Skip to main content

ತೀರ....


ಈ ತೀರದಲ್ಲೀಗ ಕತ್ತಲು
ನಾನು ಚೆನ್ನಾಗಿದ್ದೇನೆ... 
ಕಾರಣಗಳು ಇಲ್ಲ ಅಂತೇನಿಲ್ಲ 
ಚೆನ್ನಾಗಿಲ್ಲದಿರಲು!

ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ 
ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು
ಇನ್ನು ರಾತ್ರಿ ಮಲಗಿದ ಹಾಗೆಯೇ
ಅಮ್ಮ ಚೇಳು ಕಡಿದು 
ಸೇಡು ತೀರಿಸಿಕೊಳ್ಳಬಹುದೇ?

ಇವೆಲ್ಲವನ್ನೂ ಪರಿಗಣಿಸಿದರೆ
ಹೌದು ಚೆನ್ನಾಗಿಲ್ಲ ನಾನು!

ನನ್ನ ಮನದಲ್ಲಿ ನೀರವ ಮೌನ 
ಕಾರಣ ಹುಡುಕುತ್ತಿದ್ದೇನೆ
ಎಲ್ಲೋ ಗಾಡಿ ಓಡುವ ಸದ್ದು 
ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ

ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು 
ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ?
ಹೇಗಿದ್ದೀಯ ನೀನು?
ಆ ತೀರದಲ್ಲಿನ ಸಂಗತಿಗಳೇನು?

Comments

Karthik Kamanna said…
ಚೆನ್ನಾಗಿದೆ!
ಮೌನ ಮೌನಗಳ ಮಾತುಕತೆಯಂತೆ ತೋರುತ್ತದೆ..
ಚೆನ್ನಾಗಿದೆ ಕವನ . ಬರೆಯೋದನ್ನ ಮರೆತಿಲ್ಲ ಅಂತಾಯ್ತು ನೀವು ( ನನ್ನ ಹಾಗೆ ! ) ಹ ಹ ಹ....
ಇದಕ್ಕೊಂದು ಉತ್ತರ ನನ್ನ ಬ್ಲಾಗ್ ನಲ್ಲಿ ಶೀಘ್ರವೇ ಬರಲಿದೆ .
Swarna said…
ಹೊಸ ಅನುಭವ ಕೊಟ್ಟ ಸಾಲುಗಳು
ಚೆನ್ನಾಗಿದೆ
ಚನ್ನಾಗಿದೆ....
Geetha said…
ಪದ್ಯ ತುಂಬಾ ಸೀರಿಯಸ್ ಆಗಿದೆ.
ಬಹಳ ಬಹಳ ದಿನಗಳ ನಂತರ ನಿಮ್ಮ ಬ್ಲಾಗ್ ಓದುತ್ತಿದ್ದೇನೆ. ನಿಮ್ಮ ಈ ಪದ್ಯ ಬೇರೆ ಸ್ತರದಲ್ಲಿ ಇದ್ದ ಹಾಗನಿಸಿತು! - ನಾವು ದಸರೆ ರಜದಲ್ಲಿ ವಾಪಾಸ್ ಬಂದು ಮತ್ತೆ ಬೇಸಿಗೆ ರಜೆಗೆ ಊರಿಗೆ ಹೋದರೆ ಅಜ್ಜಿ " ಅರೆ ಎಷ್ಟು ಬೆಳೆದುಬಿಟ್ಟಿದಿಯ" ಅನ್ನುತ್ತಿದ್ದ ಹಾಗೆ :)
ಮಿಸ್ ಆಗಿರುವ ನಿಮ್ಮ ಹಳೆಯ ಪೋಸ್ಟ್ ಗಳೆಲ್ಲ ಒಂದೊಂದಾಗಿ ಓದುವೆ ಲಿಂಕ್ ಸಿಗಬಹುದು :)

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ ...