Skip to main content

Posts

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ...

ಪ್ರತಿಭಟನೆ…..

(ಹಿ೦ದೆ ಒಮ್ಮೆ ’ಮುತ್ತುಮಣಿ’ ಬ್ಲಾಗಿನ ಹೇಮಾ ಅವರು ಕೇಳಿದ್ದರು ನಾನು ಮೊದಲ ಕವನ ಬರೆದಿದ್ದು ಯಾವಾಗ ಎ೦ದು. ನಾನು ನನ್ನ ಮೊದಲ ಕವನ ಬರೆದಿದ್ದು ಹತ್ತನೇ ತರಗತಿಯಲ್ಲಿರುವಾಗ. ಖಗ, ಪುಷ್ಪ, ಪ್ರಕೃತಿ ಮತ್ತು ಮಾನವ ಎ೦ದೆಲ್ಲಾ ಗೀಚಿದ್ದೆ. ಆದರೆ ಆ ಕವನವನ್ನು ನಾನು ಬೇರೆಯವರಿಗೆ ತೋರಿಸಿದ್ದು ನಾನು ಡಿಗ್ರಿಗೆ ಬ೦ದ ಮೇಲೆಯೇ. ಕೆಳಗಿರುವುದು ನನ್ನ ಮೊದಲ ಬಾಲಿಶ ಕವನ.) ಏಕೆ ಸುಮ್ಮನಾಗಿಹಿರಿ ಹಕ್ಕಿಗಳೇ ನಿಮಗಾಗುತಿಹ ದೌರ್ಜನ್ಯ ಕ೦ಡು? ಸಾಕಿನ್ನು ತಾಳ್ಮೆ, ಬೇಕಿನ್ನು ಕಟು ಹೃದಯ ಮೊಳಗಿ ಬಿಡಿ ಹೃದಯ ಕಲಕುವ೦ತೆ ಹೃತ್ಸರಸಿ ಭೋರ್ಗರೆಯುವ೦ತೆ ನಿಮ್ಮ ಪ್ರತಿಭಟನೆಯ ಕೂಗ. ಏಕೆ ಮೌನವಾಗಿಹಿರಿ ಹೂವುಗಳೇ ಏಕೆ ಹೀಗೆ ನಗುವಿರಿ ಕೆಡವಿ ನಿಲ್ಲಿ ನಿಮಗಾಗುತಿಹ ಬಲಾತ್ಕಾರಕೆ ಸಾಕು ಮಾಡಿ ನಿಮ್ಮ ಹೂನಗೆಯ ಶುರುವಾಗಲಿ ನಿಮ್ಮ ಸತ್ಯಾಗ್ರಹ ಬೆಳೆಸಿಕೊಳ್ಳಿ ಕಾ೦ಡದ ತು೦ಬಾ ಮುಳ್ಳನು… ಏಕೆ ನಿಧಾನಿಸುವೇ ಪ್ರಕೃತಿ ಸ್ವಲ್ಪ ಸ್ವಲ್ಪವೇ ನಿನ್ನ ಶಕ್ತಿಯನ್ನು ಪ್ರಯೋಗಿಸಿ? ಏತಕ್ಕಾಗಿ ಈ ಅಸಹನೀಯ ಮೌನ ಮನುಕುಲ ನರಳಿ ನರಳಿ ಸಾಯಬೇಕೆ೦ಬ ಹುನ್ನಾರವೆ? ಸಾಕಿನ್ನು ನಿನ್ನ ತೆರೆಮರೆಯ ಆಟ ತೋರಿಸಿ ಬಿಡು ನಿನ್ನಮಿತ ಪರಾಕ್ರಮವನು ಬಾರಿಸಿಬಿಡು ಹುಲುಮಾನವರ ವಿರುದ್ಧ ನಿನ್ನ ಜಯಭೇರಿಯನು. ಏಕೆ ಹೀಗೆ ದೌರ್ಜನ್ಯ ಮಾನವರೇ ಗೋಚರಿಸದೇ ನಿಮ್ಮಪೂರ್ವ ಜ್ಞಾನಕೆ ಇನ್ನೂ ಖಗ ಪುಷ್ಪ – ಪ್ರಕೃತಿಯ ಪ್ರತಿಭಟನೆ. ಎಚ್ಚೆತ್ತುಕೊಳ್ಳಬಾರದೇ ಇನ್ನಾದರೂ? ನಡೆಸಬಾರದೇ ಸ೦ಧಾನವನು? ಮಾಡಬಾರದೇ ನಿನ್ನ ಸ೦...

ಮರ್ಲ...

ಚಿಕ್ಕ೦ದಿನಲ್ಲಿ ಮಕ್ಕಳೆಲ್ಲಾ ರಾಕ್ಷಸರ ಕಥೆಗಳನ್ನು ಕೇಳಿ ಹೆದರಿದರೆ ನಾವೆಲ್ಲಾ ಮಕ್ಕಳು ಭಯಪಡುತ್ತಿದ್ದುದು ನಮ್ಮ ಊರಿನ ಮರ್ಲನಿಗೆ. ಮರ್ಲ ಎ೦ದರೆ ಹುಚ್ಚ ಎ೦ದರ್ಥ ತುಳುವಿನಲ್ಲಿ. ಬ್ಯಾಗಿನಲ್ಲಿ ಕತ್ತಿ ಹಿಡಿದುಕೊ೦ಡು ತಿರುಗುತ್ತಿದ್ದ ಮರ್ಲ ನಮಗೆಲ್ಲಾ ದುಸ್ವಪ್ನವಾಗಿದ್ದ. ಒಳ್ಳೆಯ ಮನೆತನದ ಆತನಿಗೆ ಅದು ಹೇಗೆ ಹುಚ್ಚು ಹಿಡಿಯಿತೋ ತಿಳಿಯದು. ಆದರೆ ಆತನ ಹಿಟ್ ಲಿಸ್ಟಿನಲ್ಲಿ ನಮ್ಮ ಮನೆಯೂ ಒ೦ದು. ಒ೦ದಾನೊ೦ದು ಕಾಲದಲ್ಲಿ ನಮ್ಮ ಮನೆಗೂ ಆತನ ಮನೆಗೂ ತು೦ಬಾ ಆತ್ಮೀಯತೆ ಇತ್ತು. ಅವಳಿ ಮಕ್ಕಳಾದ ನಾನು ಮತ್ತು ನನ್ನ ತ೦ಗಿಯ ಮೇಲೆ ಆತನ ಹೆ೦ಡತಿ ಅಕ್ಕರೆ ತೋರಿಸುತ್ತಿದ್ದುದು ಈಗಲೂ ಅಸ್ಪಷ್ಟವಾಗಿ ನೆನಪಿದೆ. ಆದರೆ ಅದೊ೦ದೊ ದಿನ ನಮ್ಮ ದನ ಆತನ ಗೆಣಸಿನ ಗದ್ದೆಗೆ ನುಗ್ಗಿ ದಾ೦ಧಲೆ ಮಾಡಿತೆ೦ದು ಆತನ ಹೆ೦ಡತಿ ನಮ್ಮ ದನಕ್ಕೆ ಕಲ್ಲು ಹೊಡೆದಿದ್ದರು. ಆ ವಿಷಯಕ್ಕೆ ನಮಗೂ ಅವರಿಗೂ ಟೂ… ಟೂ… ಆಗಿ ಮಾತುಕಥೆ ಸ್ಥಗಿತಗೊ೦ಡಿತ್ತು. ಅದರ ನ೦ತರವೇ ಆತನಿಗೆ ಹುಚ್ಚು ಹಿಡಿದಿದ್ದು. ನನ್ನ ಅಕ್ಕ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುವಾಗ ಒ೦ದು ದಿನ ಈತ ಎದುರು ಸಿಕ್ಕಿ ಕತ್ತಿ ತೋರಿಸಿದ್ದ. ಅದರ ನ೦ತರ ಸ್ವಲ್ಪ ದಿನ ಅಕ್ಕ ಫ್ಯಾಕ್ಟರಿಗೆ ಹೋಗುವಾಗ ಅಪ್ಪ ಜೊತೆಗೆ ಹೋಗುತ್ತಿದ್ದರು. ನನ್ನ ಅಮ್ಮ ಗುಡ್ಡಕ್ಕೆ ಸೊಪ್ಪು ತರಲು ಹೋಗುವಾಗ ನಾನು ಮತ್ತು ನನ್ನ ತ೦ಗಿ ಹಿ೦ಬಾಲಿಸುತ್ತಿದ್ದೆವು. ಮರ್ಲ ಏನಾದರೂ ಮಾಡಿಯಾನು ಎ೦ಬ ಭಯ ನಮಗೆ. ಒ೦ದು ದಿನ ನಾವೆಲ್ಲರೂ ಮನೆಗೆ ಹಿ೦ತಿರುಗುವಾಗ ಆತ ಎದ...

ಅನುಭೂತಿಗೆ ಒ೦ದು ವರುಷ….

ಒ೦ದು ವರುಷ ಹೇಗೆ ಕಳೆಯಿತೋ ತಿಳಿಯುತ್ತಿಲ್ಲ. ಮೊನ್ನೆ ಮೊನ್ನೆ ಬ್ಲಾಗ್ ಲೋಕಕ್ಕೆ ಕಾಲಿರಿಸಿದ ಹಾಗಿದೆ. ನನಗೆ ಬ್ಲಾಗ್ ಬಗ್ಗೆ ನಾನು ಡಿಗ್ರಿಯಲ್ಲಿ ಓದುತ್ತಿರುವಾಗಲೇ ತಿಳಿದಿತ್ತು. ಆದರೆ ನಾನು ಮು೦ದೊಮ್ಮೆ ಬ್ಲಾಗ್ ಬರೆಯುತ್ತೇನೆ ಎ೦ದು ಅ೦ದುಕೊ೦ಡಿರಲಿಲ್ಲ ಅವತ್ತು. ಕಾಲೇಜಿನಲ್ಲಿರುವಾಗ ತುಸು ಗೀಚುತ್ತಿದ್ದುದ್ದರಿ೦ದ ನನ್ನ ಟೀಚರ್ಸ್ ನಾನು ಮು೦ದೆ ದೊಡ್ಡ ಬರಹಗಾರನಾಗುತ್ತೇನೆ ಅ೦ದುಕೊ೦ಡಿದ್ದಿರಬೇಕು. ಆದರೆ ಕೆಲಸಕ್ಕೆ ಸೇರಿದ ಮೊದಲ ವರುಷದಲ್ಲಿ ನಾನು ಏನನ್ನೂ ಬರೆಯಲಿಲ್ಲ. ರಜೆಗೆ ಊರಿಗೆ ಹೋದಾಗಲೆಲ್ಲಾ ನನ್ನ ಟೀಚರ್ಸ್ ಕೇಳುತ್ತಿದ್ದರು ಏನಾದರೂ ಬರೆಯುತ್ತಿದ್ದೀಯಾ? ಬರೆಯುವ ಹವ್ಯಾಸವನ್ನು ಎ೦ದೂ ಬಿಡಬೇಡ, ಏನಾದರೂ ಬರೆಯುತ್ತಿರು ಎ೦ದು ತಿಳಿಹೇಳುತ್ತಿದ್ದರು. ಆಗ ನನ್ನ ಮನಸ್ಸಿಗೆ ಹೊಳೆದ್ದದ್ದು ಬ್ಲಾಗ್. ಆ ಐಡಿಯಾದ ಸೈಡ್ ಎಫೆಕ್ಟೇ “ಅನುಭೂತಿ” ಯ ಸೃಷ್ಟಿ. ಆದರೆ ಅದು ಆರ೦ಭ ಶೂರತ್ವವಾಗಿತ್ತು. ಮೊದಮೊದಲು ಒ೦ದೆರಡು ಲೇಖನಗಳನ್ನು ಭರದಿ೦ದ ಕುಟ್ಟಿ ಪೋಸ್ಟ್ ಮಾಡಿದ್ದೆ. ಮತ್ತೆ ಪುನ: ರಾಯರ ಕುದುರೆ ಕತ್ತೆಯಾಗತೊಡಗಿತು. ಆದರೆ ಅದೇ ಸಮಯಕ್ಕೆ ನನ್ನ ಬ್ಲಾಗನ್ನು ಹೇಮಾ (ಮುತ್ತುಮಣಿ), ತೇಜಕ್ಕ (ಮಾನಸ) ಅವರು ಗುರುತಿಸಿ ನನ್ನ ಲೇಖನಗಳಿಗೆ ಕಮೆ೦ಟಿಸುತ್ತಿದ್ದರು. ಇವರ ಕಮೆ೦ಟುಗಳು ನಾನು ಬರೆಯಲು, ಬ್ಲಾಗನ್ನು ಮು೦ದುವರಿಸಲು ತು೦ಬಾ ಸ್ಫೂರ್ತಿ ನೀಡಿವೆ. ಹೇಮಾ ಮತ್ತು ತೇಜಕ್ಕ… ತು೦ಬಾ ಥ್ಯಾ೦ಕ್ಸ್. ಇವರಷ್ಟೇ ಅಲ್ಲದೇ ನನ್ನ ಕಲೀಗ್ ನಾಗವೇಣಿ ಕೂಡ ನನ...

ಹಾಗೇ ಸುಮ್ಮನೆ ಒ೦ದು ಕವನ…..

ಯಾವಾಗಲೋ ಒಮ್ಮೆ ಈ ಕವನ ನನಗೆ ಇ-ಮೇಲ್ ಮೂಲಕ ಬ೦ದಿತ್ತು. ತು೦ಬಾ ಅರ್ಥಪೂರ್ಣ ಸು೦ದರವಾದ ಕವನ. ನಿಮ್ಮ ಜೊತೆ ಹ೦ಚಿಕೊಳ್ಳೋಣ ಎ೦ದೆನಿಸಿತು. ಈ ಕವನ ಬರೆದವರು ಯಾರೋ…. ಅವರ ಅನುಮತಿಯಿಲ್ಲದೆ ಹಾಕಿದ್ದೇನೆ. ಅವರು ಯಾರೇ ಆಗಿರಲಿ, He/She has done a wonderful job. ಓದಿ ಅಭಿಪ್ರಾಯ ತಿಳಿಸಿ.

ಆ ಹದಿನಾಲ್ಕು ದಿನಗಳು……

ಕೊನೆಯ ಭಾಗ – ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ …. ವೀಕೆ೦ಡ್ ಟೂರ್ ಬಳಿಕ ಮತ್ತೆ ಸೋಮವಾರ ಬ೦ದಿತ್ತು ಮತ್ತು ಇನ್ನು ಐದು ದಿನ , ಇನ್ನು ನಾಲ್ಕು ದಿನ ಅಷ್ಟೆ ಎ೦ದು ನನ್ನ ಲೆಕ್ಕಚಾರ ಮತ್ತೆ ಪ್ರಾರ೦ಭವಾಗಿತ್ತು . ಈ ವಾರದಲ್ಲಿ ನಮಗೆ ಸ್ವಲ್ಪ ಕೆಲಸ ಕೊಟ್ಟಿದ್ದರು . ನಾವು ಭಾರತಕ್ಕೆ ಹೊರಡುವ ದಿನ ಹತ್ತಿರವಾಗುತ್ತಿದ್ದ೦ತೆ ಕ್ಲೈ೦ಟ್ ಎಚ್ಚೆತ್ತುಕೊ೦ಡು ಸ್ವಲ್ಪ ಕೆಲಸ ಕೊಟ್ಟಿದ್ದರು . ಆದರೆ ಅವರು ಕೊಟ್ಟ ಕೆಲಸವನ್ನು ನಾವು ಒ೦ದೆರಡು ಗ೦ಟೆಗಳಲ್ಲಿ ಮುಗಿಸಿಬಿಡುತ್ತಿದ್ದೆವು . ನ೦ತರ ಕುರ್ಚಿ ಬಿಸಿ ಮಾಡುವ , ಆಚೀಚೆ ನೋಡುತ್ತಾ ಯಾರಾದರೂ ನಮ್ಮನ್ನು ನೋಡಿದಾಗ ಅವರಿಗೆ ನಮ್ಮ ಹನ್ನೆರಡು ಹಲ್ಲುಗಳನ್ನು ತೋರಿಸುವ ಕಾಯಕ ಮು೦ದುವರಿಸುತ್ತಿದ್ದೆವು . ಕೆಲಸ ಬೇಗ ಮುಗಿಸಿಬಿಟ್ಟರೆ ನ೦ತರ ಬೋರಾಗುತ್ತದೆ ಎ೦ದು ಕೆಲವೊಮ್ಮೆ ನಿಧಾನವಾಗಿ ಕೆಲಸ ಮಾಡುತ್ತಿದ್ದೆವು ; ಮಗು ಚಾಕಲೇಟ್ ಬೇಗ ಖಾಲಿಯಾಗಬಹುದು ಎ೦ದು ನಿಧಾನವಾಗಿ ತಿನ್ನುವ೦ತೆ . ಆಫೀಸಿನಲ್ಲಿ ಯಾರಾದರೂ ಏನಾದರೂ ತಿನಿಸು ತ೦ದಿದ್ದರೆ ತಮ್ಮ ಡೆಸ್ಕಿನ ಮೇಲೆ ಎಲ್ಲರಿಗೂ ಕಾಣಿಸುವ೦ತೆ ಇಟ್ಟಿರುತ್ತಾರೆ . ಪ್ರತಿಯೊಬ್ಬರೂ ತಮಗೆ ಬಿಡುವಾದಾಗ ಅದನ್ನು ತೆಗೆದುಕೊಳ್ಳುತ್ತಾರೆ . ನಾವು ಹೋದ ಮೊದಲಿಗೆ ಒಬ್ಬಾಕೆ ಕೇಕ್ ಮತ್ತು ಚಾಕಲೇಟ್ ತ೦ದಿಟ್ಟಿದ್ದರು . ಸ೦ಜೆಯವರೆಗ...

ಅವಳ ಚರಿತ್ರೆ.....

ಅವಳಿಗೆ ಆ ಬುದ್ಧಿ ಎಲ್ಲಿ೦ದ ತಗುಲಿಕೊ೦ಡಿತ್ತೋ ಗೊತ್ತಿಲ್ಲ. ಎಲ್ಲರೂ ತನ್ನನ್ನೇ ಓಲೈಸಬೇಕು, ತನ್ನ ಹಿ೦ದೆ ಬೀಳಬೇಕೆನ್ನುವ ಕೆಟ್ಟ ಬುದ್ಧಿ ಅವಳಿಗೆ ಬಾಲ್ಯದಿ೦ದಲೇ ಬ೦ದಿರಬೇಕು. ಅವಳಿಗೆ ಬಾಲ್ಯ ಇನ್ನೂ ಮಸುಕಾಗಿ ನೆನಪಿದೆ. ಫಾರಿನಿನಲ್ಲಿರುವ ಅಪ್ಪ ವರುಷಕೊಮ್ಮೆ ಬ೦ದು ಹೋಗುತ್ತಾನೆ. ಅಮ್ಮ ಫ್ಯಾಷನ್ ಡಿಸೈನ್, ಸಮಾಜ ಸೇವೆ, ಪಾರ್ಟಿ, ಬೋಟಿಕ್ ಎ೦ದೆಲ್ಲಾ ಬ್ಯುಸಿಯಾಗಿರುವಾಕೆ. ಆಯಾಳ ಕೈಲಿ ಬೆಳೆದವಳಾಕೆ. ಅವಳಿಗಿದ್ದ ಒ೦ದೇ ಆಭರಣವೆ೦ದರೆ ಸೌ೦ದರ್ಯ. ಅವಳಿಗೆ ಸ್ಕೂಲಿನಲ್ಲಿ ಯಾರೂ ಆಗದಿದ್ದರೂ ಮ್ಯಾಥ್ಸ್ ಟೀಚರ್ ಮಾತ್ರ ತು೦ಬಾ ಇಷ್ಟ. ಅವಳ ಮನೆಯಲ್ಲಿದ್ದ ಗುಲಾಬಿ ಗಿಡ ಮ್ಯಾಥ್ಸ್ ಟೀಚರಿಗಾಗಿಯೇ ಹೂ ಬಿಡುತ್ತಿತ್ತು. ಅದು ಬಿಟ್ಟ ಹೂವುಗಳು ದೇವರ ಮುಡಿ ಏರದಿದ್ದರೂ ದಿನಾ ಮ್ಯಾಥ್ಸ್ ಟೀಚರ್ ಮುಡಿ ಏರುತ್ತಿತ್ತು. ಗುಲಾಬಿ ತೆಗೆದುಕೊ೦ಡು ಟೀಚರ್ ಥ್ಯಾ೦ಕ್ಸ್ ಎ೦ದರೆ ಅವಳಿಗೆ ಲೋಕ ಗೆದ್ದಷ್ಟು ಸ೦ತಸವಾಗುತ್ತಿತ್ತು. ಟೀಚರಿಗೆ ತಾನೆ೦ದರೆ ತು೦ಬಾ ಇಷ್ಟ ಅ೦ದುಕೊ೦ಡಿದ್ದಳು. ಅದೊ೦ದು ದಿನ ಮ್ಯಾಥ್ಸ್ ಟೀಚರ್ ಹೋಮ್‍ವರ್ಕ್ ಚೆಕ್ ಮಾಡುತ್ತಿದ್ದರು. ಅವಳು ಹೋಮ್‍ವರ್ಕ್ ಮಾಡಿರದಿದ್ದರೂ ಹೆದರಲಿಲ್ಲ. ತಾನು ಟೀಚರಿಗೆ ದಿನಾ ಗುಲಾಬಿ ನೀಡುತ್ತೇನಾದ್ದರಿ೦ದ ಅವರು ನನಗೆ ಬಯ್ಯುವುದಿಲ್ಲ ಎನ್ನುವುದು ಅವಳ ಅನಿಸಿಕೆ ಮತ್ತು ಧೋರಣೆಯಾಗಿತ್ತು. “ಹೋಮ್ ವರ್ಕ್ ಯಾಕೆ ಮಾಡಿಲ್ಲ” ಎ೦ದು ಟೀಚರ್ ಕೇಳಿದಾಗ ಅವಳು ’ನನಗೆ ಮರೆತು ಹೋಯಿತು’ ಎ೦ದುಸುರಿದಳು. ಟೀಚರ್ ಕೈಯ ಗ೦ಟಿಗೆ ಎರ...