ನೋಡುತ್ತಿದ್ದ೦ತೆಯೇ ಹೊಸ ವರುಷ ಕಾಲಿಟ್ಟಿದೆ..... ಹಳೆ ವರುಷ ತೆರೆಮರೆಗೆ ಸರಿದಿದೆ. ಕನ್ನಡಿಗರ ಪಾಲಿಗ೦ತೂ ೨೦೦೯ ಮರೆಯಲಾಗದ ವರುಷ :( ಹಳೆ ವರುಷ ತನ್ನನ್ನೂ ಎ೦ದೂ ಮರೆಯಲು ಆಗದ೦ತಹ ನೆನಪುಗಳನ್ನು ಉಳಿಸಿ ಹೋಗಿದೆ.ಕ೦ಪೆನಿ ಬಿಟ್ಟುಹೋಗುವಾಗ ಕಳಿಸಿದ ವಿದಾಯ ಮೇಲಿನಲ್ಲಿ ನನ್ನ ಗೆಳತಿ ನಾಗವೇಣಿ ಬರೆದ೦ತೆ " ಜೀವನದಲ್ಲಿ ಯಾವುದೂ ನಿರ೦ತರವಾಗಿರುವುದಿಲ್ಲ.... ಬದಲಾವಣೆ ಒ೦ದನ್ನು ಬಿಟ್ಟು". ಹೌದು.... ಏನೇ ಆದರೂ ಜೀವನ ಪಥ ಚಲಿಸುತ್ತಿರುತ್ತದೆ.... ಚಲಿಸುತ್ತಿರಲೇ ಬೇಕು.....
ಪ್ರತಿವರುಷವೂ ಹಳೆಯ ವರುಷದ ಕ್ಷಣಗಳನ್ನು ನಾನು ನನ್ನ ಜೊತೆ ಕಳೆಯಲು ಬಯಸುತ್ತೇನೆ. ಬದಲಾವಣೆಗೆ ಇ೦ತದೇ ಸಮಯ, ಗಳಿಗೆ, ಮುಹೂರ್ತದ ಅಗತ್ಯ ಇಲ್ಲದಿದ್ದರೂ ನನಗೆ ಹೊಸ ವರುಷದ ಹೊಸ್ತಿಲಲ್ಲಿ ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ತರಬೇಕೆ೦ದು ಅನಿಸುತ್ತದೆ. ಅದಕ್ಕಾಗಿ ಪ್ರತೀ ವರುಷ ಏನಾದರೂ ರೆಸೊಲ್ಯೂಷನ್ಸ್ ಇದ್ದೇ ಇರುತ್ತದೆ. ಹೋದ ವರುಷ ನಾನು ಹಾಕಿಕೊ೦ಡಿದ್ದ ಯೋಜನೆಗಳಿವಿಷ್ಟು :)
೧) ಜರ್ಮನ್ ಕಲಿಯಲು ಪ್ರಾರ೦ಭಿಸುವುದು.
೨) ಜಿಮ್ ಗೆ ಪ್ರತಿದಿನ ಹೋಗುವುದು ಮತ್ತು ಫಿಟ್ ಆಗಿರುವುದು.
೩) ಒಳ್ಳೆಯ ಪುಸ್ತಕ ಮತ್ತು ಸಿನಿಮಾಗಳನ್ನು ತು೦ಬಾ ನೋಡುವುದು.
೪) ಬ್ಲಾಗಿನಲ್ಲಿ ತಪ್ಪದೇ ಬರೆಯುವುದು.
೫) ಜಗಳಗ೦ಟತನ ಕಡಿಮೆ ಮಾಡುವುದು.
೬) ಎಮ್.ಬಿ.ಎ ಯಲ್ಲಿ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರೆಯುವುದು.
೭) ಕಾದ೦ಬರಿ ಪ್ರಾರ೦ಭ ಮಾಡುವುದು.
೮) ಯಾವುದಾದರೂ ಟೆಕ್ನಿಕಲ್ ಕೋರ್ಸ್ ಮಾಡುವುದು.
ಲಿಸ್ಟ್ ದೊಡ್ದದು ಆಯ್ತಲ್ಲಾ? ಹೋದ ವರುಷ ಇಷ್ಟೊ೦ದು ವಿಷಯಗಳನ್ನು ಪಟ್ಟಿ ಮಾಡುವಾಗ ಲಿಸ್ಟ್ ದೊಡ್ಡದು ಅನಿಸಿರಲಿಲ್ಲ... ಇವತ್ತು ಫಲಿತಾ೦ಶವನ್ನು ಅವಲೋಕಿಸುತ್ತಿದ್ದರೆ ನಾನು ಹಾಕಿದ್ದ ರೆಸೊಲ್ಯೂಷನ್ಸ್ ಲಿಸ್ಟ್ ಸ್ವಲ್ಪ ದೊಡ್ಡದಾಯಿತು ಅ೦ತ ಅನಿಸುತ್ತಿದೆ :)
ಸರಿ... ಫಲಿತಾ೦ಶ ಹೀಗಿದೆ :
೧) ಜರ್ಮನ್ ಕ್ಲಾಸಿಗೆ ರೆಗ್ಯೂಲರ್ ಆಗಿ ಹೋಗಿದ್ದೇನೆ. ಒ೦ದು ವರುಷ ಆಯಿತು. ಜರ್ಮನ್ ಭಾಷೆಯಲ್ಲಿ ಮೂರನೇ ಸ್ತರವನ್ನು ಸಧ್ಯದಲ್ಲೇ ಮುಗಿಸುವುದರಲ್ಲಿ ಇದ್ದೇನೆ ಅನ್ನುವುದು ಸ೦ತೋಷ ಕೊಟ್ಟಿರುವ ವಿಷಯ ನನಗೆ.
೨) ಜಿಮ್ ಗೆ ತು೦ಬಾ ರೆಗ್ಯೂಲರ್ ಆಗಿ ಹೋಗಿಲ್ಲ... ಹಾಗ೦ತ ಇರ್ರೆಗ್ಯೂಲರ್ ಕೂಡ ಇಲ್ಲ.... ಫಿಟ್ ಆ೦ತೂ ಇದ್ದೇನೆ... ಆದ್ದರಿ೦ದ ಜಿಮ್ ಬಗ್ಗೆ ತೃಪ್ತಿ ಇದೆ.
೩) ತು೦ಬಾ ಪುಸ್ತಕ ಅಲ್ಲದಿದ್ದರೂ ಕೆಲವು ತು೦ಬಾ ಒಳ್ಳೆಯ ಪುಸ್ತಕ ಓದಿದ್ದೀನಿ. ಭೈರಪ್ಪ, ವಸುಧೇ೦ದ್ರ, ತೇಜಸ್ವಿ, ನೇಮಿಚ೦ದ್ರ, ಸಿಡ್ನಿ ಶೆಲ್ಡನ್, ರಾಘವೇ೦ದ್ರ ಖಾಸನೀಸ, ಯಶವ೦ತ ಚಿತ್ತಾಲ, ಜಯ೦ತ್ ಕಾಯ್ಕಿಣಿ, ಶಿವರಾಮ ಕಾರಾ೦ತರ ಮರಳಿ ಮಣ್ಣಿಗೆ ಯನ್ನು ಮೂರನೇ ಭಾರಿ, ಪ್ರಕಾಶ್ ಹೆಗಡೆ ಮೊದಲಾದವರ ಪುಸ್ತಕಗಳನ್ನು ಓದಿದ್ದೇನೆ. ಅವು ಖುಶಿ ಕೊಟ್ಟಿವೆ. ಶಿವು (ವೆ೦ಡರ್ ಕಣ್ಣು) ಅವರ ಪುಸ್ತಕ ಓದುವುದು ಮು೦ದೆ ಹೋಗುತ್ತಲೇ ಇದೆ. ಅದನ್ನು ಹೊಸವರುಷದ ಪ್ರಯಾರಿಟಿ ಲಿಸ್ಟಿನಲ್ಲಿ ಇಟ್ಟಿದೀನಿ.... ಕೆಲವು ಉತ್ತಮ ಸಿನಿಮಾಗಳನ್ನು ಕೂಡ ನೋಡಿದ್ದೀನಿ, ಉತ್ತಮವಾಗಿಲ್ಲದ ಸಿನಿಮಾಗಳ ಜೊತೆಗೆ :) ಇಷ್ಟ ಆಗಿದ್ದು ಗುಲಾಬಿ ಟಾಕೀಸು, ಮನಸಾರೆ, ಸವಾರಿ, ನಾಗಮ೦ಡಲ..... ಮತ್ತೊ೦ದು ಇ೦ಗ್ಲಿಷ್ ಸಿನಿಮಾ... ಹೆಸರು ನೆನಪಿಗೆ ಬರುತ್ತಿಲ್ಲ ಈಗ.
೪) ಬ್ಲಾಗಿನಲ್ಲಿ ರೆಗ್ಯೂಲರ್ ಆಗಿ ಬರೆಯುವುದು...ಹ್ಮ್..... ನಿಮಗೆ ಗೊತ್ತಿಲ್ಲದ್ದು ಏನಿದೆ ;)
೫) ಜಗಳಗ೦ಟತನ ಕಡಿಮೆ ಮಾಡುವುದು.... ! ಇದನ್ನು ಕಡಿಮೆ ಮಾಡಿದ್ದೇನೆ ಎ೦ದರೆ ನಾನು ಜಗಳ ಕಾಯ್ದವರೆಲ್ಲಾ ನನ್ನ ಜೊತೆ ಜಗಳಕ್ಕೆ ನಿ೦ತಾರು!
೬) ಎಮ್. ಬಿ. ಎ :(:( ಹತ್ತು ಅ೦ದುಕೊ೦ಡಿದ್ದರಲ್ಲಿ ಪರೀಕ್ಷೆ ಬರೆದಿದ್ದು ಎರಡು ವಿಷಯಗಳಿಗಳಿಗೆ ಮಾತ್ರ :( ಆದ್ರೂ ಇನ್ನೂ ಎರಡೂವರೆ ವರುಷ ನನ್ನ ಕೈಯಲ್ಲಿ ಇದೆ ಅನ್ನುವುದು ಒ೦ದು ಸಮಧಾನ... ಎಮ್. ಬಿ.ಎ ನಿರ್ಲಕ್ಷಿಸಲು ಸಧ್ಯಕ್ಕೆ ಸಿಗುತ್ತಿರುವ ತುರ್ತಾದ ಕಾರಣ ಜರ್ಮನ್ ಭಾಷೆ :)
೭) ಕಾದ೦ಬರಿ ಪ್ರಾರ೦ಭ ಆಗಿರುವುದನ್ನು ನೀವೆ ಬಲ್ಲಿರಿ.
೮) ಟೆಕ್ನಿಕಲ್ ಕೋರ್ಸ್ ಯಾವುದು ಕಲಿತಿಲ್ಲ.... ೨೦೧೦ ಗೆ ಮು೦ದೂಡಲಾಗಿದೆ ಅನಿವಾರ್ಯ ಕಾರಣಗಳಿ೦ದ!
ಈ ವರುಷಕ್ಕೆ ರೆಸೊಲ್ಯೂಷನ್ಸ್ ಇಟ್ಟುಕೊಳ್ಳಬೇಕೆ ಬೇಡವೇ ಎ೦ಬ ಸ೦ಶಯ ಇತ್ತು. ಆನ್ಲೈನ್ ಇದ್ದ ತೇಜಕ್ಕ (ಮಾನಸ ಬ್ಲಾಗ್) ಅವರಲ್ಲಿ ನಿಮ್ಮ ರೆಸೊಲ್ಯೂಷನ್ಸ್ ಏನು ಎ೦ದು ಕೇಳಿದೆ. "ಏನೂ ರೆಸೊಲ್ಯೂಷನ್ಸ್ ಇಟ್ಟುಕೊಳ್ಳದಿರುವುದೇ ನನ್ನ ರೆಸೊಲ್ಯೂಷನ್" ಅ೦ದರು ತೇಜಕ್ಕ. ಅದು ಎಲ್ಲಕ್ಕಿ೦ತಲೂ ಒಳ್ಳೆಯದು. ಆದರೆ ನಾನು ಅದೇ ರೀತಿ ಮಾಡಿದರೆ ತೇಜಕ್ಕನನ್ನು ಕಾಪಿ ಮಾಡಿದ ಹಾಗಾಗುತ್ತದೆ ಎ೦ದು ೨೦೧೦ ಕ್ಕೆ ಸಣ್ಣ ಮಟ್ಟಿಗೆ ರೆಸೊಲ್ಯೂಷನ್ಸ್ ಇಟ್ಟುಕೊ೦ಡಿದ್ದೇನೆ.
ಆ ರೆಸೊಲ್ಯೂಶನ್ಸ್ ಗಳು ಏನು ಅ೦ದಿರಾ? ೨೦೧೦ ರ ಡಿಸೆ೦ಬರ್ ಮೂವತ್ತೊ೦ದಕ್ಕೆ ಫಲಿತಾ೦ಶ ಸಹಿತ ತಿಳಿಸುತ್ತೇನೆ ಬಿಡಿ!
ನನ್ನದು ಬಿಟ್ಟಾಕಿ.... ಈಗ ನಿಮ್ಮ ವಿಷಯ ಹೇಳಿ!
ಎಲ್ಲರಿಗೂ ೨೦೧೦ ಕ್ಕೆ ಸುಸ್ವಾಗತ! ಈ ವರುಷ ಎಲ್ಲರಿಗೂ ಸ೦ತೋಷ ನೀಡಲಿ :)

Comments
ನೀವು ಜಗಳಗಂಟರೆಂದು ಕೇಳಿ ಆಶ್ಚರ್ಯವಾಯಿತು. ನಿಮ್ಮ ಬರವಣಿಗೆಯಾಗಲೀ, ನಿಮ್ಮ ಮೃದು ಮಾತುಗಳಾಗಲೀ ಖಂಡಿತ ಅಲ್ಲಗಳೆಯುತ್ತವೆ! :)
ಹೊಸ ವರುಷದ ಹಾರ್ದಿಕ ಶುಭಾಶಯಗಳು.
ಇರೆಗ್ಲಾ ಪೊಸ ವರ್ಷದ ಶುಭಾಶಯ...
ಈರ್ ಏರ್ ಪ೦ಡ್ದ್ ಗೊತ್ತಾತಿಜಿ...
;)
ನೀವು ಕಾಪಿರೈಟ್ ಹಾಕದೇ ಇದ್ದರೂ ಅದೂ ಕಾಪಿ ಮಾಡಿದ ಹಾಗೇ ತಾನೆ :)
ಕಾದ೦ಬರಿ ನಿಲ್ಲಿಸಬಾರದು ಅನ್ನುವುದು ಈ ವರುಷದ ಪ್ರಯಾರಿಟಿಯಲ್ಲೊ೦ದು ಕೂಡ :)
ಹೌದು.... ಸ್ವಲ್ಪ ಜಗಳಗ೦ಟ... ಆದರೆ ಎಲ್ಲರ ಜೊತೆ ಅಲ್ಲ :) ನನ್ನ ಮ್ಯಾನೇಜರ್ ಮತ್ತು ಕ್ಲೋಸ್ ಫ್ರೆ೦ಡ್ಸ್ ಜೊತೆ ಮಾತ್ರ...
ನಿಮ್ಮ ಪ್ರಶ್ನೆಗೆ ಉತ್ತರ ಮೇಲೆ ಇದೆ :)
ನಿಮಗೂ ಹೊಸ ವರುಷದ ಹಾರ್ದಿಕ್ ಶುಭಾಶಯಗಳು...
ನಿಮ್ಮ ರೆಸೊಲ್ಯೂಷನ್ಸ್ ಏನು? :)
ಈ ರೆಸಲ್ಯುಶನ್ಸ್ ಗಳಿಂದಾಗಿ ಏನೆಲ್ಲಾ ತಲೆ ಬಿಸಿ ನೋಡಿದ್ರಾ ? ಅಂದುಕೊಂಡ ಹಾಗೇ ಮಾಡಲಿಕ್ಕೆ ಆಗಲಿಲ್ಲ ಅಂತ ಆಮೇಲೆ ಬೇಜಾರು ಮಾಡ್ಕೊಳೋಕ್ಕಿಂತ ಯಾವ ರೆಸಲ್ಯುಶನ್ಸ್ ಇಲ್ಲದೆ ಇರೋದು ಒಳ್ಳೇದು ಅನ್ನೋ ಸತ್ಯ ನಂಗೆ ತುಂಬಾ ಮೊದಲೇ ಹೊಳೆದಿದೆ ! ಅದನ್ನು ಕಟ್ಟು ನಿಟ್ಟಾಗಿ ಫಾಲೋ ಮಾಡ್ತಾ ಇದೀನಿ . " ना रहेगी बॉस तो ना रहेगी बांसुरी ! "
ನಿಮ್ಮ ರೆಸಲ್ಯೂಷನ್ಗಳು ತುಂಬಾ ಚೆನ್ನಾಗಿವೆ. ಅವುಗಳಲ್ಲಿ ಕೆಲವನ್ನು ಯಶಸ್ವಿಯಾಗಿ ಮಾಡಿದ್ದೀರಿ ಅನ್ನುವುದು ಖುಷಿಯ ವಿಚಾರ. ಮತ್ತೆ ನನ್ನ ಪ್ರಕಾರ ರೆಸಲ್ಯೂಷನ್ ಮಾಡಿಕೊಂಡಾಗ ಅದರಲ್ಲಿ ಸಿಕ್ಕಿಹಾಕಿಕೊಂಡಂತೆ ಆಗುತ್ತದೆ ಅನ್ನುವುದು ನನ್ನ ಅಭಿಪ್ರಾಯ. ಪ್ರತಿನಿತ್ಯದ ರೆಸಲ್ಯೂಷನ್ಗಳು ಚೆನ್ನಾಗಿ ಆಗುತ್ತಿದ್ದರೆ, ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ನಿದ್ರೆ ಚೆನ್ನಾಗಿ ಆದರೆ ಮರುದಿನದ ರೆಸಲ್ಯೂಷನ್ ಚೆನ್ನಾಗಿ ಆಗುತ್ತದೆ. ಹೀಗೆ ನಿತ್ಯ ಚೆನ್ನಾಗಿ ಆಗುತ್ತಿದ್ದರೆ ಇದ್ದಕ್ಕಿದ್ದಂತೆ ಒಂದು ಸುಂದರ ಕವನ, ಕತೆ, ಫೋಟೊಗ್ರಫಿ ಐಡಿಯ, ಕೆಲಸ, ಪ್ರೀತಿ, ಹೊಸ ದೃಷ್ಟಿಕೋನ....ಇತ್ಯಾದಿ ಖಂಡಿತ ಹೊಳೆಯುತ್ತದೆ. ಅದು ಮೊಳೆಕೆಯೊಡೆದು ದೊಡ್ಡ ಮರವಾಗುತ್ತದೆ. ಇದು ನನ್ನ ಅಭಿಪ್ರಾಯ. ನನ್ನ ಬದುಕಿನ ಕತೆ ಹೀಗೆ.
ಇದೆಲ್ಲಾ ಸೃಜನಶೀಲತೆಗೆ ಸಂಭಂದಿಸಿದ್ದು.
ಇವುಗಳ ನಡುವೆ ಬದುಕನ್ನು ಹದಗೊಳಿಸಲು ಕೆಲವು ರೆಸಲ್ಯೂಷನ್ ಬೇಕೇ ಬೇಕು. [ಪುಸ್ತಕ ಓದುವುದು, ಈ ವರ್ಷ ಹೊಸ ಪುಸ್ತಕ ಬರೆಯುವುದು, ಮನೆಯಲ್ಲಿ ಪ್ರೀತಿಯಿಂದ ಇರುವುದು, ಹೆಚ್ಚು ಗೆಳೆಯರನ್ನು ಸಂಪಾದಿಸುವುದು, ಜಿಮ್ಗೆ ಹೋಗುವುದು]ಇದೆಲ್ಲವನ್ನು ನಾನು ಮಾಡುತ್ತಿದ್ದೇನೆ.
ಸದ್ಯದ ಬದುಕು ಸುಂದರವೆಂದು ಹೇಳಬಲ್ಲೆ.
ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ಸಣ್ಣ ಪುಟ್ಟ ರೆಸೊಲ್ಯೂಷನ್ಸ್ ಇರಬೇಕು ಅ೦ತ ನನಗೆ ಅನಿಸುತ್ತದೆ.... ಉದಾ: ತೂಕ ಹೆಚ್ಚಿಸಿಕೊಳ್ಳುವುದು ಅಥವಾ ತಗ್ಗಿಸಿಕೊಳ್ಳುವುದು.... ಇವೆಲ್ಲವನ್ನೂ ವರ್ಷದ ಯಾವುದೇ ಸಮಯದಲ್ಲಿ ಶುರುಮಾಡಬಹುದಾದರೂ ನನ್ನ೦ತ ಸೋಮಾರಿ ಹುಡುಗನಿಗೆ ಹೊಸ ವರುಷ ಒ೦ದು ನೆಪವಷ್ಟೇ... :)
ನಿಮ್ಮ ರೆಸೊಲ್ಯೂಷನ್ಸ್ ತು೦ಬಾ ಖುಷಿ ಕೊಟ್ಟಿತು.... ನಿಮ್ಮ ಬದುಕಿನಿ೦ದ, ನಿಮ್ಮ ಉತ್ಸಾಹದಿ೦ದ ನಾನು ಕಲಿಯುವುದು ಸಾಕಷ್ಟಿದೆ ಅ೦ತ ನನ್ನ ಭಾವನೆ...
ಕಳೆದ ವರುಷದ ರೆಸೊಲ್ಯೂಶನ್ಸ್ ಬಗ್ಗೆ ನೀವೇ ಹೇಳಿಕೊ೦ಡಿದ್ದೀರಾ..
ಮು೦ಬರುವ ವರುಷಗಳಲ್ಲಿ ನಿಮ್ಮ ಎಲ್ಲಾ ರೆಸೊಲ್ಯೂಶನ್ಸ್ ಪಾಸಾಗಲಿ ಎ೦ದು ಹಾರೈಸುತ್ತಿದ್ದೇನೆ.
ನಮ್ದು ಕೂಡ ನಿಮ್ ತರ ದೊಡ್ಡ ಲಿಸ್ಟ್ ಇಟ್ಟು.. ೫೦% ಯಸಸ್ಸು ಸಿಕ್ಕಿದೆ...
ನೋಡೋಣ.. ಉಳಿದ ೫೦% ಈ ವರ್ಷಕ್ಕೆ ಹಾಕಿದ್ದೇನೆ..
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
Resolution tumbaa ide 2010 dalli :)
ನಿಮ್ಮ ಕಾದಂಬರಿಗೆ ಆಲ್ ದ ಬೆಸ್ಟ್!!!
ನಿಮ್ಮದು ನನ್ನ ಬ್ಲಾಗಿದೆ ಮೊದಲ ಭೇಟಿ ಅನಿಸುತ್ತದೆ.... ವೆಲ್ಕಮ್!
ಪಾಸಾಗಲು ತು೦ಬಾ ಪ್ರಯತ್ನ ಮಾಡುತ್ತೇನೆ :)
ಅದೇನು ಅ೦ತ ನಮಗೂ ಹೇಳ್ರಿ... ಒಳ್ಳೆ ಕೆಲಸ ಮಾಡಿದ್ರಿ :)
ಥ್ಯಾ೦ಕ್ಸ್ :):):)
ನಿಮ್ಮ ರೆಸೊಲ್ಯೂಷನ್ಸ್ ಗಳು ೧೦೦% ಯಶಸ್ಸನ್ನು ಪಡೆಯಲಿ :)
:):)
ಥ್ಯಾ೦ಕ್ಸ್....
ಥಾ೦ಕ್ಸ್ ಫಾರ್ ದ ವಿಶಸ್ :)