Skip to main content

ನೀ ಬರುವ ಹಾದಿಯಲಿ.........

ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ಆದರೂ ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :)

ಸಾಕಷ್ಟು ಸಮಯ ಆಗಿರುವುದರಿ೦ದ ಕಥೆಯ ಸಾರಾ೦ಶವನ್ನು ಕೂಡ ಕೊಟ್ಟಿದ್ದೇನೆ.

ಕಾದ೦ಬರಿಗೆ ಈ ಲಿ೦ಕನ್ನು ಕ್ಲಿಕ್ ಮಾಡಿ.

ನೀ ಬರುವ ಹಾದಿಯಲಿ.......

Comments

ನನ್ನ ಮಾತುಗಳಿಗೆ ಬೆಲೆ ಕೊಟ್ಟು ಮತ್ತೆ ಕಾದಂಬರಿ ಬರೆದಿದ್ದಕೆ ತುಂಬಾ ಖುಷಿ ಆಯ್ತು ಸುಧೇಶ್...ಥ್ಯಾಂಕ್ಸ್ ಸುಧೇಶ್ ...
:-) :-)

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ದಾರಿ...

ಹಲವಾರು  ದಾರಿಗಳಿದ್ದವು ಅಲ್ಲಿ... ಕೆಲವು ತಿರುವುಗಳೂ ಸಹ ನಾ ನಡೆವ ದಾರಿಯಲೇ ಏಕೆ ಎದುರಾದೆ? ನಿನ್ನ ಹಾದಿಗೆ ದೀಪವಾಗಲು ಹೋಗಿ ಮರೆತೇಬಿಟ್ಟೆ ನನ್ನ ಗಮ್ಯ..... ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು, ತು೦ಬಿಸಿಕೊಳ್ಳುವ ಆಸೆಯೂ ಇತ್ತು. ಹ೦ಬಲವಿತ್ತು ತಾರೆಗಳನ್ನು, ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ. ಅನ೦ತದ ಮಾತಿರಲಿ... ಕವಲೊಡೆಯಿತಲ್ಲ ದಾರಿ ನೂರು ಹೆಜ್ಜೆಗಳು ಮುಗಿಯುವ ಮೊದಲೇ.... ಹಾಗೊ೦ದು ವೇಳೆ ನೀ ನನಗೆ ಸಿಗದಿರುತ್ತಿದ್ದರೆ.... ರೆ..................... ಹುಡುಕುತ್ತಿದ್ದೇನೆ ಉತ್ತರ ಇನ್ನೂ...!