Skip to main content

ಕ್ಷಮಿಸಿ.....

ನಾಗವೇಣಿ, ಜಯ ಶ೦ಕರ್, ಸ೦ದೀಪ್ ಕಾಮತ್, ತೇಜಸ್ವಿನಿ ಹೆಗಡೆ ಮತ್ತು ಶಿವೂ ಅವರೇ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮ ಕಮೆ೦ಟುಗಳಿದ್ದ 'ಆ ಹದಿನಾಲ್ಕು ದಿನಗಳು ಭಾಗ ೨' ಪೋಸ್ಟ್ ಅನ್ನು ಡಿಲಿಟ್ ಮಾಡಿ ಹೊಸದಾಗಿ ಬರಹವನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ್ದೇನೆ. ಹಿ೦ದಿನ ಬರಹದಲ್ಲಿ ಆಗಿದ್ದ ತಪ್ಪುಗಳನ್ನು ತಿದ್ದಿದ್ದೇನೆ ಇಲ್ಲಿ.

ನನ್ನ ಲ್ಯಾಪ್ಟಾಪ್ ಬಿಟ್ಟು ಬೇರೆ ಯಾವುದೋ ಕ೦ಪ್ಯೂಟರಿನಲ್ಲಿ ಟೈಪ್ ಮಾಡಿದುದರಿ೦ದ ಆದ ಪ್ರಮಾದ ಇದು. ಪೋಸ್ಟ್ ಮಾಡುವಾಗ ತಪ್ಪುಗಳ ಅರಿವು ಇರಲಿಲ್ಲ. ತೇಜಸ್ವಿನಿ ಹೆಗಡೆ, ಶಿವೂ ಮತ್ತು ಜಯ ಶ೦ಕರ ಅವರು ಕಮೆ೦ಟಿಸಿದ ಮೇಲೆಯೇ ತಿಳಿದಿದ್ದು ಆಗಿದ್ದ ತಪ್ಪುಗಳು. ಮೊದಲೇ ಇದ್ದ ಬರಹ ಕಣ್ತಪ್ಪಿನಿ೦ದ ಡಿಲಿಟ್ ಆಗಿದೆ. ಈಗಿರುವುದು ಹೊಸದಾಗಿ ಮತ್ತೊಮ್ಮೆ ಬರೆದ ಬರಹ.

ನಿಮ್ಮ ಪ್ರೋತ್ಸಾಹ ಮತ್ತು ಸಹಕಾರ ಹೀಗೆ ಇರಲಿ.

Comments

ಸುಧೇಶ್ ಅವರೆ,

ಇದಕ್ಕೆಲ್ಲಾ ಇಷ್ಟು ಕ್ಷಮೆ ಕೇಳಬೇಕೆಂದಿಲ್ಲ.. ಕಣ್ತಿಪ್ಪಿನಿಂದ ಅದೇಷ್ಟೋ ತಪ್ಪುಗಳು ಎಲ್ಲರಿಂದಲೂ ಆಗುವುದು. ನನ್ನಿಂದಲೂ ಆಗಿದೆ.. ಒಪ್ಪಿಕೊಂಡು ತಿದ್ದಿಕೊಳ್ಳುವ ಉತ್ತಮ ಮನಸ್ಸಿದ್ದರೆ ಸಾಕು. ಸಂತೋಷ :)
ಸುಧೇಶ್,
ಇದಕ್ಕಾಗಿ ನೀವು ಒಂದು ಪೋಸ್ಟ್ ಮಾಡಿ, ಕ್ಷಮೆ ಕೋರುವ ಅವಶ್ಯಕತೆ ಇರಲಿಲ್ಲ. ಆ ಹಳೇ ಪೋಸ್ಟಿನಲ್ಲೇ ತಿದ್ದಬಹುದಾಗಿತ್ತು.

ನಾನೂ ಕೆಲವೊಂದು ತಪ್ಪು ಮಾಡಿದ್ದೇನೆ..

ವಿ. ಮನೋಹರ್ ಹೇಳುವ ಹಾಗೆ...
"ತಪ್ಪು ಮಾಡದೋರ್ ಯಾರೌರೆ?
ತಪ್ಪೇ ಮಾಡದೋರ್ ಎಲ್ಲೌರೆ?"
Anonymous said…
ನಮ್ಮ ಕಮೆಂಟು ಡಿಲೀಟ್ ಮಾಡಿದ್ದು ಬೇಜಾರು ತರಿಸಿಲ್ಲ ಆದರೆ ತಪ್ಪನ್ನು ಹಾಗೇ ಬಿಡದೆ ಸರಿ ಮಾಡಿದ್ದು ಖುಷಿ ಕೊಟ್ಟಿತು.
ನನಗೂ ತಪ್ಪುಗಳನ್ನು ನೋಡಿ ಕಸಿವಿಸಿ ಆಯ್ತು ! ಆದ್ರೆ ನೀವು ಪ್ರವಾಸದಲ್ಲಿರೋದರಿಂದ ಬಹುಶಃ ಅವಸರದಲ್ಲಿ ಬರೆದಿದ್ರಬಹುದೆಂದು ಸುಮ್ಮನಾದೆ:)

Happy blogging!
Anonymous said…
Hey no need to ask sorry da, I felt bad because I dint tell you that you have made so many mistakes when I read your blog. You called me to tell that Internet is not working fine at Internet cafe and you are facing some problems to post in Kannada language. I Just checked the fonts when you called me to check your blog, but dint read the whole story to check grammar. I am really sorry for all the inconvenience caused to you and every one else.
ತೇಜಕ್ಕ, ಜಯ್ ಮತ್ತು ಸ೦ದೀಪ್ ಅವರೇ,

ಯಾಕೋ ಕನ್ನಡದಲ್ಲಿ ಬರೆಯುವಾಗ ಅಷ್ಟೊ೦ದು ತಪ್ಪುಗಳಾದುದು ತು೦ಬಾ ಕಸಿವಿಸಿ ಎನಿಸಿತು. ಅಲ್ಲದೇ ನಿಮ್ಮ ಕಮೆ೦ಟುಗಳನ್ನು ಡಿಲೀಟ್ ಮಾಡಿದುದು ಕೂಡ ನನಗೆ ಬೇಸರ ತರಿಸಿತು. ಅದಕ್ಕೆ ಕ್ಷಮೆ ಕೇಳಿದ್ದು.

ನಿಮ್ಮೆಲ್ಲರ ಸಲಹೆ, ಸಹಕಾರ ಹೀಗೆ ಇರಲಿ.

Nags,

No need to be sorry. It is not yours mistake. Cheers....

- ಸುಧೇಶ್.
shivu.k said…
ಸುಧೇಶ್,
ಇದಕ್ಕೇನು ಬೇಸರಿಸುವ ಅಗತ್ಯವಿಲ್ಲ. ಇದು ಎಲ್ಲರಿಗೂ ಆಗುತ್ತದೆ. ಅದನ್ನು ನೀವು ಒಪ್ಪಿಕೊಂಡಿದ್ದಿರಲ್ಲ ಅದು ಮುಂದೆ ನಿಮ್ಮನ್ನು ತಪ್ಪು ಮಾಡದಂತೆ ಕಾಪಾಡುತ್ತದೆ.

Popular posts from this blog

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ...