Skip to main content

Posts

ಉಲ್ಲಾಳ್ದಿ

(ಬಹಳ ಸಮಯದ ನಂತರ ಬರೆದ ಒಂದು ಕತೆ) ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ ಹೋಗುವ ದಾರಿ ಉಲ್ಲಾಳ್ದಿಯ ಮನೆಯ ಮುಂದೆಯೇ ಇದೆ. ಪ್ರತಿದಿನ ಕೆಲಸಕ್ಕೆ ಹೋಗುವಾಗ “ಉಲ್ಲಾಳ್ದಿ..... ಎಂಚ ಉಲ್ಲರ್” ಎ೦ದು ಕೇಳಿಯೇ ಹೋಗುತ್ತಾಳೆ ಸುಮತಿ. ಹೀಗಿದ್ದ ಅವರ ಸಂಬಂಧ ಹಳಸಲು ಹಲವು ಕಾರಣಗಳಿವೆ. ಇಲ್ಲಿ ರತ್ನಕ್ಕನನ್ನು ಉಲ್ಲಾಳ್ದಿ ಎಂದು ಕರೆದರೂ ಆಕೆ ಊರಿಗೆ ಯಜಮಾನ್ತಿ ಅಂತ ಏನು ಅಲ್ಲ. ತುಳುನಾಡಿನ ಹಳ್ಳಿಗಳಲ್ಲಿ ಸಾಕಷ್ಟು ಅನುಕೂಲಸ್ತರಾಗಿದ್ದು ಗೇಣಿಗೆ ಭೂಮಿ ಕೊಡುವ ಮನೆಯ ಯಜಮಾನ್ತಿಯನ್ನು ಉಲ್ಲಾಳ್ದಿ ಅಂತ ಕರೆಯುವ ವಾಡಿಕೆ ಇದೆ. ಆದರೆ ರತ್ನಕ್ಕ ಅಂತ ಶ್ರೀಮಂತ ಮನೆಯ ಯಜಮಾನ್ತಿ ಏನಲ್ಲ. ಹಾಗೆ ನೋಡಿದರೆ ರತ್ನಕ್ಕ ಆ ಊರಿನವರೇ ಅಲ್ಲ. ದೂರದ ಬ್ರಹ್ಮಾವರದಿಂದ ಈ ಊರಿಗೆ ಮದುವೆಯಾಗಿ ಬಂದ ಶೆಟ್ಟರ ಹೆಣ್ಣು ಮಗಳು. ಆ ಹಳ್ಳಿಯಲ್ಲಿ ಅನೇಕ ಶೆಡ್ತೀರು ಉಲ್ಲಾಳ್ದಿ ಎ೦ದು ಕರೆಸಲ್ಪಡುತ್ತಿದ್ದುದನ್ನು ನೋಡಿ ತನ್ನನ್ನೂ ಉಲ್ಲಾಳ್ದಿ ಎ೦ದು ಕರೆದರೆ ಚೆನ್ನಾಗಿತ್ತು ಅಂತ ರತ್ನಕ್ಕನಿಗೆ ತು೦ಬಾ ಸಲ ಅನಿಸಿದ್ದಿದೆ. ಆದರೆ ಆ ಹಳ್ಳಿಯಲ್ಲಿ ಉಲ್ಲಾಳ್ದಿ ಎಂದು ಕರೆಯಲ್ಪಡುತ್ತಿದ್ದ ಶೆಡ್ತೀರು ಆ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮದುವೆಯಾಗಿ ಅಲ್ಲೇ ತಳವೂರಿದವರು. ಮನೆಯ ಹಾಗೂ ಜಮೀನಿನ ಯಜಮಾನಿಕೆ ನಡೆಸುತ್ತಿದ್ದ ಗತ್ತಿನ ಶೆಡ್ತೀರು ಅವರು. ಅವರದ್ದು ಅಳಿಯ
Recent posts

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ಸಂದೀಪ್ ಮಲಾನಿಯವರ ಎರಡು ಚಿತ್ರಗಳು ವಿಶ್ವ ಕನ್ನಡ ಸಮ್ಮೇಳನದಲ್ಲಿ....

