Skip to main content

ಕವನ..... ಕನಸು.....

ನನ್ನ ಒ೦ದೊ೦ದು ಕನಸಿನಲಿ....
ಅರಳುತ್ತವೆ... ಕಮರುತ್ತವೆ....
ನೂರಾರು ಕವನಗಳು
ನೂರಾರು ಆಸೆಗಳು....
ಎದೆ ಉಕ್ಕಿ ಹರಿದಾಗ ಭಾವಗಳು
ಮನಕಲಕಿ ಅತ್ತಾಗ ನೋವುಗಳು
ಒ೦ದೊ೦ದು ಕನಸಿನಲ್ಲೂ
ಭಾವನೆಗಳು ಹರಿಯುತ್ತವೆ
ಕವನದ ಸಾಲುಗಳಾಗಿ
ಕಲ್ಪನೆಯಾಗಸದಿ ಹಕ್ಕಿಯಾಗಿ....
ಅದೇ ನಾ ಬರೆಯಹೊರಟಾಗ
ಎನೇನೂ ತೋಚದ೦ತಾಗಿ
ನಡುಗುತ್ತವೆ ಬೆರಳುಗಳು
ಅಳುಕುತ್ತವೆ ಭಾವನೆಗಳು
ಸ್ಥಗಿತಗೊಳ್ಳುತ್ತವೆ ಸ್ಫೂರ್ತಿಗಳು
ಸುಪ್ತವಾಗುತ್ತವೆ ಸದ್ದುಮಾಡುವ ಕಲ್ಪನೆಗಳು
ಯಾವ ಭಾವವೂ ಇಲ್ಲದೆ ಶೂನ್ಯ ತು೦ಬಿದ ಮನ,
ತು೦ಬದೇ ಉಳಿದಿರುವ ಖಾಲಿ ಹಾಳೆಗಳು ಅಣಕಿಸುತ್ತವೆ!
ಪುನ: ಜಾರುತ್ತವೆ ಭಾವಗಳು
ಇಳಿಯುತ್ತವೆ ಕನಸುಗಳು
ತಮ್ಮ ಬೇರುಗಳೆಡೆಗೆ.....

[ಇದು ನಾನು ಮೊದಲನೆಯ ಪಿ.ಯು.ಸಿ. ಓದುತ್ತಿರುವಾಗ ಬರೆದಿದ್ದು. ಎಡಿಟ್ ಮಾಡದೇ ಹಾಗೆ ಹಾಕಿದ್ದೇನೆ :)]

Comments

ಮನಸು said…
ಚೆನ್ನಾಗಿದೆ ಪಿ.ಯು.ಸಿ ಯಲ್ಲೇ ಇಷ್ಟು ಚೆಂದ ಬರೆದಿದ್ದೀರಿ. ಸಾಗಲಿ ಕವನದ ಪಯಣ
shivu.k said…
ಸುಧೇಶ್,

ಭಾವನೆಗಳ ಬಗ್ಗೆ ಪಿ ಯು ಸಿ ಯಲ್ಲೇ ಇಷ್ಟು ಚೆನ್ನಾಗಿ ಕವನ ಬರೆದಿದ್ದೀರಲ್ಲ..
ಸುಧೇಶ್ ಸೊಗಸಾದ ಕವನ. ಧನ್ಯವಾದಗಳು..
ನನ್ನ ಒ೦ದೊ೦ದು ಕನಸಿನಲಿ....
ಅರಳುತ್ತವೆ... ಕಮರುತ್ತವೆ....
ನೂರಾರು ಕವನಗಳು
ನೂರಾರು ಆಸೆಗಳು...!
ಸುಧೇಶ್..ಈಗಲೂ ಬದುಕಿನ 'ಹೆಜ್ಜೆ'ಗಳೇ ಕವನವಾಗಬಹುದು..ಬರೀತಾ ಇರಿ.
old is Gold ಅಲ್ವಾ?
-ಧರಿತ್ರಿ
Geetha said…
ಸುಧೇಶ್,
ಚೆನ್ನಾಗಿದೆ ಹಳೆಯ ಕವನ. ಈಗ ನಿಮ್ಮ ಕವನಗಳ ಸ್ಥಿತಿ ಹಾಗಿಲ್ಲವೆಂದುಕೊಳ್ಳುವೆ

ಹಾಗೇನಾದರು ಇದ್ದರೆ ಹಾಳೆ ಹಿಡಿಯದೆ ಕನಸಿಂದ ಸೀದ ಕೀಲಿಮಣೆಗಿಳಿಸಿಬಿಡಿ ನಿಮ್ಮ ಕವನಗಳನ್ನು ... ನಿಮ್ಮ ಓದುಗರಿಗಾಗಿ ;)
ಕವನ ತುಂಬಾ ಹಿಡಿಸಿತು ಸುಧೇಶ್!

ಹೀಗೆ ಬರೆಯುತ್ತಿರಿ, ಸಾಗುತ್ತಿರಲಿ
ಪದ್ಯ, ಗದ್ಯ, ಲಲಿತ ಪ್ರಬಂಧ,
ಕಾವ್ಯ, ಕನಸು, ಪ್ರವಾಸ ಕಥನ
ARUN MANIPAL said…
abba PUC nalli isht chennag bardidira..great..nice...
Veni said…
Nice poem, why r u not posting any new write ups, posting only the old ones, dont u have any new theme or time to write?
Ittigecement said…
ಸುಧೇಶ್....

ಭಾವಗಳನ್ನು
ಶಬ್ಧಗಳಲ್ಲಿ
ಹೇಳುವದು ಕಷ್ಟ ಅಂತ..
ಚಂದದ ಕವನವನ್ನೇ ಬರೆದಿದ್ದೀರಲ್ಲ....

ನನಗಂತೂ ಬಹಳ ಇಷ್ಟವಾಯಿತು....

ಅಭಿನಂದನೆಗಳು..
ಸುಂದರವಾದ ಕವಿತೆಗೆ..
This comment has been removed by the author.
Sudesh,

Its a difficult task for me to understand the poems in the first place as words are used very trickily in the poems by the poets.

What i was able to make out from this, is that you wrote about the theme "poems" and the things that one writes, tries to put up in poems.

It was good i guess... :-P

Other things,

Enough of old bites,Come up with something new.

BTW, you dint consider my suggestion of increasing the font size.It was/is upto you after all.

If you happen to write any big post, which generally takes time for me to read; i may not read it for the same reason.

Cheers
Mahesh
Unknown said…
ಚೆನ್ನಾಗಿದೆ...
ಏನಿದು ಸುಧೇಶ್,
ಆಗಿನ ಕಾಲದಲ್ಲಿ ಎಷ್ಟೆಲ್ಲಾ ಯೋಚನೆ, ಕನಸು, ಕವನ, ಭಾವನೆ!!!!

very good!
ಪ್ರತಿಕ್ರಿಯಿಸಿದ ಎಲ್ಲರಿಗೂ ತು೦ಬಾ ಧನ್ಯವಾದಗಳು... ನಿಮ್ಮ ನಲ್ಮೆಯ ನುಡಿಗಳೇ ನನ್ನ ಕು೦ಟುತ್ತಾ ಸಾಗಿರುವ ಬರವಣಿಗೆಗೆ ಸ್ಫೂರ್ತಿ:)

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು.

ಪಾರಿವಾಳ ಮತ್ತು ಹುಟ್ಟಿದ ಹಬ್ಬ...

ಮು೦ಬಯಿಗೆ ಬ೦ದು ಆಗಲೇ ಎ೦ಟು ತಿಂಗಳುಗಳು ಕಳೆದಿದ್ದವು . ನಾವು ವಾಸಿಸುತ್ತಿದ್ದ ಮನೆಯಲ್ಲಿ ಹಲ್ಲಿಗಳು ತಮ್ಮ ಅಸ್ತಿತ್ವವನ್ನು ಆಗಾಗಲೇ ಪ್ರತಿಷ್ಟಾಪಿಸಿಕೊಂಡು ಟೆಕ್ನಿಕಲಿ ನಮ್ಮದೂ ಕೂಡ ಒ೦ದು ಮನೆ ಎ೦ದು ತೋರಿಸಿಕೊಟ್ಟಿದ್ದವು. ಹೀಗಿರುವ ನಮ್ಮ ಮನೆಗೆ ಹೊಸ ಅತಿಥಿಗಳು ಬರುವರೆಂಬ ಕಲ್ಪನೆ ನಮಗಿರಲಿಲ್ಲ. ಮು೦ಬಯಿಗೆ ಹೋದ ಹೊಸದರಲ್ಲಿ ಆಶ್ಚರ್ಯ ಆಗುತ್ತಿದ್ದುದ್ದು ಅಲ್ಲಿರುವ ಪಾರಿವಾಳಗಳ ಸ೦ಖ್ಯೆ ಕಂಡು. ಅಲ್ಲಿ ಎಲ್ಲಿ ನೋಡಿದರೂ ಪಾರಿವಾಳ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಕಾಗೆಗಳು ಕಾಣಿಸುವ ಹಾಗೆ. ಊರಿನಿಂದ ಮು೦ಬಯಿಯಲ್ಲಿ ಒಂದು ವಾರ ಇರಲು  ಬಂದ ನನ್ನ ಅಕ್ಕ ಕೂಡ ಪ್ರತಿದಿನ ಹೇಳುತ್ತಿದ್ದಳು "ಎ೦ತ ಮಾರಾಯ. ಇಲ್ಲಿ ಬಂದಾಗಿನಿಂದ ಕಾಗೆಗಳೇ ಕಾಣಿಸಲು ಸಿಗುತ್ತಿಲ್ಲ. ಊರಲ್ಲಿದ್ದರೆ ಕಾಗೆಗಳನ್ನು ಓಡಿಸಿ ಸಾಕಾಗುತ್ತಿತ್ತು. ಇಲ್ಲಿ ಬಾರೆ ಪಾರಿವಾಳಗಳೇ ಕಾಣಿಸುತ್ತವೆ" ಎ೦ದು ಕಾಗೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು. ಒ೦ದು ದಿನ ಮನೆ ಗುಡಿಸುವಾಗ ನೋಡುತ್ತೇನೆ ನಮ್ಮ ಬಾಲ್ಕನಿಯಲ್ಲಿ ಕಸ ಕಡ್ಡಿಗಳನ್ನು ಹೇರಿಕೊಂಡು ಒ೦ದು ಪಾರಿವಾಳ ಗೂಡು ಕಟ್ಟಲು ಶುರು ಮಾಡಿದೆ. ನನ್ನ ರೂಮಿಯನ್ನು ಕರೆದು ತೋರಿಸಿದೆ. "ನೋಡು ನಮ್ಮ ಮನೆಗೆ ಹೊಸ ಅತಿಥಿಗಳು  ಬಂದಿವೆ". ಅವನು ಗೂಡಿನ ಸಮೇತ ಪಾರಿವಾಳವನ್ನು ಓಡಿಸೋಣ ಅ೦ದಾಗ ನಾನು "ಪಾಪ ಇರಲಿ ಬಿಡು' ಎ೦ದು ಬಾಯಿ ಮುಚ್ಚಿಸಿದೆ. ಆಮೇಲೆ ಒಂದೆರಡು ದಿನದಲ್ಲಿ ಗೂಡು ಕಟ್ಟಿ ಮು

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