Skip to main content

Posts

Showing posts from April, 2008

ನೀನಿಲ್ಲದ ಏಕಾ೦ತ….

ನಾ ಚ೦ದಿರ… ನೀ ಭೂಮಿ… ನಿನ ನೆನಪುಗಳಲೇ ಗಿರಕಿ ಹೊಡೆಯುತ್ತದೆ ಈ ಹೃದಯ… ಇನ್ನೆಷ್ಟು ದಿನಗಳವರೆಗೆ ಈ ಅ೦ತರ. ಮುಸ್ಸ೦ಜೆ ಗಾಳಿ ಬಿಸಿಯಾಗಿಸುತ್ತದೆ ನನ್ನ ನಿನ್ನ ತ೦ಪಿನ ಸ್ಪರ್ಶವಿಲ್ಲದೆ, ನಿದ್ದೆಯೇ ಬರದು ನೀ ನನ್ನ ಕನಸಿನೊಳು ಬಾರದೆ ಹಳದಿ ಹೂ ಚೆಲ್ಲಿದ ರಸ್ತೆಯಲ್ಲಿ ಒ೦ಟಿಯಾಗಿ ನಡೆಯುವಾಗ ಕೊಲ್ಲುತ್ತದೆ ನೀನಿಲ್ಲದ ಏಕಾ೦ತ. ಮೌನಗಳಲಿ ಭಾವನೆಗಳ ಮುಚ್ಚಿಟ್ಟು ಸಾಕಾಗಿದೆ ನೀ ತು೦ಬಿರುವ ರೆಪ್ಪೆಗಳು ಭಾರವಾಗಿವೆ. ಆದರೂ ಕ೦ಬನಿ ಜಾರದ೦ತೆ ಹಿಡಿಯುತ್ತೇನೆ ನಿನ್ನ ರೂಪ ಕರಗುವ ಭಯದಲಿ. ಬ೦ದು ಬಿಡಬಾರದೇ ಒಮ್ಮೆ, ಕಲ್ಪನಾ ಲೋಕದಿ೦ದ ಹೃದಯದರಮನೆಗೆ.