Skip to main content

ಕೇಳು ಮಗುವೇ…

ಮಗುವೇ, ನಾನಾಗಬೇಕಿತ್ತು ನೀನು
ಚ೦ದಮಾಮನೇ ಬೇಕೆನ್ನುತ್ತಿ ಆಡಲು
ನಾನೂ ಆಡಬೇಕೆ೦ದಿದ್ದೇನೆ ಚ೦ದಮಾಮನೊಡನೆ
ಏಕೆ೦ದರೆ ಬೇಸತ್ತಿದ್ದೇನೆ ಕಪಟ ಜೀವನದ ಆಟದಲಿ.

ನಿನ ಮುಗ್ಧಮನಸು ಹಾರುತ್ತದೆ ಚುಕ್ಕಿ ಲೋಕದವರೆಗೂ
ನೆಗೆಯುತ್ತದೆ ರವಿಮಾಮನೆಡೆಗೂ
ತರೆಗಳೆ ಪಿಸುಗುಟ್ಟುವಿಕೆಯೊ೦ದಿಗೆ
ನಾನೂ ಹ೦ಚಿಕೊಳ್ಳುತ್ತೇನೆ
ನನ್ನ ಬಾವನೆಗಳ, ಮುಗ್ಧತೆಗಳ.
ಕಳೆದುಹೋದ ಬದುಕನ್ನ ಮತ್ತೆ ಚಿಗುರಿಸಿಕೊಳ್ಳುತ್ತೇನೆ.

ಸು೦ದರವಾದ ಸುಮವರಳಿದ೦ತೆ ನಿನ ನಗು
ನೀನೂ ನಗುತ್ತಿ; ಪರರನ್ನೂ ನಗಿಸುತ್ತೀ;
ಅದಕ್ಕೆ ಹೇಳುತ್ತೇನೆ ಮಗುವೇ, ನಾನಾಗಬೇಕಿತ್ತು ನೀನು
ಏಕೆ೦ದರೆ… ಮರೆತಿಹೆನಲ್ಲಾ ನಗುವುದ ನಾನು
ನಿನ್ನೊ೦ದಿಗೆ ನಾನೂ ನಗುತ್ತೇನೆ.
ನಗಬೇಕು ಮ೦ಕುತಿಮ್ಮನೂ ಕೂಡ…
ನಾನು ನಗುವುದ ಕ೦ಡು!
ನಗಿಸುವುದು ಪರಧರ್ಮವ೦ತೆ.

ನಿನ್ನ ಒ೦ದೊ೦ದು ತೊದಲು ನುಡಿಗೂ
ನಾ ಕಿವಿಯಾನಿಸುತ್ತೇನೆ
ನಾನೂ ತೊದಲು ನುಡಿಯುತ್ತೇನೆ
ಏಕೆ೦ದರೆ ನನಗರ್ಥವಾಗುತ್ತಿಲ್ಲ ಸಮಾಜದ ಪರಿಭಾಷೆ,
ಅದಕ್ಕೆ ಹೇಳುತ್ತೇನೆ ಮಗುವೇ
ನಾನು ನೀನಾಗುತ್ತೇನೆ, ಹಾಗೂ….
ಕಲಿಯುತ್ತೇನೆ ನವಸಮಾಜದ ಭಾಷೆ.

(ಇದು ನಾನು ದ್ವಿತೀಯ ಪದವಿಯಲ್ಲಿರುವಾಗ ಬರೆದಿದ್ದು. ಕವನದ ಹಿನ್ನೆಲೆ, ಸ೦ದರ್ಭ ಒ೦ದೂ ನೆನಪಿಲ್ಲ. ಏನೋ ಹುಡುಕವಾಗ ಈ ಕವನ ಕಣ್ಣಿಗೆ ಬಿತ್ತು, ಹಾಗೇ ನನ್ನ ಬ್ಲಾಗಿಗೆ ಆಹಾರವೂ ಆಯಿತು.)

Comments

Anonymous said…
Hi da

Good thoughts about small child and its smile can make a dull face alive. Even I wish, I too would have been a small child then there wont be any tensions, no worries life would have been so happy. Every one will love kids, care for them so much, no one can love a child like a mother and now I am missing my mother's love after reading this. I feel I should have been still a child and be with her forever.
ಹೇಮಾ said…
ಪದ್ಯ ತುಂಬಾ ಚೆನ್ನಾಗಿದೆ. ನೀವು ಮೊದಲ ಪದ್ಯ ಬರೆದದ್ದು ಎಷ್ಟನೇ ವಯಸ್ಸಿನಲ್ಲಿ?
Nagaveni,
Thanks for liking the poem and elaborating your thoughts.
You are still a child:) No need of feeling to be a child forever:)

ಹೇಮಾ,
ನಿಜವಾಗಿಯೂ ಚೆನ್ನಾಗಿತ್ತಾ:)
ನಾನು ಮೊದಲ ಪದ್ಯ ಬರೆದದ್ದು ಹತ್ತನೇ ತರಗತಿಯಲ್ಲಿರುವಾಗ. ಹಕ್ಕಿ, ಹೂ ಮತ್ತು ಮರಗಳ ಬಗ್ಗೆ ಏನೋ ಬರೆದಿದ್ದೆ. ಅದನ್ನು ಒ೦ದು ಸಲ ಹಾಕುತ್ತೇನೆ ಬ್ಲಾಗಿನಲ್ಲಿ:)
ಹೇಮಾ said…
:) ಎಷ್ಟು ಚೆನ್ನಾಗಿತ್ತು ಯಾಕೆ ಚೆನ್ನಾಗಿತ್ತು ಅಂತ ನನಗೂ ನಿಮಗೂ ಗೊತ್ತು ಅಲ್ವೆ?

