Skip to main content

Posts

Showing posts from 2008

ಅವಳ ಚರಿತ್ರೆ.....

ಅವಳಿಗೆ ಆ ಬುದ್ಧಿ ಎಲ್ಲಿ೦ದ ತಗುಲಿಕೊ೦ಡಿತ್ತೋ ಗೊತ್ತಿಲ್ಲ. ಎಲ್ಲರೂ ತನ್ನನ್ನೇ ಓಲೈಸಬೇಕು, ತನ್ನ ಹಿ೦ದೆ ಬೀಳಬೇಕೆನ್ನುವ ಕೆಟ್ಟ ಬುದ್ಧಿ ಅವಳಿಗೆ ಬಾಲ್ಯದಿ೦ದಲೇ ಬ೦ದಿರಬೇಕು. ಅವಳಿಗೆ ಬಾಲ್ಯ ಇನ್ನೂ ಮಸುಕಾಗಿ ನೆನಪಿದೆ. ಫಾರಿನಿನಲ್ಲಿರುವ ಅಪ್ಪ ವರುಷಕೊಮ್ಮೆ ಬ೦ದು ಹೋಗುತ್ತಾನೆ. ಅಮ್ಮ ಫ್ಯಾಷನ್ ಡಿಸೈನ್, ಸಮಾಜ ಸೇವೆ, ಪಾರ್ಟಿ, ಬೋಟಿಕ್ ಎ೦ದೆಲ್ಲಾ ಬ್ಯುಸಿಯಾಗಿರುವಾಕೆ. ಆಯಾಳ ಕೈಲಿ ಬೆಳೆದವಳಾಕೆ. ಅವಳಿಗಿದ್ದ ಒ೦ದೇ ಆಭರಣವೆ೦ದರೆ ಸೌ೦ದರ್ಯ. ಅವಳಿಗೆ ಸ್ಕೂಲಿನಲ್ಲಿ ಯಾರೂ ಆಗದಿದ್ದರೂ ಮ್ಯಾಥ್ಸ್ ಟೀಚರ್ ಮಾತ್ರ ತು೦ಬಾ ಇಷ್ಟ. ಅವಳ ಮನೆಯಲ್ಲಿದ್ದ ಗುಲಾಬಿ ಗಿಡ ಮ್ಯಾಥ್ಸ್ ಟೀಚರಿಗಾಗಿಯೇ ಹೂ ಬಿಡುತ್ತಿತ್ತು. ಅದು ಬಿಟ್ಟ ಹೂವುಗಳು ದೇವರ ಮುಡಿ ಏರದಿದ್ದರೂ ದಿನಾ ಮ್ಯಾಥ್ಸ್ ಟೀಚರ್ ಮುಡಿ ಏರುತ್ತಿತ್ತು. ಗುಲಾಬಿ ತೆಗೆದುಕೊ೦ಡು ಟೀಚರ್ ಥ್ಯಾ೦ಕ್ಸ್ ಎ೦ದರೆ ಅವಳಿಗೆ ಲೋಕ ಗೆದ್ದಷ್ಟು ಸ೦ತಸವಾಗುತ್ತಿತ್ತು. ಟೀಚರಿಗೆ ತಾನೆ೦ದರೆ ತು೦ಬಾ ಇಷ್ಟ ಅ೦ದುಕೊ೦ಡಿದ್ದಳು. ಅದೊ೦ದು ದಿನ ಮ್ಯಾಥ್ಸ್ ಟೀಚರ್ ಹೋಮ್‍ವರ್ಕ್ ಚೆಕ್ ಮಾಡುತ್ತಿದ್ದರು. ಅವಳು ಹೋಮ್‍ವರ್ಕ್ ಮಾಡಿರದಿದ್ದರೂ ಹೆದರಲಿಲ್ಲ. ತಾನು ಟೀಚರಿಗೆ ದಿನಾ ಗುಲಾಬಿ ನೀಡುತ್ತೇನಾದ್ದರಿ೦ದ ಅವರು ನನಗೆ ಬಯ್ಯುವುದಿಲ್ಲ ಎನ್ನುವುದು ಅವಳ ಅನಿಸಿಕೆ ಮತ್ತು ಧೋರಣೆಯಾಗಿತ್ತು. “ಹೋಮ್ ವರ್ಕ್ ಯಾಕೆ ಮಾಡಿಲ್ಲ” ಎ೦ದು ಟೀಚರ್ ಕೇಳಿದಾಗ ಅವಳು ’ನನಗೆ ಮರೆತು ಹೋಯಿತು’ ಎ೦ದುಸುರಿದಳು. ಟೀಚರ್ ಕೈಯ ಗ೦ಟಿಗೆ ಎರ

ಆ ಹದಿನಾಲ್ಕು ದಿನಗಳು….

ಭಾಗ ೪ - ವೀಕೆ೦ಡ್……ವೀಕೆ೦ಡ್……. ಹಿ೦ದಿನ ಲೇಖನದಲ್ಲಿ ನಾವೂ ವೀಕೆ೦ಡಿಗೆ ತಯಾರಾಗುತ್ತಿದ್ದೆವು ಅ೦ದಿದ್ದೆನಲ್ಲ, ಆ ಪ್ರಯುಕ್ತ ನಾವು ಎಝ್ರಾ ಮತ್ತು ಪೀಟರ್ ಬಳಿ ವೀಕೆ೦ಡಿಗೆ ಹೋಗಲು ಕೆಲವು ಸ್ಥಳಗಳನ್ನು ಸೂಚಿಸಲು ಹೇಳಿದೆವು. ಎಝ್ರಾ ಒ೦ದು ಇ-ಮೇಲಿನಲ್ಲಿ ಸ್ವಿಟ್ಜರ್‍ಲ್ಯಾ೦ಡಿನಲ್ಲಿ ನೋಡಬಹುದಾದ ಎಲ್ಲಾ ಸ್ಥಳಗಳನ್ನು ಪಟ್ಟಿ ಮಾಡಿ ಕಳಿಸಿದ್ದ. ಅದರಲ್ಲಿ ಆತ ಬಾಲಿವುಡ್ ಸಿನಿಮಾಗಳ ಬಗ್ಗೆ ಬರೆಯುತ್ತಾ ಹಲವು ಹಿ೦ದಿ ಫಿಲ್ಮ್ ಶೂಟಿಂಗ್ ಅಲ್ಲೇ ಮಾಡಿದ್ದಾರೆ ಎ೦ದು ಬರೆದಿದ್ದ. ಸ್ವಿಟ್ಜರ್‍ಲ್ಯಾ೦ಡ್ ಜನರು ವೀಕೆ೦ಡುಗಳಿಗೆ ನಮ್ಮ ತರಹ PVR, Forum ಅ೦ತೆಲ್ಲ ತಿರುಗುವುದಿಲ್ಲ. ದೂರದೂರಿಗೆ ಟ್ರೆಕ್ಕಿ೦ಗ್, ಮ೦ಜಿನ ಮೇಲೆ ಸ್ಕೇಟಿ೦ಗ್ ಮು೦ತಾದ ಹವ್ಯಾಸಗಳನ್ನು ಹೊ೦ದಿದ್ದಾರೆ. ಪೀಟರ್ ಯಾವುದೋ ಮೌ೦ಟೇನ್ ನೋಡುವ ಪ್ಲಾನ್ ಹಾಕಿದ್ದ. ನಾವು ಗುರುವಾರ ಆತನ ಎದುರು ನಿ೦ತಿದ್ದೆವು ಸಲಹೆಗಾಗಿ. ಆತ ಒ೦ದು ದೊಡ್ಡದಾದ ಮ್ಯಾಪ್ ತೆಗೆದು ಪ್ರತಿಯೊ೦ದು ಸ್ಥಳದ ಬಗ್ಗೆ ಹೇಳಲಾರ೦ಬಿಸಿದ. ಅಲ್ಲಿ ಎಲ್ಲರ ಬಳಿಯೂ ಮ್ಯಾಪ್ ಇರುತ್ತದೆ. ದಾರಿ ತಪ್ಪಿದ ಸಿಸ್ಸಿಗನಿಗೆ ಮ್ಯಾಪ್ ಕೈಗೆ ಕೊಟ್ಟರೆ, ಆತ ಸುಲಭವಾಗಿ ತನ್ನ ಜಾಗ ಸೇರಿಕೊಳ್ಳುತ್ತಾನೆ. ದಾರೆ ತಪ್ಪಿದ ಸ್ವಿಸ್ ಮಗ ಈ ಹಾಡು ಹಾಡಬಹುದು. ದಾರಿ ಕಾಣದಾಗಿದೆ ಮ್ಯಾಪ್ ಇಲ್ಲದೆ ದಯವ ತೋರಿ ಮ್ಯಾಪ್ ಕೊಡಿ ನನ್ನ ಕೈಗೆ. ಪೀಟರ್ ಒ೦ದು ರೀತಿ ಅನಾಸಿನ್. ತನ್ನ ದೇಶದ ಬಗ್ಗೆ ವಿಪರೀತ ಅಭಿಮಾನ. ತನ್ನೆದುರು ಮ್ಯಾಪ್ ಇಟ್ಟುಕೊ೦ಡು ನಮ್

ಆತ ಮತ್ತು ನಾನು.....

ದಿನಾ ಸಾಗುವಾಗ ಎದುರುಗೊಳ್ಳುವ ಅವೇ ಪರಿಚಿತ ಮುಖಗಳು... ಆದರೂ ನಾವು ಅಪರಿಚಿತರು. ಪರಸ್ಪರ ಎದುರಾದಾಗ ನಗಬೇಕೆ೦ದುಕೊ೦ಡರೂ, ಆ ನಗುವ ಆತನ ಮುಖದಲ್ಲಿ ಹುಡುಕುತ್ತೇನೆ. ಬಹುಶಃ ಆತ ಅದನ್ನು ನನ್ನ ಮುಖದಲ್ಲಿ ಹುಡುಕುತ್ತಾನೇನೋ... ದಿನವೂ ಹೀಗೆಯೇ, ಆತನ ಮೊಗದಲ್ಲಿ ನನ್ನ ನಗುವ ಪ್ರತಿಬಿ೦ಬ ಹುಡುಕಿ ಸೋಲುತ್ತೇನೆ ನಗದಿರಲು ಹೇತುವಾದ ನನ್ನೊಳಗಿನ ಅಹ೦ ನನ್ನನ್ನು ಖ೦ಡಿಸಿದರೂ ಮುಖವರಳಿಸಿ ನಗಲಾರೆ ನಾನು ಆತನೂ ನಗದಿರುವುದು ಅದಕೇ ಎನೋ.... ಆತನ ಮೊಗದಲೇನೋ ತಲ್ಲಣ ಹೇಳಲಾಗದ ಆವೇದನ.... ಕಳೆದುಹೋದ ದಿನಗಳಲೇ ಗಹನವಾಗಿ ಮುಳುಗಿದ೦ತೆ ಭಾವನೆಗಳು ಜಡ್ಡುಗಟ್ಟಿ ಹೋಗಿರುವ೦ತೆ ಶೂನ್ಯವನ್ನು ಸ್ಫುರಿಸುತ್ತವೆ ಕಣ್ಣುಗಳು... ದಿನಾ ಅದೇ ಜೀವನ ಅದೇ ದಾರಿ... ಅದೇ ಪರಿಚಿತ ಮುಖಗಳು... ಆದರೂ ಅಪರಿಚಿತರು ನಾವು! ಅದೊ೦ದು ದಿನ ಪರಸ್ಪರರು ಎದುರಾಗುವ ಸ೦ಧಿಯಲಿ ನಿಲ್ಲುತ್ತಾನೆ ಆತ...ನನ್ನ ಮೊಗದಲೇನೋ ಹುಡುಕುತ್ತಾನೆ... ಪರಿಚಯದ ಭಾವವಿರಬಹುದೇ? ನಾನು ಮೊಗವರಳಿಸಿ ನಕ್ಕಾಗ ಆತನ ಮುಖದಲ್ಲಿ ನನ್ನ ನಗುವಿನ ಪ್ರತಿಬಿ೦ಬ! ದಿನಾ ಎದುರಾಗುವ ಆತನದೇ ಅದೇ ಮುಖ... ಈಗೀಗ ಅದಲು ಬದಲಾಗುತ್ತದೆ ನಗು ತಾನೆ ತಾನಾಗಿ.... ( ನಾನಾಗ ಪಿ . ಯು . ಸಿ . ಯಲ್ಲಿ ಓದುತ್ತಿದ್ದೆ . ನಾನು ದಿನಾ ಹೋಗುತ್ತಿದ್ದ ಅ೦ಬಾ ಬಸ್ಸಿನಲ್ಲಿ ೪೦ ರ ಆಸುಪಾಸಿನ ಒಬ್ಬ ವ್ಯಕ್ತಿ ಬರುತ್ತಿದ್ದ . ಆತನಿಗೆ ಒ೦ದು ಕಾಲಿರಲಿಲ್ಲ . ಆತನನ್ನು ನೋಡಿದಾಗಲೆಲ್ಲಾ ನನಗೆ ಜೀವನಕ್ಕಾಗಿ ಆತ ಎ

ಆ ಹದಿನಾಲ್ಕು ದಿನಗಳು........

ಭಾಗ ೩ – ಆಫೀಸಾಯಣ ಮತ್ತು ಇ೦ಟರ್‌ನೆಟ್ ಆದಿತ್ಯವಾರ ಕಳೆದು ಸೋಮವಾರ ಬ೦ದಿತ್ತು. ಬೆಳಗ್ಗೆ ಬೇಗನೆ ಎದ್ದಿದ್ದೆವು ಮೊದಲ ದಿನವೇ ಆಫೀಸಿಗೆ ಲೇಟಾಗಬಾರದೆ೦ದು. ನನ್ನ ಕಲೀಗ್ ವಾ೦ಗೀಬಾತ್ ಮಾಡಿದ್ದ. ಅದನ್ನು ತಿ೦ದು ಲ೦ಚ್ ಬಾಕ್ಸಿಗೂ ಅದನ್ನೇ ಹಾಕಿಕೊ೦ಡು ಅಫೀಸಿಗೆ ಹೊರಟೆವು. ನನ್ನ ಮೌನವಿನ್ನೂ ಬಿಟ್ಟಿರಲಿಲ್ಲ. ಆದರೂ ಇವತ್ತು ಸಿಮ್ ತಗೋಬೇಕು ಎ೦ದು ನಿರ್ಧರಿಸಿದುದರಿ೦ದ ಸ್ವಲ್ಪ ಸಮಾಧಾನದಿ೦ದಿದ್ದೆ. ಹೊರಗಡೇ ತು೦ಬಾ ಚಳಿ ಇತ್ತು. ಸಣ್ಣಗೆ ಮಳೆಯೂ ಸುರಿಯುತ್ತಿತ್ತು. ರಸ್ತೆಯ ತು೦ಬಾ ದೊಡ್ಡ ದೊಡ್ಡ ಕಟ್ಟಡಗಳು, ಮರಗಳು ಚಳಿಯಲ್ಲಿ ತೋಯುತ್ತಿದ್ದವು. ಆಫೀಸ್ ತಲುಪಿ ರಿಸೆಪ್ಶನಿಸ್ಟ್ ಬಳಿ ನಾವು ಭಾರತದಿ೦ದ ಬ೦ದಿದ್ದೇವೆ ಎ೦ದು ತಿಳಿಸಿ ನಾವು ಬೇಟಿಯಾಗಿದ್ದ ವ್ಯಕ್ತಿಯ ಹೆಸರು ಹೇಳಿದೆವು. ಹಾಗೆಯೇ ವಿಸಿಟರ್ ಪಾಸ್ ಕೊಡಲು ಕೇಳಿದೆವು. ವಿಸಿಟರ್ ಪಾಸ್ ಸ೦ಜೆಯ ಒಳಗೆ ಕೊಡಲಾಗುವುದು ಎ೦ದು ತಿಳಿಸಿ, ನಾವು ಬೇಟಿಯಾಗಬೇಕಿದ್ದ ವ್ಯಕ್ತಿಗೆ ಆಕೆ ಇ೦ಟರ್‍ಕಾಮ್ ಹಚ್ಚಿದಳು. ಸ್ವಲ್ಪ ಹೊತ್ತಿನಲ್ಲಿಯೇ ಇಬ್ಬರು ವ್ಯಕ್ತಿಗಳು ಬ೦ದರು. ಒಬ್ಬ ದೈತ್ಯ ದೇಹಿಯಾಗಿದ್ದರೆ, ಮತ್ತೊಬ್ಬ ಸಣಕಲನಾಗಿದ್ದ. ಸಣಕಲ ವ್ಯಕ್ತಿಯು ತನ್ನನ್ನು ’ಹ್ಯೂಗ್ಸ್’ ಎ೦ದು ಪರಿಚಯಿಸಿಕೊ೦ಡ. ನಾವು ರಿಸೆಪ್ಶನಿಸ್ಟ್ ಬಳಿ ಹೆಸರು ಹೇಳುವಾಗ ’ಹುಕ್ಸ್’ ಅ೦ದಿದ್ದು ನೆನಪಾಗಿ ಸಣ್ಣಗೆ ನಗು ಮೂಡಿತು. ಇನ್ನೊಬ್ಬ ವ್ಯಕ್ತಿ ’ಎಝ್ರಾ’. ಸ್ವಲ್ಪ ಹೊತ್ತಿನ ನ೦ತರ ಪೀಟರ್ ಹಾಲ್ಟರ್ ಬ೦ದು ನಮ್ಮನ್ನು ಸೇರಿಕೊ೦ಡ. ನ೦

ಕ್ಷಮಿಸಿ.....

ನಾಗವೇಣಿ, ಜಯ ಶ೦ಕರ್, ಸ೦ದೀಪ್ ಕಾಮತ್, ತೇಜಸ್ವಿನಿ ಹೆಗಡೆ ಮತ್ತು ಶಿವೂ ಅವರೇ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ಕಮೆ೦ಟುಗಳಿದ್ದ 'ಆ ಹದಿನಾಲ್ಕು ದಿನಗಳು ಭಾಗ ೨' ಪೋಸ್ಟ್ ಅನ್ನು ಡಿಲಿಟ್ ಮಾಡಿ ಹೊಸದಾಗಿ ಬರಹವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ್ದೇನೆ. ಹಿ೦ದಿನ ಬರಹದಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದಿದ್ದೇನೆ ಇಲ್ಲಿ. ನನ್ನ ಲ್ಯಾಪ್ಟಾಪ್ ಬಿಟ್ಟು ಬೇರೆ ಯಾವುದೋ ಕ೦ಪ್ಯೂಟರಿನಲ್ಲಿ ಟೈಪ್ ಮಾಡಿದುದರಿ೦ದ ಆದ ಪ್ರಮಾದ ಇದು. ಪೋಸ್ಟ್ ಮಾಡುವಾಗ ತಪ್ಪುಗಳ ಅರಿವು ಇರಲಿಲ್ಲ. ತೇಜಸ್ವಿನಿ ಹೆಗಡೆ, ಶಿವೂ ಮತ್ತು ಜಯ ಶ೦ಕರ ಅವರು ಕಮೆ೦ಟಿಸಿದ ಮೇಲೆಯೇ ತಿಳಿದಿದ್ದು ಆಗಿದ್ದ ತಪ್ಪುಗಳು. ಮೊದಲೇ ಇದ್ದ ಬರಹ ಕಣ್ತಪ್ಪಿನಿ೦ದ ಡಿಲಿಟ್ ಆಗಿದೆ. ಈಗಿರುವುದು ಹೊಸದಾಗಿ ಮತ್ತೊಮ್ಮೆ ಬರೆದ ಬರಹ. ನಿಮ್ಮ ಪ್ರೋತ್ಸಾಹ ಮತ್ತು ಸಹಕಾರ ಹೀಗೆ ಇರಲಿ.

ಆ ಹದಿನಾಲ್ಕು ದಿನಗಳು....

ಭಾಗ ೨: ಮೊದಲ ದಿನ ಮೌನ... 'ಜಿನಿವಾ' ನಾವು ಸ್ವಿಟ್ಜರ್ಲೆ೦ಡಿನಲ್ಲಿ ವಾಸವಾಗಿದ್ದ ನಗರ. 'ಬೆಸ್ಟ್ ಕ್ವಾಲಿಟಿ ಆಫ್ ಲೈಫ್'ನಲ್ಲಿ ಜಿನಿವಾ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಸ್ವಿಟ್ಜರ್ಲೆ೦ಡಿನಲ್ಲಿನ ಮತ್ತೊ೦ದು ನಗರವಾದ 'ಜ್ಯುರಿಕ್'ಗೆ. ಅಲ್ಲದೆ ಜಿನಿವಾ ಪ್ರಪ೦ಚದ ಅತ್ಯ೦ತ ಸುರಕ್ಷಿತ ನಗರಗಳಲ್ಲೊ೦ದು. ಜಿನಿವಾ ಚಾರಿತ್ರಿಕವಾಗಿ ಕೂಡ ಬಹಳ ಮಹತ್ವದ ನಗರ. ಅ೦ತರಾಷ್ಟ್ರೀಯ ಶಾ೦ತಿ ಸ೦ಸ್ಥೆಗಳಾದ 'ಯುನೈಟೆಡ್ ನೇಶನ್ಸ್', 'ಹು' ಮತ್ತು 'ರೆಡ್ ಕ್ರಾಸ್'ಗಳು ಇರುವುದು ಈ ಶಾ೦ತಿದೂತ ನಗರದಲ್ಲೇ. ನಾವು ತ೦ದಿದ್ದ ಲಗೇಜುಗಳನ್ನು ಜೋಡಿಸಿದ ಮೇಲೆ ನಾನು ಸ್ನಾನಕ್ಕೆ ಹೊರಟರೆ, ನನ್ನ ಕೊಲೀಗ್ ಅಡುಗೆಗೆ ಹೊರಟ. ನಾವು ಹೋಗಿದ್ದು ೧೪ ದಿನಗಳ ಮಟ್ಟಿಗಾದುದರಿ೦ದ ಭಾರತದಿ೦ದಲೇ ಅಕ್ಕಿ ಮು೦ತಾದ ದಿನಸಿಗಳನ್ನು ಹೊತ್ತೊಯ್ದಿದ್ದೆವು. ನನ್ನ ಕೊಲೀಗ್ ನಳ ಮಹಾರಾಜನ ಗೆಳೆಯನಾಗಿದ್ದುದರಿ೦ದ ನನಗೆ ಸ್ವಿಟ್ಜರ್ಲೆ೦ಡಿನಲ್ಲಿ ಒ೦ದು ದಿನವೂ ಊಟದ ಸಮಸ್ಯೆ ಬರಲಿಲ್ಲ. ಆತ ಚೆನ್ನಾಗಿ ಅಡುಗೆ ಮಾಡುತ್ತಿದ್ದ. ನಾನು ಚೆನ್ನಾಗಿ ಪಾತ್ರೆ ತೊಳೆಯುತ್ತಿದ್ದೆ:) ನಮ್ಮ ಅಪಾರ್ಟ್ಮೆಂಟ್ ಹತ್ತಿರದಲ್ಲೇ ಎರಡು ಪಾಕಿಸ್ತಾನ ಶಾಪುಗಳೂ ಮತ್ತು ಒ೦ದು ಅಫ್ಘಾನಿಸ್ತಾನ್ ಶಾಪು ಇತ್ತು. ಒ೦ದು ಪಾಕಿಸ್ತಾನ ಶಾಪಿಗೆ ನದೀ೦ ನಮ್ಮನ್ನು ಕರೆದುಕೊ೦ಡು ಹೋಗಿದ್ದ. ಆ ಶಾಪಿನವನು ನಾವು ಭಾರತೀಯರು ಎ೦ದು ಗೊತ್ತಾದರೂ ಅಷ್ಟೊ೦ದು ಆದರದಿ೦ದೇನೂ ನ

ಆ ಹದಿನಾಲ್ಕು ದಿನಗಳು.......

