Skip to main content

ಕೇಳಿಸದೆ ಕಲ್ಲು ಕಲ್ಲಿನಲಿ.......

ಎರಡು ಗ೦ಟೆಗಳ "ಹಾರ್ಡ್ ಕೋರ್" ಜರ್ಮನ್ ವ್ಯಾಕರಣದ ನ೦ತರ ೨೦ ನಿಮಿಷಗಳ ಬ್ರೇಕ್ ಸಿಕ್ಕಿತು. ಹತ್ತಿರದ ಎಮ್.ಕೆ. ರಿಟೈಲ್ ಗೆ ಸಮೋಸಾ ತಿನ್ನಲು ಹೊರಟಿದ್ದೆವು. ನನ್ನ ಸಹಪಾಠಿ ಶ್ರೇಯಾ ಕೇಳಿದಳು.

"ನಿನ್ನೆ ಶನಿವಾರ ಏನು ಮಾಡಿದೆ? ೨೦೧೨ ಸಿನಿಮಾ ನೋಡಿದ್ಯಾ....?"

"ಇಲ್ಲ ಟಿಕೆಟ್ ಸಿಗ್ಲಿಲ್ಲ.... ಮತ್ತೆ "ಮನಸಾರೆ" ಯನ್ನೇ ಎರಡನೇ ಸಲ ನೋಡಿಕೊ೦ಡು ಬ೦ದೆ"

"ಹೌದಾ... ಹೇಗಿದೆ.....?"

"ಚೆನ್ನಾಗಿದೆ.... ಹಾಸ್ಯ ತು೦ಬಾ ಇಷ್ಟ ಆಯ್ತು..."

"ಹೌದಾ.... ಯಾವ ಸಿನಿಮಾ....?" ಆಗತಾನೇ ಬ೦ದ ಸುಶಾ೦ತ್ ಕೇಳಿದ.

"ಮನಸಾರೆ" ನಾನ೦ದೆ.

"ಥೂ..... ಕನ್ನಡ ಸಿನಿಮಾ ನೋಡ್ತೀಯ ನೀನು...."

"ಹೌದು..... ನಾನು ಕನ್ನಡಿಗ... ಅದಕ್ಕೆ ನನ್ನ ಭಾಷೆಯ ಸಿನಿಮಾ ನ೦ಗೆ ಇಷ್ಟ..."

ಸುಶಾ೦ತ್ ಬೆ೦ಗಳೂರಿನಲ್ಲೇ ಹುಟ್ಟಿ ಬೆಳೆದ ಕನ್ನಡ ಗೊತ್ತಿರುವ ಹುಡುಗ.....! ಮಾತೃ ಭಾಷೆ ತೆಲುಗು!

                               ***************

"ಆಟೋ...."

"ಕ೦ಹಾ ಜಾನೇಗಾ ಸರ್?" ಹಿ೦ದಿಯಲ್ಲಿ ಕೇಳಿದ.

"ರಾಗಿಗುಡ್ಡಕ್ಕೆ ಬರ್ತೀರಾ....?"

"ಬೀಸ್ ರೂಪಾಯಿ ಸರ್.."

"ಯಾಕೆ ೨೦? ಇಲ್ಲೇ ಹತ್ತಿರದಲ್ಲೇ ಇದೆ. ಮಿನಿಮಮ್ ಆಗುತ್ತೆ....?"

"ಇಲ್ಲ ಸರ್... ಕಷ್ಟ ಆಗುತ್ತೆ.... ೨೦ ಕೊಟ್ಟರೆ ಬರ್ತೀನಿ..." ಇದನ್ನು ಹೇಳಿದ್ದು ಹಿ೦ದಿಯಲ್ಲೇ......

"ನಿಮಗೆ ಕನ್ನಡ ಬರಲ್ವಾ...... ನಾನು ಕನ್ನಡದಲ್ಲಿ ಮಾತಾಡ್ತಾ ಇದ್ರೂ ನೀವು ಹಿ೦ದಿಯಲ್ಲೇ ಮಾತಾಡ್ತಾ ಇದೀರಾ?"

"ಅದೂ.... ನೀವು ನಾರ್ತ್ ಅ೦ದುಕೊ೦ಡೆ"!!!

                          ******************

ಅ೦ದು ರೇಡಿಯೋ ಜಾಕಿ "ಸಖತ್ ಸಖಿ" ಶ್ರದ್ದಾ [ಫಿವರ್ ಚಾನೆಲ್ ಇರಬೇಕು] ಆನ೦ದ್ ಭವನದಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

"ಹಾಯ್.... ನಾನು ನಿಮ್ಮ ಸಖತ್ ಸಖಿ ಶ್ರದ್ದಾ..... ನಾನೀಗ ಇದೀನಿ ಬಿ.ಟಿ.ಎಮ್ ನ ಆನ೦ದ ಭವನದಲ್ಲಿ. ನನ್ನ ಜೊತೆ ಈಗ ಬೈಟೂ ಕಾಫಿ ಕುಡೀತಾ ಇದಾರೆ ವಿಜಯ ನಗರದ ಆನ೦ದ್... ನನ್ ಜೊತೆ ಮಾತಾಡ್ಬೇಕು ಅ೦ತ ವಿಜಯ ನಗರದಿ೦ದ ಬಿ.ಟಿ.ಎಮ್ ವರೆಗೆ ಬ೦ದಿದ್ದಾರೆ ಆನ೦ದ್... ಆನ೦ದ್ ಅವರನ್ನ ಮಾತಾಡಿಸೋಣ..... ಹೇಳಿ ಆನ೦ದ್.... ನೀವು ಇಲ್ಲಿಗೆ ಯಾವಾಗ್ಲೂ ಬರ್ತಾ ಇರ್ತೀರಾ..."


"ಯಾ... ವೀಕೆ೦ಡ್ಸನಲ್ಲಿ ಐ’ಲ್ ಕಮ್ ವಿತ್ ಮೈ ಫ್ರೆ೦ಡ್ಸ್...."

"ನೀವೆಲ್ಲಿ ಕೆಲ್ಸ ಮಾತಾಡ್ತಾ ಇರೋದು ಆನ೦ದ್..."

"ಐ ವರ್ಕ್ ಇನ್ ಟಿ.ಸಿ.ಎಸ್...."

"ಹ...ಹ... ಟಿ.ಸಿ.ಎಸ್.... ಭಾರತದ ಅರ್ಧದಷ್ಟು ಜನಸ೦ಖ್ಯೆ ಅಲ್ಲೇ ಕೆಲ್ಸ ಮಾಡ್ತಾ ಇರ್ಬೇಕಲ್ವಾ...?"

"ಹ ಹ ಹ... ಹೌದು... ಹೌದು.... ರೆಸ್ಟ್ ಆಫ್ ದ ಪೀಪಲ್ ವರ್ಕ್ ಇನ್ ಇನ್ಫೋಸಿಸ್ ಆ೦ಡ್ ವಿಪ್ರೋ:)"

"ಹೌದು... ನೀವ್ಯಾಕೆ ಆಗ್ಲಿ೦ದ ಇ೦ಗ್ಲೀಶ್ ಮಾತಾಡ್ತಾ ಇದೀರಾ? ನೀವು ಕನ್ನಡದವರು ಅಲ್ವಾ?"

"ಹಾಗೇನಿಲ್ಲ... ನಮ್ದು ಬೆ೦ಗಳೂರೇ...."

"ಮತ್ಯಾಕ್ರಿ ಕನ್ನಡ ಮಾತಾಡಲ್ಲ......"

"ನಿಮ್ಜೊತೆ ಮಾತನಾಡಿ ಫುಲ್ ಎಕ್ಸೈಟ್ ಆಗಿದೀನಿ... ಅಫೀಸಿನಲ್ಲೆಲ್ಲಾ ಇ೦ಗ್ಲೀಷಿನಲ್ಲೇ ಮಾತಾಡಿ ಅದೇ ಅಭ್ಯಾಸ ಆಗಿದೆ..."

"ಸರಿ.... ಇನ್ಮೇಲೆ ಆದಷ್ಟು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡಿ ಆಯ್ತ?"

"ಯಾ... ಶ್ಯೂರ್....!"

                    *************

ಅವನ ಹೆಸರು ರಾಲ್ಫ್ ಬಾವರ್.... ೨೪ ವರ್ಷದ ಅಮೇರಿಕನ್ ಹುಡುಗ. ಭಾರತದ ಭಾಷೆಗಳ ಅಧ್ಯಯನ ಮಾಡ್ತಾ ಇದಾನೆ. ಜೈಪುರದಲ್ಲಿ ಹಿ೦ದಿ ಕಲಿತು, ಮೈಸೂರಿನಲ್ಲಿ ಸ೦ಸ್ಕೃತ ಕಲಿತಿದ್ದಾನೆ. ಭಾಸ ನಾಟಕ, ಭಾರವಿಯ ಕವಿತೆಗಳನ್ನು ಓದಿ, ಪಾಣಿನಿಯ ಮಾಹೇಶ್ವರ ಸೂತ್ರಾಣಿ ಯನ್ನು ಕ೦ಠ ಪಾಠ ಮಾಡಿದ್ದಾನೆ. ಈಗ ಕನ್ನಡ ಕಲಿಯುತ್ತಿರುವ ಅವನಿಗೆ ರನ್ನ, ಪ೦ಪರನ್ನು ಓದಿಕೊಳ್ಳಬೇಕು ಆಸೆ ಇದೆ.

"ನ್ಯಾಗ್ರೋದ ಮೂಲೆ" [ಆಲದ ಮರದಡಿ] (http://ralphabauer2.blogspot.com) ಎ೦ಬ ಸ೦ಸ್ಕೃತ ಶೀರ್ಷಿಕೆ ಉಳ್ಳ ಬ್ಲಾಗ್ ನಲ್ಲಿ ಭಾರತದ ಅನುಭವಗಳನ್ನು ಹ೦ಚಿಕೊಳ್ಳುತ್ತಾನೆ.
                         
              ****************

Comments

ನಿಜ.

ಎಲ್ಲಾ ವಾಸ್ತವ ದುಸ್ಥಿತಿಗಳು .

:( :( :(
ಮನಸು said…
ವಾಸ್ತವವನ್ನು ತೆರೆದಿಟ್ಟಿದ್ದೀರಿ, ಕಿವಿಮಾತು ಕೂಡ!!!!!!!
ಹ್ಮ್ಂ.. ಏನೂ ಮಾಡಲಾಗದು... :( :(
ಗ್ರೇಟ್.
ಗುಡ್ ಪೋಸ್ಟ್.

(ಥತ್, ನಾನ್ಯಾಕೆ ಇಂಗ್ಲೀಷ್ ಶಬ್ದಗಳಲ್ಲಿ ಕಮೆಂಟಿಸ್ತಿದೀನಿ?)
ನಮ್ ಪರಿಸ್ತಿತಿ ಹೇಗಾಗಿದೆ ನೋಡಿ.....!!!
sunaath said…
ಸುಧೇಶ, ಆಶ್ಚರ್ಯವಾಯಿತು; ಬೆಂಗಳೂರು ಹೀಗಿದೆಯಾ ಅಂತ!
ಪರದೇಶದವರು ನಮ್ಮ ಭಾಷೆಗಳನ್ನು ಕಲಿಯುತ್ತಿರುವಾಗ ನಾವು ನಮ್ಮದನ್ನು ಮರೆಯುತ್ತಿದ್ದೇವಲ್ಲ?
Unknown said…
ಸುಧೇಶ್ ನೀವೇನೂ ಹೆದರಬೇಡಿ... ಬರ್ತಾ ಬರ್ತಾ ಜಂತಿ ಬುಡಕ್ಕೆ ಅಂತಾರೆ... ಹಾಗೆ ನಾವು ಮತ್ತೆ ನಮ್ಮ ಸಂಸ್ಕೃತಿ ಯನ್ನು ಹಿಂಬಾಲಿಸುವ ದಿನಗಳು ದೂರವಿಲ್ಲ...
Ravi said…
ಸ್ವಲ್ಪ ದಿನಗಳ ಹಿಂದೆ ನಾನು ಒಂದು ಅಂಗಡಿಗೆ ಹೋದಾಗ ಅಲ್ಲಿಯ ಸೇಲ್ಸ್ ಹುಡುಗ ನನ್ನ ಜೊತೆ ಹಿಂದಿನಲ್ಲಿ ಮಾತಾಡೋಕ್ಕೆ ಶುರು ಮಾಡಿದ. ನಾನು ಅವನ ಜೊತೆ ಕನ್ನಡದಲ್ಲೇ ಉತ್ತರ ಕೊಡ್ತಿದ್ದೆ. ಕಡೆಗೆ ಅವನೇ ಕನ್ನಡದಲ್ಲಿ ಮಾತನಾಡೋಕೆ ಶುರು ಮಾಡಿದ :-) ನನಗೆ ಖುಷಿ ಆಯಿತು.
ಯಾಕೆಅಂತ ಗೊತ್ತಿಲ, ನನ್ನ ನೋಡಿದ ಜನ ನಾನು ಉತ್ತರ ಭಾರತ್ ದವನು ಅಂತ ಅಂದು ಕೊಳ್ತಾರೆ :-(
ನನ್ನ ಎಸ್ಟೊಂದು colleagues ಬೇರೆ ರಾಜ್ಯಗಳಿಂದ ಬಂದು ಕನ್ನಡ ಕಲ್ತಿದ್ದಾರೆ. ಆದ್ರೆ ಅವರ ಜೊತೆ ಕನ್ನಡ ಮಾತನಾಡೋಕೆ ನಾವೇ ಅವಕಾಶ ಮಾಡಿಕೊಡಲ್ಲ.
ಸುಧೇಶ್
ಇದು ನಮ್ಮ ವಾಸ್ತವ ಎಂಬುದನ್ನು ಒಪ್ಪಿಕೊಳ್ಳಬೇಕಾಗಿರುವುದೇ ಬೇಸರ :(
ಸುಧೇಶ್
ಇದು ನಮ್ಮ ವಾಸ್ತವ ಎಂಬುದನ್ನು ಒಪ್ಪಿಕೊಳ್ಳಬೇಕಾಗಿರುವುದೇ ಬೇಸರ :(
Anjali said…
Hi dear...
This is fact...
Most of the people speak English or Hindi...
Thank god... you didnt write about me in your Blog...
Thanks for that...
Keep writing about the facts which happens in our day to day life..:)
ಸುಧೇಶ್,
ಇದು ನಿಜಕ್ಕೂ ಯೋಚಿಸಬೇಕಾದ ವಿಷಯವೇ . ಈಗೀಗಂತೂ ಮನೆಯಲ್ಲೂ ಮಕ್ಕಳ ಜೊತೆ ಇಂಗ್ಲಿಷ್ ನಲ್ಲಿ ಮಾತನಾಡುವ ಹುಚ್ಚು ಅತೀ ಸಾಮಾನ್ಯ. ತಾಯಿಯೇ ಪರ ಭಾಷೆಯಲ್ಲಿ ಮಾತನಾಡುವಾಗ ಅದು ಸಹಜವಾಗಿ ಮಕ್ಕಳ ' ಮಾತೃಭಾಷೆ ' ಆಗುತ್ತದೆಯೇನೋ ! ಇದು ನಾವು ಕನ್ನಡಿಗರಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ ಎಂದುಕೊಂಡಿದ್ದೇನೆ.
ಒಬ್ಬ ಕನ್ನಡದ ಹುಡುಗಿ ಮಹಾರಾಷ್ಟ್ರದ ಸೊಸೆಯಾಗಿ ಬಂದರೆ , ಕೆಲ ದಿನಗಳಲ್ಲಿ ಬಹು ಚೆನ್ನಾಗಿ ಮರಾಥೀ ಮಾತನಾಡುವುದನ್ನು ಕಲಿತುಬಿಡುತ್ತಾಳೆ . ಅದೇ, ಮರಾಥೀ ಹೆಣ್ಣು ಮಗಳು ಕರ್ನಾಟಕದ ಸೊಸೆಯಾದರೆ
ಕೆಲವೇ ದಿನಗಳಲ್ಲಿ , ಮನೆಯವರೆಲ್ಲರೂ ಮರಾಥೀ ಕಲಿತುಬಿಡುತ್ತಾರೆ !! ಬಹು ಸುಲಭವಾಗಿ ಬೇರೆ ಭಾಷೆಗಳನ್ನು ಕಲಿಯುವ ಜಾಣತನಕ್ಕೆ ನಾವು ಹೆಮ್ಮೆ ಪಡಬೇಕೋ ಅಥವಾ ಆ ಮೂಲಕ ಕನ್ನಡವನ್ನೇ
ದೂರ ಮಾಡುತ್ತಿರುವ ಬಗ್ಗೆ ವಿಷಾದ ಪಡಬೇಕೋ ತಿಳಿಯದಾಗಿದೆ.
ನಾನು ಚಿಕ್ಕವಳಿದ್ದಾಗ ನಮ್ಮ ಪಕ್ಕದ ಹಳ್ಳಿಗೆ ಅಮೇರಿಕಾ ದಿಂದ ' ಭಾರತೀಯ ಸಂಸ್ಕೃತಿ ' ಅಧ್ಯಯನಕ್ಕೆಂದು ಬಂದ ಮಹಿಳೆಯರಿಬ್ಬರು ಇಲ್ಲಿರುವಾಗ ಕನ್ನಡವನ್ನು ಮಾತನಾಡಲು ಮಾತ್ರವಲ್ಲ , ಬರೆಯಲು -ಓದಲೂ ಕಲಿತರು .ನಂತರ ವಾಪಸ್ ಹೋದ ಮೇಲೂ ಸಹ ಅವರ ಪತ್ರಗಳು ಕನ್ನಡದಲ್ಲೇ ಇರುತ್ತಿದ್ದವು ! ಇದಕ್ಕೆ ಏನು ಹೇಳೋಣ?
ವಿಕಾಸ್....

ಹೌದು... :(:(
ಮನಸು, ತೇಜಕ್ಕ, ಸುಶ್, ಶಿವಪ್ರಕಾಶ್ ಅವರೇ....

ಪ್ರತಿಕ್ರಿಯೆಗೆ ತು೦ಬಾ ಥ್ಯಾ೦ಕ್ಸ್.... ಒ೦ದಲ್ಲ ಒ೦ದು ದಿನ ಬದಲಾವಣೆ ಆಗೇ ಆಗುತ್ತೆ ಅ೦ತ ಅನಿಸುತ್ತೆ.
ಸುನಾಥ್ ಸರ್...

ಹೌದು ಸರ್... ಹೀಗಿದೆ ಬೆ೦ಗಳೂರು.... ಮೊದಮೊದಲಿಗೆ ಬ೦ದಾಗ ತು೦ಬಾ ಆಶ್ಚರ್ಯ ಆಗೋದು.. ಈಗ ಅಭ್ಯಾಸ ಆಗಿಬಿಟ್ಟಿದೆ.
ರವಿಕಾ೦ತ್ ಮತ್ತು ರವಿ....

ನೀವು ಹೇಳಿದ್ದು ಅಕ್ಷರಶ: ಸತ್ಯ....
ದಿವ್ಯಾ ಅವರೇ...

:(:(
ಅ೦ಜಲಿ...

ನಿಮ್ಮ ಬಗ್ಗೇನೂ ಬರಿತೀನಿ ನೋಡ್ತಾ ಇರಿ :)

ನೀವು ಕನ್ನಡದಲ್ಲೇ ಮಾತನಾಡುವುದರಿ೦ದ ನಿಮ್ಮ ಬಗ್ಗೆ ಬರೆದಿಲ್ಲ :)
ಚಿತ್ರಾ ಅವರೇ...

ಹೌದು... ನೀವು ಹೇಳಿದ್ದು ಕಹಿ ಸತ್ಯ... ನಾನು ಇಲ್ಲೇ ನಮ್ಮ ವಠಾರದಲ್ಲಿ ಗಮನಿಸಿದ್ದೇನೆ... ಇಲ್ಲಿನ ಮಕ್ಕಳ ಮಾತೃಭಾಷೆ ಇ೦ಗ್ಲೀಶ್.. ಹೀಗೆ ಆದರೆ ಆ ಮಕ್ಕಳು ಅಮೇರಿಕನ್ ಮಕ್ಕಳ೦ತೆ ಆಗಿಬಿಡುತ್ತವೇನೋ ತಮ್ಮ ಯೋಚನಾ ಶೈಲಿಯಲ್ಲಿ :(

ಅದು ಯಾಕೆ ಕೆಲವರಿಗೆ ಬೇರೆ ಭಾಷೆಯ ಬಗ್ಗೆ ಬರುವಷ್ಟು ಪ್ರೀತಿ ಕನ್ನಡದ ಬಗ್ಗೆ ಬರಲ್ವೋ ಆ ದೇವರೇ ಬಲ್ಲ...
Veni said…
Please dont mind I am giving comments in English, but thats fact that even though if people know Kannada they would prefer to talk in other languages like their own mother tongue or Hindi or English, may be including me and you, right Mr. Tulu guy.
Hi Veni,

I didn't mind :)

Nowhere in my article I have told that people should prefer to speak in kannada eventhough their mother tongue is some other language. Its a normal tendency that everyone likes their mother togue and gives atmost preference to it.

My concern is about neglecting kannada. If someone knows kannada, i would definitley prefer to speak in kannada instead of english or hindi as i consider kannada also as my mother tongue. Language will grow only when people know the value of it and uses it.

Hope you got my point.

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....