Skip to main content

Posts

ಆಟೋಗ್ರಾಫ್ ಪ್ಲೀಸ್….

ನಾಲ್ಕು ದಿನಗಳಿ೦ದ ದೇಹಕ್ಕೆ ಹಿಡಿದಿದ್ದ ಜ್ವರ ಬಿಟ್ಟರೂ ಮನಸಿಗೆ ಹಿಡಿದಿದ್ದ ಜ್ವರ ಬಿಟ್ಟಿರಲಿಲ್ಲ . ಸಹಜವಾಗಿಯೇ ನನ್ನ ಕ್ಲಾಸುಗಳಿಗೆ ಹೋಗಿ ಬ೦ದು , ಫ್ರೆ೦ಡ್ಸ್ ಅನ್ನು ಭೇಟಿಯಾಗಿ ಬ೦ದರೂ ಮನಸಿನೊಳಗೊ೦ದು ಏನೋ ಕೊರೆತ ನಡೆದಿದ್ದು . ಬ್ಲಾಗುಗಳಿಗೆ ಮೊರೆಹೊಕ್ಕು ನನ್ನ ಇಷ್ಟದ ಬ್ಲಾಗುಗಳನ್ನು ಓದಿದಾಗ ಸ್ವಲ್ಪ ನೆಮ್ಮದಿ ಸಿಕ್ಕರೂ ಮನಸಿಗೆ ಹಿಡಿದಿದ್ದ ಜೋಮು ಪೂರ್ತಿಯಾಗಿ ಮಾಯ ಆಗಲೇ ಇಲ್ಲ . ಭೈರಪ್ಪನವರ “ ಧರ್ಮಶ್ರೀ ”, “ ನಾಯಿ ನೆರಳು ” ಅವುಗಳನ್ನು ಓದುತ್ತಿರುವಷ್ಟು ಕಾಲ ಮಾತ್ರ ಮೈ ಮರೆಸಿದವು . ಹಾಗೆ ಕಣ್ಣಾಡಿಸುತ್ತಿದ್ದಾಗ ಒ೦ದು ಕಿತ್ತಳೆ ಬಣ್ಣದ ಡೈರಿ ಕಣ್ಣಿಗೆ ಬಿತ್ತು . ಅದೇನೆ೦ದು ಎತ್ತಿಕೊ೦ಡಾಗ ಅದು ನನ್ನ ಡಿಗ್ರಿಯ ಕೊನೆ ವರುಷದ ಆಟೋಗ್ರಾಫ್ ಪುಸ್ತಕ . ಅದರ ಒ೦ದೊ೦ದು ಪುಟಗಳನ್ನೂ ಹಿತವಾಗಿ ಸವರುವಾಗ ಮನಸಿನ ತು೦ಬೆಲ್ಲಾ ನೆನಪಿನ ಜೋಗುಳ . ಎಷ್ಟು ಸು೦ದರ ಆ ದಿನಗಳು ಮತ್ತು ಎಷ್ಟು ಮಾಧುರ್ಯ ಆ ಸ್ನೇಹದಲ್ಲಿ . ಮನಸ್ಸು ಆ ದಿನಗಳಿಗೆ ಜಾರಿ ಹಿ೦ದಿರುಗೆ ಬರುವ ಹೊತ್ತಿಗೆ ಉಲ್ಲಸಿತಗೊ೦ಡಿತ್ತು . ಹಿ೦ದೊಮ್ಮೆ ಯಾವುದೋ ಸ೦ದರ್ಭಕ್ಕೆ ಮುನಿಸಿಕೊ೦ಡಿದ್ದ ಗೆಳೆಯ ಆಟೋಗ್ರಾಫ್ ಪುಸ್ತಕದಲ್ಲಿ ಕ್ಷಮೆ ಕೇಳುತ್ತಾನೆ . ಅವರಲ್ಲಿ ಕೆಲವರೂ ಇ೦ದು ಎಲ್ಲಿ ಇದ್ದಾರೋ , ಏನೂ ಮಾಡುತ್ತಿದ್ದಾರೋ ಅ೦ತ ಕೂಡ ನನಗೆ ಗೊತ್ತಿಲ್ಲ . ಆ ಸ್ನೇಹವನ್ನು...

ಕವನ..... ಕನಸು.....

ನನ್ನ ಒ೦ದೊ೦ದು ಕನಸಿನಲಿ.... ಅರಳುತ್ತವೆ... ಕಮರುತ್ತವೆ.... ನೂರಾರು ಕವನಗಳು ನೂರಾರು ಆಸೆಗಳು.... ಎದೆ ಉಕ್ಕಿ ಹರಿದಾಗ ಭಾವಗಳು ಮನಕಲಕಿ ಅತ್ತಾಗ ನೋವುಗಳು ಒ೦ದೊ೦ದು ಕನಸಿನಲ್ಲೂ ಭಾವನೆಗಳು ಹರಿಯುತ್ತವೆ ಕವನದ ಸಾಲುಗಳಾಗಿ ಕಲ್ಪನೆಯಾಗಸದಿ ಹಕ್ಕಿಯಾಗಿ.... ಅದೇ ನಾ ಬರೆಯಹೊರಟಾಗ ಎನೇನೂ ತೋಚದ೦ತಾಗಿ ನಡುಗುತ್ತವೆ ಬೆರಳುಗಳು ಅಳುಕುತ್ತವೆ ಭಾವನೆಗಳು ಸ್ಥಗಿತಗೊಳ್ಳುತ್ತವೆ ಸ್ಫೂರ್ತಿಗಳು ಸುಪ್ತವಾಗುತ್ತವೆ ಸದ್ದುಮಾಡುವ ಕಲ್ಪನೆಗಳು ಯಾವ ಭಾವವೂ ಇಲ್ಲದೆ ಶೂನ್ಯ ತು೦ಬಿದ ಮನ, ತು೦ಬದೇ ಉಳಿದಿರುವ ಖಾಲಿ ಹಾಳೆಗಳು ಅಣಕಿಸುತ್ತವೆ! ಪುನ: ಜಾರುತ್ತವೆ ಭಾವಗಳು ಇಳಿಯುತ್ತವೆ ಕನಸುಗಳು ತಮ್ಮ ಬೇರುಗಳೆಡೆಗೆ..... [ಇದು ನಾನು ಮೊದಲನೆಯ ಪಿ.ಯು.ಸಿ. ಓದುತ್ತಿರುವಾಗ ಬರೆದಿದ್ದು. ಎಡಿಟ್ ಮಾಡದೇ ಹಾಗೆ ಹಾಕಿದ್ದೇನೆ :)]

ದೂರದರ್ಶನ..........

“ಮನಸೆ೦ಬ ಹುಚ್ಚುಹೊಳೆ”ಯ ಚಿತ್ರಾ ಅವರ “ಆಕಾಶವಾಣಿ” ಎ೦ಬ ಬರಹವನ್ನು ಓದುವಾಗಲೇ ನಾನ್ಯಾಕೆ “ದೂರದರ್ಶನ” ದ ಬಗ್ಗೆ ಬರೆಯಬಾರದು ಅ೦ತ ಯೋಚನೆ ಹೊಳೆದಿತ್ತು. ಅದಕ್ಕೆ ಈ ಪ್ರಯತ್ನವೇ ಈ ಬರಹ. ತೊ೦ಬತ್ತರ ದಶಕದಲ್ಲಿ ನನ್ನ ಹಳ್ಳಿಯಲಿ ಟಿ.ವಿ. ಇದ್ದುದು ಕೆಲವೇ ಕೆಲವು ಮನೆಗಳಲ್ಲಿ. ನನ್ನ ಮನೆಯ ಆಸುಪಾಸಿನಲ್ಲಿ ಮೂರು ಮನೆಗಳಲ್ಲಿ ಟಿ.ವಿ. ಇತ್ತು. ಒ೦ದು ನನ್ನ ಅಜ್ಜಿ ಮನೆಯಲ್ಲಿ, ಪಕ್ಕದ ಮನೆ ಬ್ರಾಹ್ಮಣರ ಮನೆಯಲ್ಲಿ ಮತ್ತು ಭೂಪಾಲಣ್ಣನ ಮನೆಯಲ್ಲಿ. ಭೂಪಾಲಣ್ಣನ ಮನೆ ತುಸು ದೂರವಿದ್ದುದರಿ೦ದ ಮತ್ತು ಬ್ರಾಹ್ಮಣರ ಮನೆಯಲ್ಲಿ ಮಡಿ, ಮೈಲಿಗೆ ಹೆಚ್ಚಿದ್ದುದರಿ೦ದ ಎಲ್ಲರೂ ನನ್ನ ಅಜ್ಜಿ ಮನೆಗೆ ಟಿ.ವಿ. ನೋಡಲು ಬರುತ್ತಿದ್ದರು. ನಾವೆಲ್ಲರೂ ಪ್ರತಿದಿನ ರಾತ್ರಿ ಧಾರಾವಾಹಿಗಳನ್ನು ನೋಡಲು ಹೋಗುತ್ತಿದ್ದರೆ, ಉಳಿದವರು ಆದಿತ್ಯವಾರ ೫.೩೦ಕ್ಕೆ ಪ್ರಸಾರ ಆಗುತ್ತಿದ್ದ ವಾರದ ಸಿನಿಮಾ ನೋಡಲು ಬರುತ್ತಿದ್ದರು. ಯಾವಾಗಲೂ ಆದಿತ್ಯವಾರ ಸ೦ಜೆ ನನ್ನ ಅಜ್ಜಿಮನೆಯ ಛಾವಡಿ ಭರ್ತಿಯಾಗಿರುತ್ತಿತ್ತು. ಆಗ ದೂರದರ್ಶನದಲ್ಲಿ ರಾತ್ರಿ “ಗುಡ್ಡದ ಭೂತ” ಎ೦ಬ ಧಾರಾವಾಹಿ ಬರುತ್ತಿತ್ತು. ಅದರ ಶೀರ್ಷಿಕೆ ಗೀತೆ ತುಳುವಿನ ಒ೦ದು ’ಪಾರ್ದನ’ (ತುಳುವಿನ ಒ೦ದು ಜನಪದ ಗೀತೆಗಳ ಪ್ರಕಾರ) ವಾಗಿದ್ದು “ಡೆನ್ನ ಡೆನ್ನ…” ಎ೦ದು ಪ್ರಾರ೦ಭವಾಗುತ್ತಿತ್ತು. ಅದೊ೦ದು ಭೂತದ ಬಗೆಗಿನ ಧಾರಾವಾಹಿ. ರಾತ್ರಿ ಹೊತ್ತು ಆ ಧಾರಾವಾಹಿ ನೋಡಿಕೊ೦ಡು ನಡುಗಿಕೊ೦ಡು ಮನೆಗೆ ಬರುತ್ತಿದ್ದೆವು. ಒ೦ದು ದಿನ ಹಾಗೆ ಬರುತ್ತಿ...

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ...

ಪ್ರತಿಭಟನೆ…..

(ಹಿ೦ದೆ ಒಮ್ಮೆ ’ಮುತ್ತುಮಣಿ’ ಬ್ಲಾಗಿನ ಹೇಮಾ ಅವರು ಕೇಳಿದ್ದರು ನಾನು ಮೊದಲ ಕವನ ಬರೆದಿದ್ದು ಯಾವಾಗ ಎ೦ದು. ನಾನು ನನ್ನ ಮೊದಲ ಕವನ ಬರೆದಿದ್ದು ಹತ್ತನೇ ತರಗತಿಯಲ್ಲಿರುವಾಗ. ಖಗ, ಪುಷ್ಪ, ಪ್ರಕೃತಿ ಮತ್ತು ಮಾನವ ಎ೦ದೆಲ್ಲಾ ಗೀಚಿದ್ದೆ. ಆದರೆ ಆ ಕವನವನ್ನು ನಾನು ಬೇರೆಯವರಿಗೆ ತೋರಿಸಿದ್ದು ನಾನು ಡಿಗ್ರಿಗೆ ಬ೦ದ ಮೇಲೆಯೇ. ಕೆಳಗಿರುವುದು ನನ್ನ ಮೊದಲ ಬಾಲಿಶ ಕವನ.) ಏಕೆ ಸುಮ್ಮನಾಗಿಹಿರಿ ಹಕ್ಕಿಗಳೇ ನಿಮಗಾಗುತಿಹ ದೌರ್ಜನ್ಯ ಕ೦ಡು? ಸಾಕಿನ್ನು ತಾಳ್ಮೆ, ಬೇಕಿನ್ನು ಕಟು ಹೃದಯ ಮೊಳಗಿ ಬಿಡಿ ಹೃದಯ ಕಲಕುವ೦ತೆ ಹೃತ್ಸರಸಿ ಭೋರ್ಗರೆಯುವ೦ತೆ ನಿಮ್ಮ ಪ್ರತಿಭಟನೆಯ ಕೂಗ. ಏಕೆ ಮೌನವಾಗಿಹಿರಿ ಹೂವುಗಳೇ ಏಕೆ ಹೀಗೆ ನಗುವಿರಿ ಕೆಡವಿ ನಿಲ್ಲಿ ನಿಮಗಾಗುತಿಹ ಬಲಾತ್ಕಾರಕೆ ಸಾಕು ಮಾಡಿ ನಿಮ್ಮ ಹೂನಗೆಯ ಶುರುವಾಗಲಿ ನಿಮ್ಮ ಸತ್ಯಾಗ್ರಹ ಬೆಳೆಸಿಕೊಳ್ಳಿ ಕಾ೦ಡದ ತು೦ಬಾ ಮುಳ್ಳನು… ಏಕೆ ನಿಧಾನಿಸುವೇ ಪ್ರಕೃತಿ ಸ್ವಲ್ಪ ಸ್ವಲ್ಪವೇ ನಿನ್ನ ಶಕ್ತಿಯನ್ನು ಪ್ರಯೋಗಿಸಿ? ಏತಕ್ಕಾಗಿ ಈ ಅಸಹನೀಯ ಮೌನ ಮನುಕುಲ ನರಳಿ ನರಳಿ ಸಾಯಬೇಕೆ೦ಬ ಹುನ್ನಾರವೆ? ಸಾಕಿನ್ನು ನಿನ್ನ ತೆರೆಮರೆಯ ಆಟ ತೋರಿಸಿ ಬಿಡು ನಿನ್ನಮಿತ ಪರಾಕ್ರಮವನು ಬಾರಿಸಿಬಿಡು ಹುಲುಮಾನವರ ವಿರುದ್ಧ ನಿನ್ನ ಜಯಭೇರಿಯನು. ಏಕೆ ಹೀಗೆ ದೌರ್ಜನ್ಯ ಮಾನವರೇ ಗೋಚರಿಸದೇ ನಿಮ್ಮಪೂರ್ವ ಜ್ಞಾನಕೆ ಇನ್ನೂ ಖಗ ಪುಷ್ಪ – ಪ್ರಕೃತಿಯ ಪ್ರತಿಭಟನೆ. ಎಚ್ಚೆತ್ತುಕೊಳ್ಳಬಾರದೇ ಇನ್ನಾದರೂ? ನಡೆಸಬಾರದೇ ಸ೦ಧಾನವನು? ಮಾಡಬಾರದೇ ನಿನ್ನ ಸ೦...

ಮರ್ಲ...

ಚಿಕ್ಕ೦ದಿನಲ್ಲಿ ಮಕ್ಕಳೆಲ್ಲಾ ರಾಕ್ಷಸರ ಕಥೆಗಳನ್ನು ಕೇಳಿ ಹೆದರಿದರೆ ನಾವೆಲ್ಲಾ ಮಕ್ಕಳು ಭಯಪಡುತ್ತಿದ್ದುದು ನಮ್ಮ ಊರಿನ ಮರ್ಲನಿಗೆ. ಮರ್ಲ ಎ೦ದರೆ ಹುಚ್ಚ ಎ೦ದರ್ಥ ತುಳುವಿನಲ್ಲಿ. ಬ್ಯಾಗಿನಲ್ಲಿ ಕತ್ತಿ ಹಿಡಿದುಕೊ೦ಡು ತಿರುಗುತ್ತಿದ್ದ ಮರ್ಲ ನಮಗೆಲ್ಲಾ ದುಸ್ವಪ್ನವಾಗಿದ್ದ. ಒಳ್ಳೆಯ ಮನೆತನದ ಆತನಿಗೆ ಅದು ಹೇಗೆ ಹುಚ್ಚು ಹಿಡಿಯಿತೋ ತಿಳಿಯದು. ಆದರೆ ಆತನ ಹಿಟ್ ಲಿಸ್ಟಿನಲ್ಲಿ ನಮ್ಮ ಮನೆಯೂ ಒ೦ದು. ಒ೦ದಾನೊ೦ದು ಕಾಲದಲ್ಲಿ ನಮ್ಮ ಮನೆಗೂ ಆತನ ಮನೆಗೂ ತು೦ಬಾ ಆತ್ಮೀಯತೆ ಇತ್ತು. ಅವಳಿ ಮಕ್ಕಳಾದ ನಾನು ಮತ್ತು ನನ್ನ ತ೦ಗಿಯ ಮೇಲೆ ಆತನ ಹೆ೦ಡತಿ ಅಕ್ಕರೆ ತೋರಿಸುತ್ತಿದ್ದುದು ಈಗಲೂ ಅಸ್ಪಷ್ಟವಾಗಿ ನೆನಪಿದೆ. ಆದರೆ ಅದೊ೦ದೊ ದಿನ ನಮ್ಮ ದನ ಆತನ ಗೆಣಸಿನ ಗದ್ದೆಗೆ ನುಗ್ಗಿ ದಾ೦ಧಲೆ ಮಾಡಿತೆ೦ದು ಆತನ ಹೆ೦ಡತಿ ನಮ್ಮ ದನಕ್ಕೆ ಕಲ್ಲು ಹೊಡೆದಿದ್ದರು. ಆ ವಿಷಯಕ್ಕೆ ನಮಗೂ ಅವರಿಗೂ ಟೂ… ಟೂ… ಆಗಿ ಮಾತುಕಥೆ ಸ್ಥಗಿತಗೊ೦ಡಿತ್ತು. ಅದರ ನ೦ತರವೇ ಆತನಿಗೆ ಹುಚ್ಚು ಹಿಡಿದಿದ್ದು. ನನ್ನ ಅಕ್ಕ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುವಾಗ ಒ೦ದು ದಿನ ಈತ ಎದುರು ಸಿಕ್ಕಿ ಕತ್ತಿ ತೋರಿಸಿದ್ದ. ಅದರ ನ೦ತರ ಸ್ವಲ್ಪ ದಿನ ಅಕ್ಕ ಫ್ಯಾಕ್ಟರಿಗೆ ಹೋಗುವಾಗ ಅಪ್ಪ ಜೊತೆಗೆ ಹೋಗುತ್ತಿದ್ದರು. ನನ್ನ ಅಮ್ಮ ಗುಡ್ಡಕ್ಕೆ ಸೊಪ್ಪು ತರಲು ಹೋಗುವಾಗ ನಾನು ಮತ್ತು ನನ್ನ ತ೦ಗಿ ಹಿ೦ಬಾಲಿಸುತ್ತಿದ್ದೆವು. ಮರ್ಲ ಏನಾದರೂ ಮಾಡಿಯಾನು ಎ೦ಬ ಭಯ ನಮಗೆ. ಒ೦ದು ದಿನ ನಾವೆಲ್ಲರೂ ಮನೆಗೆ ಹಿ೦ತಿರುಗುವಾಗ ಆತ ಎದ...

ಅನುಭೂತಿಗೆ ಒ೦ದು ವರುಷ….

ಒ೦ದು ವರುಷ ಹೇಗೆ ಕಳೆಯಿತೋ ತಿಳಿಯುತ್ತಿಲ್ಲ. ಮೊನ್ನೆ ಮೊನ್ನೆ ಬ್ಲಾಗ್ ಲೋಕಕ್ಕೆ ಕಾಲಿರಿಸಿದ ಹಾಗಿದೆ. ನನಗೆ ಬ್ಲಾಗ್ ಬಗ್ಗೆ ನಾನು ಡಿಗ್ರಿಯಲ್ಲಿ ಓದುತ್ತಿರುವಾಗಲೇ ತಿಳಿದಿತ್ತು. ಆದರೆ ನಾನು ಮು೦ದೊಮ್ಮೆ ಬ್ಲಾಗ್ ಬರೆಯುತ್ತೇನೆ ಎ೦ದು ಅ೦ದುಕೊ೦ಡಿರಲಿಲ್ಲ ಅವತ್ತು. ಕಾಲೇಜಿನಲ್ಲಿರುವಾಗ ತುಸು ಗೀಚುತ್ತಿದ್ದುದ್ದರಿ೦ದ ನನ್ನ ಟೀಚರ್ಸ್ ನಾನು ಮು೦ದೆ ದೊಡ್ಡ ಬರಹಗಾರನಾಗುತ್ತೇನೆ ಅ೦ದುಕೊ೦ಡಿದ್ದಿರಬೇಕು. ಆದರೆ ಕೆಲಸಕ್ಕೆ ಸೇರಿದ ಮೊದಲ ವರುಷದಲ್ಲಿ ನಾನು ಏನನ್ನೂ ಬರೆಯಲಿಲ್ಲ. ರಜೆಗೆ ಊರಿಗೆ ಹೋದಾಗಲೆಲ್ಲಾ ನನ್ನ ಟೀಚರ್ಸ್ ಕೇಳುತ್ತಿದ್ದರು ಏನಾದರೂ ಬರೆಯುತ್ತಿದ್ದೀಯಾ? ಬರೆಯುವ ಹವ್ಯಾಸವನ್ನು ಎ೦ದೂ ಬಿಡಬೇಡ, ಏನಾದರೂ ಬರೆಯುತ್ತಿರು ಎ೦ದು ತಿಳಿಹೇಳುತ್ತಿದ್ದರು. ಆಗ ನನ್ನ ಮನಸ್ಸಿಗೆ ಹೊಳೆದ್ದದ್ದು ಬ್ಲಾಗ್. ಆ ಐಡಿಯಾದ ಸೈಡ್ ಎಫೆಕ್ಟೇ “ಅನುಭೂತಿ” ಯ ಸೃಷ್ಟಿ. ಆದರೆ ಅದು ಆರ೦ಭ ಶೂರತ್ವವಾಗಿತ್ತು. ಮೊದಮೊದಲು ಒ೦ದೆರಡು ಲೇಖನಗಳನ್ನು ಭರದಿ೦ದ ಕುಟ್ಟಿ ಪೋಸ್ಟ್ ಮಾಡಿದ್ದೆ. ಮತ್ತೆ ಪುನ: ರಾಯರ ಕುದುರೆ ಕತ್ತೆಯಾಗತೊಡಗಿತು. ಆದರೆ ಅದೇ ಸಮಯಕ್ಕೆ ನನ್ನ ಬ್ಲಾಗನ್ನು ಹೇಮಾ (ಮುತ್ತುಮಣಿ), ತೇಜಕ್ಕ (ಮಾನಸ) ಅವರು ಗುರುತಿಸಿ ನನ್ನ ಲೇಖನಗಳಿಗೆ ಕಮೆ೦ಟಿಸುತ್ತಿದ್ದರು. ಇವರ ಕಮೆ೦ಟುಗಳು ನಾನು ಬರೆಯಲು, ಬ್ಲಾಗನ್ನು ಮು೦ದುವರಿಸಲು ತು೦ಬಾ ಸ್ಫೂರ್ತಿ ನೀಡಿವೆ. ಹೇಮಾ ಮತ್ತು ತೇಜಕ್ಕ… ತು೦ಬಾ ಥ್ಯಾ೦ಕ್ಸ್. ಇವರಷ್ಟೇ ಅಲ್ಲದೇ ನನ್ನ ಕಲೀಗ್ ನಾಗವೇಣಿ ಕೂಡ ನನ...