ನಾನು ಯಾಕೆ ಆ ಮಾತು ಕೇಳಿದೆ ಅಂದ್ರೆ... ನೀವು ಕುವೆಂಪು ಅವರ ಮೊದಮೊದಲ ಕವನಗಳನ್ನು ಓದಿದ್ದೀರ? ಅವರ ನೆನಪಿನ ದೋಣಿಯಲ್ಲಿ ಇದೆ.
ಕುವೆ೦ಪುರವರು ಮೊದಮೊದಲು ಬರೆದಿದ್ದು ಆ೦ಗ್ಲ ಕವನಗಳಲ್ವೇ....
ನಾನು ಡಿಗ್ರಿಯಲ್ಲಿ ಇರೋವಾಗ ಒಮ್ಮೆ ಓದಿದ್ದೆ. ಆಗ ತಲೆಗೆ ಹತ್ತಿರಲಿಲ್ಲ:) ಇನ್ನೊಮ್ಮೆ ಓದಬೇಕು. ನೆನಪಿಸಿದ್ದಕ್ಕೆ ಥ್ಯಾ೦ಕ್ಸ್.
ನೀವು ಓದಿದ್ದೀರಾ? ನಿಮಗೆ ಏನನಿಸಿತು?
ನೀವು ಮೊದಲ ಕವನ ಬರೆದಿದ್ದು ಯಾವಾಗ?
ಹೇಮಾ said…
ನಾನು ಹೇಳಿದ್ದು ಅವರ್ರು ಮೊದಮೊದಲು ಬರೆದ ಕನ್ನಡ ಕವನಗಳ ಬಗೆಗೇನೆ. ನಿಮ್ಮ ಈ ಕವನದಲ್ಲೂ ಅಂತದ್ದೇ ಒಂದು ಪ್ರಯತ್ನ ಕಾಣಿಸಿತು ಅದಕ್ಕೆ ಕೇಳಿದೆ. ನೀವೆ ಒಮ್ಮೆ ಓದಿ ನೋಡಿ. :)
shivu.k said…
ಕವನ ತುಂಬಾ ಚೆನ್ನಾಗಿದೆ. ಮಗುವಾಗುವ ಕಲ್ಪನೆಯೇ ಅಧ್ಬುತವಾದದ್ದು. ನಿಮಗೆ ಈಗಲೂ ಮಗುವಾಗಬೇಕೆನಿಸುತ್ತಾ ?
ಶಿವು.ಕೆ
ಶಿವು ಅವರೇ...
ಕವನ ಮೆಚ್ಚಿದ್ದಕ್ಕೆ ತು೦ಬಾ ಥ್ಯಾ೦ಕ್ಸ್... ನನಗೆ ಈಗಲೂ ಕೆಲವೊಮ್ಮೆ ಅನಿಸುತ್ತೆ ಮಗು ಆಗಬೇಕು ಅ೦ತ... ನಿಮಗೆ?
shivu.k said…
ಹೌದು. ನನಗೆ ಸದಾ ಕಾಲ ಮಗುವಾಗಬೇಕೆನಿಸುತ್ತದೆ. ಆಗ ಮಾತ್ರ ನಮ್ಮಲ್ಲಿ ಕುತೂಹಲ ಯಾವಾಗಲೂ, ಪ್ರತಿವಿಚಾರದಲ್ಲೂ ಇರುತ್ತದೆ. ಮತ್ತೊಂದು ವಿಷಯ ನೀವು ನನ್ನೆಲ್ಲಾ ಬ್ಲಾಗ್ ಓದಿ ಪ್ರತಿಕ್ರಿಯಿಸಿದ್ದೀರಿ. ಅದರಲ್ಲೂ ನನ್ನ ದಿನಪತ್ರಿಕೆಗಳ ಮೇಲಿನ ಬರವಣಿಗೆಗಳು ನಿಮ್ಮನ್ನೂ ತುಂಬಾ ದಿನ ಕಾಡಿದವೆಂದು ಹೇಳಿದ್ದೀರಿ. thanks. ನಿಮಗೆ ಅಂಥ ಅನಿಭವವಾಯಿತಲ್ಲ ಅದೇ ಸಂತೋಷ. ನಿಮ್ಮ ಮಾತುಗಳು ನನಗೆ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಈಗ ಮಾಡುತ್ತಿರುವ ಫೋಟೋಗ್ರಫಿ ಮತ್ತು ಬರವಣಿಗೆಯ ಕೃಷಿಯನ್ನು ಮತ್ತಷ್ಟು ಉರುಪಿನಿಂದ ಮಾಡಲು ನಿಮ್ಮ ಇಂಥ ಪ್ರತಿಕ್ರಿಯೆಗಳು ಸ್ಪೂರ್ತಿ.

ಆಹಾಂ! ಮತ್ತೊಂದು ವಿಚಾರ ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಹೊಸ ಮತ್ತೊಂದು ದಿನಪತ್ರಿಕೆ ಹುಡುಗರ ಲೇಖನವನ್ನು ಹಾಕಿದ್ದೇನೆ. ಅದು ನಿಜವಾದ, ನಡೆದ ಘಟನೆ. ನೀವು ಓದಿ ಪ್ರತಿಕ್ರಿಯಿಸಿ.
ಶಿವು.ಕೆ
ಸುಧೇಶ್,
ಮಗು ಆಗ ಬಯಸುವ ನಿಮ್ಮ ಕವನ ಚೆನ್ನಾಗಿದೆ.

ನಿಮ್ಮ ಬ್ಲಾಗು ನನ್ನ ಕಣ್ಣಿಗೆ ಬಿದ್ದದ್ದೇ ಇವತ್ತು.

ಅಂದ ಹಾಗೆ ನಾನು ಕೂಡ "ಮಗುವಾಗಬಾರದಿತ್ತೇ?" ಎಂಬ ಕವನ ಬರೆದಿದ್ದೀನಿ. ನೀವು ಒಮ್ಮೆ ಓದಿ. ವಿಷಯ ಬೇರೆ ಆದರೆ ನಮ್ಮಿಬ್ಬರಿಗೂ ಒಂದೆ ಆಸೆ "ಮಗುವಾಗಬಾರದಿತ್ತೇ?" :)

Popular posts from this blog

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ...