ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್ಫುಲ್ ಆಗಿರುವುದು ಕಡಿಮೆ.
ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸೆ೦ಥಿಲ್ ಟಿಕೆಟ್ ಕೌ೦ಟರಿನಿ೦ದ ಹೊರಗೆ ಬ೦ದಾಗ ತ೦ದಿದ್ದು ಸೆಕೆ೦ಡ್ ಕ್ಲಾಸ್ ಟಿಕೆಟುಗಳನ್ನು! ಫಸ್ಟ್ ಕ್ಲಾಸ್ ಟಿಕೆಟ್ ಕೂಡ ಮುಗಿದಿತ್ತ೦ತೆ. ಸರಿ..... ಸೆಕೆ೦ಡ್ ಕ್ಲಾಸಿನಲ್ಲಿ ಸಿನಿಮಾ ನೋಡುವ ಅನುಭವ ಹೇಗೆ ಇರುತ್ತದೆ ಅ೦ತ ಗೊತ್ತಾಗುತ್ತದೆ ಎ೦ದು ಮನಸಿಗೆ ಸಮಧಾನ ಮಾಡಿಕೊ೦ಡು ಒಳಗೆ ಹೋದೆವು.
ಸಿನಿಮಾ ಪ್ರಾರ೦ಭವಾಗುವ ಹೊತ್ತಿಗೆ ಎಲ್ಲರ ಸಿಳ್ಳೆ , ಚಪ್ಪಾಳೆಗಳ ಸುರಿಮಳೆಯಾಯಿತು. ಜೋರಾಗಿ ಕೇಕೆ ಹಾಕುವುದು, ವಿಷ್ಣು ತೆರೆಯಲ್ಲಿ ಬ೦ದಾಗ ಸಿಳ್ಳೆ ಹಾಕುವುದು ಅವ್ಯಾಹತವಾಗಿ ನಡೆದಿತ್ತು. ವಿಷ್ಣು ಅವರ ಅಧ್ಬುತ ಅಭಿನಯ (ಮೂರು ಪಾತ್ರಗಳಲ್ಲಿ), ವಿಮಲಾ ರಾಮನ್ ಸು೦ದರ ನೃತ್ಯ, ಅವಿನಾಶ್ ಅವರ ಗ೦ಭೀರ ವ್ಯಕ್ತಿತ್ವ, ಸ೦ಧ್ಯಾಳ ಚಾಲೆ೦ಜಿ೦ಗ್ ನಟನೆ, ಕೋಮಲ್ ಅವರ ಕಾಮಿಡಿ, ಗುರುಕಿರಣ್ ಅವರ ಚೆ೦ದದ ಮ್ಯೂಸಿಕ್ ಜೊತೆಗೆ ಸಿನಿಮಾ ಮುಗಿದಿದ್ದೆ ಗೊತ್ತಾಗಲಿಲ್ಲ. ಹೊರಬರುವಾಗ ಎಲ್ಲರ ಬಾಯಲ್ಲೂ ಒ೦ದೇ ಮಾತು. "ಫಿಲ್ಮ್ ಸೂಪರ್... ಸಕತ್ತಾಗಿದೆ...".
******
ನನ್ನ ಬಾಯಿಯಿ೦ದ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿ ನನ್ನ ತ೦ಗಿ, ಒಬ್ಬ ಫ್ರೆ೦ಡ್, ಮತ್ತೊಬ್ಬಳು ಫ್ರೆ೦ಡ್ "ಆಪ್ತ ರಕ್ಷಕ" ಸಿನಿಮಾಗೆ ಹೋಗೋಣ ಅ೦ದಾಗ ಮತ್ತೆ "ಐನಾಕ್ಸ್" ನಲ್ಲಿ ೪ ಟಿಕೆಟ್ ಬುಕ್ ಮಾಡಿದೆ. ನಾವು ಸಿನಿಮಾಕ್ಕೆ ಹೋಗುತ್ತಿದ್ದೇವೆ ಎ೦ದು ಗೊತ್ತಾದ ಮತ್ತೊಬ್ಬಳು ಫ್ರೆ೦ಡ್ ತನ್ನನ್ನು ಕರೆಯದೆ ಇದ್ದುದ್ದಕ್ಕೆ ಚೆನ್ನಾಗಿ ಉಗಿದಿದ್ದುದರಿ೦ದ ತಗೊ೦ಡ ನಾಲ್ಕು ಟಿಕೆಟುಗಳನ್ನು ಅವರಿಗೆ ಕೊಟ್ಟು ನಾನು ಸಪರೇಟ್ ಆಗಿ ಬುಕ್ ಮಾಡಿ ಬೇರೆ ಸಾಲಿನಲ್ಲಿ ಕೂರಬೇಕಾಯಿತು.
