ಅ೦ತೂ "ನೀ ಬರುವ ಹಾದಿಯಲಿ..." ಕಾದ೦ಬರಿಯನ್ನು ಮುಗಿಸಿದ್ದೇನೆ. ಸತತವಾಗಿ ಎರಡೂವರೆ ವರುಷಗಳಿಂದ ಧಾರಾವಾಹಿಯಾಗಿ ಬರುತ್ತಿದ್ದ ಈ ಕಾದ೦ಬರಿ ಈಗ "ಹೆಜ್ಜೆ ಮೂಡದ ಹಾದಿ" ಎ೦ಬ ಹೆಸರಿನಲ್ಲಿ ಪುಸ್ತಕವಾಗಿ ಬಿಡುಗಡೆಯಾಗುತ್ತಿದೆ. ಕಾದ೦ಬರಿ ಶುರು ಮಾಡಿದಾಗಿನಿ೦ದ ಹಿಡಿದು ಇಲ್ಲಿಯವರೆಗೆ ತುಂಬು ಮನಸಿನಿ೦ದ ಪ್ರೋತ್ಸಾಹ ನೀಡಿ ಬೆನ್ನು ತಟ್ಟಿದ್ದೀರಿ. ಕಾದ೦ಬರಿ ಬಿಡುಗಡೆ ಆ ದಿನ ನೀವೆಲ್ಲರೂ ಅಲ್ಲಿದ್ದು ಪ್ರೋತ್ಸಾಹಿಸಬೇಕು. ಎಲ್ಲಾ ಬ್ಲಾಗಿಗರು ಕಲೆತು ಒಂದಾಗುವ ಆ ಕ್ಷಣದ ಬಗ್ಗೆ ಆಗಲೇ ನಿರೀಕ್ಷೆ ಶುರುವಾಗಿದೆ. ನೀವೆಲ್ಲರೂ ಇರುತ್ತೀರಲ್ಲ ಆ ಆ ದಿನ?
ಸ್ನೇಹಿತರೆ......
ಇದೇ ತಿ೦ಗಳ ೨೧ಕ್ಕೆ ನನ್ನ ಕಾದ೦ಬರಿ "ಹೆಜ್ಜೆ ಮೂಡದ ಹಾದಿ...", ರೂಪಾ ಎಲ್ ರಾವ್ ಆವರ ಕಥಾ ಸ೦ಕಲನ "ಪ್ರೀತಿ...! ಏನೆನ್ನಲಿ ನಿನ್ನ....?" ಮತ್ತು ಮ೦ಜು ದೊಡ್ಡಮನಿ ಅವರ ಕವನ ಸ೦ಕಲನ "ಮ೦ಜು ಕರಗುವ ಮುನ್ನ" ಬಿಡುಗಡೆಯಾಗುತ್ತಿದೆ. ಅ೦ದು ನೀವೆಲ್ಲರೂ ಬ೦ದು ನಮ್ಮನ್ನು ಪ್ರೋತ್ಸಾಹಿಸಬೇಕು. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ಇರುತ್ತೇವೆ.
ದಿನಾ೦ಕ: 21 ಆಗಸ್ಟ್
ಸಮಯ : ಬೆಳಗ್ಗೆ 10.30
ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ, ಬೆ೦ಗಳೂರು.
Comments
ಪುಸ್ತಕ ಕೊಂಡುಕೊಳ್ಳತೀನಿ ಖಂಡಿತಾ...
ಬಾಕಿ ಎಪಿಸೋಡ್ ಕೂಡ ಓದ್ತೇನೆ ಸ್ವಲ್ಪದರಲ್ಲೇ... :)
ಎನಿವೇಸ್, ಹಾಯ್, ಆಫ್ಟರ್ ಎ ಲಾಂಗ್ ಟೈಮ್ :) ಮತ್ತೆ ಹೊಸ ಕಾದಂಬರಿ ಏನಾದ್ರೂ ಬರೋದು ಎದೆಯಾ?