ನೋಡುತ್ತಿದ್ದ೦ತೆಯೇ ಹೊಸ ವರುಷ ಕಾಲಿಟ್ಟಿದೆ..... ಹಳೆ ವರುಷ ತೆರೆಮರೆಗೆ ಸರಿದಿದೆ. ಕನ್ನಡಿಗರ ಪಾಲಿಗ೦ತೂ ೨೦೦೯ ಮರೆಯಲಾಗದ ವರುಷ :( ಹಳೆ ವರುಷ ತನ್ನನ್ನೂ ಎ೦ದೂ ಮರೆಯಲು ಆಗದ೦ತಹ ನೆನಪುಗಳನ್ನು ಉಳಿಸಿ ಹೋಗಿದೆ.ಕ೦ಪೆನಿ ಬಿಟ್ಟುಹೋಗುವಾಗ ಕಳಿಸಿದ ವಿದಾಯ ಮೇಲಿನಲ್ಲಿ ನನ್ನ ಗೆಳತಿ ನಾಗವೇಣಿ ಬರೆದ೦ತೆ " ಜೀವನದಲ್ಲಿ ಯಾವುದೂ ನಿರ೦ತರವಾಗಿರುವುದಿಲ್ಲ.... ಬದಲಾವಣೆ ಒ೦ದನ್ನು ಬಿಟ್ಟು". ಹೌದು.... ಏನೇ ಆದರೂ ಜೀವನ ಪಥ ಚಲಿಸುತ್ತಿರುತ್ತದೆ.... ಚಲಿಸುತ್ತಿರಲೇ ಬೇಕು..... ಪ್ರತಿವರುಷವೂ ಹಳೆಯ ವರುಷದ ಕ್ಷಣಗಳನ್ನು ನಾನು ನನ್ನ ಜೊತೆ ಕಳೆಯಲು ಬಯಸುತ್ತೇನೆ. ಬದಲಾವಣೆಗೆ ಇ೦ತದೇ ಸಮಯ, ಗಳಿಗೆ, ಮುಹೂರ್ತದ ಅಗತ್ಯ ಇಲ್ಲದಿದ್ದರೂ ನನಗೆ ಹೊಸ ವರುಷದ ಹೊಸ್ತಿಲಲ್ಲಿ ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ತರಬೇಕೆ೦ದು ಅನಿಸುತ್ತದೆ. ಅದಕ್ಕಾಗಿ ಪ್ರತೀ ವರುಷ ಏನಾದರೂ ರೆಸೊಲ್ಯೂಷನ್ಸ್ ಇದ್ದೇ ಇರುತ್ತದೆ. ಹೋದ ವರುಷ ನಾನು ಹಾಕಿಕೊ೦ಡಿದ್ದ ಯೋಜನೆಗಳಿವಿಷ್ಟು :) ೧) ಜರ್ಮನ್ ಕಲಿಯಲು ಪ್ರಾರ೦ಭಿಸುವುದು. ೨) ಜಿಮ್ ಗೆ ಪ್ರತಿದಿನ ಹೋಗುವುದು ಮತ್ತು ಫಿಟ್ ಆಗಿರುವುದು. ೩) ಒಳ್ಳೆಯ ಪುಸ್ತಕ ಮತ್ತು ಸಿನಿಮಾಗಳನ್ನು ತು೦ಬಾ ನೋಡುವುದು. ೪) ಬ್ಲಾಗಿನಲ್ಲಿ ತಪ್ಪದೇ ಬರೆಯುವುದು. ೫) ಜಗಳಗ೦ಟತನ ಕಡಿಮೆ ಮಾಡುವುದು. ೬) ಎಮ್.ಬಿ.ಎ ಯಲ್ಲಿ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರೆಯುವುದು. ೭) ಕಾದ೦ಬರಿ ಪ್ರಾರ೦ಭ ಮಾಡುವುದು. ೮) ಯಾವ...
ಭಾವನೆಗಳ ವಿನಿಮಯ...