ಅಮೇರಿಕಾದ ಜಾರ್ಜಿಯ (ಅಟ್ಲಾಂಟ) ದಲ್ಲಿ ಪ್ರತಿ ವರ್ಷ ನಡೆಸಲ್ಪಡುವ "ಅಕ್ಕ" ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂದೀಪ್ ಮಲಾನಿಯವರ ಎರಡು ಕನ್ನಡ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಆ ಚಿತ್ರಗಳು "SMS 6260" ಮತ್ತು "ಜೋ ಜೋ ಲಾಲಿ". 'ಜೋ ಜೋ ಲಾಲಿ' ಹಲವಾರು ಪ್ರಶಸ್ತಿ ಗಳಿಸಿರುವ ಚಿತ್ರವಾದರೆ, 'SMS 6260' ಬಾಕ್ಸ್ ಆಫೀಸಿನಲ್ಲಿ ಯಶಸ್ವಿ  ಎನಿಸಿಕೊಂಡ ಚಿತ್ರ. ಎರಡೂ ಚಿತ್ರಗಳು ಸಾಮಾಜಿಕ ಸ೦ದೇಶ ಹೊಂದಿವೆ.   'ಜೋ ಜೋ ಲಾಲಿ'   ಒ೦ದು ಸು೦ದರ ಕನ್ನಡ ಚಿತ್ರ. ಇದು ಒಬ್ಬ ಏಕಾಂಗಿ ತಾಯಿಯ ಕಥೆ. ಆಕೆ ಒಬ್ಬ ಶಾಸ್ತ್ರೀಯ ನೃತ್ಯ ಕಲಾವಿದೆ ಕೂಡ ಹೌದು. ತನ್ನ ಪ್ರೀತಿಯ ಫಲವಾಗಿ ಹುಟ್ಟಿದ ನಾಲ್ಕು ವರುಷದ ಮಗುವಿಗೆ ತನ್ನ ಮೂಲಕ ಏಡ್ಸ್ ಹಬ್ಬಿದೆ ಎ೦ದು ಆರಿವಾದಾಗ ಆಕೆ ಅನುಭವಿಸುವ ಹತಾಶೆ, ತುಮುಲ, ಕೋಪಗಳನ್ನು ನೃತ್ಯ ಮತ್ತು ಸಂಗೀತದ ಮೂಲಕ ಅದ್ಭುತವಾಗಿ ನಿರೂಪಿಸಲಾಗಿದೆ. ಸಮಾಜಕ್ಕೆ ಒಂದು ಶಕ್ತಿಯುತ ಸ೦ದೇಶ ನೀಡುತ್ತದೆ ಈ ಚಿತ್ರ. 'SMS 6260' ಆರರಿಂದ ಅರುವತ್ತರವರೆಗೆ ಎಲ್ಲರಿಗೂ ಅನ್ವಯವಾಗುವ ಸಿನಿಮಾ. ಇಂದಿನ ಜನಾ೦ಗ, ಮೊಬೈಲ್ ಫೋನುಗಳ ದುರ್ಬಳಕೆ ಮತ್ತು ಅದರ ಪರಿಣಾಮಗಳು ಈ ಚಿತ್ರದ ವಸ್ತು. 'ಜೋ ಜೋ ಲಾಲಿ'ಯು ಹೌಸ್ ಆಫ್ ಪಂಡಿತ್ ಪ್ರೊಡಕ್ಷನ್ ಅವರಿಂದ ನಿರ್ಮಿಸಲ್ಪಟ್ಟಿದ್ದು, ಕಲ್ಪನಾ ಪಂಡಿತ್, ಆಕಾಶ್ ಹೋರಾ ಮತ್ತು ಶ್ರೇಯ್ ತೇಜಾನಿ ಅವ

ಪಾರಿವಾಳ ಮತ್ತು ಹುಟ್ಟಿದ ಹಬ್ಬ...

ಮು೦ಬಯಿಗೆ ಬ೦ದು ಆಗಲೇ ಎ೦ಟು ತಿಂಗಳುಗಳು ಕಳೆದಿದ್ದವು . ನಾವು ವಾಸಿಸುತ್ತಿದ್ದ ಮನೆಯಲ್ಲಿ ಹಲ್ಲಿಗಳು ತಮ್ಮ ಅಸ್ತಿತ್ವವನ್ನು ಆಗಾಗಲೇ ಪ್ರತಿಷ್ಟಾಪಿಸಿಕೊಂಡು ಟೆಕ್ನಿಕಲಿ ನಮ್ಮದೂ ಕೂಡ ಒ೦ದು ಮನೆ ಎ೦ದು ತೋರಿಸಿಕೊಟ್ಟಿದ್ದವು. ಹೀಗಿರುವ ನಮ್ಮ ಮನೆಗೆ ಹೊಸ ಅತಿಥಿಗಳು ಬರುವರೆಂಬ ಕಲ್ಪನೆ ನಮಗಿರಲಿಲ್ಲ. ಮು೦ಬಯಿಗೆ ಹೋದ ಹೊಸದರಲ್ಲಿ ಆಶ್ಚರ್ಯ ಆಗುತ್ತಿದ್ದುದ್ದು ಅಲ್ಲಿರುವ ಪಾರಿವಾಳಗಳ ಸ೦ಖ್ಯೆ ಕಂಡು. ಅಲ್ಲಿ ಎಲ್ಲಿ ನೋಡಿದರೂ ಪಾರಿವಾಳ. ನಮ್ಮೂರಲ್ಲಿ ಎಲ್ಲಿ ನೋಡಿದರೂ ಕಾಗೆಗಳು ಕಾಣಿಸುವ ಹಾಗೆ. ಊರಿನಿಂದ ಮು೦ಬಯಿಯಲ್ಲಿ ಒಂದು ವಾರ ಇರಲು  ಬಂದ ನನ್ನ ಅಕ್ಕ ಕೂಡ ಪ್ರತಿದಿನ ಹೇಳುತ್ತಿದ್ದಳು "ಎ೦ತ ಮಾರಾಯ. ಇಲ್ಲಿ ಬಂದಾಗಿನಿಂದ ಕಾಗೆಗಳೇ ಕಾಣಿಸಲು ಸಿಗುತ್ತಿಲ್ಲ. ಊರಲ್ಲಿದ್ದರೆ ಕಾಗೆಗಳನ್ನು ಓಡಿಸಿ ಸಾಕಾಗುತ್ತಿತ್ತು. ಇಲ್ಲಿ ಬಾರೆ ಪಾರಿವಾಳಗಳೇ ಕಾಣಿಸುತ್ತವೆ" ಎ೦ದು ಕಾಗೆಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಳು. ಒ೦ದು ದಿನ ಮನೆ ಗುಡಿಸುವಾಗ ನೋಡುತ್ತೇನೆ ನಮ್ಮ ಬಾಲ್ಕನಿಯಲ್ಲಿ ಕಸ ಕಡ್ಡಿಗಳನ್ನು ಹೇರಿಕೊಂಡು ಒ೦ದು ಪಾರಿವಾಳ ಗೂಡು ಕಟ್ಟಲು ಶುರು ಮಾಡಿದೆ. ನನ್ನ ರೂಮಿಯನ್ನು ಕರೆದು ತೋರಿಸಿದೆ. "ನೋಡು ನಮ್ಮ ಮನೆಗೆ ಹೊಸ ಅತಿಥಿಗಳು  ಬಂದಿವೆ". ಅವನು ಗೂಡಿನ ಸಮೇತ ಪಾರಿವಾಳವನ್ನು ಓಡಿಸೋಣ ಅ೦ದಾಗ ನಾನು "ಪಾಪ ಇರಲಿ ಬಿಡು' ಎ೦ದು ಬಾಯಿ ಮುಚ್ಚಿಸಿದೆ. ಆಮೇಲೆ ಒಂದೆರಡು ದಿನದಲ್ಲಿ ಗೂಡು ಕಟ್ಟಿ ಮು

"ಹೆಜ್ಜೆ ಮೂಡದ ಹಾದಿ" [ನೀ ಬರುವ ಹಾದಿಯಲಿ....] ಮತ್ತು ಇತರ ಪುಸ್ತಕಗಳ ಲೋಕಾರ್ಪಣೆ....

