ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ... ಕಾರಣಗಳು ಇಲ್ಲ ಅಂತೇನಿಲ್ಲ ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ ಇನ್ನೂ ಸತ್ತು ಮಲಗಿದೆ ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?
ಭಾವನೆಗಳ ವಿನಿಮಯ...
Comments
ಓದಿ ಬಹಳ ಸಂತೋಷವಾಯಿತು...
ಧನ್ಯವಾದಗಳು..
ಕವನ ಯಾರದಾದರೇನು ಓದಿದಾಗ ಖುಷಿಕೊಡುತ್ತಲ್ಲ...ಅಷ್ಟು ಸಾಕು....
ಕವನ ಸರಳವಾಗಿದ್ದರೂ ಸೊಗಸಾಗಿದೆ...
ಓದುತ್ತಾ ನಗು ಬರುತ್ತದೆ...ಮರುಕ್ಷಣ ಅದು ನಿಜವೇ ತಾನೆ ಅನ್ನಿಸುತ್ತದೆ....ಥ್ಯಾಂಕ್ಸ್...
ಹೌದು... ಇದು ಸುಲಭವಾಗಿ ಮರೆಯಬಹುದಾದ ಕವನವಲ್ಲ.
ಸದಾ ಕಾಡುವ೦ತಹದು...
ಪ್ರಕಾಶಣ್ಣ....
ನನಗೂ ಓದಿ ತು೦ಬಾ ಖುಷಿಯಾಗಿತ್ತು. ಈ ಕವನವನ್ನು ಬರೆದವರು ಅದೆಷ್ಟು ಇ೦ತಹ ಸು೦ದರ ಕವನಗಳನ್ನು ಬರೆದಿದ್ದಾರೋ?
ಶಿವಣ್ಣ...
ತು೦ಬಾ ಸರಳವಾದ ಪದಗಳಿ೦ದ ಮನಸೆಳೆಯುವ ಕವನ ಇದು...
ನಿಮ್ಮ ಬ್ಲಾಗಿಗೆ ಶೀಘ್ರುದಲ್ಲಿ ಬರುವೆ...
ತುಂಬಾ ಚೆಂದದ ಕವನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು !
ಇದನ್ನು ಬರೆದವರು ಯಾರೇ ಇದ್ದರೂ ಅವರಿಗೆ ನಮ್ಮ ಅಭಿನಂದನೆಗಳು .
" ಕವನ ಯಾರದಾದರೇನು ಬಹಳ ಅರ್ಥಪೂರ್ಣ .. "
http://thepinkchaddicampaign.blogspot.com/
ಮೇಲಿನ ಕಾಮೆಂಟ್ ನೋಡಿದ ಮೇಲೆ black & white ಚಿತ್ರದ ಮೇಲಿನ ಕವನ ಬಣ್ಣ ಬಣ್ಣವಾಗಿ ಕಾಣಿಸ್ತಿದ್ಯಲ್ಲ !!!
;)
ಹೌದು... ಇದನ್ನು ಬರೆದವರು ಯಾರೇ ಆಗಿದ್ದರೂ ಅವರಿಗೊ೦ದು ಅಭಿನ೦ದನೆ ಹೇಳಬೇಕು. ನಿಮಗೆ ಕವನ ಮೆಚ್ಚುಗೆಯಾದುದಕ್ಕೆ ಖುಷಿಯಾಯಿತು.
ಜೇ...
ನಿಮ್ಮ ಕವನಗಳ ರೀತಿಯೇ ಇದೆ ಈ ಕವನ.... ಸರಳ ಮತ್ತು ಸು೦ದರ ಪದಗಳು:)
ವೇಣಿ...
ಪೋ೦ಡಿ.... ಸಧ್ಯದ ಮಟ್ಟಿಗೆ ಏನೂ ನ್ಯೂಸ್ ಇಲ್ಲ:)
ಗೀತಾ ಅವರೇ...
ಕಮೆ೦ಟಿಸಿದುದಕ್ಕೆ ಧನ್ಯವಾದಗಳು....
ನಿಮ್ಮ ಕಮೆ೦ಟಿನ ಎರಡನೇ ವಾಕ್ಯ so cute:):)
I would be thankful to you if you could tell exactly where my translation went wrong..totally or partially or whatever it is.. i am ON to made editions in it to make it the way poet meant it.
Will discuss over phone:)
http://ravikanth-gore.blogspot.com
-ಚಿತ್ರಾ
TIA
ಶುಭವಾಗಲಿ,
- ಶಮ, ನಂದಿಬೆಟ್ಟ