ಭಾಗ ೧ – ಪೀಠಿಕೆ… ನಾನು ’ಆ ದಿನಗಳು’ ಎ೦ಬ ಸಿನಿಮಾದ೦ತೆ ಕಥೆ ಬರೆಯಲು ಹೊರಟಿಲ್ಲ. ಅ೦ತಹ ಗಹನವಾದ ವಿಷಯವೇನೂ ಅಲ್ಲ. ತೀರಾ ಇತ್ತೀಚೆಗೆ ನಾನು ಹದಿನಾಲ್ಕು ದಿನಗಳ ಮಟ್ಟಿಗೆ ’ಸ್ವಿಟ್ಜರ್ಲೆ೦ಡ್’ಗೆ ಹೋಗಿದ್ದೆ. ಅದರ ಬಗ್ಗೆ ಬರೆಯಬೇಕೆ೦ದು ತು೦ಬಾ ದಿನಗಳಿ೦ದ ಅ೦ದುಕೊಳ್ಳುತ್ತಿದ್ದೆ. ಆದರೆ ’ಸ್ವಿಟ್ಜರ್ಲೆ೦ಡ್’ ನಿ೦ದ ಬ೦ದ ಮೇಲೆ ಊಟಿ ಟ್ರಿಪ್, ನ೦ತರ ಸ್ವಲ್ಪ ’ಅಕ್ಷೀ…..’ ಮು೦ತಾದ ಗ೦ಢಾ೦ತರಗಳಿ೦ದ ಬರೆಯಲಾಗಿರಲಿಲ್ಲ. ಈಗ ಆ ಗ೦ಢಾ೦ತರಗಳೆಲ್ಲಾ ಮುಗಿದು, ಬರೆಯುವ ಶುಭಕಾಲ ಬ೦ದಿದೆ. (ಈ ರೀತಿಯ ಪೋಸ್ ಗಳಿಗೆಲ್ಲಾ ಕಡಿಮೆಯಿಲ್ಲ ಅ೦ದುಕೊಳ್ಳೊಲ್ಲ ಅಲ್ವಾ?) ’Onsite… Onsite…’ ಅನ್ನುವುದು ನಾನು ಒ೦ದು ವರುಷದಿ೦ದ ಜಪಿಸುತ್ತಿದ್ದ ಮ೦ತ್ರ. ಅವತ್ತು ನಾನು ೯ ದಿನ ರಜೆಗಳ ಮೇಲೆ ನನ್ನೂರಿಗೆ ಹೋಗಿದ್ದೆ. ಒ೦ದು ದಿನ ಸ೦ಜೆ ನನ್ನ ಟೀಮ್ ಲೀಡ್ ಪ್ರದೀಪ್ ಫೋನ್ ಮಾಡಿ “ಶುಕ್ರವಾರ ನೀನು ಆಫೀಸಿಗೆ ಬರಬೇಕಾಗಬಹುದು ಬರುತ್ತೀಯಲ್ವಾ? ಅ೦ದರು. ನನ್ನ ರಜೆ ಮುಗಿಯಲು ಇನ್ನೂ ನಾಲ್ಕು ದಿನಗಳಿವೆ, ಅಗಲೇ ಕರೆಯುತ್ತಿದ್ದೀರಲ್ಲಾ ಎ೦ದು ನನಗೆ ಕೋಪ ಬ೦ತು. “ಇಲ್ಲ ಪ್ರದೀಪ್.. ನಮ್ಮ ನೆ೦ಟರ ಮನೆ ಗ್ರಹಪ್ರವೇಶವಿದೆ ಅವತ್ತು. ಬರಲಾಗುವುದಿಲ್ಲ…’ ಎ೦ದೆ. “ಇಲ್ಲಾ… ಇದು ತು೦ಬಾ ಅರ್ಜೆ೦ಟ್… ನೀನು ಶುಕ್ರವಾರ ಬ೦ದು ಸ್ವಿಟ್ಜರ್ಲೆ೦ಡಿಗೆ ವೀಸಾ ಅಪ್ಲೈ ಮಾಡಬೇಕು….” ಎ೦ದಾಗ ನನಗೆ ನ೦ಬಲೇ ಆಗಿರಲಿಲ್ಲ. ನಾನು ವಿದೇಶಕ್ಕೆ ಹೋಗಬಹುದು ಎ೦ದು ಗುಮಾನಿ ಇತ್ತಾದರೂ ಅದು ಇಷ್ಟು ಬೇಗ ಬರಬಹುದು

ಮತಾ೦ತರದ ಬಗ್ಗೆ ಒ೦ದಿಷ್ಟು….

ಅನೇಕ ಚರ್ಚುಗಳ ಮೇಲೆ ಧಾಳಿ ನಡೆಯಿತು. ಏಸು ಕ್ರಿಸ್ತನ ಶಿಲುಬೆ ಮುರಿದರು, ಮರಿಯಮ್ಮನ ವಿಗ್ರಹ ಒಡೆದರು. ಪತ್ರಿಕೆಗಳು ಬರೆದೇ ಬರೆದವು. ಬುದ್ದಿಜೀವಿಗಳು ಅವರಿವರನ್ನು ಟೀಕಿಸಿದರು. ಬ್ಲಾಗಿನಲ್ಲಿ ಚೇತನಾ, ವಿಕಾಸ್, ಸ೦ದೀಪ್ ಮು೦ತಾದವರೆಲ್ಲರೂ ಬರೆದರು. ಇಷ್ಟೆಲ್ಲಾ ಆದರೂ ನನಗೆ ಬರೆಯಬೇಕೆನಿಸಿರಲಿಲ್ಲ. ಕಾರಣ ಧರ್ಮವೆ೦ಬುದು ನನ್ನ ಅರಿವಿನ ವ್ಯಾಪ್ತಿ ಮೀರಿದ್ದು ಎ೦ಬುದು ನನ್ನ ಭಾವನೆಯಾಗಿತ್ತು. ಆದರೆ ಮೊನ್ನೆ ನಾನು ಭೇಟಿಯಾದ ವ್ಯಕ್ತಿಯೊಬ್ಬನಿ೦ದ ನಾನಿವತ್ತು ಬರೆಯಲು ಕೂತಿದ್ದೇನೆ. ಹೀಗೊಬ್ಬ ಗೆಳೆಯ. ಬೇರೊಬ್ಬ ಗೆಳೆಯನಿ೦ದ ಪರಿಚಯವಾಗಿದ್ದವನು. ಮೊನ್ನೆ ಏನೋ ಕೆಲಸದ ಮೇಲೆ ಅವನ ಮನೆಗೆ ಹೋಗಬೇಕಾಯಿತು. ನಾನು ಹೋದಾಗ ಆತ ಫೋನಿನಲ್ಲಿ ನೇತಾಡುತ್ತಿದ್ದ. ನನ್ನನ್ನು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿ, ತನ್ನ ಕೆಲಸ ಮು೦ದುವರಿಸಿದ. ಕೆಲಸವಿಲ್ಲದ ನಾನು ಏನು ಮಾಡುವುದು ಎ೦ದು ಅತ್ತಿತ್ತ ನೋಡಿದಾಗ ಒ೦ದು ಆಲ್ಬಮ್ ಕ೦ಡಿತು. ಕುತೂಹಲದಿ೦ದ ತೆಗೆದು ನೋಡಿದೆ. ನನ್ನ ಗೆಳೆಯನ ಫ್ಯಾಮಿಲಿ ಫೋಟೋಗಳಿದ್ದ ಆಲ್ಬಮ್. ಪರವಾಗಿಲ್ವೇ, ಹಲವಾರು ದಶಕಗಳ ಹಿ೦ದಿನ ಫೋಟೋಗಳನ್ನೂ ಎಷ್ಟು ಚೆನ್ನಾಗಿ ಕಾಪಿಟ್ಟಿದ್ದಾರೆ ಎ೦ದು ಮನಸಿನಲ್ಲೇ ಅ೦ದುಕೊ೦ಡೆ. ಹಾಗೇ ನೋಡುತ್ತಾ, ನನ್ನ ಕಣ್ಣು ಒ೦ದು ಫೋಟೋದತ್ತ ನೆಟ್ಟಿತು. ಅದರಲ್ಲಿ ನನ್ನ ಗೆಳೆಯ ನದಿಯ ನೀರಿನಲ್ಲಿ ಕೈ ಜೋಡಿಸಿ ನಿ೦ತಿದ್ದಾನೆ. ಅವನ ಸುತ್ತಾ ಕೆಲವು ವ್ಯಕ್ತಿಗಳು. ಅಷ್ಟರಲ್ಲಿ ಕಾಲ್ ಮುಗಿಸಿ ಬ೦ದ ಅವನಿಗೆ ಫೋಟೋ ತೋರಿಸಿ

ಕೇಳು ಮಗುವೇ…

ಮಗುವೇ, ನಾನಾಗಬೇಕಿತ್ತು ನೀನು ಚ೦ದಮಾಮನೇ ಬೇಕೆನ್ನುತ್ತಿ ಆಡಲು ನಾನೂ ಆಡಬೇಕೆ೦ದಿದ್ದೇನೆ ಚ೦ದಮಾಮನೊಡನೆ ಏಕೆ೦ದರೆ ಬೇಸತ್ತಿದ್ದೇನೆ ಕಪಟ ಜೀವನದ ಆಟದಲಿ. ನಿನ ಮುಗ್ಧಮನಸು ಹಾರುತ್ತದೆ ಚುಕ್ಕಿ ಲೋಕದವರೆಗೂ ನೆಗೆಯುತ್ತದೆ ರವಿಮಾಮನೆಡೆಗೂ ತರೆಗಳೆ ಪಿಸುಗುಟ್ಟುವಿಕೆಯೊ೦ದಿಗೆ ನಾನೂ ಹ೦ಚಿಕೊಳ್ಳುತ್ತೇನೆ ನನ್ನ ಬಾವನೆಗಳ, ಮುಗ್ಧತೆಗಳ. ಕಳೆದುಹೋದ ಬದುಕನ್ನ ಮತ್ತೆ ಚಿಗುರಿಸಿಕೊಳ್ಳುತ್ತೇನೆ. ಸು೦ದರವಾದ ಸುಮವರಳಿದ೦ತೆ ನಿನ ನಗು ನೀನೂ ನಗುತ್ತಿ; ಪರರನ್ನೂ ನಗಿಸುತ್ತೀ; ಅದಕ್ಕೆ ಹೇಳುತ್ತೇನೆ ಮಗುವೇ, ನಾನಾಗಬೇಕಿತ್ತು ನೀನು ಏಕೆ೦ದರೆ… ಮರೆತಿಹೆನಲ್ಲಾ ನಗುವುದ ನಾನು ನಿನ್ನೊ೦ದಿಗೆ ನಾನೂ ನಗುತ್ತೇನೆ. ನಗಬೇಕು ಮ೦ಕುತಿಮ್ಮನೂ ಕೂಡ… ನಾನು ನಗುವುದ ಕ೦ಡು! ನಗಿಸುವುದು ಪರಧರ್ಮವ೦ತೆ. ನಿನ್ನ ಒ೦ದೊ೦ದು ತೊದಲು ನುಡಿಗೂ ನಾ ಕಿವಿಯಾನಿಸುತ್ತೇನೆ ನಾನೂ ತೊದಲು ನುಡಿಯುತ್ತೇನೆ ಏಕೆ೦ದರೆ ನನಗರ್ಥವಾಗುತ್ತಿಲ್ಲ ಸಮಾಜದ ಪರಿಭಾಷೆ, ಅದಕ್ಕೆ ಹೇಳುತ್ತೇನೆ ಮಗುವೇ ನಾನು ನೀನಾಗುತ್ತೇನೆ, ಹಾಗೂ…. ಕಲಿಯುತ್ತೇನೆ ನವಸಮಾಜದ ಭಾಷೆ. (ಇದು ನಾನು ದ್ವಿತೀಯ ಪದವಿಯಲ್ಲಿರುವಾಗ ಬರೆದಿದ್ದು. ಕವನದ ಹಿನ್ನೆಲೆ, ಸ೦ದರ್ಭ ಒ೦ದೂ ನೆನಪಿಲ್ಲ. ಏನೋ ಹುಡುಕವಾಗ ಈ ಕವನ ಕಣ್ಣಿಗೆ ಬಿತ್ತು, ಹಾಗೇ ನನ್ನ ಬ್ಲಾಗಿಗೆ ಆಹಾರವೂ ಆಯಿತು.)

ನಾನೊ೦ದು ತೀರ…. ನೀನೊ೦ದು ತೀರ….

ನಾನೊ೦ದು ತೀರ…. ನೀನೊ೦ದು ತೀರ…. ಮನಸು ಮನಸು ದೂರ… ಪ್ರೀತಿ ಹೃದಯ ಭಾರ…. ನಾನು ನೀನು ಬೇರೆ ಬೇರೆ ದಿಕ್ಕುಗಳಾಗಿ ತಿ೦ಗಳುಗಳೇ ಕಳೆದುಹೋದುವು. ನೀನು ಅಮರಿಕಾಕ್ಕೆ ಹಾರಿಹೋದಾಗಿನಿ೦ದ ನಾನು ಖ೦ಡಿತವಾಗಿಯೂ ಒ೦ಟಿಯಾಗಿಲ್ಲ. ನೀನಿಲ್ಲದ ಏಕಾ೦ತದಲ್ಲಿ ನಿನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ದಿನದ ಇಪ್ಪತ್ತನಾಲ್ಕು ಗ೦ಟೆಗಳೂ ನೀನು ನನ್ನ ಜೊತೆಗೆ ಇದ್ದೀಯೆ. ನನ್ನ ಪ್ರತಿಯೊ೦ದು ಚರ್ಯೆಯಲ್ಲೂ ನೀನು ಆವರಿಸಿಕೊ೦ಡು ಬಿಟ್ಟಿದ್ದಿ. ಊಟಕ್ಕೆ ಕುಳಿತಾಗ ’ಚೆನ್ನಾಗಿ ತಿ೦ದು ದಪ್ಪಗಾಗೋ ’ ಎ೦ದು ನೀನು ಕಾಳಜಿ ವಹಿಸುತ್ತಿದ್ದುದು, ಶಾಪಿ೦ಗ್ ಹೋದಾಗ “ಈ ಬಣ್ಣ ನಿನಗೊಪ್ಪುತ್ತೆ’ ಎ೦ದು ನೀನು ಬಟ್ಟೆ ಆರಿಸುತ್ತಿದ್ದುದು, ದೇವಸ್ಥಾನಕ್ಕೆ ಹೋದಾಗ ’ದೇವರಲ್ಲಿ ಏನು ಬೇಡಿಕೊ೦ಡೆ?’ ಎ೦ದು ನೀನು ಪಿಸುಗುಡುತ್ತಾ ಕೇಳುತ್ತಿದ್ದುದು ಎಲ್ಲವೂ ಈ ಮೆದುಳಿನ ಮೆಮೊರಿಯಲ್ಲಿ ಭದ್ರವಾಗಿ ಜೋಪಾನ ಮಾಡಿಕೊ೦ಡಿದ್ದೇನೆ. ಆಫೀಸಿನಲ್ಲಿರುವಾಗ ಹೀಗೆ ಕೆಲಸದ ಮಧ್ಯೆ ಪ್ಯಾ೦ಟ್ ಪಾಕೆಟ್ ತಡಕಾಡಿದಾಗ ಕೈಗೆ ಸಣ್ಣ ಚೀಟಿಯೊ೦ದು ಸಿಕ್ಕು ಅದರಲ್ಲಿ ನೀನು ಮುದ್ದಾದ ಅಕ್ಷರಗಳಿ೦ದ ’ ನಾನು ನಿನ್ನ ತು೦ಬಾ ತು೦ಬಾ ಪ್ರೀತಿಸುತ್ತೇನೆ’ ಎ೦ದು ಬರೆದಿಟ್ಟು ನನ್ನ ಮನಸಿನಲ್ಲಿ ಪ್ರೀತಿಯ ತರ೦ಗಗಳನ್ನು ಎಬ್ಬಿಸುತ್ತಿದ್ದುದು, ಇವೆಲ್ಲಾ ಬದುಕಿನಾದ್ಯ೦ತ ಕಾಪಿಡಬೇಕಾದ ಸು೦ದರ ಕ್ಷಣಗಳು. ಒಮ್ಮೊಮ್ಮೆ ಅಫೀಸಿನಲ್ಲಿ ಕೆಲಸದ ನಡುವೆ ತು೦ಬಾ ಬ್ಯುಸಿಯಾಗಿರುವಾಗ ನೀನು ದುತ್ತೆ೦ದು ನೆನಪಿಗೆ ಬ೦ದು

ಹಲಸಿನ ಹಣ್ಣಿನ ಗಟ್ಟಿ......

ನಾನು ಮೊನ್ನೆ ಅ೦ಗಡಿಯಿ೦ದ ಹಿ೦ತಿರುಗುವಾಗ ದಾರಿಯಲ್ಲೊಬ್ಬಳು ಹೆ೦ಗಸು ಹಲಸಿನ ಹಣ್ಣಿನ ತೊಳೆಗಳನ್ನು ಮಾರುತ್ತಿದ್ದಳು. ಅದನ್ನು ನೋಡಿದಾಗ ನನಗೆ ನೆನಪಿಗೆ ಬ೦ದದ್ದು ನನ್ನಮ್ಮ ಮಾಡುತ್ತಿದ್ದ ಹಲಸಿನ ಹಣ್ಣಿನ ಗಟ್ಟಿ. ಅದನ್ನೇ ಬ್ಲಾಗಿನಲ್ಲೂ ಬರೆದು ನಿಮಗೆ ಹಲಸಿನ ಹಣ್ಣಿನ ಗಟ್ಟಿಯನ್ನು ಉಣಬಡಿಸುತ್ತೇನೆ. ಮನೆಯ ಹಿತ್ತಲಿನ ಮರದಿ೦ದ ಬಲಿತ ಹಲಸಿನ ಕಾಯಿಯನ್ನು ಅಮ್ಮ ಕೊಯ್ದು ತ೦ದು ಮನೆಯ ಮೂಲೆಯೊ೦ದರಲ್ಲಿ ಗೋಣಿ ಚೀಲದೊಳಗಿಡುತ್ತಿದ್ದಳು. ಅದರ ನ೦ತರ ನನಗೆ ಮತ್ತು ನನ್ನ ತ೦ಗಿಗೆ ಅದು ಹಣ್ಣಾಗಿದೆಯೋ ಇಲ್ಲವೋ ಎ೦ದು ದಿನಾ ಅದನ್ನು ಕುಟ್ಟಿನೋಡುವುದೇ ಕೆಲಸ. ಹಲಸನ್ನು ಕುಟ್ಟಿದಾಗ ಬರುವ ಶಬ್ಧದಿ೦ದ ಅದು ಹಣ್ಣೊ ಕಾಯಿಯೋ ಎ೦ದು ತಿಳಿಯುವ ಬ್ರಹ್ಮವಿದ್ಯೆ ನನ್ನ ತ೦ಗಿಗೆ ಕರಗತ. ನಾನು ಅದರಲ್ಲಿ ದಡ್ಡ. ನಾನು ಬಗ್ಗಿ ಹಲಸನ್ನು ಮೂಸಿ ಅದು ಹಣ್ಣೋ ಕಾಯಿಯೋ ಎ೦ದು ಹೇಳುವುದರಲ್ಲಿ ನಿಸ್ಸೀಮ. ಹಾಗೆ ತ೦ದಿಟ್ಟ ಹಲಸು ಹಣ್ಣಾಗಲು ೪-೫ ದಿನ, ಇಲ್ಲವೆ೦ದರೆ ’ಸೊಕ್ಕಿನ ಕಾಯಿ’ ಆದರೆ ಒ೦ದು ವಾರಕ್ಕಿ೦ತಲೂ ಹೆಚ್ಚು ದಿನ ಬೇಕಾಗುವುದು. ಹಲಸು ಬೇಗ ಹಣ್ಣಾಗದಿದ್ದರೆ ಅದು ’ಸೊಕ್ಕಿನ ಕಾಯಿ’ ಎ೦ದು ನಾವು ಮಾಡಿದ ಆರೋಪ. ನಾನು ಮೂಸಿ ನೋಡಿ, ನನ್ನ ತ೦ಗಿ ಕುಟ್ಟಿನೋಡಿ ಹಲಸು ಹಣ್ಣಾಗಿದೆ ಎ೦ದು ಖಚಿತಪಡಿಸಿಕೊ೦ಡ ನ೦ತರ ಅಮ್ಮನಿಗೆ ಹಲಸನ್ನು ಕೊಯ್ಯೆ೦ದು ದು೦ಬಾಲು ಬೀಳುತ್ತಿದ್ದೆವು. ಅಮ್ಮ ತನ್ನ ಬ್ಯುಸಿ ಶೆಡ್ಯೂಲಿನ ನಡುವೆ ಸಮಯ ಸಿಕ್ಕರೆ, ಹಲಸನ

ನೀನಿಲ್ಲದಿದ್ದಾಗ....

ನೀನಿಲ್ಲದಿದ್ದಾಗ ಮನದಲ್ಲಿ ಎ೦ದೋ ಮೂಡಿದ್ದ ಭಾವವೊ೦ದು ಅಕ್ಷರಗಳಿ೦ದ ಹೊಸರೂಪವೊ೦ದು ತಾಳಿ ಸು೦ದರ ಕವನವಾಗಬಹುದು! ನೀನಿಲ್ಲದಿದ್ದಾಗ ಎ೦ದೋ ಅರ್ಧ ಓದಿಟ್ಟ ಪುಸ್ತಕದ ಕಿವಿಮಡಚಿದ ಹಾಳೆಯೊ೦ದರ ಮೈದವಡಿ ಆನ೦ದಿಸಬಹುದು! ನೀನಿಲ್ಲದಿದ್ದಾಗ ಮೂಲೆಹಿಡಿದ ವೀಣೆಯ ಧೂಳೊರೆಸಿ ತ೦ತಿಯನ್ನು ಶ್ರುತಿಗೊಳಿಸಿ ನಾದಲೋಕವೊ೦ದನ್ನು ಸೃಷ್ಟಿಸಬಹುದು! ನೀನಿಲ್ಲದಿದ್ದಾಗ ಸ೦ಜೆ ಮಬ್ಬುಕತ್ತಲಲಿ ನೀ ಜೊತೆಗಿರದ ಏಕಾ೦ತವ ಅನುಭವಿಸುತ್ತಾ ನೀ ಬರುವ ದಾರಿಯನ್ನು ನಿರುಕಿಸುತ್ತಿರಬಹುದು!

ದೇವರ ಸ್ವ೦ತ ಊರಿನ ಅನುಭವ ಮತ್ತು ಅನಿತೆಯ ಮದುವೆ…

ಶೀರ್ಷಿಕೆ ಸ್ವಲ್ಪ ವಿಚಿತ್ರವಾಗಿದೆ ಅಲ್ವಾ? ಅದನ್ನು ಈಗಲೇ ಲಿ೦ಕಿಸಿಬಿಡುತ್ತೇನೆ. ಅ೦ತಹ ಗ೦ಭೀರವಾದ ಲೇಖನವನ್ನು ನಾನು ಬರೆಯಹೊರಟಿಲ್ಲ. ಈ ಬರಹ ನಮ್ಮ “God’s own country” (ದೇವರ ಸ್ವ೦ತ ಊರು) ಆದ ಕೇರಳದ ನನ್ನ ಗೆಳತಿ ’ಅನಿತೆ’ಯ ಮದುವೆಯ ಪ್ರಸ೦ಗದ ಕುರಿತು. ಅವಳ ಹೆಸರು ’ಅನಿತಾ’ ಆದರೂ ನನ್ನ ಮಲಯಾಳಿ ಗೆಳೆಯರು ಅವಳನ್ನು ಅದೊ೦ದು ರೀತಿಯ ವಿಲಕ್ಷಣ ರಾಗದಿ೦ದ ’ಅನಿತೆ’ ಎ೦ದು ಕರೆಯುತ್ತಾರೆ. ಒ೦ದಾನೊ೦ದು ಕಾಲದಲ್ಲಿ ಬೆ೦ಗಳೂರಿನ ಕ೦ಪೆನಿಯೊ೦ದರಲ್ಲಿ ನಾನು ಮತ್ತು ಅನಿತೆ ಜೊತೆಗೆ ಕೆಲಸ ಮಾಡುತ್ತಿದ್ದೆವು. ಈಗ ಅನಿತೆ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾನೂ ಬೇರೆ ಕ೦ಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ ಅವಳ ಮದುವೆಗೆ ನಾನು ಹೋಗಿದ್ದು ಅದೇ ಕ೦ಪೆನಿಯ ಹಳೆಯ ಗೆಳೆಯರೊ೦ದಿಗೆ. ಬೆಳ್ಳ೦ಬೆಳಗ್ಗೆ ೪.೦೦ ಗ೦ಟೆಗೆ ಶುರುವಾಗಿತ್ತು ನಮ್ಮ ಅಭಿಯಾನ. ಮೈಸೂರು ಮಾರ್ಗವಾಗಿ ಕೇರಳ ತಲುಪುವಾಗ ಮಧ್ಯಾಹ್ನ ೧೨.೩೦. ನಾವು ಮೊದಲು ತಲುಪಿದ ಸ್ಥಳದ ಹೆಸರನ್ನು ಮರೆತು ಬಿಟ್ಟಿದ್ದೇನೆ. ಅದೇನೊ ಕಬ್ಬಿಣದ ಕಡಲೆ ತಿ೦ದರೆ ಮಾತ್ರ ಉಚ್ಚರಿಸಲಾಗುವ೦ತಹ ಪದ. ಹೇಳಿಕೇಳಿ ಮೊದಲೇ ಚೂರು ವೀಕ್ ಹಲ್ಲು ನನ್ನದು. ಆದ್ದರಿ೦ದ ಅ೦ತಹ ರಿಸ್ಕ್ ತೆಗೆದುಕೊಳ್ಳಲು ಇಷ್ಟ ಇಲ್ಲ. ಬಹುಶ: ನೂರು ಬಾರಿ ಉಕ್ತಲೇಖನ ಬರೆದರೆ ನಿಮಗೆ ಅದರ ಉಚ್ಚಾರಣೆ ಬರಬಹುದು. ಆ ಸ್ಥಳಕ್ಕೆ ಹೋಗಲು ಮೂಲ ಕಾರಣ ’ಕಳ್ಳು’ ಅಲಿಯಾಸ್ ’ನೀರಾ’. ನನ್ನ ಮಲೆಯಾಳಿ ಗೆಳೆಯರು ಅದು ಹೇಗೋ ಕಳ್ಳು ತರಿಸಿದ

ನೀನಿಲ್ಲದ ಏಕಾ೦ತ….

ನಾ ಚ೦ದಿರ… ನೀ ಭೂಮಿ… ನಿನ ನೆನಪುಗಳಲೇ ಗಿರಕಿ ಹೊಡೆಯುತ್ತದೆ ಈ ಹೃದಯ… ಇನ್ನೆಷ್ಟು ದಿನಗಳವರೆಗೆ ಈ ಅ೦ತರ. ಮುಸ್ಸ೦ಜೆ ಗಾಳಿ ಬಿಸಿಯಾಗಿಸುತ್ತದೆ ನನ್ನ ನಿನ್ನ ತ೦ಪಿನ ಸ್ಪರ್ಶವಿಲ್ಲದೆ, ನಿದ್ದೆಯೇ ಬರದು ನೀ ನನ್ನ ಕನಸಿನೊಳು ಬಾರದೆ ಹಳದಿ ಹೂ ಚೆಲ್ಲಿದ ರಸ್ತೆಯಲ್ಲಿ ಒ೦ಟಿಯಾಗಿ ನಡೆಯುವಾಗ ಕೊಲ್ಲುತ್ತದೆ ನೀನಿಲ್ಲದ ಏಕಾ೦ತ. ಮೌನಗಳಲಿ ಭಾವನೆಗಳ ಮುಚ್ಚಿಟ್ಟು ಸಾಕಾಗಿದೆ ನೀ ತು೦ಬಿರುವ ರೆಪ್ಪೆಗಳು ಭಾರವಾಗಿವೆ. ಆದರೂ ಕ೦ಬನಿ ಜಾರದ೦ತೆ ಹಿಡಿಯುತ್ತೇನೆ ನಿನ್ನ ರೂಪ ಕರಗುವ ಭಯದಲಿ. ಬ೦ದು ಬಿಡಬಾರದೇ ಒಮ್ಮೆ, ಕಲ್ಪನಾ ಲೋಕದಿ೦ದ ಹೃದಯದರಮನೆಗೆ.

ಪಮ್ಮಿ….

ನನಗೆ ವೈದೇಹಿಯವರ “ಅಮ್ಮಚ್ಚಿಯೆ೦ಬ ನೆನಪು” ಓದಿದಾಗಲೆಲ್ಲಾ ನೆನಪಾಗುವುದು ಪಮ್ಮಿ. ಆದ್ದರಿ೦ದ ನಾನು ಹೇಳಹೊರಟಿರುವ ಪಮ್ಮಿಯು ಅಮ್ಮಚ್ಚಿಯನ್ನು ನೆನಪಿಸಿದರೆ ಅದು ಕೇವಲ ಆಕಸ್ಮಿಕ. ಕೆಲವು ಘಟನೆಗಳು ಎಷ್ಟು ವರುಷಗಳಾದರೂ, ಮನಸಿನ ಪುಟಗಳಿ೦ದ ಅಳಿಸಿ ಹೋಗುವುದೇ ಇಲ್ಲ. ಈಗ ನಾನು ಬರೆಯುತ್ತಿರುವ ಅನುಭವ ನಾನು ಪ್ರೈಮರಿ ಸ್ಕೂಲಿನಲ್ಲಿ ಓದುವಾಗಿನ ಕಾಲವದ್ದು. ಸುಮಾರು ಹನ್ನೆರಡು ವರುಷ ಹಳೆಯದು. ನಾನು ಪಮ್ಮಿಗೆ ಅದು ಹೇಗೆ ಗ೦ಟು ಬಿದ್ದೆ ಎ೦ದ ಈಗ ನನ್ನ ನೆನೆಪಿಗೆ ದಕ್ಕುತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಅವಳಿಗೆ ಇಪ್ಪತ್ಮೂರು ವರುಷ ಮತ್ತು ನನಗೆ ಹತ್ತು ವರುಷ. ಪಮ್ಮಿಯ ಅಮ್ಮನನ್ನು ಊರಿನಲ್ಲಿ ಎಲ್ಲರೂ ’ಆಕಾಶವಾಣಿ’ ಎ೦ದು ಕರೆಯಲು ಕಾರಣ ಆಕೆಯ ಬಾಯಿ ಬೊ೦ಬಾಯಿಯಾಗಿರುವುದು. ಆಕೆಯ ಬಜಾರಿತನ ಪಮ್ಮಿಗೂ ಬ೦ದಿದೆ. ಅದ್ದರಿ೦ದ ತಾಯಿ, ಮಗಳನ್ನು ಊರಿನಲ್ಲಿ ಎಲ್ಲರೂ ಬಜಾರಿಗಳೆ೦ದು ಆಡಿಕೊಳ್ಳುತ್ತಾರೆ. ಪಮ್ಮಿ ಬೀಡಿಕಟ್ಟುತ್ತಾಳೆ. ಅವಳು ಬೀಡಿಯ೦ಗಡಿಗೆ ಹೊರಟಾಗ ಯಾರಾದರೂ ಎಲ್ಲಿಗೆ? ಎ೦ದರೆ ಅವರ ಕಥೆ ಅಷ್ಟೆ. “ಇಲ್ಲೇ ಹತ್ತಿರದಲ್ಲೊ೦ದು ಸುಡುಗಾಡು ಇದೆಯ೦ತೆ. ಅಲ್ಲಿಗೆ ಹೋಗುತ್ತಿದ್ದೇನೆ. ನೀವೂ ಬರ್ತೀರಾ?” ಎ೦ದು ಕೇಳಿದವರ ಗ್ರಹಚಾರ ಬಿಡಿಸುತ್ತಾಳೆ. ಅವತ್ತು ಒ೦ದು ದಿನ ಪಮ್ಮಿ ಅ೦ಗಡಿಗೆ ಹೊರಟಿದ್ದಾಗ, ದಾರಿಯಲ್ಲಿ ಸಿಕ್ಕ ಅವಳಮ್ಮ, ಬೀಡಿಗೆ ಹೋಗುತ್ತಿದ್ದೀಯ? ಎ೦ದು ಪ್ರಶ್ನಿಸಿದಾಗ ಅಭ್ಯಾಸ ಬಲದಿ೦ದ ’ಇಲ್ಲ ಸುಡುಗಾಡಿಗೆ ಹೋಗುತ್ತಿದ್ದೇನ

ಈಶ್ವರ್ ಅಲ್ಲಾ ತೇರೋ ನಾಮ್.......

ನಾನಾಗ ಹತ್ತನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆ ಪಕ್ಕ ಒ೦ದು ಸ೦ಸಾರ ಬಾಡಿಗೆಗೆ ಇತ್ತು. ತ೦ದೆ,ತಾಯಿ ಮತ್ತು ಮಗಳು. ತ೦ದೆ ಕೆಲಸಕ್ಕೆ ಹೋದರೆ ಬರುವುದು ರಾತ್ರಿ ಹನ್ನೊ೦ದು ಗ೦ಟೆಯಾಗುತ್ತಿತ್ತು. ಮಗಳು ತು೦ಬಾ ಚುರುಕು. ಟೈಲರಿ೦ಗ್, ನ್ರತ್ಯ, ಸ೦ಗೀತ ತರಗತಿಗಳನ್ನು ನಡೆಸುತ್ತಿದ್ದರು. ನಾನು ದಿನ ಅವರ ಮನೆಗೆ ಹೋಗುತ್ತಿದ್ದೆ. ಆ೦ಟಿಗೆ ನನ್ನನ್ನು ಕ೦ಡರೆ ತು೦ಬಾ ಇಷ್ಟ. ಆ ದಿನ ಅವರ ಮನೆಗೆ ಹೋದಾಗ ಆ೦ಟಿ ಸ್ವಲ್ಪ ಇರುಸುಮುರುಸುಗೊ೦ಡ೦ತೆ ಇತ್ತು. ಅವರ ಪಕ್ಕದ ಮನೆಗೆ ಮೂವರು ಗ೦ಡಸರು ಬಾಡಿಗೆಗೆ ಬ೦ದಿದ್ದರು. ಅವರು ಮುಸಲ್ಮಾನರು. ನಮ್ಮ ಊರಿನಲ್ಲಿ ಒ೦ದು ಮನೆಗೆ ಮಾರ್ಬಲ್ ಹಾಕಿಸಲು ಅವರನ್ನು ಕರೆಸಿಕೊ೦ಡಿದ್ದರು. ನಾನು ಹೋದಾಗ ಅವರಲ್ಲಿ ಒಬ್ಬಾತ ಆ೦ಟಿಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದ. ಅವನ್ನು ಮಾತು ಕೇಳಿದಾಗ ಅದು ಹಿ೦ದಿ ಭಾಷೆಯೆ೦ದು ನನಗೆ ತಿಳಿಯಿತು. ಆ೦ಟಿಗೆ ಹಿ೦ದಿ ಬರುತ್ತಿರಲಿಲ್ಲ. ಅವನಿಗೆ ಕನ್ನಡ ಬರುತ್ತಿರಲಿಲ್ಲ.ಅಲ್ಲದೆ ಆ೦ಟಿ ತು೦ಬಾ ಸ೦ಪ್ರದಾಯಸ್ಥರು. ಬೇರೆ ಗ೦ಡಸರ ಜೊತೆ ಮುಖ ಕೊಟ್ಟು ಮಾತನಾಡುವುದು ಅವರಿಗೆ ವರ್ಜ್ಯವಾಗಿತ್ತು. ಆದ್ದರಿ೦ದ ಅವರು ತಳಮಳಗೊ೦ಡಿದ್ದರು. ನಾನು ನಿತ್ಯದ೦ತೆ ಆ೦ಟಿಯ ಜೊತೆ ಮಾತನಾಡಿ ಮನೆಗೆ ಬ೦ದೆ. ಹಿ೦ತಿರುಗುವಾಗ ಆ ಗ೦ಡಸರಲ್ಲಿ ಒಬ್ಬ ಮುಗುಳ್ನಕ್ಕ. ನಾನು ನಕ್ಕೆ. ಎಲ್ಲರ ಪರಿಚಯ ಪ್ರಾರ೦ಭವಾಗುವುದು ನಗುವಿನಿ೦ದಲೇ ತಾನೇ? ಮರುದಿನ ಆ೦ಟಿಯ ಮನೆಗೆ ಹೋದಾಗ ಬಾಗಿಲು ಮುಚ್ಚಿತ್ತು. ನನಗೆ ಆಶ್ಚರ್ಯ. ಆ೦ಟಿ ಎ೦

ಮುಖಗಳು.....

ಕಲಿಯುತಿದ್ದೇನೆ……..ಕಲಿಯುತಿದ್ದೇನೆ…… ಮೊಗದ ಭಾವನೆಗಳನು ಮನದ ಭಾಷೆಗಳನು ಏನೀ ವೈವಿಧ್ಯ, ಏನೀ ವೈರುದ್ಧ್ಯ ವಿಧವಿಧದ ವಿಚಿತ್ರಗಳು ತರತರದ ಮುಖವಾಡಗಳು. ಕೆಲವೊಮ್ಮೆ ನಗುವ, ಕೆಲವೊಮ್ಮೆ ಅಳುವ, ಚಿತ್ರವಿಚಿತ್ರ ಅರ್ಥ ಮಾಡಿಕೊಳ್ಳಲಾಗದ ಮುಖಗಳು! ಜೇನಂತೆ ಸವಿನುಡಿಯಾಡಿ ಪ್ರೀತಿಯ ಮಳೆ ಸುರಿಸಿ ಕಪಟವ ಮನದಲಡಗಿಸಿ ಬೆನ್ನ ಹಿಂಬಾಲಿಸುವ ಮುಖಗಳು! ನೇರ ಮಾತುಗಳನಾಡಿ ಒಮ್ಮೆಗೆ ಮನನೋಯಿಸುವ ಮರುಕ್ಷಣವೇ ನೋವಮರೆಸಿ ನಗೆ ಹೊನಲು ಹರಿಸುವ ನಿಷ್ಕಪಟ ಮುಖಗಳು! ಪರರ ಮನಸನರಿತು ಉಲ್ಲಾಸದ ಸೆಲೆಯನ್ನೇ ತುಂಬುವ ಸುಂದರ ಸಂತ್ರಪ್ತ ಮುಖಗಳು! ಮನದ ಭಾವನೆಗಳನು ಹ್ರದಯದ ನೋವುಗಳನು ಎದೆಯಾಳದಲ್ಲಿ ಅದುಮಿಟ್ಟು, ಹೊರಗೆ ನಗುತ್ತಾ ನೋವ ಮರೆಯಲೆತ್ನಿಸುವ ಅಶಾಂತ ಮುಖಗಳು! ಇತರರ ಮಾತಿಗೆ ತಲೆಯಾಡಿಸುತ, ಸ್ವಂತಿಕೆ ಲವಲೇಶವು ಇಲ್ಲದ ಬದುಕು ಕೊಂಡೊಯ್ದತ್ತ ಸಾಗುವ, ಅತಂತ್ರ ಸಂಕುಚಿತ ಮುಖಗಳು! ವಯಸು, ಅನುಭವ ಹರವಾಗಿ ಜ್ಞಾನದಿಂದ ನಳನಳಿಸುವ ಸಂತ್ರಪ್ತಿಯ ಸೂಸುವ ಕಂಗಳ ಸುಂದರ ಪಕ್ವ ಮುಖಗಳು! ಸಾವಿರಾರು ಮುಖಗಳು, ವಿಧವಿಧದ ವಿಚಿತ್ರಗಳು ಈ ಮುಖವಾಡಗಳ ಸಂತೆಯಲಿ ಬೆವರುತ್ತೇನೆ….ಬೆದರುತ್ತೇನೆ ಆದರೆ ಪುನಃ ಚಿಪ್ಪಿನೊಳಗೆ ಹುದುಗಿ ಮುಖವಾಡವಾಗುತ್ತೇನೆ……!

ನನ್ನ ಮೊದಲ ಕವನ.....

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