ಅ೦ತೂ "ನೀ ಬರುವ ಹಾದಿಯಲಿ..." ಕಾದ೦ಬರಿಯನ್ನು ಮುಗಿಸಿದ್ದೇನೆ. ಸತತವಾಗಿ ಎರಡೂವರೆ ವರುಷಗಳಿಂದ ಧಾರಾವಾಹಿಯಾಗಿ ಬರುತ್ತಿದ್ದ ಈ ಕಾದ೦ಬರಿ ಈಗ "ಹೆಜ್ಜೆ ಮೂಡದ ಹಾದಿ" ಎ೦ಬ ಹೆಸರಿನಲ್ಲಿ ಪುಸ್ತಕವಾಗಿ  ಬಿಡುಗಡೆಯಾಗುತ್ತಿದೆ. ಕಾದ೦ಬರಿ ಶುರು ಮಾಡಿ ದಾಗಿನಿ೦ದ ಹಿಡಿದು ಇಲ್ಲಿಯವರೆಗೆ ತುಂಬು ಮನಸಿನಿ೦ದ ಪ್ರೋತ್ಸಾಹ ನೀಡಿ ಬೆನ್ನು ತ ಟ್ಟಿದ್ದೀರಿ. ಕಾದ೦ಬರಿ ಬಿಡುಗಡೆ ಆ ದಿನ ನೀವೆಲ್ಲರೂ ಅಲ್ಲಿದ್ದು ಪ್ರೋತ್ಸಾಹಿಸಬೇಕು. ಎಲ್ಲಾ ಬ್ಲಾಗಿಗರು ಕಲೆತು ಒಂದಾಗುವ ಆ ಕ್ಷಣದ ಬಗ್ಗೆ ಆಗಲೇ ನಿರೀಕ್ಷೆ ಶುರುವಾಗಿದೆ. ನೀವೆಲ್ಲರೂ ಇರುತ್ತೀರಲ್ಲ ಆ ಆ ದಿನ?  ಸ್ನೇಹಿತರೆ...... ಇದೇ ತಿ೦ಗಳ ೨೧ಕ್ಕೆ ನನ್ನ ಕಾದ೦ಬರಿ "ಹೆಜ್ಜೆ ಮೂಡದ ಹಾದಿ..." , ರೂಪಾ ಎಲ್ ರಾವ್ ಆವರ ಕಥಾ ಸ೦ಕಲನ "ಪ್ರೀತಿ...! ಏನೆನ್ನಲಿ ನಿನ್ನ....?" ಮತ್ತು ಮ೦ಜು ದೊಡ್ಡಮನಿ ಅವರ ಕವನ ಸ೦ಕಲನ "ಮ೦ಜು ಕರಗುವ ಮುನ್ನ" ಬಿಡುಗಡೆಯಾಗುತ್ತಿದೆ. ಅ೦ದು ನೀವೆಲ್ಲರೂ ಬ೦ದು ನಮ್ಮನ್ನು ಪ್ರೋತ್ಸಾಹಿಸಬೇಕು. ನಿಮ್ಮ ಆಗಮನದ ನಿರೀಕ್ಷೆಯಲ್ಲಿ ಇರುತ್ತೇವೆ.  ದಿನಾ೦ಕ: 21 ಆಗಸ್ಟ್  ಸಮಯ :  ಬೆಳಗ್ಗೆ  10.30 ಸ್ಥಳ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ, ಬೆ೦ಗಳೂರು.