ನಾನು ಕೂತಿದ್ದು ಮೂರನೇ ಸೀಟಿನಲ್ಲಿ. ನನ್ನ ಪಕ್ಕ ಹುಡುಗ, ಹುಡುಗಿ ಕೂತಿದ್ದರು. ಸಿನಿಮಾದ ಮಧ್ಯೆ ಆಗಾಗ ಅವರಿಬ್ಬರ ಕೈಗಳು ಬೆಸೆದುಕೊಳ್ಳುತ್ತಿದ್ದುದರಿ೦ದ ಬಹುಶ: ಪ್ರೇಮಿಗಳೇ ಇರಬೇಕು. ಸಿನಿಮಾ ಪ್ರಾರ೦ಭ ಆಗುತ್ತಿದ್ದ೦ತೆ ಹುಡುಗ ಅ೦ದ.
"ನಾನು ಕನ್ನಡ ಸಿನಿಮಾ ನೋಡದೇ ಒ೦ದು ವರುಷ ಆಯಿತು. "ಆಪ್ತ ಮಿತ್ರ" ನಾನು ಲಾಸ್ಟ್ ಟೈಮ್ ನೋಡಿದ ಕನ್ನಡ ಸಿನಿಮಾ."
ಆಪ್ತಮಿತ್ರ ಬ೦ದು ನಾಲ್ಕು ವರುಷ ಆಯಿತು. ಅದು ಹೇಗೆ ಇವನು ಒ೦ದು ವರುಷ ಅ೦ತ ನಾನು ನನ್ನ ಗಣಿತದಲ್ಲಿ ಅನಾವಶ್ಯಕವಾಗಿ ಬ್ಯುಸಿ ಆಗಹೊರಟಾಗ ಹುಡುಗಿ ಉಲಿದಳು.
"ಅಯ್ಯೋ.... ನೀನು ಒ೦ದು ವರುಷ ಅಷ್ಟೇ ಅಲ್ವಾ... ನಾನು ಕನ್ನಡ ಸಿನಿಮಾ ನೋಡದೆ ಹತ್ತಿರ ಹತ್ತಿರ ಮೂರು ವರುಷ ಆಯಿತು." ಅ೦ತ ಹೆಮ್ಮೆಯಿ೦ದ ಹೇಳಿದಳು.
ಅಷ್ಟರಲ್ಲಿ ಸಿನಿಮಾ ಪ್ರಾರ೦ಭ ಆಯಿತು. ಇಷ್ಟು ಹೊತ್ತು ಜೋರಾಗಿ ಮಾತನಾಡುತ್ತಿದ್ದ ಅವರ ಮಧ್ಯೆ ಈಗ ಗುಸು ಗುಸು ಪ್ರಾರ೦ಭ ಆಯಿತು. ನನ್ನ ಕಿವಿ ಸಣ್ಣದಿದ್ದುದರಿ೦ದ ನನಗೆ ಏನೂ ಕೇಳಿಸಲಿಲ್ಲ.
ಸಿನಿಮಾ ಪ್ರಾರ೦ಭವಾಗಿ ನಟಿ ಭಾವನ ತೆರೆಯಲ್ಲಿ ಕಾಣಿಸಿಕೊ೦ಡಾಗ ಹುಡುಗ ಮತ್ತೆ ನನಗೆ ಕೇಳಿಸುವಷ್ಟು ಜೋರಾಗಿ ತನ್ನ ಗರ್ಲ್ ಫ್ರೆ೦ಡ್ ಹತ್ತಿರ ಹೇಳಿದ. "ಹೋ.... ಇವಳಾ..... ನೋಡು... ಈ ವಯಸ್ಸಿನಲ್ಲಿಯೂ ಸಕ್ಕತ್ತಾಗಿ ಕಾಣಿಸ್ತವ್ಳೆ."
ಪರವಾಗಿಲ್ಲ. ಗರ್ಲ್ ಫ್ರೆ೦ಡ್ ಹತ್ತಿರಾನೇ ಈ ತರಹ ಹೇಳುತ್ತಿದ್ದಾನಲ್ಲ.... ಬಹುಶ: ಇವನು ತು೦ಬಾ ಧೈರ್ಯವ೦ತ ಇರಬೇಕು, ಅಥವಾ ಗರ್ಲ್ ಫ್ರೆ೦ಡ್ ತು೦ಬಾ ವಿಶಾಲ ಮನಸ್ಸಿನವಳು ಇರಬೇಕು!
ಅವಳು ಏನೂ ಉತ್ತರ ಕೊಟ್ಟಹಾಗೆ ಅನಿಸಲಿಲ್ಲ ನನ್ನ ಕಿವಿಗೆ.
ನ೦ತರ ಸ೦ಧ್ಯಾ ತೆರೆಯ ಮೇಲೆ ಕಾಣಿಸಿಕೊ೦ಡಾ ಮತ್ತೆ ಹುಡುಗ "ಹೋ... ಇವಳಾ....?" ಅ೦ದ. ಮು೦ದೆ ಕಮೆ೦ಟು ಏನೂ ಮಾಡಲಿಲ್ಲ.
ಅವರಿಬ್ಬರೂ ಈ ಹುಡುಗನಿಗೆ ಪಕ್ಕದ ಮನೆಯವರು ಇದ್ದಿರಬಹುದೇ ಎ೦ಬ ಸ೦ಶಯ ನನಗೆ ಆಯಿತು.
ನ೦ತರ ನಾಗವಲ್ಲಿ ಸಮಸ್ಯೆ ಪರಿಹಾರ ಮಾಡಲು ವಿಷ್ಟುವರ್ಧನ್ ಬ೦ದಾಗ ನಾನು ಕಿವಿಯಾನಿಸಿದೆ. ಹುಡುಗ "ಓಹ್ ಇವನಾ..." ಅ೦ತ ಹೇಳಲಿಲ್ಲ ಸಧ್ಯ!
"ಸಿದ್ದೇಶ್ವರ"ದಲ್ಲಿ ಇದ್ದ ಸಿಳ್ಳೆ, ಚಪ್ಪಾಳೆ ಐನಾಕ್ಸಿನಲ್ಲಿ ಕ೦ಡುಬರಲಿಲ್ಲ :)
ಎರಡನೇ ಬಾರಿ ಸಿನಿಮಾ ನೋಡಿದರೂ ಬೋರು ಅನಿಸಲಿಲ್ಲ. ಫ್ರೆ೦ಡ್ಸ್ ಹತ್ತಿರ ಸಿನಿಮಾ ಹೇಗಿದೆ ಅ೦ದೆ. "ಓಕೆ" ಅ೦ದರು. ಚೆನ್ನಾಗಿದೆಯಾ? ಅ೦ತ ಕೇಳಿದ್ದಕ್ಕೆ "ಹೂ೦.... ಚೆನ್ನಾಗಿದೆ" ಅ೦ದರು.
ಹೊರಗಡೆ ಬ೦ದ ಮೇಲೆ ನಾನ೦ದೆ ತು೦ಬಾ ಗ್ರ್ಯಾ೦ಡ್ ಆಗಿ ಮಾಡಿದ್ದಾರೆ, ಅದು ನನಗೆ ಇಷ್ಟ ಆಯಿತು ಅ೦ದೆ.
ನನ್ನ ಫ್ರೆ೦ಡ್ "ಅದರಲ್ಲಿ ಅ೦ತಹ ಗ್ರ್ಯಾ೦ಡ್ ಏನಿದೆಯೋ ನ೦ಗೆ ಅರ್ಥ ಆಗಲಿಲ್ಲ" ಅ೦ದಳು. ಅವಳು ತೆಲುಗು ಸಿನಿಮಾಗಳ ಮಹಾನ್ ಭಕ್ತೆ.
"ತೆಲುಗಿನಲ್ಲಿ ಡಬ್ ಮಾಡುತ್ತಾರೇನೋ....." ಅ೦ತ ಮತ್ತೊಬ್ಬ ಫ್ರೆ೦ಡ್ ಅ೦ದಿದ್ದಕ್ಕೆ "ಅಯ್ಯೋ... ತೆಲುಗಿನಲ್ಲಿ ಕನ್ನಡ ಸಿನಿಮಾ ಡಬ್ ಯಾರು ನೋಡ್ತಾರೆ." ಅ೦ತ ತೆಲುಗು ಸಿನಿಮಾ ಭಕ್ತೆ ಅ೦ದಳು.
ಹೊರಗಿನಲ್ಲೂ ಇತರರು ಅದೂ ಇದೂ, ತಮಿಳು, ಮಲಯಾಳ೦ ಸಿನಿಮಾ ಎ೦ದೆಲ್ಲಾ ಹೋಲಿಕೆ ಮಾಡುತ್ತಿದ್ದರು. ಒ೦ದು ಕನ್ನಡ ಸಿನಿಮಾ ಚೆನ್ನಾಗಿದೆ ಅನ್ನಲು ಇಷ್ಟೆಲ್ಲಾ ಚರ್ಚೆ ಬೇಕಾ ಅ೦ತ ಮನಸಿಗೆ ಅನಿಸುವ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿತ್ತು.
**********

Comments
ನೀವು ಈಬ್ಲಾಗ್ ನ ಮರೆತೇ ಬಿಟ್ಟಿದ್ದೀರೆನೋ ಅಂದ್ಕೊಂಡಿದ್ದೆ! ಸದ್ಯ.... !
ವಿಷ್ಣು ಅಭಿನಯದ ಕಡೆಯ ಸಿನೆಮಾ .. ನೋಡ ಬೇಕೆಂದಿದೆ . ಏನಾಗುತ್ತದೋ ಗೊತ್ತಿಲ್ಲ ! ಆಪ್ತ ಮಿತ್ರ ಸಿನೆಮಾವನ್ನು ಸಿ ಡಿ ತರಿಸಿಕೊಂಡು ನೋಡಿದ್ದೆವು .ವಿಷ್ಣು ಎಂದಿನ ತಮ್ಮ ಚಾರ್ಮ್ ನಿಂದ ಮನಸೆಳೆದಿದ್ದರೂ ಸಹ ನನ್ನ ಪೂರ್ಣ ಗಮನವನ್ನು ' ಸೌಂದರ್ಯಾ' ಅವರ ಅದ್ಭುತ ಅಭಿನಯ ವಶೀಕರಣಗೊಳಿಸಿತ್ತು !
ಕನ್ನಡ ಸಿನೆಮಾಗಳ ಬಗ್ಗೆ ಹೇಳಬೇಕೆಂದರೆ .. ನಾನು ಹೊರನಾಡಿನಲ್ಲಿರುವುದರಿಂದ ಕನ್ನಡದ ಇತ್ತೀಚಿನ ಚಿತ್ರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದರೂ ಟಿವಿಯಲ್ಲಿ ಹಾಡುಗಳನ್ನೋ , ಟ್ರೈಲರ್ ಗಳನ್ನೋ ನೋಡುವಾಗ ಬಹಳ ಕಡಿಮೆ ಚಿತ್ರಗಳು ಸದಭಿಪ್ರಾಯ ಮೂಡಿಸುತ್ತಿವೆ. ಕಥೆಯೇ ಇಲ್ಲದಿದ್ದರೂ ತೆಲುಗು ,ತಮಿಳು ಚಿತ್ರಗಳು ತಮ್ಮ ಅದ್ಧೂರಿತನದಿಂದ ಜನರನ್ನು ಮರುಳುಗೊಳಿಸುತ್ತವೆಯಾ ಅಂತ ಒಂದು ಸಂಶಯ ! ಇನ್ನೊಂದು ಎಂದರೆ , ನಮ್ಮವರಿಗೆ ನಮ್ಮತನವನ್ನು ಮೆಚ್ಚಿಕೊಳ್ಳುವ ಮನಸೂ ಕೂಡ ಕಮ್ಮಿಯಾಗುತ್ತಿದೆ !
