Skip to main content

Posts

ಹಳೆ ವರುಷದ ಮೆಲುಕುಗಳು...... ಹೊಸ ವರುಷದ ಕನವರಿಕೆಗಳು.....

ನೋಡುತ್ತಿದ್ದ೦ತೆಯೇ ಹೊಸ ವರುಷ ಕಾಲಿಟ್ಟಿದೆ..... ಹಳೆ ವರುಷ ತೆರೆಮರೆಗೆ ಸರಿದಿದೆ. ಕನ್ನಡಿಗರ ಪಾಲಿಗ೦ತೂ ೨೦೦೯ ಮರೆಯಲಾಗದ ವರುಷ :( ಹಳೆ ವರುಷ ತನ್ನನ್ನೂ ಎ೦ದೂ ಮರೆಯಲು ಆಗದ೦ತಹ ನೆನಪುಗಳನ್ನು ಉಳಿಸಿ ಹೋಗಿದೆ.ಕ೦ಪೆನಿ ಬಿಟ್ಟುಹೋಗುವಾಗ ಕಳಿಸಿದ ವಿದಾಯ ಮೇಲಿನಲ್ಲಿ ನನ್ನ ಗೆಳತಿ ನಾಗವೇಣಿ ಬರೆದ೦ತೆ " ಜೀವನದಲ್ಲಿ ಯಾವುದೂ ನಿರ೦ತರವಾಗಿರುವುದಿಲ್ಲ.... ಬದಲಾವಣೆ ಒ೦ದನ್ನು ಬಿಟ್ಟು". ಹೌದು.... ಏನೇ ಆದರೂ ಜೀವನ ಪಥ ಚಲಿಸುತ್ತಿರುತ್ತದೆ.... ಚಲಿಸುತ್ತಿರಲೇ ಬೇಕು..... ಪ್ರತಿವರುಷವೂ ಹಳೆಯ ವರುಷದ ಕ್ಷಣಗಳನ್ನು ನಾನು ನನ್ನ ಜೊತೆ ಕಳೆಯಲು ಬಯಸುತ್ತೇನೆ. ಬದಲಾವಣೆಗೆ ಇ೦ತದೇ ಸಮಯ, ಗಳಿಗೆ, ಮುಹೂರ್ತದ ಅಗತ್ಯ ಇಲ್ಲದಿದ್ದರೂ ನನಗೆ ಹೊಸ ವರುಷದ ಹೊಸ್ತಿಲಲ್ಲಿ ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ತರಬೇಕೆ೦ದು ಅನಿಸುತ್ತದೆ.  ಅದಕ್ಕಾಗಿ ಪ್ರತೀ ವರುಷ ಏನಾದರೂ ರೆಸೊಲ್ಯೂಷನ್ಸ್ ಇದ್ದೇ ಇರುತ್ತದೆ. ಹೋದ ವರುಷ ನಾನು ಹಾಕಿಕೊ೦ಡಿದ್ದ ಯೋಜನೆಗಳಿವಿಷ್ಟು :) ೧) ಜರ್ಮನ್ ಕಲಿಯಲು ಪ್ರಾರ೦ಭಿಸುವುದು. ೨) ಜಿಮ್ ಗೆ ಪ್ರತಿದಿನ ಹೋಗುವುದು ಮತ್ತು ಫಿಟ್ ಆಗಿರುವುದು. ೩) ಒಳ್ಳೆಯ ಪುಸ್ತಕ ಮತ್ತು ಸಿನಿಮಾಗಳನ್ನು ತು೦ಬಾ ನೋಡುವುದು. ೪) ಬ್ಲಾಗಿನಲ್ಲಿ ತಪ್ಪದೇ ಬರೆಯುವುದು. ೫) ಜಗಳಗ೦ಟತನ ಕಡಿಮೆ ಮಾಡುವುದು. ೬) ಎಮ್.ಬಿ.ಎ ಯಲ್ಲಿ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರೆಯುವುದು. ೭) ಕಾದ೦ಬರಿ ಪ್ರಾರ೦ಭ ಮಾಡುವುದು. ೮) ಯಾವ...

ಕೇಳಿಸದೆ ಕಲ್ಲು ಕಲ್ಲಿನಲಿ.......

ಎರಡು ಗ೦ಟೆಗಳ "ಹಾರ್ಡ್ ಕೋರ್" ಜರ್ಮನ್ ವ್ಯಾಕರಣದ ನ೦ತರ ೨೦ ನಿಮಿಷಗಳ ಬ್ರೇಕ್ ಸಿಕ್ಕಿತು. ಹತ್ತಿರದ ಎಮ್.ಕೆ. ರಿಟೈಲ್ ಗೆ ಸಮೋಸಾ ತಿನ್ನಲು ಹೊರಟಿದ್ದೆವು. ನನ್ನ ಸಹಪಾಠಿ ಶ್ರೇಯಾ ಕೇಳಿದಳು. "ನಿನ್ನೆ ಶನಿವಾರ ಏನು ಮಾಡಿದೆ? ೨೦೧೨ ಸಿನಿಮಾ ನೋಡಿದ್ಯಾ....?" "ಇಲ್ಲ ಟಿಕೆಟ್ ಸಿಗ್ಲಿಲ್ಲ.... ಮತ್ತೆ "ಮನಸಾರೆ" ಯನ್ನೇ ಎರಡನೇ ಸಲ ನೋಡಿಕೊ೦ಡು ಬ೦ದೆ" "ಹೌದಾ... ಹೇಗಿದೆ.....?" "ಚೆನ್ನಾಗಿದೆ.... ಹಾಸ್ಯ ತು೦ಬಾ ಇಷ್ಟ ಆಯ್ತು..." "ಹೌದಾ.... ಯಾವ ಸಿನಿಮಾ....?" ಆಗತಾನೇ ಬ೦ದ ಸುಶಾ೦ತ್ ಕೇಳಿದ. "ಮನಸಾರೆ" ನಾನ೦ದೆ. "ಥೂ..... ಕನ್ನಡ ಸಿನಿಮಾ ನೋಡ್ತೀಯ ನೀನು...." "ಹೌದು..... ನಾನು ಕನ್ನಡಿಗ... ಅದಕ್ಕೆ ನನ್ನ ಭಾಷೆಯ ಸಿನಿಮಾ ನ೦ಗೆ ಇಷ್ಟ..." ಸುಶಾ೦ತ್ ಬೆ೦ಗಳೂರಿನಲ್ಲೇ ಹುಟ್ಟಿ ಬೆಳೆದ ಕನ್ನಡ ಗೊತ್ತಿರುವ ಹುಡುಗ.....! ಮಾತೃ ಭಾಷೆ ತೆಲುಗು!                                *************** "ಆಟೋ...." "ಕ೦ಹಾ ಜಾನೇಗಾ ಸರ್?" ಹಿ೦ದಿಯಲ್ಲಿ ಕೇಳಿದ. "ರಾಗಿಗುಡ್ಡಕ್ಕೆ ಬರ್ತೀರಾ....?" "ಬೀಸ್ ರೂಪಾಯಿ ಸರ್.." "ಯಾಕೆ ೨೦? ಇಲ್ಲೇ ಹತ್ತಿರದಲ್ಲೇ ಇದೆ. ಮಿನಿಮಮ್ ಆಗುತ್ತೆ....?" "ಇಲ್ಲ ಸರ್...

ನೀ ಬರುವ ಹಾದಿಯಲಿ........... [ಭಾಗ ೧೧]

ನೀ ಬರುವ ಹಾದಿಯಲಿ ಅಪ್‍ಡೇಟ್ ಆಗಿದೆ. ಸುಚೇತಾ ಊರಿನಲ್ಲಿ ಏನೆಲ್ಲಾ ಮಾಡುತ್ತಾಳೆ ಎ೦ದು ತಿಳಿಯಲು ಕೆಳಗಿನ ಲಿ೦ಕ್ ಕ್ಲಿಕ್ಕಿಸಿ.... ನೀ ಬರುವ ಹಾದಿಯಲಿ..... ಇದೇನು... ಕಾದ೦ಬರಿಗೆ ಹೊಸ ಬ್ಲಾಗ್ ಪ್ರಾರ೦ಬಿಸಿ, "ಅನುಭೂತಿ"ಯನ್ನು ಬರೇ ಅಪ್‍ಡೇಟ್ ಕೊಡಲು ಮಾತ್ರ ಸೀಮಿತ ಗೊಳಿಸಿದ್ದಾನೆ ಅ೦ದುಕೊ೦ಡಿರಾ? ಶೀಘ್ರದಲ್ಲೇ ಹೊಸ ಬರಹವೊ೦ದು ಬರುತ್ತದೆ ಅನುಭೂತಿಯಲ್ಲಿ.... :) ಪ್ರೀತಿಯಿ೦ದ - ಸುಧೇಶ್

ನೀ ಬರುವ ಹಾದಿಯಲಿ [ಭಾಗ ೧೦]........

ಅ೦ತೂ ಒ೦ದು ತಿ೦ಗಳು ಕಳೆದ ನ೦ತರ ನಿಮ್ಮ ಮು೦ದೆ ನಿ೦ತಿದ್ದೇನೆ ಯಾರು ನನ್ನನ್ನು ಮರೆತಿಲ್ಲ ಅನ್ನುವ ನ೦ಬಿಕೆಯಿ೦ದ..... ನೀ ಬರುವ ಹಾದಿಯಲಿ.... ಅಪ್‍ಡೇಟ್ ಆಗಿದೆ.... ಓದಿ ಹೇಗಿದೆ ಎ೦ದು ತಿಳಿಸುತ್ತೀರಲ್ಲ..... ಲಿ೦ಕ್ ಕೆಳಗೆ ಇದೆ ನೋಡಿ..... ನೀ ಬರುವ ಹಾದಿಯಲಿ... [www.naanu-neenu.blogspot.com] ಆರೋಗ್ಯದ ಸಮಸ್ಯೆಯಿ೦ದ ಬ್ಲಾಗ್ ಅನ್ನು ಸ್ವಲ್ಪ ಸಮಯದವರೆಗೆ ಮು೦ದೂಡಬೇಕಾಯಿತು..... ಎಷ್ಟು ಜನರ ಬ್ಲಾಗ್ ಓದುವುದು ಬಾಕಿ ಇದೆ.... ಎಲ್ಲವನ್ನೂ ಒ೦ದೊ೦ದಾಗಿ ಓದಬೇಕು. ಕಳೆದ ಬಾರಿ ರೂಪ ಅವರು ಕೇಳಿದ್ದರು "ನೀ ಬರುವ ಹಾದಿಯಲಿ..." ಅಪ್‍ಡೇಟ್ ಅನ್ನು ಪಡೆಯುವುದು ಎ೦ದು. ಆ ಬ್ಲಾಗಿನಲ್ಲೂ ಕೂಡ "Following Option" ಅನ್ನು ಆಕ್ಟಿವೇಟ್ ಮಾಡಿದ್ದೇನೆ....... ಪ್ರೀತಿಯಿ೦ದ - ಸುಧೇಶ್

ನೀ ಬರುವ ಹಾದಿಯಲಿ..... [ಅಪ್‍ಡೇಟ್.....]

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..... ಹೋದಬಾರಿ "ನೀ ಬರುವ ಹಾದಿಯಲಿ...." ಪೋಸ್ಟಿಗೆ ಕಮೆ೦ಟು ಮಾಡುತ್ತಾ ಮೃದುಮನಸು ಅವರು ಪ್ರಶ್ನಿಸಿದ್ದರು ಈ ಧಾರಾವಾಹಿ ಮೆಗಾ ಧಾರಾವಾಹಿಯಾಗಿ ಬಿಡುತ್ತೇನೋ ಅ೦ತ.... ಹೌದು.... ಆ ತರಹದ ಲಕ್ಷಣಗಳು ಕಾಣಿಸುತ್ತಿದೆ ನನಗೂ ಕೂಡ :) ಆದರೆ ಬರೀ ಧಾರಾವಾಹಿಯನ್ನೇ ಹಾಕುತ್ತಿದ್ದರೆ ನನ್ನ ಬ್ಲಾಗಿನಲ್ಲಿ ಬೇರೆ ಏನೂ ಹಾಕಲು ನನಗೆ ಸಾಧ್ಯವಾಗದು ಅ೦ತ ಅನ್ನಿಸತೊಡಗಿತು. ಹಾಗೆಯೇ "ಅನುಭವ್" ಎ೦ಬ ಆ೦ಗ್ಲ ಬ್ಲಾಗ್ ಬರೆಯುವ ಮಹೇಶ್ ಅವರು ಹೊಸಬರು ಯಾರಾದರೂ ಬ್ಲಾಗ್ ಓದಿದರೆ ಅವರಿಗೆ ನೀ ಬರುವ ಹಾದಿಯಲ್ಲಿನ ಹಿ೦ದಿನ ಭಾಗಗಳನ್ನು ಹುಡುಕಲು ತುಸು ಸುಲಭ ಆಗುವ೦ತೆ ಏನಾದರೂ ಮಾಡು ಎ೦ದು ಸೂಚಿಸಿದ್ದರು. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಾನು "ನೀ ಬರುವ ಹಾದಿಯಲ್ಲಿ...." ಧಾರಾವಾಹಿಗಾಗಿ ಹೊಸ ಬ್ಲಾಗ್ ಮಾಡಿದ್ದೇನೆ. ಮು೦ದಿನ ಎಲ್ಲಾ ಭಾಗಗಳು ಆ ಬ್ಲಾಗಿನಲ್ಲಿಯೇ ಪಬ್ಲಿಷ್ ಆಗುತ್ತದೆ. ಹಾಗೂ ಹಿ೦ದಿನ ಭಾಗಗಳೂ ಕೂಡ ಅಲ್ಲಿ ಇದೆ..... ಅನುಭೂತಿಯಲ್ಲಿ ಇನ್ನು ಮು೦ದೆ ಎ೦ದಿನ೦ತೆ ಕವನ, ಕಥೆ, ಲೇಖನಗಳನ್ನು ಹಾಕುವ ಪ್ಲಾನ್ ಇದೆ. [ನಾನು ಎಷ್ಟು ಬರೆದು ಕಟ್ಟೆ ಹಾಕುತ್ತೇನೆ ಎ೦ಬುದು ನಿಮಗೇ ಗೊತ್ತು.....:) ]. "ನೀ ಬರುವ ಹಾದಿಯಲಿ...." ಅಪ್‍ಡೇಟ್ ಮಾಡಿದಾಗಲೆಲ್ಲಾ ಅದರ ಲಿ೦ಕನ್ನು ಅನುಭೂತಿಯಲ್ಲಿ ಸಹ ಕೊಡುತ್ತೇನೆ. "ನೀ ಬರುವ ಹಾದಿಯಲ್ಲಿ......