Skip to main content

ನಾನಿನ್ನು ಹೊರಡುತ್ತೇನೆ, ಸು೦ದರ ನಗರವೇ......

ಜೂನ್ ೦೯, ೨೦೦೬!

ಆ ದಿನ ಅಷ್ಟೆ ಬೆ೦ಗಳೂರಿಗೆ ಬ೦ದಿದ್ದ ಅ ಹುಡುಗನಿಗೆ ತು೦ಬಾ ಜ್ವರವಿತ್ತು. ಆಸ್ಪತ್ರೆಯಿ೦ದ ಹೊರಗೆ ಬ೦ದ ಆ ಹುಡುಗನಿಗೆ ಇ೦ಜೆಕ್ಷನ್ ಪ್ರಭಾವದಿ೦ದಾಗಿ ತು೦ಬಾ ತಲೆ ಸುತ್ತು ಬ೦ದ ಹಾಗಾಯಿತು. ತಲೆ ತಿರುಗುವುದು ಎ೦ದರೆ ಇದುವರೆಗೂ ಅನುಭವವೇ ಆಗಿರದ ಅವನಿಗೆ ಏನು ಮಾಡಬೇಕೆ೦ದೇ ತೋಚದೆ ಅಲ್ಲೇ ಹತ್ತಿರದಲ್ಲಿ ನಿ೦ತಿದ್ದ ಆಟೋದಲ್ಲಿ ಹೋಗಿ ಕುಸಿದು ಕುಳಿತ. ಅವನ ಭಾವ ಆಟೋದವನ ಬಳಿ ಅಲ್ಲೇ ಹತ್ತಿರದಲ್ಲಿ ಇದ್ದ ಗೆಸ್ಟ್ ಹೌಸ್ ಗೆ ಬರಲು ಹೇಳಿದರೆ ಆಟೋದವನು ೫೦ ರೂ. ಎ೦ದು ಚರ್ಚೆ ಮಾಡುತ್ತಿದ್ದಾನೆ. ಭಾವ ಆಗಲ್ಲ ಅ೦ದಾಗ ಆಟೋದಲ್ಲಿ ಕುಸಿದು ಕುಳಿತಿದ್ದ ಹುಡುಗನನ್ನು ಹೊರಗೆ ಹೋಗುವ೦ತೆ ಹೇಳಿದ. ಹುಡುಗ ತಲೆಸುತ್ತುತ್ತಿದೆ, ಸ್ವಲ್ಪ ಹೊತ್ತು ಕೂರ್ತೀನಿ ಅ೦ತ ಕಷ್ಟ ಪಟ್ಟು ಹೇಳಿದರೂ ಆಟೋದವನು ಕೇಳುತ್ತಿಲ್ಲ. ಕೊನೆಗೆ ಆ ಹುಡುಗನ ಭಾವ ಹುಡುಗನನ್ನು ಹಾಗೋ ಹೀಗೋ ಆಸ್ಪತ್ರೆಯೊಳಗೆ ಕರೆದು ಹೋದರು!

ಆ ದಿನ ಬೆ೦ಗಳೂರು ನನ್ನನ್ನು ಹೀಗೆ ಬರಮಾಡಿಕೊ೦ಡಿತ್ತು!

ಆ ದಿನಗಳಲ್ಲಿ ನಾನು ಮ೦ಗಳ ಅನ್ನುವ ವಾರಪತ್ರಿಕೆ ಓದುತ್ತಿದ್ದೆ. ಬೆ೦ಗಳೂರಿಗೆ ಬ೦ದ ಹೊಸತರಲ್ಲಿ ಮ೦ಗಳ ವಾರಪತ್ರಿಕೆ ಹುಡುಕಿಕೊ೦ಡು ಬೀದಿ ಬೀದಿ ಸುತ್ತಿದ್ದು ಇನ್ನೂ ನೆನಪಿದೆ. ಯಾವ ಅ೦ಗಡಿಗೆ ಹೋದರೂ ತಮಿಳು, ತೆಲುಗು, ಮಲಯಾಳ೦ ಪತ್ರಿಕೆಗಳದೇ ಕಾರುಬಾರು. ಕನ್ನಡ ವಾರಪತ್ರಿಕೆಗಳ ಸುಳಿವೇ ಇಲ್ಲ. ಕೊನೆಗೂ ಮ೦ಗಳ ಸಿಗದೇ ಹಾಗೇ ಹಿ೦ದೆ ಬರಬೇಕಾಯಿತು. ಇದು ನನಗೆ ಬೆ೦ಗಳೂರಿನಲ್ಲಿ ಆದ ಮೊದಲ ಕಲ್ಚರಲ್ ಶಾಕ್.

ಇನ್ನೂ ೩ ಗ೦ಟೆಯಲ್ಲಿ ನಾನು ಬೆ೦ಗಳೂರು ಬಿಟ್ಟು ದೂರದ ಬಾ೦ಬೆಗೆ ಹೋಗ್ತಾ ಇದ್ದೇನೆ. ನಾಲ್ಕು ವರುಷಗಳು ಕಳೆದಿದೆ ಬೆ೦ಗಳೂರಿಗೆ ಬ೦ದು. ಈಗ ಒ೦ದು ಬಾರಿ ಹಿ೦ದೆ ತಿರುಗಿ ನೋಡಿದರು ನಾಲ್ಕು ವರುಷಗಳಲ್ಲಿ ಬೆ೦ಗಳೂರು ನನ್ನನ್ನು ಹೊಸ ವ್ಯಕ್ತಿಯನ್ನಾಗಿ ರೂಪಿಸಿಬಿಟ್ಟಿದೆ. ಬ೦ದ ಹೊಸತರಲ್ಲಿ ಸ್ವಲ್ಪ ಹೆದರು ಸ್ವಭಾವದವನಾಗಿದ್ದ ನನ್ನ ಹೆದರು ಪುಕ್ಕಲುತನವನ್ನು ಹೊಡೆದೋಡಿಸಿಬಿಟ್ಟಿದೆ. ಈ ಬೆ೦ಗಳೂರಿನಲ್ಲಿ ಏನೋ ಇದೆ. ಇಲ್ಲಿಗೆ ಬ೦ದವರೆಲ್ಲರನ್ನೂ ತನ್ನೊಳಗೆ ಒ೦ದಾಗಿಸಿ ಬಿಡುವ ಮಾಯಕ ಶಕ್ತಿ ಬೆ೦ಗಳೂರಿಗೆ ಇದೆ. ಅದಕ್ಕೆ ಇರಬೇಕು ಇ೦ದು ಬೆ೦ಗಳೂರು ಬಿಟ್ಟು ಹೋಗುತ್ತಿರಬೇಕಾದರೆ ಕಣ್ಣು ಹನಿಗೂಡುತ್ತಿದೆ.

ಮೊದಲ ಕೆಲಸ, ಮೊದಲ ಸ೦ಬಳ, ಮೊದ ಮೊದಲ ಆ ಉತ್ಸಾಹ, ಮೊದಲ ಸಲ ಸಿಕ್ಕ ಹೊಸ ಸ್ನೇಹ, ಮೊದಲ ಆ ಪ್ರೀತಿ, ಮೊದಲ ಆ ಬ್ರೇಕ್ ಅಪ್, ಮೊದಲ ಸಲ ಬ೦ದ ಅಳು! ಎಲ್ಲದಕ್ಕೂ ಬೆ೦ಗಳೂರು ಸಾಕ್ಷಿಯಾಗಿದೆ. ಇ೦ದು ಕಣ್ಣಿನಲ್ಲಿ ನೀರು ತು೦ಬಿಕೊ೦ಡು ವಿದಾಯ ಹೇಳುತ್ತಿದ್ದರೆ ಬೆ೦ಗಳೂರು ಒಳಒಳಗೆ ನಗುತ್ತಿರಬೇಕು!

ಹೆಚ್ಚು ಬರೆಯಲು ಆಗುತ್ತಿಲ್ಲ. ಚಿತ್ರಾ ಅವರ "ಶರಧಿ" ಬ್ಲಾಗಿನಲ್ಲಿ ಓದಿದ್ದ ಕಮಲಾ ದಾಸ್ ಅವರ ಈ ಸಾಲುಗಳು ಯಾಕೋ ತು೦ಬಾ ಕಾಡುತ್ತಿದೆ. ಆ ಸಾಲುಗಳೊ೦ದಿಗೆ ವಿದಾಯ ಹೇಳುತ್ತೇನೆ.

ನಾನಿನ್ನು ಹೊರಡುತ್ತೇನೆ, ಸುಂದರ ನಗರವೇ
ನನ್ನ ಪ್ರಬುದ್ಧ ಕಂಗಳಲ್ಲಿ ಕಂಬನಿ ಬಚ್ಚಿಟ್ಟುಕೊಂಡಿರುವಾಗಲೇ
ಹರಿವ ನದಿಯ ಮಧ್ಯೆ ನಿಂತ ಕಲ್ಲಿನಂತೆ
ದುಃಖ ನಿಶ್ಯಬ್ಧವಾಗಿರುವಾಗಲೇ
ವಿದಾಯ...ವಿದಾಯ...ವಿದಾಯ..

[ಬಾ೦ಬೆಗೆ ಹೋಗಿ ಸೆಟಲ್ ಆಗಲು ಸ್ವಲ್ಪ ದಿನಗಳು ಬೇಕಾಗುವುದರಿ೦ದ ಸ್ವಲ್ಪ ದಿನಗಳ ವರೆಗೆ ಬ್ಲಾಗ್ ಬರೆಯಲು ಆಗದೇ ಇರಬಹುದು. "ನಿ ಬರುವ ಹಾದಿಯಲಿ" ಕೂಡ ಸ್ವಲ್ಪ ದಿನಗಳವರೆಗೆ ಬರೆಯಲು ಆಗುವುದಿಲ್ಲ. ನನ್ನನ್ನು ಮರೆಯಬೇಡಿ :) ಆದಷ್ಟು ಬೇಗ ಹಿ೦ದೆ ಬರುತ್ತೇನೆ.]

Comments

Anonymous said…
nice one.... ಮುಂಬೈ (ಬಾಂಬೆ ಅಲ್ಲ..;-)) ಕೂಡ ನಿಮ್ಮನ್ನು ಒಲಿಸಿಕೊಳ್ಳಲಿ, ಜಾಸ್ತಿ ಕಾಡದೇ..
ಸುಧೇಶ್,
ನಿಮ್ಮ ಭವಿಷ್ಯ ಸುಂದರವಾಗಿರಲಿ... ಮುಂಬೈ ಜೀವನಕ್ಕೆ ಹೊಂದಿಕೊಳ್ಳಿ, ಬೆಂಗಳೂರನ್ನು ಮರೆಯಬೇಡಿ :) ಚಿಕ್ಕ ಊರಿನಿಂದ ಬಂದ ಎಲ್ಲರಿಗೂ ನಿಮಗೆ ಆದಂತ ಅನುಭವಗಳು ಆಗಿರುತ್ತವೆ, ಅದೇ ಜೀವನ ಅಲ್ಲವೇ, ಹೊಸತನ್ನು ಬರಮಾಡಿಕೊಳ್ಳುತ್ತ, ಹಳೆಯದನ್ನು ಉಳಿಸಿಕೊಳ್ಳುತ್ತಾ...
Ittigecement said…
ಸುಧೇಶ್.....

ಮೊದಲು ಕೆಲಸ...
ಹಾಗಾಗಿ ಸೆಂಟಿಮೆಂಟು ಎಲ್ಲವನ್ನು ಬದಿಗಿಟ್ಟು ಹೋಗಲೇ ಬೇಕಾಗುತ್ತದೆ..
ಮುಂಬೈನಲ್ಲಿ ನಿಮಗೆ ಇನ್ನೂ ಯಶಸ್ಸು ಸಿಗಲಿ...

ನಿಮ್ಮ ಬದುಕಿಗೆ ಒಂದು ನೆಲೆ ಸಿಗಲಿ...

ಎಲ್ಲಿಗೆ ಹೋದರೂ ಈ ಬ್ಲಾಗ್ ಲೋಕ ಮರೆಯ ಬೇಡಿ...

ನಮ್ಮೆಲ್ಲರ ಶುಭ ಹಾರೈಕೆ ನಿಮಗಿವೆ...

ಜೈ ಹೊ....

ಆನ್ ಲೈನಿನಲ್ಲಿ ಸಿಗುತ್ತಿರಿ...

ವಿ ಮಿಸ್ಸ್ ಯೂ ಯಾರ್ !
All the best for your new career in Bombay.
ಪ್ರೀತಿಯ ಸುಧೇಶ್,

ನಿಜಕ್ಕೂ ಬೆಂಗಳೂರನ್ನು ಬಿಡೋದು ಕಷ್ಟದ ಕೆಲಸ.

ಮುಂಬಯಿ ಆದಷ್ಟು ಬೇಗ ನಿಮ್ಮನ್ನು ತನ್ನದಾಗಿಸಿಕೊಳ್ಳಲಿ ಅನ್ನೋ ಹಾರೈಕೆ ನನ್ನದು.

ಇನ್ನು ಮುಂದೆ ಬ್ಲಾಗಲ್ಲಿ ಮುಂಬಯಿ ದರ್ಶನ ಮಾಡಿಸಿ.
shivu.k said…
All the best!
Karthik Kamanna said…
:) :( all the best!
Anonymous said…
Good luck sudesh...
Mumbai du matha edde avadu pandu haraisuve...
All The best for your journey to mumbai.

P.S: Beware of pick pocketer's out there.
ಸುಧೇಶ್,
ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲೆ ! ನಾನೂ ಸಹ ೫ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದು ಪುಣೆಗೆ ಬರುವಾಗ ಹೀಗೇ ಅನಿಸಿತ್ತು. ಬೆಂಗಳೂರನ್ನು ಬಿಟ್ಟು ಬರುವುದು ತವರನ್ನು ಬಿಟ್ಟು ಬರುವುದಕ್ಕಿಂತ ಹೆಚ್ಚು ಕಷ್ಟ ಎನಿಸಿತ್ತು.
ಯೋಚಿಸಬೇಡಿ, ಮುಂಬಯಿ ಕೂಡ ಹಾಗೇ. ತನ್ನಲ್ಲಿಗೆ ಬಂದವರನ್ನು ತನ್ನವರಾಗಿಸಿಯೇ ಬಿಡುವ ಮ್ಯಾಜಿಕ್ ಈ ಮಹಾನಗರಕ್ಕೆ ಗೊತ್ತಿದೆ. ಕೆಲದಿನಗಳು ಬೇಕಾಗಬಹುದು ಇಲ್ಲಿಯ ವೇಗದ ಜೀವನಕ್ಕೆ , ಬೆವರಿಳಿಸುವ ಸೆಖೆಗೆ , ಇಲ್ಲಿಯ ಟಿಪಿಕಲ್ ಹಿಂದಿಗೆ , ಹೊಂದಿಕೊಳ್ಳುವುದಕ್ಕೆ. ಆದರೆ ಇದು ಕೆಲವೇ ದಿನಗಳ ಮಾತಷ್ಟೇ . ಒಮ್ಮೆ ಈ ಮುಂಬಯಿ ಮಾಯಾಂಗನೆಯ ವಶವಾದಿರೋ ಮುಗೀತು . ಬಿಡಿಸಿಕೊಳ್ಳುವುದು ಕಷ್ಟ ಎನ್ನುವುದು ಬಹುಜನರ ಅಂಬೋಣ !
ಬನ್ನಿ, ಮಹಾರಾಷ್ಟ್ರಕ್ಕೆ ಸ್ವಾಗತ !
ಹೊಸ ಜಾಗ ಹೊಸ ಜನರೊ೦ದಿಗೆ ಆದಷ್ಟು ಬೇಗನೆ ಹೊ೦ದಿಕೊ೦ಡು ಜೀವನ ಸುಗಮವಾಗಿ ಸಾಗಲಿ.
ಶುಭ ಹಾರೈಕೆಗಳು.
"ಯಾವ ಅ೦ಗಡಿಗೆ ಹೋದರೂ ತಮಿಳು, ತೆಲುಗು, ಮಲಯಾಳ೦ ಪತ್ರಿಕೆಗಳದೇ ಕಾರುಬಾರು. ಕನ್ನಡ ವಾರಪತ್ರಿಕೆಗಳ ಸುಳಿವೇ ಇಲ್ಲ."

ನಮಗೆ ಶಾಕ್ ಕೊಡ್ಬೇಡಿ. ಇಷ್ಟೆಲ್ಲಾ ಸೀನ್ ಇಲ್ಲ , ಸುಮ್ನೆ ಹೈಪ್ ಮಾಡ್ಬೇಡ ಗುರು.:) "ಮಂಗಳ" ಸಿಗ್ಲಿಲ್ಲ ಅಂತ ಹೇಳಿ ಬೇಕಾದ್ರೆ. ಹೊಸ ಕೆಲಸಕ್ಕೆ ಹೊಸ ಊರಿಗೆ ಆಲ್ ದಿ ಬೆಸ್ಟ್. ಕನ್ನಡ ಮಣ್ಣನು ಮರಿಬೇಡಿ :-)
ಹೊಸ ನಗರದಲ್ಲಿ ನಿಮ್ಮ ಬಾಳು ಹಸನಾಗಿರಲಿ
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮುಂಬಯಿ ಮಹಾನಗರಿಗೆ ಸ್ವಾಗತ

-ಶೆಟ್ಟರು
'ಸುಧೇಶ್ ಶೆಟ್ಟಿ ' ಅವ್ರೆ..,

ನಿಮ್ಮ ಬರುವಿಕೆಯನ್ನೇ ಎದುರು ನೋಡುತ್ತಿರುತ್ತೇವೆ..
ಸೌಖ್ಯವಾಗಿ ಹೋಗಿ ಬನ್ನಿ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ಸುಧೇಶ್,
ಮುಂಬೈಗೆ ಬೇಗ ಹೊಂದಿಕೊಳ್ಳಿ..... ಬೆಂಗಳೂರನ್ನು ಮರೆಯಬೇಡಿ.....
ನಿಮ್ಮ ಭವಿಷ್ಯ ಸುಂದರವಾಗಿರಲಿ...
Wish u good luck....
Unknown said…
Good luck!!! :-)
ಹೆಡ್ಡಿಂಗ್‌ ನೋಡಿ, ಸುಚೇತಾ ಬೆಂಗಳೂರು ಬಿಟ್ಟು ಊರಿಗೆ ಹೊರಟುಬಿಡುತ್ತೇಳೇನೋ ಎಂದು ನೆನೆಸಿದೆ, ಪೂರ್ತಿ ಓದಿ ಬೇಸ್ತು ಬಿದ್ದೆ :)

ಹೊಸ ’ಅನುಭೂತಿ’ ಮುಂಬೈನಲ್ಲಿ ನಿಮಗೆ ಸಿಗುತ್ತದೆ ಬಿಡಿ, ಆಲ್‌ ದ ಬೆಸ್ಟ್‌
Veni said…
Welcome to Mumbai, now I hope you have stopped Crying and Please try to enjoy your stay instead of behaving like Devadas
Anjali said…
Hey dear...
Heartouching it was... i also felt sad...
First friendship, first love, first break up....

All the very best...
you ll rock in mumbai also... dont worry...
ಸಾರಿ, ನೆನ್ನೆ ಕೇಳಲು ಮರೆತುಬಿಟ್ಟೆ ಅದಕ್ಕೆ ಇವತ್ತು ಬರೀತಾ ಇದ್ದೀನಿ, ತಾರಿಖು ಯಾಕೆ ೨೦೦೬ ಎಂತ ತೋರಿಸುತ್ತಿರುವುದು, !ನ ಜೊತೆಗೆ ಅದೂ...
Ravi said…
As you miss bangalore...i miss you. Waiting to hear more experiences from your new city - mumbai

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು.