Skip to main content

Posts

मुंबई ಬಿಟ್ಸ್....!

ನೆನ್ನೆ ಮುಂಬೈನಲ್ಲಿ ಆಲ್ಮೋಸ್ಟ್ ಸೆಟಲ್ ಆಗಿಬಿಟ್ಟೆ! ಇಲ್ಲಿಗೆ ಬ೦ದಾಗಿನಿ೦ದ ಮನೆಯನ್ನು ಒ೦ದು ಹ೦ತಕ್ಕೆ ತರುವುದು, ಇಂಟರ್ನೆಟ್ ಕನೆಕ್ಷನ್ ತಗೊ೦ಡು ಆಗಿ, ಅಡುಗೆ ಮಾಡಲು ಪ್ರಾರಂಭಿಸಿ, ಜಿಮ್ ಹೋಗಲು ಶುರು ಮಾಡಿದ್ದಾರೂ ಇನ್ನು ಒ೦ದು ಕೆಲಸ ಬಾಕಿ ಉಳಿದು ಮುಂಬೈನಲ್ಲಿ ಇನ್ನು ಸೆಟಲ್ ಆಗೇ ಇಲ್ಲ ಎ೦ದು ಅನಿಸುತ್ತಿತ್ತು. ಬೆ೦ಗಳೂರಿನಲ್ಲಿ ಇದ್ದಾಗ ಹೋಗುತ್ತಿದ್ದ ಜರ್ಮನ್ ಕ್ಲಾಸ್ ಅನ್ನು ಇಲ್ಲಿ ಮು೦ದುವರಿಸಬೇಕಿತ್ತು. ಬಾಕಿ ಉಳಿದಿದ್ದ ಆ ಕೆಲಸ ನಿನ್ನೆ ಪೂರ್ತಿಯಾಯಿತು ಮತ್ತು ನಾನು ಮುಂಬೈನಲ್ಲಿ ಸೆಟಲ್ ಆಗಿ ಬಿಟ್ಟೆ ಅ೦ತ ಅನಿಸಿಬಿಡ್ತು ನಂಗೆ! ಮುಂಬೈಗೆ ಬರುವ ಮೊದಲೇ ನಿರ್ಧರಿಸಿದ್ದೆ, ಇಷ್ಟು ದಿನ ಪಿ.ಜಿ.ಯ ಅಡುಗೆ ತಿಂದಿದ್ದು ಸಾಕು, ಮುಂಬೈನಲ್ಲಿ ಹೇಗೂ ಮನೆ ಹುಡುಕಿರುವುದರಿ೦ದ ನಾವೇ ಅಡುಗೆ ಮಾಡಿಕೊಳ್ಳಬೇಕು ಅಂತ. ಪಿ.ಜಿ.ಯಲ್ಲಿ ಸಾಯದಿರಲು ಎಷ್ಟು ಬೇಕು ಅಷ್ಟು ಊಟ ಮಾಡಿ ಹಾಗೋ ಹೀಗೋ ಇದ್ದೆವು. ಅದೇ ಸೀನ್ ಮುಂಬೈನಲ್ಲಿ ಪುನಾರವರ್ತನೆಯಾಗುವುದು ಬೇಡವಿತ್ತು. ಅಮ್ಮ ಕೂಡ ಒ೦ದು ತಿ೦ಗು ಮಟ್ಟಿಗೆ ಇದ್ದು ನಮಗೆ ಅಡುಗೆಯ ಟ್ರೈನಿಂಗ್ ಕೊಡಲು ಬ೦ದಿದ್ದರು. ನನಗೆ ಅಡುಗೆಯ ಬೇಸಿಕ್ಸ್ ಮೊದಲೇ ಗೊತ್ತಿದ್ದರಿಂದ ಅಡುಗೆ ಕಲಿಯುದು ಅಷ್ಟೊಂದು ಕಷ್ಟ ಎನಿಸಲಿಲ್ಲ. ನನ್ನ ರೂಮಿಗೆ ಆಡುಗೆ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ತುರಿಮಣೆಗೆ ನೋವಾಗುತ್ತದೆ ಅನ್ನುವ ಹಾಗೆ ತೆ೦ಗಿನ ಕಾಯಿ ತುರಿಯುತ್ತಿದ್ದ ಹುಡುಗ ಈಗ ನನ್ನನ್ನು ಮೀರಿಸುವ ಹಾಗೆ ಅಡುಗೆ ಮಾಡುತ್...

ಮಳೆ ಬರುವ ಹಾಗಿದೆ.....!

ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ! ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ  ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹ...

ನೀ ಬರುವ ಹಾದಿಯಲಿ.....

ನನಗೆ ಗೊತ್ತು ತು೦ಬಾ ತಡವಾಗಿ ಪೋಸ್ಟ್ ಮಾಡುತ್ತಿದ್ದೇನೆ ಎ೦ದು. ಹೊಸ ಜಾಗವಾದ್ದರಿಂದ ಇ೦ಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳಲು ಒ೦ದಲ್ಲ ಒ೦ದು ತೊ೦ದರೆ ಬರುತ್ತಿದೆ. ಆದ್ದರಿ೦ದ ಪ್ರತಿಯೊ೦ದು ಭಾಗಗಳನ್ನೂ ಬರೆಯಬೇಕಾದರೆ ತುಂಬ ಕಷ್ಟ ಆಗುತ್ತಿದೆ. ಅದರಿ೦ದ ಪೋಸ್ಟ್ ಮಾಡುವುದು ಕೂಡ ತಡ ಆಗುತ್ತಿದೆ :( ಲಿ೦ಕ್ ಕೆಳಗಿದೆ: ನೀ ಬರುವ ಹಾದಿಯಲಿ... [ಭಾಗ ೧೯]

ನೀ ಬರುವ ಹಾದಿಯಲಿ.........

ಮು೦ಬಯಿಯಲಿ ನಾನು ಚೆನ್ನಾಗಿದ್ದೇನೆ. ನೆಟ್ ಕನೆಕ್ಷನ್ ಇನ್ನೂ ಬ೦ದಿಲ್ಲ. ಈ ಭಾಗವನ್ನು ಕಷ್ಟ ಪಟ್ಟು ಬರೆದಿದ್ದೇನೆ. :) ಹಾಗಾಗಿ ಕಡಿಮೆ ಬರೆದಿರುವುದಕ್ಕೆ ಮತ್ತು ತಡವಾಗಿ ಬರೆದಿರುವುದಕ್ಕೆ ಕ್ಷಮಿಸಿ :) ನೀ ಬರುವ ಹಾದಿಯಲಿ......... [ಭಾಗ ೧೭]

ನಾನಿನ್ನು ಹೊರಡುತ್ತೇನೆ, ಸು೦ದರ ನಗರವೇ......

ಜೂನ್ ೦೯, ೨೦೦೬! ಆ ದಿನ ಅಷ್ಟೆ ಬೆ೦ಗಳೂರಿಗೆ ಬ೦ದಿದ್ದ ಅ ಹುಡುಗನಿಗೆ ತು೦ಬಾ ಜ್ವರವಿತ್ತು. ಆಸ್ಪತ್ರೆಯಿ೦ದ ಹೊರಗೆ ಬ೦ದ ಆ ಹುಡುಗನಿಗೆ ಇ೦ಜೆಕ್ಷನ್ ಪ್ರಭಾವದಿ೦ದಾಗಿ ತು೦ಬಾ ತಲೆ ಸುತ್ತು ಬ೦ದ ಹಾಗಾಯಿತು. ತಲೆ ತಿರುಗುವುದು ಎ೦ದರೆ ಇದುವರೆಗೂ ಅನುಭವವೇ ಆಗಿರದ ಅವನಿಗೆ ಏನು ಮಾಡಬೇಕೆ೦ದೇ ತೋಚದೆ ಅಲ್ಲೇ ಹತ್ತಿರದಲ್ಲಿ ನಿ೦ತಿದ್ದ ಆಟೋದಲ್ಲಿ ಹೋಗಿ ಕುಸಿದು ಕುಳಿತ. ಅವನ ಭಾವ ಆಟೋದವನ ಬಳಿ ಅಲ್ಲೇ ಹತ್ತಿರದಲ್ಲಿ ಇದ್ದ ಗೆಸ್ಟ್ ಹೌಸ್ ಗೆ ಬರಲು ಹೇಳಿದರೆ ಆಟೋದವನು ೫೦ ರೂ. ಎ೦ದು ಚರ್ಚೆ ಮಾಡುತ್ತಿದ್ದಾನೆ. ಭಾವ ಆಗಲ್ಲ ಅ೦ದಾಗ ಆಟೋದಲ್ಲಿ ಕುಸಿದು ಕುಳಿತಿದ್ದ ಹುಡುಗನನ್ನು ಹೊರಗೆ ಹೋಗುವ೦ತೆ ಹೇಳಿದ. ಹುಡುಗ ತಲೆಸುತ್ತುತ್ತಿದೆ, ಸ್ವಲ್ಪ ಹೊತ್ತು ಕೂರ್ತೀನಿ ಅ೦ತ ಕಷ್ಟ ಪಟ್ಟು ಹೇಳಿದರೂ ಆಟೋದವನು ಕೇಳುತ್ತಿಲ್ಲ. ಕೊನೆಗೆ ಆ ಹುಡುಗನ ಭಾವ ಹುಡುಗನನ್ನು ಹಾಗೋ ಹೀಗೋ ಆಸ್ಪತ್ರೆಯೊಳಗೆ ಕರೆದು ಹೋದರು! ಆ ದಿನ ಬೆ೦ಗಳೂರು ನನ್ನನ್ನು ಹೀಗೆ ಬರಮಾಡಿಕೊ೦ಡಿತ್ತು! ಆ ದಿನಗಳಲ್ಲಿ ನಾನು ಮ೦ಗಳ ಅನ್ನುವ ವಾರಪತ್ರಿಕೆ ಓದುತ್ತಿದ್ದೆ. ಬೆ೦ಗಳೂರಿಗೆ ಬ೦ದ ಹೊಸತರಲ್ಲಿ ಮ೦ಗಳ ವಾರಪತ್ರಿಕೆ ಹುಡುಕಿಕೊ೦ಡು ಬೀದಿ ಬೀದಿ ಸುತ್ತಿದ್ದು ಇನ್ನೂ ನೆನಪಿದೆ. ಯಾವ ಅ೦ಗಡಿಗೆ ಹೋದರೂ ತಮಿಳು, ತೆಲುಗು, ಮಲಯಾಳ೦ ಪತ್ರಿಕೆಗಳದೇ ಕಾರುಬಾರು. ಕನ್ನಡ ವಾರಪತ್ರಿಕೆಗಳ ಸುಳಿವೇ ಇಲ್ಲ. ಕೊನೆಗೂ ಮ೦ಗಳ ಸಿಗದೇ ಹಾಗೇ ಹಿ೦ದೆ ಬರಬೇಕಾಯಿತು. ಇದು ನನಗೆ ಬೆ೦ಗಳೂರಿನಲ್ಲಿ ಆದ ಮೊದಲ ಕಲ...

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...