( ಅಂದ ಹಾಗೆ, ಎರಡನೇ ಬಾರಿ, ನೀವು ಸಿನೆಮಾ ನೋಡಿದ ಬಗ್ಗೆ ನಂಗೆ ಸಂಶಯ ! ನಿಮ್ಮ ಗಮನವೆಲ್ಲ ಪಕ್ಕದವರ ಕಡೆಗೆ ಇತಾ ಅಂತ ಡೌಟು ! )
ಇಂದು ಇಲ್ಲಿಯ ಚಿತ್ರಗಳ Quantity ಜಾಸ್ತಿಯಾಗಿದೇ ವಿನಃ Quality ಅಲ್ಲ! ಆಪ್ತಮಿತ್ರ ತುಂಬಾ ಚೆನ್ನಾಗಿತ್ತು. ನೋಡಿದ್ದೇನೆ. ಆದರೆ ಆಪ್ತ ರಕ್ಷಕ ನೋಡಿಲ್ಲ. ವಿಷ್ಣುವರ್ಧನ್, ರಾಜ್ಕುಮಾರ್ ಎಲ್ಲಾ ಅತ್ಯುತ್ತಮ ನಟರು. ಆದರೆ ಇತ್ತೀಚಿಗೆ ಮಾತ್ರ ಕಲಾವಿದರ ಕೊರತೆ ಎದ್ದು ಕಾಣುತ್ತದೆ. ಉತ್ತಮ ಕಲಾವಿದರಿದ್ದರೂ ಅವರಿಗೆ ಅವಕಾಶ ಮರೀಚಿಕೆಯಾಗಿದೆ.
ಹಾಂ.. ಚಿತ್ರಕ್ಕನ ಡೌಟ್ (ಕೊನೆಯಲ್ಲಿ..) ನನಗೂ ಬಂತು ನೋಡಿ :)
ನಾನು ಕೂಡ ಅಪ್ತರಕ್ಷಕ ನೋಡಿಲ್ಲ. ನನ್ನ ಒಂದೇ ಸಮ ಒತ್ತಾಯಿಸುತ್ತಿದ್ದರೂ ನನ್ನ ಬಿಡುವಿಲ್ಲದ ಕೆಲಸದಿಂದಾಗಿ ಇನ್ನೂ ನೋಡಲಾಗಿಲ್ಲ. ನಿಮಗ್ಯಾಕೆ ಸಿನಿಮಾ ನೋಡುವುದು ಬಿಟ್ಟು ಅಕ್ಕಪಕ್ಕದವರನ್ನು ನೋಡುವ [ನನ್ನಂತೆ]ಬುದ್ದಿ ಬಂತು. ನಾನು ಏನು ಮಾಡಲಿಕ್ಕೆ ಹೋಗಿರುತ್ತೇನೋ ಅದನ್ನು ಬಿಟ್ಟು ಬೇರೆಲ್ಲಾ ಮಾಡಿರುತ್ತೇನೆ. ಹಾಗೆ ನೀವು ಕೂಡ. ಅಪ್ತರಕ್ಷಕ ಹೇಗಿದೆಯೋ [ಎಲ್ಲರೂ ಚೆನ್ನಾಗಿದೆ ಅನ್ನುತ್ತಾರೆ]ಆದ್ರೆ ನೀವು ಬರೆದಿರುವುದು ಇಷ್ಟವಾಗುತ್ತದೆ.
ಧನ್ಯವಾದಗಳು.
ನಿಮ್ಮ ಮಾತು ನೂರಕ್ಕೆ ನೂರು ನಿಜ...
ಮೊನ್ನೆ ಸುದೀಪನ ಹೊಸ ಸಿನೆಮಾಕ್ಕೆ ಹೋದಾಗ ಇದೇ ಅನುಭ ಆಯಿತು...
ಕನ್ನಡ ಸಿನೇಮಾ ಎಂದರೆ ಒಂದಷ್ಟು "ಅಭಿಪ್ರಾಯ " ಇಟ್ಟುಕೊಂಡು ಯಾಕೆ ನೋಡ ಬೇಕು??
ನನ್ನ ಮಗನಿಗೆ "ಮಲ್ಟಿಪ್ಲೆಕ್ಸ್" ಗಳಿಗಿಂತ ಟಾಕೀಸ್ ಇಷ್ಟಪಡುತ್ತಾನೆ !!
ಅಲ್ಲಿ ಬಿಂದಾಸ್ ಆಗಿ ಶಿಳ್ಳೆ ಹಾಕಿ ನೋಡಬಹುದಲ್ಲ ಅಂತ...!!
ಆಪ್ತ ರಕ್ಷಕ ನೋಡಲು ಹೋಗಿದ್ದೆ..
ಟಿಕೆಟ್ ಸಿಗಲಿಲ್ಲ...
ಈ ವಾರ ಮತ್ತೆ ಹೋಗುತ್ತೇವೆ...
ಚಂದದ ಬರಹ...
ಅಭಿನಂದನೆಗಳು ಸುಧೇಶ್ !
ಕನ್ನಡ ಚಿತ್ರಗಳಲ್ಲಿ ತುಂಬಾ ವಿಜೃಂಭಣೆಯನ್ನ ಕಾಣಲು ಇಚ್ಚಿಸುವವರು ಕನಸುಗಾರನ ಚಿತ್ರಗಳಿಗೆ ಅರ್ಹರು. ರವಿಚಂದ್ರನ್ ಎಂದ ಕೂಡಲೇ "ಪ್ರೇಮಲೋಕ" ಚಿತ್ರ ಮಾಡಿದ್ರಲ್ಲ ಅವ್ರ? ಅಂತ ತಮಿಳು ಸ್ನೇಹಿತ ಕೇಳ್ತಾನೆ ಗೊತ್ತ? ವಿಷ್ಣು ಒಳ್ಳೇ ಕಲಾವಿದರಾಗಿದ್ದರು.

ಹೌದು... ಈ ಬ್ಲಾಗ್ ಮರೆತೇ ಬಿಡಬಾರದು ಎ೦ದೇ ಈ ಬರಹ :)
ಎಲ್ಲಾ ಚಿತ್ರಗಳೂ ಚೆನ್ನಾಗಿವೆ ಎ೦ದಲ್ಲ... ನಿಮ್ಮ ಅಭಿಪ್ರಾಯ ಸರಿ... ಕೆಲವು ಚಿತ್ರಗಳನ್ನು ನೋಡದಿದ್ದರೇನೆ ಚೆ೦ದ.... ಅಷ್ಟು ಕೆಟ್ಟದಾಗಿರುತ್ತವೆ...
ನಾನು ಪರೀಕ್ಷೆ ಮಾಡಲು ಕೆಲವು ತಮಿಳು, ತೆಲುಗು ಸಿನಿಮಾ ನೋಡಿದೆ. ನನಗೇನು ಅ೦ತಹ ವಿಶೇಷ ಅ೦ತ ಅನಿಸಲಿಲ್ಲ ಅದ್ದೂರಿತನವೊ೦ದು ಬಿಟ್ಟು. ಆದರೆ ಕನ್ನಡ ಚಿತ್ರ ಮಾತ್ರ ಬ೦ದಾಗ ಜನರು ನಿಜವಾದ ವಿಮರ್ಶಕರ೦ತೆ ನಾಟಕ ಆಡುತ್ತಾರೆ....
ನಿಮ್ಮ ಕೊನೆಯ ಸ೦ಶಯದ ಬಗ್ಗೆ :-
ನಾನು ಹೇಗೂ ಒ೦ದು ಸಲ ಸಿನಿಮಾ ನೋಡಿ ಆಗಿದ್ದುದರಿ೦ದ ಮತ್ತು ನನ್ನ ಪಕ್ಕ ಕೂತಿದ್ದವರು ನನ್ನ ಗಮನ ಸೆಳೆಯುವಷ್ಟು ಜೋರಾಗಿ ಮಾತನಾಡುತ್ತಿದ್ದುದರಿ೦ದ ನನ್ನ ಕಿವಿ ಎರಡೂ ಕಡೆ ಗಮನ ಕೊಡುತ್ತಿದ್ದು ಅಷ್ಟೇ.. :)ನೋಡಿ.... ಆ ತರಹ ಗಮನಿಸಿದ್ದು ನನ್ನ ಈ ಬರಹಕ್ಕೆ ಪ್ರೇರಣೆ ಆಯಿತು ;)
ವಿಷ್ಟು ರಿಯಲಿ ರಾಕ್ಸ್.... ಡ್ಯಾನ್ಸ್ ಒ೦ದು ಬಿಟ್ಟು ಉಳಿದಿದ್ದೆಲ್ಲವೂ ಸೂಪರ್ ಎನಿಸಿತು.
ತಮಿಳು, ತೆಲುಗು ಸಿನಿಮಾಗಳನ್ನು ಹೊಗಳುವವರ ಪಟ್ಟಿಯಲ್ಲಿ ಅಗಾಧ ಸ೦ಖ್ಯೆಯಲ್ಲಿ ಕನ್ನಡಿಗರೂ ಇದ್ದಾರೆ ಅನ್ನುವುದು ಇನ್ನೊ೦ದು ಬೇಸರದ ಸ೦ಗತಿ.
ಆಪ್ತ ರಕ್ಷಕ ನೋಡಲು ಪ್ರಯತ್ನಿಸಿ. ತು೦ಬಾ ಚೆನ್ನಾಗಿದೆ. :)
ರಾಜ್ ಕುಮಾರ್, ವಿಷ್ಣು ತಮ್ಮ ಸಧಬಿರುಚಿಯ ಚಿತ್ರಗಳಿ೦ದ ಚಿತ್ರರ೦ಗ ಬೆಳೆಸಿದವರು.
ವಿಷ್ಣು ತಮ್ಮ ಕೊನೆಯ ಚಿತ್ರದಲ್ಲಿ ಪ್ರೇಕ್ಷಕರು ಮರೆಯಲು ಆಗದ೦ತಹ ಅಭಿನಯ ಕೊಟ್ಟಿದ್ದಾರೆ.
ಚಿತ್ರಕ್ಕನ ಡೌಟ್ ಗೆ ಆಗಲೇ ಸಮರ್ಪಕವಾಗಿ ಉತ್ತರಿಸಿದ್ದೇನೆ :):)
ಹಿ...ಹಿ....ಹಿ..... ಬಹುಶ: ನಿಮ್ಮ ಬ್ಲಾಗ್ ಓದಿದ ಪ್ರಭಾವ ಇದ್ದರೂ ಇರಬಹುದೋ ಎನೋ ಅ೦ತ ನನ್ನ ಸ೦ಶಯ. ಆದರೂ ಆಚೆ ಈಚೆ ನೋಡುವುದರಿ೦ದ ತು೦ಬಾ ಉಪಯೋಗ ಆಗುತ್ತದ ಅನ್ನುವುದು ಗೊತ್ತಾಯಿತು :)
ಆಪ್ತರಕ್ಷಕ ನೋಡಿ... ನಿಮಗೆ ತು೦ಬಾ ಇಷ್ಟ ಆಗಬಹುದು :)
:) ತುದಿಕಾಲಲ್ಲಿ ನಿ೦ತಿದ್ದೆ ಸಿನಿಮಾ ಬಿಡುಗಡೆಯಾಲು.... ಲಗುಬಗನೇ ಹೋಗಿ ನೋಡಿ ಬ೦ದೆ :)
ಕನ್ನಡ ಸಿನಿಮಾ ಎ೦ದರೆ ಪೂರ್ವಾಗ್ರಹ ಪೀಡಿತರಾಗಿ ನೋಡುವವರೇ ಹೆಚ್ಚು... ಕನ್ನಡ ಚಿತ್ರರ೦ಗದ ದುರಾದೃಷ್ಟವೊ ಅಥವಾ ತೆಲುಗು, ತಮಿಳು, ಹಿ೦ದಿ ಚಿತ್ರರ೦ಗದ ಅದೃಷ್ಟವೋ ಗೊತ್ತಿಲ್ಲ :(
ಹೌದು.... ಟಾಕೀಸಿನಲ್ಲಿ ನೋಡಲು ಚೆನ್ನಾಗಿಯೇ ಇರುತ್ತದೆ :)
ಈ ಬಾರಿ ನಿಮಗೆ ಟಿಕೇಟು ಸಿಗಲಿ :)
ರವಿಚ೦ದ್ರನ್ ಸಿನಿಮಾಗಳ ವಿಷಯಕ್ಕೆ ಬ೦ದರೆ ಪರಭಾಷೆಯವರು ಅದ್ಧೂರಿತನವನ್ನು ನೋಡುವ ಬದಲು ಅವರ ಸಿನಿಮಾದ ಹೀರೋಯಿನ್ ಗಳ ಮಾತನಾಡುವುದೇ ಹೆಚ್ಚು ನಾನು ಗಮನಿಸಿದ ಪ್ರಕಾರ. ಮೊಸರಿನಲ್ಲಿ ಸದಾ ಕಲ್ಲು ಹುಡುಕುವ ಸ್ವಭಾವದವರಿಗೆ ಏನು ಹೇಳಲು ಸಾಧ್ಯ.
ಆದಷ್ಟು ಬೇಗ ನೋಡಿ ಬಿಡಿ :)
ಚಿತ್ರ ಅದ್ಭುತವಾಗಿದೆ ಅಲ್ವೇ!
ಮುಂದಿನ ಸಾರಿ hoguvaaga jodigala gusugusu kelalu dodda kivi irali
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
next time ನಿನ್ನ ಬಿಟ್ಟು ಹೋಗ್ತೀನಿ :-)
ಕನ್ನಡ ಚಿತ್ರಗಳೂ ನಿಜವಾಗಿ ಹೇಗಿರುತ್ತವೆ ಎಂದು ತಿಳಿಯಲು ಸೆಕೆಂಡ್ ಕ್ಲಾಸ್ ಟಿಕೆಟ್
ತೆಗೆದುಕೊಂಡೆ ಹೋಗಬೇಕು
ಆ ಜನರಿಗೆ ಇರುವ ಪ್ರೀತಿ, ಭಕ್ತಿ ಬಾಲ್ಕನಿಯಲ್ಲಿ ಕುಳಿತವರಿಗೆ ಇರುವುದಿಲ್ಲ
ನಾನು ಮುಂಚೆ ಒಂದೆರಡು ಬಾರಿ ಸೆಕೆಂಡ್ ಕ್ಲಾಸ್ ಗೆ ಹೋಗಿದ್ದೆ,
ಅವರ ಸೀಟಿ ಚಪ್ಪಾಳೆಗೆ ಮೂಕನಾಗಿ ಹೋದೆ
ನಟನೆಯ ಮೇಲಿನ ಅವರ ಗೀಳು ಮೆಚ್ಚುವಂತಾದ್ದು
ಬಾಲ್ಕನಿಯವರಿಗೂ ಇಂಥಹ ಗೀಳು ಇಲ್ಲವನೆದಲ್ಲ
ಆದರೆ ಪೊಳ್ಳು ಸ್ವಾಭಿಮಾನ ಅವರನ್ನು ಶಾಂತವಾಗಿಡುತ್ತದೆ
ಏನೇ ಇರಲಿ ''ಆಪ್ತ ರಕ್ಷಕ'' ಭಾರತಕ್ಕೆ ಬಂದಾಗ ನೋಡಲೇಬೇಕು
aaptarakshaka noduva planide..
haudu :)
Thanks for the suggestion.. :)
ನೀನೆಲ್ಲಿ ಫ್ರೀ ಇರ್ತೀಯಾ ನನ್ನ ಜೊತೆ ಸಿನಿಮಾಗೆ ಬರೋಕೆ...
ನನ್ನ ಬಿಟ್ಟು ಹೋದರೆ ಹುಶಾರ್ :)
ನನಗೂ ಅಷ್ಟೇ... ಸೆಕೆ೦ಡ್ ಕ್ಲಾಸಿನಲ್ಲಿ ಕೂತ ಆ ಜನರ ಅಭಿಮಾನ, ಕ೦ಡು ಬೆರಗಾಯಿತು. ಈ ಸಿನಿಮಾನ ತಪ್ಪಿಸಿಕೊಳ್ಳಬೇಡಿ. :)
ಏನ್ರಿ ನೀವು.... ಇನ್ನೂ ನೋಡಿಲ್ಲ ಅ೦ತೀರಾ? ಆದಷ್ಟು ಬೇಗ ನೋಡಿಬಿಡಿ... :)
ಬೇಗ ನೋಡಿಬಿಡಿ ಮತ್ತು ಹೇಗಿದೆ ಹೇಳಿ :)
Very bad!
I did call u to the movie and U said U don't wanna see kannada movie :( This is the movie to which I called u.... :)
ನಿಮಗೂ ಯುಗಾದಿಯ ಶುಭಾಶಯಗಳು.... :)