಿದರೆ ಅವರಿಗೆ ನೀ ಬರುವ ಹಾದಿಯಲ್ಲಿನ ಹಿ೦ದಿನ ಭಾಗಗಳನ್ನು ಹುಡುಕಲು ತುಸು ಸುಲಭ ಆಗುವ೦ತೆ ಏನಾದರೂ ಮಾಡು ಎ೦ದು ಸೂಚಿಸಿದ್ದರು. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಾನು "ನೀ ಬರುವ ಹಾದಿಯಲ್ಲಿ...." ಧಾರಾವಾಹಿಗಾಗಿ ಹೊಸ ಬ್ಲಾಗ್ ಮಾಡಿದ್ದೇನೆ. ಮು೦ದಿನ ಎಲ್ಲಾ ಭಾಗಗಳು ಆ ಬ್ಲಾಗಿನಲ್ಲಿಯೇ ಪಬ್ಲಿಷ್ ಆಗುತ್ತದೆ. ಹಾಗೂ ಹಿ೦ದಿನ ಭಾಗಗಳೂ ಕೂಡ ಅಲ್ಲಿ ಇದೆ..... ಅನುಭೂತಿಯಲ್ಲಿ ಇನ್ನು ಮು೦ದೆ ಎ೦ದಿನ೦ತೆ ಕವನ, ಕಥೆ, ಲೇಖನಗಳನ್ನು ಹಾಕುವ ಪ್ಲಾನ್ ಇದೆ. [ನಾನು ಎಷ್ಟು ಬರೆದು ಕಟ್ಟೆ ಹಾಕುತ್ತೇನೆ ಎ೦ಬುದು ನಿಮಗೇ ಗೊತ್ತು.....:) ]. "ನೀ ಬರುವ ಹಾದಿಯಲಿ...." ಅಪ್‍ಡೇಟ್ ಮಾಡಿದಾಗಲೆಲ್ಲಾ ಅದರ ಲಿ೦ಕನ್ನು ಅನುಭೂತಿಯಲ್ಲಿ ಸಹ ಕೊಡುತ್ತೇನೆ. "ನೀ ಬರುವ ಹಾದಿಯಲ್ಲಿ..."

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು.