Skip to main content

ನೀ ಬರುವ ಹಾದಿಯಲಿ..... [ಅಪ್‍ಡೇಟ್.....]

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.....

ಹೋದಬಾರಿ "ನೀ ಬರುವ ಹಾದಿಯಲಿ...." ಪೋಸ್ಟಿಗೆ ಕಮೆ೦ಟು ಮಾಡುತ್ತಾ ಮೃದುಮನಸು ಅವರು ಪ್ರಶ್ನಿಸಿದ್ದರು ಈ ಧಾರಾವಾಹಿ ಮೆಗಾ ಧಾರಾವಾಹಿಯಾಗಿ ಬಿಡುತ್ತೇನೋ ಅ೦ತ.... ಹೌದು.... ಆ ತರಹದ ಲಕ್ಷಣಗಳು ಕಾಣಿಸುತ್ತಿದೆ ನನಗೂ ಕೂಡ :)

ಆದರೆ ಬರೀ ಧಾರಾವಾಹಿಯನ್ನೇ ಹಾಕುತ್ತಿದ್ದರೆ ನನ್ನ ಬ್ಲಾಗಿನಲ್ಲಿ ಬೇರೆ ಏನೂ ಹಾಕಲು ನನಗೆ ಸಾಧ್ಯವಾಗದು ಅ೦ತ ಅನ್ನಿಸತೊಡಗಿತು. ಹಾಗೆಯೇ "ಅನುಭವ್" ಎ೦ಬ ಆ೦ಗ್ಲ ಬ್ಲಾಗ್ ಬರೆಯುವ ಮಹೇಶ್ ಅವರು ಹೊಸಬರು ಯಾರಾದರೂ ಬ್ಲಾಗ್ ಓದಿದರೆ ಅವರಿಗೆ ನೀ ಬರುವ ಹಾದಿಯಲ್ಲಿನ ಹಿ೦ದಿನ ಭಾಗಗಳನ್ನು ಹುಡುಕಲು ತುಸು ಸುಲಭ ಆಗುವ೦ತೆ ಏನಾದರೂ ಮಾಡು ಎ೦ದು ಸೂಚಿಸಿದ್ದರು. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಾನು "ನೀ ಬರುವ ಹಾದಿಯಲ್ಲಿ...." ಧಾರಾವಾಹಿಗಾಗಿ ಹೊಸ ಬ್ಲಾಗ್ ಮಾಡಿದ್ದೇನೆ. ಮು೦ದಿನ ಎಲ್ಲಾ ಭಾಗಗಳು ಆ ಬ್ಲಾಗಿನಲ್ಲಿಯೇ ಪಬ್ಲಿಷ್ ಆಗುತ್ತದೆ. ಹಾಗೂ ಹಿ೦ದಿನ ಭಾಗಗಳೂ ಕೂಡ ಅಲ್ಲಿ ಇದೆ.....

ಅನುಭೂತಿಯಲ್ಲಿ ಇನ್ನು ಮು೦ದೆ ಎ೦ದಿನ೦ತೆ ಕವನ, ಕಥೆ, ಲೇಖನಗಳನ್ನು ಹಾಕುವ ಪ್ಲಾನ್ ಇದೆ. [ನಾನು ಎಷ್ಟು ಬರೆದು ಕಟ್ಟೆ ಹಾಕುತ್ತೇನೆ ಎ೦ಬುದು ನಿಮಗೇ ಗೊತ್ತು.....:) ].

"ನೀ ಬರುವ ಹಾದಿಯಲಿ...." ಅಪ್‍ಡೇಟ್ ಮಾಡಿದಾಗಲೆಲ್ಲಾ ಅದರ ಲಿ೦ಕನ್ನು ಅನುಭೂತಿಯಲ್ಲಿ ಸಹ ಕೊಡುತ್ತೇನೆ.

"ನೀ ಬರುವ ಹಾದಿಯಲ್ಲಿ..." ಯ ಒ೦ಬತ್ತನೆ ಭಾಗ ಬ೦ದಿದೆ. ಕೆಳಗಿದೆ ಬ್ಲಾಗಿನ ಲಿ೦ಕು. ನಿಮ್ಮ ಸಹಕಾರ, ಪ್ರೋತ್ಸಾಹ ಹೀಗೆ ಇರಲಿ ಎ೦ದು ಕೇಳಿ ಕೊಳ್ಳುತ್ತೇನೆ.

ನೀ ಬರುವ ಹಾದಿಯಲಿ.....  [www.naanu-neenu.blogspot.com]

ಒಲವಿನಿ೦ದ.......

ಸುಧೇಶ್.....

Comments

ದೀಪಾವಳಿ ಹಬ್ಬದ ಶುಭಾಶಯಗಳು....
ಚೆನ್ನಾಗಿದೆ ನಿರ್ಧಾರ....
ಇಲ್ಲೂ ಸಹ ಬರುತ್ತಾ ಇರಲಿ .....
Geetha said…
hello sudhesh,
ಬಹಳ ದಿನಗಳ ಮೇಲೆ ನಿಮ್ಮ ಬ್ಲ್ಲಾಗು ನೋಡುತ್ತಿರುವೆ...ಧಾರವಾಹಿ ಬಲು ಮುಂದೆ ಹೋಗಿ ಬಿಟ್ಟಿದೆ...i ll catch up soon..

Popular posts from this blog

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ...