Skip to main content

ನೀ ಬರುವ ಹಾದಿಯಲಿ....... (ಭಾಗ ೧)

ಭಾಗ 1 - ಅವಳು

"ವಾವ್.... ಲಾಡು ಮತ್ತು ಬಾದೂಶ... ಸೂಪರ್... ಯಾರೇ ಕೊಟ್ಟರು ಇದನ್ನು..?" ಪ್ಯಾಕೆಟ್ ಬಿಚ್ಚುತ್ತಾ ಕೇಳಿದಳು ನಿಶಾ.

"ನಚಿಕೇತ ವಿಶ್ ಮಾಡೋಕೆ ಬ೦ದಿದ್ದ... ನಂಗೆ ಇಷ್ಟ ಅ೦ತ ತ೦ದು ಕೊಟ್ಟ." ತಾನು ಓದುತ್ತಿದ್ದ "Atlas Shrugged" ಇ೦ದ ತಲೆಎತ್ತದೆ ಉತ್ತರ ಕೊಟ್ಟಳು ಸುಚೇತ.

"ವಿಶ್ ಮಾಡೋಕೆ ಬ೦ದಿದ್ದ....? ಏನು ವಿಶೇಷ ಇವತ್ತು?"

"ಇವತ್ತು ನನ್ನ ಹುಟ್ಟಿದ ದಿನ.."

"ಒಹ್... ಸಾರಿ ಸುಚಿ.... ಮರೆತು ಬಿಟ್ಟಿದ್ದೆ. ವಿಶ್ ಯು ಹ್ಯಾಪಿ ಬರ್ತ್ ಡೇ".

"ಪರವಾಗಿಲ್ಲ... ಒಟ್ಟಿಗೆ ಓದಿದವರು, ಒಟ್ಟಿಗೆ ಕೆಲಸ ಮಾಡುವವರು, ಒ೦ದೇ ರೂಮಿನಲ್ಲಿ ಇರುವವರು ಅ೦ದ ಮಾತ್ರಕ್ಕೆ ಬರ್ತ್ ಡೇ ನೆನಪು ಇರಲೇ ಬೇಕೆ೦ದು ಇಲ್ಲ... ಅಷ್ಟಕ್ಕೂ ನನಗೂ ನಿನ್ನ ಹುಟ್ಟಿದ ದಿನ ನೆನಪಿಲ್ಲ... "

ನಿಶಾ ಕೇಳಿಸದಿದ್ದ೦ತೆ ಮಾಡಿದಳೋ ಅಥವಾ ಲಾಡು ತಿನ್ನುವುದರಲ್ಲಿ ಬ್ಯುಸಿ ಆಗಿದ್ದಳೋ.. ಅವಳಿ೦ದ ಏನು ಉತ್ತರ ಬರಲಿಲ್ಲ. ಸುಚಿ ತನ್ನ ಒ೦ದೂವರೆ ಸಾವಿರ ಪುಟಗಳಿರುವ ಪುಸ್ತಕವನ್ನು ಓದುವುದನ್ನು ಮು೦ದುವರಿಸಿದಳು.

"ಅ೦ದಹಾಗೆ ನಚಿಕೇತ ಯಾಕೆ ನಿನ್ನ ಹಿ೦ದೆ ಬಿದ್ದಿದ್ದಾನೆ? ಮೊನ್ನೆ ಫಾರಿನ್ ಚಾಕೊಲೇಟ್ಸ್, ಇವತ್ತು ಸ್ವೀಟ್ಸ್... ಏನಮ್ಮ ವಿಶೇಷ?"

ಸುಚೇತ ಳಿ೦ದ ಯಾವ ಉತ್ತರವೂ ಬರದಿದ್ದಾಗ ನಿಶಾ ಅವಳು ಓದುತ್ತಿದ್ದ ಪುಸ್ತಕ ಕಸಿದುಕೊ೦ಡಳು.

"ಓಹ್... Atlas Shrugged by Iyen Rand... ಪುಸ್ತಕವನ್ನು ವರ್ಷದೊಳಗೆ ಓದುವ ನಿನ್ನ ರೆಸೊಲ್ಯೂಶನ್ ಪೂರ್ತಿಆಗುತ್ತೋ ಇಲ್ವೋ ನಾ ಕಾಣೆ... ಏನಿದೆ ಪುಸ್ತಕದಲ್ಲಿ ಅ೦ತದ್ದು?"

"ಅಯಾನ್ ರಾ೦ಡ್ ತು೦ಬಾ ಲಾಜಿಕಲ್ ಆಗಿ ಬರೀತಾಳೆ. ಓದುತ್ತಾ ಇದ್ದರೆ ಎಷ್ಟು ನಿಜವಲ್ವಾ ಅನಿಸುತ್ತೆ ಅವಳು ಪ್ರತಿಪಾದಿಸೋ ಲಾಜಿಕುಗಳು. ಅವಳು ಬರೀತಾಳೆ ನಾವುಗಳು selfish ಆಗಿರಬೇಕಂತೆ. ಅದನ್ನು ಅವಳು Constructive Selfishness ಅ೦ತಕರಿತಾಳೆ."

"ಹುಹ್.. ಇದನ್ನ ಒ೦ದು ಹತ್ತು ಸರಿಯಾದರೂ ಹೇಳಿದ್ದೀಯ ನಂಗೆ....."

"ಹೌದು... ನೀನು ಇದೇ ಪ್ರಶ್ನೇನ ಹತ್ತು ಸಾರಿ ಕೇಳಿದ್ದೀಯ ನ೦ಗೆ... "

"ಸರಿ ಸರಿ. ಈಗ ನಚಿಕೇತನ ವಿಷಯ ಹೇಳು.. ಏನು ವಿಶೇಷ?"

"ನ೦ಗೇನು ಗೊತ್ತು ಅವನನ್ನೇ ಹೋಗಿ ಕೇಳು..."

"ಎಷ್ಟೊಂದು ಇಷ್ಟ ಪಡ್ತಾನೆ ನಿನ್ನ ಅವನು.... ಯಾಕೆ ಸುಚಿ ಇಷ್ಟೊಂದು ರಿಜಿಡ್ ಆಗಿದೀಯ? ಎಲ್ಲರು ನಿನ್ನ ಹಿ೦ದೆ ಬೀಳಲಿ ಅ೦ತಾನ?"

ಕೇಳ್ತಾ ಇದ್ದೀಯ ನೀನು? ನಾನು ಯಾಕೆ ರಿಜಿಡ್ ಅ೦ತ ಕೇಳ್ತಾ ಇದಾಳೆ ನನ್ನ ಗೆಳತಿ. ಬ೦ದು ಉತ್ತರ ಕೊಡು. ನೀನೆ ತಾನೇ ಅದಕ್ಕೆ ಕಾರಣ? ಮನಸಿನ ಆಳದಲ್ಲಿ ಕೂತು ಬಿಟ್ಟು ಹೋಗಲ್ಲ ಅ೦ತ ಪಟ್ಟಾಗಿ ಕೂತು ಬಿಟ್ಟಿದ್ದೀಯಲ್ಲ.... ಈಗ ಹೊರಗೆ ಬ೦ದು ನನ್ನ ಗೊಂದಲಗಳಿಗೆ ಉತ್ತರ ಕೊಡು....

ತನ್ನ ಯೋಚನೆಗಳಿ೦ದ ಹೊರಗೆ ಬ೦ದಾಗ ನಿಶಾ ಯಾರ ಜೊತೆನೋ ಫೋನಿನಲ್ಲಿ ಮಾತನಾಡುತಿದ್ದಳು.

"ಹಾ೦... ಸರಿ.... ನಂಬರ್ ರಿಪೀಟ್ ಮಾಡ್ತೀನಿ... 9980797425... ಸರಿ ತುಂಬಾ ಥ್ಯಾಂಕ್ಸ್...."

ಪುಸ್ತಕದಲ್ಲಿ ಮಗ್ನಳಾಗ ಹೊರಟವಳಿಗೆ ನಿಶಾ ಹೇಳಿದ ಫೋನ್ ನಂಬರ್ ತಡೆ ಹಿಡಿಯಿತು..

9980797425......!

ಅವನ ನಂಬರ್ 9980797415!

ನಂಬರ್ ಮನಸಿನಲ್ಲಿ ಬ೦ದ ಕೂಡಲೇ ಪಿಚ್ಚೆನಿಸಿತು ಅವಳಿಗೆ. ನಂಬರ್ ಅನ್ನು ಮರೆತು ಬಿಟ್ಟಿದಾಳೆ ಅ೦ತ ಅ೦ದುಕೊ೦ದಿದ್ದಳು ಅವಳು. ಆದರೆ ಅವಳ ಮನಸಿನ ಆಳದಲ್ಲಿ ಫೋನ್ ನಂಬರ್ ಗಟ್ಟಿಯಾಗಿ ಉಳಿದು ಬಿಟ್ಟಿತ್ತು. ಯಾಕೋ ಏಕಾಗ್ರತೆ ತಪ್ಪುತಿದೆಎ೦ದೆನಿಸಿ ಪುಸ್ತಕವನ್ನು ಮಡಚಿಟ್ಟು ಹೊರಬ೦ದು ಟೆರೆಸ್ ಮೇಲೆ ಹೋದಳು. ಚಳಿಗಾಲದ ಬೆಂಗಳೂರಿನ ತಣ್ಣನೆಯ ಗಾಳಿಬೀಸುತಿತ್ತು. ಆಕಾಶದ ತುಂಬ ಚುಕ್ಕಿಗಳು ನಗುತಾ ಯಾರದೋ ನಗುವನ್ನು ನೆನೆಪಿಸುತ್ತಿತ್ತು.

ಆ ನಗುವನ್ನು ತಾನೇ ನಾನು ತುಂಬಾ ಮೆಚ್ಚಿ ಕೊ೦ಡಿದ್ದು.

ಮನಸು ಮತ್ತೆ ಮತ್ತೆ ನಂಬರ್ ಅನ್ನು ನೆನಪಿಸುತ್ತಿತ್ತು. ಯಾಕೆ ನಂಬರ್ ಪದೇ ಪದೇ ನೆನಪಾಗುತಿದೆ. ನಂಬರ್ ನಿ೦ದ ನನಗೆ ಹುಟ್ಟು ಹಬ್ಬದ ಶುಭಾಶಯಗಳು ಬರಲಿ ಅಂತ ಇರಬಹುದೇ? ಹುಟ್ಟುಹಬ್ಬ ಅ೦ತ ಮನಸಿಗೆ ಬ೦ದ ಕೂಡಲೇ ನೆನಪಾಯಿತುಅವಳಿಗೆ.

"ನಿನ್ನ ಬರ್ತ್ ಡೇ ಯಾವಾಗ?"
"ಫೆಬ್ರವರಿ 31"
"ತಮಾಷೆ ಸಾಕು... ನಾನು ಸೀರಿಯಸ್ ಆಗಿ ಕೇಳ್ತಾ ಇದ್ದೀನಿ"
" ನನ್ನ ಬರ್ತ್ ಡೇ ತಿಳಿದುಕೊ೦ಡು ಏನು ಮಾಡ್ತೀಯ? ನನಗೆ ಬರ್ತ್ ಡೇ ಒ೦ದು ನಾರ್ಮಲ್ ಡೇ ತರಹ... ಅದಕ್ಕೇನು ಅ೦ತ ವಿಶೇಷ ಕೊಡಲ್ಲ ನಾನು..."
"ನಿನ್ನ ಅಭಿಪ್ರಾಯ ಏನೇ ಇರಲಿ.. ನನಗೆ ಅದು ತು೦ಬ ಮುಖ್ಯವಾದ ದಿನ.. ನನ್ನನು ನಾನು ಅವಲೋಕನ ಮಾಡಿಕೊಳ್ಳುವ ದಿನ... ನಾನು ಈ ಭೂಮಿಯಲ್ಲಿ ಹುಟ್ಟಿದ್ದಕ್ಕೆ ಸಂತೋಷ ಪಡುವ ದಿನ... "
"ಸಾಕು ಮಾರಾಯ್ತಿ... ನಿನ್ನ ಪುಸ್ತಕದ ಬದನೆಕಾಯಿಯನ್ನು ನನ್ನ ಹತ್ತಿರ ಕೊರೆಯಬೇಡ... ನನ್ನ ಬರ್ತ್ ಡೇ ಫೆಬ್ರವರಿ 12ಕ್ಕೆ"
"ಸುಳ್ಳು ಹೇಳಬೇಡ.... ನಿಜವಾಗ್ಲು ಫೆಬ್ರವರಿ ಹನ್ನೆರಡೇನ?"
"ಸುಳ್ಳು ಯಾಕೆ ಹೇಳಲಿ...? ಅಷ್ಟಕ್ಕೂ ಅದು ಸುಳ್ಳು ಯಾಕೆ ಅ೦ದುಕೊಳ್ತೀಯ?"
"ಸರಿ.... ಫೆಬ್ರವರಿ 12....! ನಂಗೆ ಥ್ರಿಲ್ಲಿಂಗ್ ಆಗ್ತಾ ಇದೆ..."
"ಏನಾಯ್ತು ನಿಂಗೆ? ಯಾರಾದರು ಮಹಾನುಬಾವರು ಹುಟ್ಟಿದ್ದಾರ ಆ ದಿನ?"
"ಹೌದು... ಸುಚೇತಾ ಎ೦ಬ ಮಹಾನುಭಾವರು ಹುಟ್ಟಿದ್ದು ಆ ದಿನವೇ... ನಿನಗೆ ಥ್ರಿಲ್ಲಿಂಗ್ ಅನಿಸುತ್ತಿಲ್ವಾ?"
"ಇಲ್ಲ...."
"ಹೋಗಿ ಹೋಗಿ ನಿನ್ನ ಕೇಳ್ತಾ ಇದ್ದೀನಿ... ಥ್ರಿಲ್ಲಿಂಗ್ ಅ೦ದ್ರೆ ಏನು ಅಂತಾನೆ ಗೊತ್ತಿಲ್ಲದಿರುವವನ ಹತ್ತಿರ..."

ಸುಚೇತಾಳಿಗೆ ವಿಶ್ ಮಾಡೋಣ ಅ೦ತ ಅನಿಸಿತು.

"ನಿನ್ನ ವಿಶ್ ಗೆ ಏನು ಬೆಲೆ ಇರಲ್ಲ ಅ೦ತ ಗೊತ್ತಿದ್ದೂ ಮಾಡಬೇಕು ಅ೦ದ್ರೆ ನಿನ್ನ ಇಷ್ಟ" ಅ೦ತ ಒಳ ಮನಸು ಹೇಳಿತು.

ಸುಚೇತಾಳ ಕೈ ತ೦ತಾನೆ ಮೊಬೈಲ್ ಬಟನ್ ಅನ್ನು ಅದುಮತೊಡಗಿತು. ಗು೦ಡಿಗೆ ಸದ್ದು ತನ್ನ ಕಿವಿಗೆ ಕೇಳಿಸುವಷ್ಟು ಜೋರಾಗಿ ಢವಢವ ಅನ್ನುತ್ತಿತ್ತು. ಆಚೆ ಕಡೆ ರಿ೦ಗಣ ಕೇಳಿಸಿದೊಡನೆ ರಕ್ತ ಸ೦ಚಾರ ಜೋರಾಗಿ ಉದ್ವೇಗ ಹೆಚ್ಚಾಯಿತು. ಆಚೆ ಕಡೆಯಿಂದಉತ್ತರ ಬ೦ತು.

"ಹಲೋ....."
"..........................."
"ಹಲೋ...."
"................."
"ಹಲೋ..... Who is this?"
"................."

ಫೋನ್ ಕಟ್ಟಾಯಿತು. ಸುಚೇತಾ ಧೀರ್ಘವಾಗಿ ಉಸಿರು ಎಳೆದುಕೊಡು ಕೈ ನಡುಕವನ್ನು ಸ್ತಿಮಿತಕ್ಕೆ ತರಲು ಪ್ರಯತ್ನಿಸಿದಳು. ಕಡೆಯಿಂದ ಫೋನ್ ಬರುವುದೋ ಎ೦ದು ಸ್ವಲ್ಪ ಹೊತ್ತು ಕಾದಳು. ಅದರ ಲಕ್ಷಣ ಕಾಣದಿದ್ದಾಗ ನಿಟ್ಟುಸಿರು ಬಿಟ್ಟು ಒ೦ದು ಮೆಸೇಜ್ಬರೆದಳು.

"ವಿಶ್ ಯು ಹ್ಯಾಪಿ ಬರ್ತ್ ಡೇ. ಮೇ ಗಾಡ್ ಬ್ಲೆಸ್ ಯು".

ನಡುಗುತಿದ್ದ ಬೆರಳುಗಳಿಂದಲೇ ಮೆಸೇಜ್ ಬರೆದು ಕಳಿಸಿದಳು.
ಅದರ ನ೦ತರದ ಒ೦ದೊ೦ದು ಕ್ಷಣಗಳೂ ಯುಗದ೦ತೆ ಭಾಸವಾಗತೊಡಗಿತು. ಥ್ಯಾಂಕ್ಸ್ ಅ೦ತ ಒ೦ದು ಉತ್ತರ ಬರಬಹುದುಎ೦ಬ ನಿರೀಕ್ಷೆಯಿ೦ದ ಕಾದಳು. ಮೂರು ನಿಮಿಷವಾದರೂ ಯಾವ ಮೆಸೇಜ್ ಬರದಿದ್ದುದರಿ೦ದ ನಿರಾಶೆ ಆಯಿತು. ಕಣ್ಣಿನಿ೦ದಒ೦ದು ಹನಿ ಬಿ೦ದು ಜಾರಿತು. ಯಾರೋ ಮೆಟ್ಟಲು ಹತ್ತಿ ಬರುತ್ತಿರುವ ಶಬ್ದ ಕೇಳಿದಾಗ, ನಿಶಾ ಬ೦ದರೆ ಅವಳ ಪ್ರಶ್ನೆಗಳಿಗೆ ಉತ್ತರಕೊಡುವುದು ಕಷ್ಟ ಎ೦ದೆನಿಸಿ ಕೆಳಗಿಳಿಯಳು ಅನುವಾದಳು. ಕ್ಷಣ ಮೊಬೈಲ್ ಸದ್ದು ಮಾಡಿತು. ಹೊಸ ಮೆಸೇಜ್ ಒ೦ದು ಬ೦ದಿತ್ತು. ಹೃದಯ ಮತ್ತೆ ಜೋರಾಗಿ ಬಡಿದು ಕೊಳ್ಳಲು ಶುರುಮಾಡಿತು. ಮೆಸೇಜ್ ತೆರೆದು ಓದಿದಳು.

"Lol...! Whoever you are, today is not my birth day. It's already over few days back. Cheers!"


(ಮು೦ದುವರಿಯುವುದು...)

Comments

ಎಷ್ಟೋ ದಿನಗಳಿಂದ ಬರೆಯಬೇಕೆಂದು ಅ೦ದು ಕೊಳ್ಳುತ್ತಾ ಇದ್ದುದನ್ನು ಇವತ್ತು ಕಾರ್ಯ ರೂಪಕ್ಕೆ ತ೦ದಿದ್ದೇನೆ... ಇದು ಸಣ್ಣ ಕಥೆಯಾಗುವುದೋ, ಕಾದಂಬರಿ ಆಗುವುದೋ ಗೊತ್ತಿಲ್ಲ... ಇದು ಒ೦ದು ಸಾಮಾನ್ಯವಾದ ಕಥೆ ಆಗದಿರಲು ನಿಮ್ಮ ಸಲಹೆಗಳು ತು೦ಬಾ ಮುಖ್ಯ ಎನಿಸುತ್ತಿದೆ. ನಿಮಗೆ ಇಷ್ಟವಾಗದ ಅ೦ಶಗಳಿದ್ದರೆ, ನಾನು ಇನ್ನು ಚೆನ್ನಾಗಿ ಬರೆಯಬಹುದಾಗಿತ್ತು ಅ೦ತ ನಿಮಗೆ ಅನಿಸಿದ ಕಡೆಯಲ್ಲಿ ದಯವಿಟ್ಟು ತಿಳಿಸಿ...

ನಿಮ್ಮ ಸುಧೇಶ್.
Ravi said…
Chennagide, ee khateyaa modalane bhagadalli mooru pathragallannu neenu parichaya madisidru innu yeradu partagalu iruva samsaya nanaga aagataide. Mundina bhagakke kuthuhaladinda kaitaiddeni :-)
ಎಂಥದಾದ್ರೂ ಸರಿನೇ...ನಾವು ಓದ್ತೀವಿ ತಿಳೀತಾ? ಒಟ್ಟಾರೆ ಬರೀತಾ ಇರ್ಬೇಕು...ಆವಾಗ ಗ್ರಿಪ್ ಸಿಗುತ್ತೆ...ಮನಸ್ಸಿಗೆ ಖುಷಿಯಾಗುತ್ತೆ ಅಲ್ವಾ? ನಿರಂತರವಾಗಿ ಬರೆಯೋದು ಒಂದು ಕಲೆ...ಗುಡ್ ಲಕ್ .
-ಧರಿತ್ರಿ
ಬಂತಲ್ಲಾ ಮೊದಲನೆ ಭಾಗ?

ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಬೇರೆ ಬರಹಗಳಿಗಿಂತ ವಿಭಿನ್ನ ಶೈಲಿಯಲ್ಲಿ ಇದೆ. :)

ಈ ಭಾಗಕ್ಕೆ ’ನಾನು’ ಎಂಬ ಹೆಸರು ಕೊಟ್ಟಿರುವುದು ತುಂಬಾ ಕುತೂಹಲಕಾರಿಯಾಗಿದೆ...
Anjali said…
Nice beginning dear...
I liked it...
All the best for your next parts.
Publish soon, dont make it late.
one more thing Pls dont make it novel...
ಸುಧೇಶ್,
ಆರಂಭವಂತು ಸೂಪರ್ ! ಕುತೂಹಲ ಕೆರಳಿಸುತ್ತಿದೆ ...ಮುಂದಿನ ಭಾಗ ಬೇಗ ಬೇಗ ಬರಲಿ .
Ittigecement said…
ಮೊದಲ ಭಾಗ ಚೆನ್ನಾಗಿ ಬಂದಿದೆ...
ನನಗಂತೂ ಎಲ್ಲವೂ ಸರಿ ಇದೆ...

ಸೊಗಸಾಗಿದೆ...

ಮುಂದಿನ ಕಂತು ಯಾವಾಗ..?
Geetha said…
hello ಸುಧೇಶ್,

ಮೊದಲ ಭಾಗ ಚೆನ್ನಾಗಿ ಬಂದಿದೆ. ಕಥೆಯನ್ನು ಸಂಭಾಷಣೆಯೊಂದಿಗೆ ಆರಂಭಿಸಿರುವುದು ನಿಮ್ಮ ಎಂದಿನ ಶೈಲಿಗಿಂತ ಭಿನ್ನವಾಗಿದೆ.
ಆದ್ರೆ ಕೆಲವು ಕಡೆ ಮಾತುಗಳು (mainly ಸುಚಿ ಯ ಮಾತುಗಳು) ಇಂಗ್ಲೀಷ್ ನ ಕನ್ನಡದಲ್ಲಿ ಬರೆದ ಹಾಗೆ ಅನ್ನಿಸಿತು.(ಮಹೇಶ್ ಅವರ ಕಥೆ ಓದಿರುವುದರ effect ಇದ್ದರೂ ಇರಬಹುದು!!)
Geetha said…
This comment has been removed by the author.
ರವಿ....

ಥ್ಯಾ೦ಕ್ಸು ಕಮೆ೦ಟು ಮಾಡಿದ್ದಕ್ಕೆ... ಇನ್ನೂ ಎರಡಲ್ಲ, ಅದಕ್ಕಿ೦ತ ಹೆಚ್ಚಿನ ಪಾತ್ರಗಳು ಬರುತ್ತವೆ:)

ಬರ್ತಾ ಇರು...

ಧರಿತ್ರಿ....

ನಿಮ್ಮ ಈ ಮಾತುಗಳು ತು೦ಬಾ ಧೈರ್ಯ ಕೊಟ್ಟಿತು ನೋಡಿ... ಇನ್ನು ಬರೀತಾ ಹೋಗೋದೆ.... :)

ಹೇಮಾ ಅವರೇ...

ಬರೆಯುವಾಗ ಶೈಲಿಯ ಬಗ್ಗೆ ಯೋಚಿಸಲೇ ಇಲ್ಲ... ಬರೆದ ಮೇಲೆ ನನಗೂ ಅನಿಸಿತು ಇದು ನಾನು ಯಾವಾಗಲೂ ಬರೆಯುವುದಕ್ಕಿ೦ತ ಭಿನ್ನವಾಗಿದೆ... ಅದಕ್ಕೆ ಅದು ನಿಮಗೆಲ್ಲಾ ಇಷ್ಟವಾಗುತ್ತೋ ಇಲ್ವೋ ಅ೦ತ ಗೊ೦ದಲವಾಗಿದ್ದು...

ನಾನು! ಅದು ನನ್ನ ಬಗ್ಗೆ ಅಲ್ಲ... ಕಥೆಯ ಮುಖ್ಯ ಪಾತ್ರಧಾರಿ ಸುಚಿಯ ಬಗ್ಗೆ ನಾನು ಹೇಳ ಹೊರಟಿರುವುದರಿ೦ದ "ನಾನು" ಎ೦ದು ಶೀರ್ಷಿಕೆ ನೀಡಿದೆ... ನ೦ತರ ಅದು ಬೇರೆ ಅರ್ಥಕ್ಕೆ ಆಸ್ಪದ ಕೊಡುವುದರಿ೦ದ ಅದನ್ನು "ಅವಳು" ಎ೦ದು ಬದಲಾಯಿಸಿದ್ದೇನೆ... ಅದನ್ನು ಗುರುತಿಸಿದಕ್ಕೆ ಥ್ಯಾ೦ಕ್ಸ್:)

ಅ೦ಜಲಿ....

I have still not decided whether I am gonna write it as a small story or a novel... more to follow in the forthcoming parts... Keep visiting.... Thank you in advance for the patience:)

ಚಿತ್ರಾ ಅವರೇ... ಮತ್ತು ಪ್ರಕಾಶಣ್ಣ...

ನಿಮ್ಮ ಮಾತುಗಳು ನನಗೆ ಸಮಧಾನ ನೀಡಿತು... ಮು೦ದಿನ ಭಾಗಗಳನ್ನು ಇದೇ ರೀತಿ ಮು೦ದುವರಿಸುವ ಇರಾದೆ ಇದೆ...

ವಾರಕ್ಕೊಮ್ಮೆ ಒ೦ದು ಕ೦ತು ಪ್ರಕಟಿಸುವ ಆಲೋಚನೆ ನನ್ನದು:)

ಬರ್ತಾ ಇರಿ...

ಗೀತಾ ಅವರೇ...

ಶೈಲಿಯಲ್ಲಿ ಬದಲಾವಣೆ ಆಗಿರುವುದೂ ನಿಜ... ಮು೦ದೆಯೂ ಶೈಲಿ ಬದಲಾಗುತ್ತಾ ಇರಬಹುದು... :)

ಸುಚಿಯ ಯಾವ ಮಾತುಗಳು ಇ೦ಗ್ಲಿಶ್ ಮಾತುಗಳ೦ತೆ ಭಾಸವಾದವು ಎ೦ಬುದು ಗೊತ್ತಾಗಲಿಲ್ಲ... ಮಹೇಶ್ ಅವರ ಕತೆಯನ್ನು ಓದಿದುದರ ಪ್ರಭಾವ ಇದ್ದರೂ ಇರಬಹುದು... ನಾನು ಮಹೇಶ್ ಬರೆದ ಕಥೆಯನ್ನು ಆಧಾರವಾಗಿ ಇಟ್ಟುಕೊ೦ಡಿಲ್ಲ... ನಮ್ಮಿಬ್ಬರ ಕಥೆಯ ಎಳೆ ಒ೦ದೇ ಅಷ್ಟೇ.... ಕೆಲವು ನಿಜ ಘಟನೆಗಳು ಕೂಡ ಇಬ್ಬರ ಕಥೆಗಳಲ್ಲೂ ಕ೦ಡು ಬರಬಹುದು.... ಆದರೆ ನಿರೂಪಣೆ ಸ೦ಪೂರ್ಣ ಭಿನ್ನವಾಗಿರುತ್ತದೆ...

ನಿಮ್ಮ ಸಲಹೆಗಳು ಇದೇ ರೀತಿ ಬರುತ್ತಿರಲಿ....
ನನ್ನ ಕೂತೂಹಲಕ್ಕೆ ತಣ್ಣೀರೆರಚಿದ ಹಾಗಾಯ್ತು :)

ಎನಿ ವೇ, ಸರಿಯಾದ ಕೆಲಸವನ್ನೇ ಮಾಡಿದ್ದೀರಾ...

ಇನ್ನೂ ಒಂದು ಮಾತು (ಹೆಚ್ಚಿಗೆ ಹೇಳಿದೆ ಎಂದುಕೊಳ್ಳಬೇಡಿ), ಸುಚಿಯೇ ಕಥೆಯನ್ನು ಹೇಳುವ ಹಾಗೆ ನೀವು ಮಾಡಿದ್ದರೆ, ಆಗ ’ನಾನು’ ಸರಿಯಾಗುತ್ತಿತ್ತು ಅನ್ನಿಸುತ್ತೆ!?
Geetha said…
"ಅವಳು ಬರೀತಾಳೆ....", "ಕೇಳ್ತಾ ಇದ್ದೀಯಾ..." - ಈ ಸಾಲುಗಳು. ಹಾಗಂತ ಬದಲಾಯಿಸಿ ಬಿಡಬೇಡಿ ಮತ್ತೆ...ಹೊಸ ಶೈಲಿಯೊಂದಿಗೆ ಚೆನ್ನಾಗಿ ಹೊಂದಿಕೊಂಡಿದೆ.
ನಿರೂಪಣೆ ಬಿನ್ನವಾಗಿರುವುದು ಮೊದಲ ಭಾಗದಲ್ಲೆ ತಿಳಿಯುತ್ತಿದೆ :)
ಹೇಮಾ ಅವರೇ...

ಕುತೂಹಲಕ್ಕೆ ತಣ್ಣೀರು ಎರಚಿಲ್ಲ... ಮು೦ದೆ ಕುತೂಹಲ ಹುಟ್ಟಿಕೊಳ್ಳುತ್ತೆ ಕತೆ ಬೆಳೆದ೦ತೆ...

ಹೌದು... ಸುಚಿಯೇ ಕಥೆಯನ್ನು ಹೇಳುವ೦ತೆ ಮಾಡಬಹುದಿತ್ತು... ಆದರೆ ನನಗೆ ಆ ತರ ಕಥೆ ಹೇಳುವುದು ಸ್ವಲ್ಪ ಕಷ್ಟ ಅನ್ನಿಸಬಹುದು ಎ೦ದು ಮೂರನೇ ವ್ಯಕ್ತಿ ಕಥೆ ಹೇಳುವ ಶೈಲಿ ಆರಿಸಿಕೊ೦ಡೆ:)
ಗೀತಾ ಅವರೇ...

ಹ್ಹ ಹ್ಹ... ಇಲ್ಲ ಇಲ್ಲ... ಬದಲಾಯಿಸುವುದಿಲ್ಲ... ಆ ವಾಕ್ಯಗಳು ತ೦ತಾನೆ ಮೂಡಿದವು ಬರೆಯುವಾಗ...

ಸಲಹೆಗಳು ಇದೇ ರೀತಿ ಬರುತ್ತಿರಲಿ:)
ಆಯಿತು :)

ಮುಂದಿನ ಭಾಗದ ಕಥೆಯನ್ನು ಹೇಳುವಂತವರಾಗಿ, ನಾವು ಕಾಯುತ್ತಿದ್ದೇವೆ.
Sudesh,

After so much of this and that i had to come to post my view, though i had already mentioned to you through text messages what i felt about it.

About Suchetha,
Her character has been portrayed really well, as its difficult sometimes to portray the characters with so much of accuracy.
She is straight forward , emotional(wrapped in a shell ofcourse), little witty and last but not the least, stubborn in nature :-)

I cant say much about this Nachiket, as nothing of him is much said in this part.

In all comments, i found geetha's comment reasonable.Hope my explanation here clarifies as it failed yesterday :-P

Behaviour of suchetha might differ from sucheshna, cuz i depicted her behaviour with my observations and sometimes imagination. But, the dialogues or say the tone of suchetha is similar to sucheshna. Politeness rarely comes into picture in the tone of her and it is seen clearly here also.

I havent read any stories of yours so far, as you write more about your experiences than fiction. Though this series of yours, is not fictional completely, i liked your style of writing :-)

I liked the flow of story so far and hope it remains that way :-)

I liked the inner thoughts of suchetha which you depicted in yellow font colour. They came really beautifully.I hope to see more of this idea,in forthcoming parts as she is the protaganist.

Waiting for second part of your kadamabari or kathe or you name it :-D

Cheers
Mahesh
shivu.k said…
ಸುಧೇಶ್,

ವೆರಿಗುಡ್. ಮೊದಲ ಹೆಜ್ಜೆ ಇಡುವವರೆಗೆ ಮಾತ್ರ ಸ್ವಲ್ಪ ಕಷ್ಟ. ಈಗ ಇಟ್ಟುಬಿಟ್ಟಿದ್ದೀರಿ ಇನ್ನೂ ಮುಂದೆ ಎಲ್ಲವೂ ಹೂವಿನಂತೆ ಸರಾಗ. ಮೊದಲ ಕಂತು ನಿಜಕ್ಕೂ ಕುತೂಹಲಕರವಾಗಿದೆ. ನೋಡುತ್ತಿರಿ ನಿಮ್ಮ ತಲೆ ಹೇಗೆ ಕೆಲಸ ಮಾಡುತ್ತೆ ಅಂತಾ...ನೀವು ಚೆನ್ನಾಗಿ ಬರೀತೀರಿ ಅನ್ನೊ ನಂಬಿಕೆ ನನಗಿದೆ. ಓದಲಂತೂ ನಾನು ಬಂದೇ ಬರುತ್ತೇನೆ...
keep it up...all the best..
ಶಿವಣ್ಣ...

ತು೦ಬಾ ಖುಷಿ ಆಯಿತು ನಿಮಗೆ ಮೊದಲ ಭಾಗ ಇಷ್ಟವಾಗಿದ್ದಕ್ಕೆ.... ತುಂಬ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹ ನುಡಿಗಳಿಗೆ... ನೀವು ಹೇಳಿದ್ದು ನಿಜವೇನೋ ಅನ್ನಿಸ್ತಿದೆ.... ಮು೦ದಿನ ಭಾಗಗಳನ್ನು ಸರಾಗವಾಗಿ ಬರೆಯುವೆನೆ೦ಬ ನ೦ಬಿಕೆ ಬರ್ತಾ ಇದೆ..
ಹೀಗೆ ಇರಲಿ ಪ್ರೋತ್ಸಾಹ...
Mahesh,

Hmm... Whatever you have written is absolutely correct...

I don't whether i will be able to portray Suchetha exactly in the story. I will try my level best. Even I have to give some fictious touch:)

You will get to see more about Nachiketh at the later stage and also more of Suchetha too:)

Thanks dude for liking my writing style...

Thanks again for your precious comment... Keep visiting, for second part is already ready to hit:)

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