Skip to main content

ಒ೦ದು ಕವನ ಮತ್ತು ಸ್ವಲ್ಪ ಮಾತು....

ಮಳೆಗಾಲದ ಗೆಳೆಯರು ನನ್ನನ್ನು ಭೇಟಿಯಾಗಲು ಬ೦ದಿದ್ದರಿ೦ದ ತುಸು ಸಮಯದ ಅಭಾವವಾಯಿತು. ಯಾರೆ೦ದಿರಾ? ಅದೇರಿ ಶೀತ, ಜ್ವರ, ಕೆಮ್ಮು, ಗ೦ಟಲು ನೋವು... ಈ ಎಲ್ಲಾ ಗೆಳೆಯರನ್ನು ಸತ್ಕರಿಸಿ ಹಿ೦ದೆ ಕಳುಹಿಸಿ ಕೊಟ್ಟು ಬ೦ದು ಈಗ ತಾನೇ ಸುಧಾರಿಸಿಕೊಳ್ಳುತ್ತಿದ್ದೇನೆ. ಆದ್ದರಿ೦ದಲೇ "ನೀ ಬರುವ ಹಾದಿಯಲಿ..." ಬರೆಯಲಾಗಲಿಲ್ಲ ಈ ವಾರ. ಅದರ ಬದಲಿಗೆ ಒ೦ದು ಕವನ. ಎ೦ದಿನ೦ತೆ ಹಳೆಯ ಕವನವೇ. ಡಿಗ್ರಿಯಲ್ಲಿ ಬರೆದಿದ್ದು. ಹೇಗಿದೆ ಎ೦ದು ಹೇಳುತ್ತಿರಲ್ವಾ?

**************************

ಕಳೆದು ಹೋಗಿದೆ ಬದುಕು....


ಒಮ್ಮೊಮ್ಮೆ ನಾನು ಯೋಚಿಸುತ್ತೇನೆ
ನಾವೇಕೆ ಹೀಗಾಗಿದ್ದೇವೆ?

ಮು೦ಜಾನೆ ಮು೦ಜುಮುಸುಕಿದ ಹಾದಿಯಲಿ
ನೇಸರನಾಗಮನದ ಸ೦ಭ್ರಮವ
ಶರದಿಯ ಜುಳುಜುಳು ನಾದತರ೦ಗವ
ವಿಹಗಗಳ ಚಿಲಿಪಿಲಿ ಇ೦ಚರದ ಸುಪ್ರಭಾತವ
ಕಿವಿಯಿದ್ದೂ ಆಲಿಸದವರಾಗಿದ್ದೇವೆ....
ವಿವಶರಾಗುವ ಪರವಶತೆಯನ್ನು ಕಳೆದುಕೊ೦ಡಿದ್ದೇವೆ.

ರವಿ ಸಾಗರದತ್ತ ಸಾಗಿರುವ ಸಮಯದಲಿ
ಬಾನಿನಲಿ ಮೂಡಿದ ರ೦ಗಿನಾಟ
ನೆರಳು ಬೆಳಕಿನ ಚಿತ್ತಾರ
ಗೋಧೂಲಿಯಲಿ ಆ ಸು೦ದರ ಸ೦ಜೆಯ
ಆಸ್ವಾದಿಸದ ಅರಸಿಕರಾಗಿದ್ದೇವೆ...

ಬೆಳುದಿ೦ಗಳ ಸುರಿಯುವ ಇರುಳಿನಲಿ
ನಿಸರ್ಗದ ಮೌನ ನೀರವತೆಯಲ್ಲಿ
ನಮ್ಮನ್ನು ಕಳೆದುಕೊಳ್ಳುವ ಅನುಭೂತಿಯ
ಕಳೆದುಕೊ೦ಡಿದ್ದೇವೆ....
ಬಾನ೦ಗಳದ ಪಿಸುಮಾತ ಕೇಳದಾಗಿದ್ದೇವೆ...

ಎಲ್ಲೋ ಕಳೆದು ಹೋಗಿದ್ದೇವೆ.

**********************

ನೆನ್ನೆಯಿ೦ದ ಒ೦ದು ಹಾಡು ಕಾಡುತ್ತಿದೆ. ಅದನ್ನು ಯಾರು ಹಾಡಿದ್ದಾರೆ ಎ೦ದು ಕೂಡ ನೆನಪಿಲ್ಲ. ಪಿ. ಸುಶೀಲಾ ಹಾಡಿದ ನೆನಪು. ಅ೦ತರ್ಜಾಲದಲ್ಲಿ ಅವರು ಹಾಡಿದ ಹಾಡುಗಳನ್ನು ಜಾಲಾಡಿದರೆ ಈ ಹಾಡು ಇರಲಿಲ್ಲ ಅಲ್ಲಿ. ಸಣ್ಣವನಿರುವಾಗ ಮ೦ಗಳೂರು ಆಕಾಶವಾಣಿಯಲ್ಲಿ ಆ ಹಾಡನ್ನು ತು೦ಬಾ ಸಲ ಕೇಳಿದ್ದೆ. ಈಗ ನೆನಪಾಗಿ ಕಾಡುತ್ತಾ ಇದೆ. "Hunting Tunes" ಅ೦ತಾರಲ್ಲ ಹಾಗೆ. ನಿಮಗೇನಾದರೂ ಈ ಹಾಡಿನ ಸುಳಿವು ಸಿಕ್ಕರೆ ಪ್ಲೀಸ್ ಹೇಳಿ...

ಅ೦ದಹಾಗೆ ಹಾಡು ಹೀಗೆ ಶುರುವಾಗುತ್ತೆ....

"ಸವಿನೆನಪು ಅದೇಕೋ ಕಾಣೆ...
ತೇಲಾಡಿ...
ಹೃದಯವನು ಕಲಕುತಿದೆ
ಅನುದಿನ ಈ ಬಾಳನು...."

Comments

Anjali said…
Sudhi Not fair...
You didnt keep up your words...
its ok...
Post the next part by Sunday...
I believe you can do that...
Unknown said…
Chennaagide ee kavana... degreenalli barediddaa?? Eegina bangalore jeevanakke holisidare aksharashaha nija.. naavu yelli kaleduhogiddeve???
Nagaveni said…
I agree with Ms. Anjali, Sudi right it fast we are waiting. By the way your poem was good as usual
shivu.k said…
ಸುಧೇಶ್.

ಕವನ ಚೆನ್ನಾಗಿದೆ. ಆದ್ರೆ ನೀವು ಕತೆಯನ್ನು ನಿಲ್ಲಿಸಿ ಹೀಗೆ ಹಾಕಬಾರದಲ್ವ....ನಾನು ಮುಂದಿನದನ್ನು ಓದಲು ಕಾಯುತ್ತಿದ್ದೇನೆ..
ARUN MANIPAL said…
kavana tumba chennagide..;)

nice
Ravi said…
Kavana chennagide, bengalooru anta concrete jungle nalli iddu, namage ee drushyagalu kevala kalpanegalagi oolidukondive...
anjali...

:)

ರವಿಕಾ೦ತ ಅವರೇ....

ಹೌದು ಡಿಗ್ರಿಯಲ್ಲೇ ಬರೆದಿದ್ದು.... ಕವನ ಮೆಚ್ಚಿದ್ದಕ್ಕೆ ಥ್ಯಾ೦ಕ್ಸ್..

Nagaveni,

:)

ಶಿವಣ್ಣ....

ಮು೦ದಿನದು ನಾಳೆ ಬರುತ್ತೆ... ಆರೋಗ್ಯ ಚೆನ್ನಾಗಿಲ್ಲದಿದ್ದಾಗ ಬರೆಯಲು ಮನಸೇ ಆಗಲ್ಲ....

ಅರುಣ್...

ಥ್ಯಾ೦ಕ್ಸು...

ರವಿ....

ನಮ್ಮೂರಿಗೆ ಬಾ ಒ೦ದು ಸಲ... ನಿ೦ಗೆ ಈ ಎಲ್ಲಾ ದೃಶ್ಯಗಳನ್ನು ತೋರಿಸುತ್ತೇನೆ... :)
ಗಿರಿ said…
wow.. its nice kavana...

thanks,
Giri
Geetha said…
ನಮಸ್ಕಾರ ಸುಧೇಶ್....ತುಂಬ ದಿನಗಳ ನಂತರ ಬಂದೆ..ಕಳೆದುಹೋಗಿದ್ದೆ..ನಿಮ್ಮ ಈ ಕವನದ ಹಾಗೆ!

ಸುಂದರ ಕವನ. ನಿಮ್ಮ ಧಾರವಾಹಿಯ ಮುಂದಿನ ಭಾಗಗಳನ್ನು ಓದಲು ಹೊರಟೆ..

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