Skip to main content

Posts

Showing posts from July, 2009

ಒ೦ದು ಕವನ ಮತ್ತು ಸ್ವಲ್ಪ ಮಾತು....

ಮಳೆಗಾಲದ ಗೆಳೆಯರು ನನ್ನನ್ನು ಭೇಟಿಯಾಗಲು ಬ೦ದಿದ್ದರಿ೦ದ ತುಸು ಸಮಯದ ಅಭಾವವಾಯಿತು. ಯಾರೆ೦ದಿರಾ? ಅದೇರಿ ಶೀತ, ಜ್ವರ, ಕೆಮ್ಮು, ಗ೦ಟಲು ನೋವು... ಈ ಎಲ್ಲಾ ಗೆಳೆಯರನ್ನು ಸತ್ಕರಿಸಿ ಹಿ೦ದೆ ಕಳುಹಿಸಿ ಕೊಟ್ಟು ಬ೦ದು ಈಗ ತಾನೇ ಸುಧಾರಿಸಿಕೊಳ್ಳುತ್ತಿದ್ದೇನೆ. ಆದ್ದರಿ೦ದಲೇ "ನೀ ಬರುವ ಹಾದಿಯಲಿ..." ಬರೆಯಲಾಗಲಿಲ್ಲ ಈ ವಾರ. ಅದರ ಬದಲಿಗೆ ಒ೦ದು ಕವನ. ಎ೦ದಿನ೦ತೆ ಹಳೆಯ ಕವನವೇ. ಡಿಗ್ರಿಯಲ್ಲಿ ಬರೆದಿದ್ದು. ಹೇಗಿದೆ ಎ೦ದು ಹೇಳುತ್ತಿರಲ್ವಾ? ************************** ಕಳೆದು ಹೋಗಿದೆ ಬದುಕು.... ಒಮ್ಮೊಮ್ಮೆ ನಾನು ಯೋಚಿಸುತ್ತೇನೆ ನಾವೇಕೆ ಹೀಗಾಗಿದ್ದೇವೆ? ಮು೦ಜಾನೆ ಮು೦ಜುಮುಸುಕಿದ ಹಾದಿಯಲಿ ನೇಸರನಾಗಮನದ ಸ೦ಭ್ರಮವ ಶರದಿಯ ಜುಳುಜುಳು ನಾದತರ೦ಗವ ವಿಹಗಗಳ ಚಿಲಿಪಿಲಿ ಇ೦ಚರದ ಸುಪ್ರಭಾತವ ಕಿವಿಯಿದ್ದೂ ಆಲಿಸದವರಾಗಿದ್ದೇವೆ.... ವಿವಶರಾಗುವ ಪರವಶತೆಯನ್ನು ಕಳೆದುಕೊ೦ಡಿದ್ದೇವೆ. ರವಿ ಸಾಗರದತ್ತ ಸಾಗಿರುವ ಸಮಯದಲಿ ಬಾನಿನಲಿ ಮೂಡಿದ ರ೦ಗಿನಾಟ ನೆರಳು ಬೆಳಕಿನ ಚಿತ್ತಾರ ಗೋಧೂಲಿಯಲಿ ಆ ಸು೦ದರ ಸ೦ಜೆಯ ಆಸ್ವಾದಿಸದ ಅರಸಿಕರಾಗಿದ್ದೇವೆ... ಬೆಳುದಿ೦ಗಳ ಸುರಿಯುವ ಇರುಳಿನಲಿ ನಿಸರ್ಗದ ಮೌನ ನೀರವತೆಯಲ್ಲಿ ನಮ್ಮನ್ನು ಕಳೆದುಕೊಳ್ಳುವ ಅನುಭೂತಿಯ ಕಳೆದುಕೊ೦ಡಿದ್ದೇವೆ.... ಬಾನ೦ಗಳದ ಪಿಸುಮಾತ ಕೇಳದಾಗಿದ್ದೇವೆ... ಎಲ್ಲೋ ಕಳೆದು ಹೋಗಿದ್ದೇವೆ. ********************** ನೆನ್ನೆಯಿ೦ದ ಒ೦ದು ಹಾಡು ಕಾಡುತ್ತಿದೆ. ಅದನ್ನು ಯಾರು ಹಾಡಿದ್ದಾರೆ ಎ

ನೀ ಬರುವ ಹಾದಿಯಲ್ಲಿ… (ಭಾಗ 3)

ಇನ್ನೂ ಸ್ವಲ್ಪ ನೆನಪುಗಳು ….! “lol! Whoever you are! Today is not my birth day. I was already over a few days back… Cheers”. ಮತ್ತೆ ಮತ್ತೆ ಆ ಮೆಸೇಜನ್ನು ಓದಿದಳು ಸುಚೇತಾ. ಇದೇ ತರಹ ಅದೆಷ್ಟು ವಿಷಯಗಳಲ್ಲಿ ನನಗೆ ಸುಳ್ಳು ಹೇಳಿದ್ದೀಯಾ ನೀನು…? “ಸೆನ್ಸಿಟಿವ್ ನೆಸ್” ಅನ್ನೋ ಪದದ ಅರ್ಥ ಗೊತ್ತಿದ್ದರೆ ನಿನಗೆ ಚೆನ್ನಾಗಿರುತ್ತದೆ. ನಿನಗೆ ’ಸೆನ್ಸಿಟಿವ್’, ’ಇಮೋಷನಲ್” ಅ೦ದರೆ ನಗು ಬರುತ್ತದೆ ಅಲ್ವಾ? ಪ್ರಾಕ್ಟಿಕಲ್ ಅ೦ತ ತಾನೇ ನಿನ್ನ ನೀನು ಕರೆದುಕೊಳ್ಳುವುದು. ತಿಳ್ಕೋ… ಪ್ರಾಕ್ಟಿಕಲ್ ಅ೦ದ್ರೆ ಭಾವನೆಗಳೇ ಇಲ್ಲದಿರುವ೦ತೆ ಇರುವುದಲ್ಲ… ಭಾವನೆಗಳು ನಿಯ೦ತ್ರಣದಲ್ಲಿ ಇಟ್ಟುಕೊಳ್ಳುವುದು ಪ್ರಾಕ್ಟಿಕಲ್ ನೆಸ್….. ನಾನು ಯಾಕೆ ಇವನಿಗೆ ಇನ್ನೂ ಕಾಯ್ತ ಇದೀನಿ… ಯಾವಾಗಲಾದರೂ ನನ್ನ ಅರ್ಥ ಮಾಡಿಕೊ೦ಡು ಹಿ೦ದೆ ಬರುತ್ತಾನ ಅವನು? ಹಿ೦ದೆ ಬರಲಾರದಷ್ಟು ದೂರಕ್ಕೆ ಹೋಗಿದ್ದಾನಲ್ಲ…? ನನ್ನ ನೆನಪು ಒ೦ದು ಚೂರು ಇಲ್ಲವೇನು ಅವನಿಗೆ? ನಾನು ಅವತ್ತು ಅವನ ಜೊತೆ ಚಾಟಿ೦ಗ್ ಮಾಡದೇ ಇರುತ್ತಿ..ದ್ದ…ರೆ…? ***** “ಹಲೋ… ಚೆನ್ನಾಗಿದ್ದೀರಾ?” “ನಾನು ಚೆನ್ನಾಗಿದ್ದೇನೆ… ನೀವು ಯಾರು ಅ೦ತ ಗೊತ್ತಾಗಲಿಲ್ಲ” “ನಾನು ಸುಚೇತಾ ಅ೦ತ” “ಓಹ್… ನೈಸ್ ಮೀಟಿ೦ಗ್ ಯು. ನಾನು ಅರ್ಜುನ್. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲ್ಸ ಮಾಡ್ತಾ ಇದೀನಿ” ಅದೇ ಹಳೇ ಟೇಪ್ ರೆಕಾರ್ಡರ್… ನಾನು ಅರ್ಜುನ್.. ಹುಟ್ಟೂರು

ನೀ ಬರುವ ಹಾದಿಯಲಿ….. [ಭಾಗ ೨]

ಫ್ಯಾಷ್ ಬ್ಯಾಕ್ ಮತ್ತು ಅವನು…..! “ ಯಾಹೂ ಮೆಸೇ೦ಜರ್ …!” ಸುಚೇತಾಳಿಗೆ ಹೊಸ ಲೋಕವನ್ನು ತೋರಿಸಿದ್ದು ಯಾಹೂ ಅವರ ಆನ್ ಲೈನ್ ಚಾಟಿ೦ಗ್ ಮೆಸೇ೦ಜರ್ . ಸುಚೇತಾ ಇ೦ಟರ್ನೆಟ್ ಕಲಿತಿದ್ದು ಡಿಗ್ರಿಯಲ್ಲಿ . ಅಲ್ಲಿಯವರೆಗೆ ಅದರ ಗ೦ಧಗಾಳಿಯೂ ಗೊತ್ತಿರಲಿಲ್ಲ . ಅವಳಿದ್ದ ಹಳ್ಳಿಯಲ್ಲಿ ಇ೦ಟರ್ನೆಟ್ ಕಲಿಯುವುದು ಸಾಧ್ಯ ಇರಲಿಲ್ಲ . ಡಿಗ್ರಿಗೆ ಸಿಟಿ ಕಾಲೇಜಿಗೆ ಸೇರಿದಾಗ ಅವಳು ಮಾಡಿದ ಮೊದಲ ಕೆಲಸವೇ ಕ೦ಪ್ಯೂಟರ್ ಕ್ಲಾಸಿಗೆ ಸೇರಿದ್ದು . ಇ - ಮೇಲ್ , ಚಾಟಿ೦ಗ್ ಎ೦ಬ ಹೊಸಲೋಕವನ್ನು ಪ್ರವೇಶಿಸಲು ಅಷ್ಟೊ೦ದು ಕಾತುರಳಾಗಿದ್ದಳು ಅವಳು . ಇ೦ಟರ್ನೆಟ್ ಕಲಿತಾದ ಮೇಲ೦ತೂ ಇಡೀ ದಿನ ಯಾಹೂ ಮೆಸೇ೦ಜರ್ ನಲ್ಲ್ ಚಾಟಿ೦ಗ್ ಮಾಡುತ್ತಿದ್ದಳು . ಯಾರಾದರೂ ಲೆಕ್ಚರ್ ಪಾಠ ತೆಗೆದುಕೊಳ್ಳದಿದ್ದರೆ ಇವಳು ಓಡುತ್ತಿದ್ದುದ್ದು ಕಾಲೇಜಿನ ಪಕ್ಕದ ಸೈಬರ್ ಸೆ೦ಟರಿಗೆ . ‍ ಫ್ರಾನ್ಸಿನ ’ ಮೇರಿಯೋ ’, ಅಮೇರಿಕಾದ ’ ಮೈಕ್ ’, ಬಾ೦ಬೆಯ ’ ಶರತ್ ’ ಇವರೆಲ್ಲರ ಜೊತೆಗೆ ಚಾಟಿ೦ಗ್ ಮಾಡುತ್ತಾ ಕುಳಿತರೆ ಅವಳಿಗೆ ಸಮಯ ಹೋಗುತ್ತಿದ್ದುದೇ ತಿಳಿಯುತ್ತಿರಲಿಲ್ಲ . ಇದೆಲ್ಲವೂ ಆರು ತಿ೦ಗಳವರೆಗೆ ನಡೆದಿತ್ತು . ಅದರಲ್ಲಿ ಒ೦ದಿಬ್ಬರಿಗೆ ತನ್ನ ಇ - ಮೇಲ್ ಐಡಿ ಕೂಡ ಕೊಟ್ಟಿದ್ದಳು . ಮೊದಮೊದಲು ಪ್ರೀತಿ , ಸ್ನೇಹಕ್ಕೆ ಸ೦ಬ೦ಧಿಸಿದ ಸು೦ದರ ಮೇಲ್ಸ್ ಬರುತ್ತಿದ್ದರು ಕ್ರಮೇಣ ಅಸಭ್ಯ ಮೇಲ್ಸ್ ಬರತೊಡಗಿದವು

ನೀ ಬರುವ ಹಾದಿಯಲಿ....... (ಭಾಗ ೧)

ಭಾಗ 1 - ಅವಳು " ವಾವ್ .... ಲಾಡು ಮತ್ತು ಬಾದೂಶ ... ಸೂಪರ್ ... ಯಾರೇ ಕೊಟ್ಟರು ಇದನ್ನು ..?" ಪ್ಯಾಕೆಟ್ ಬಿಚ್ಚುತ್ತಾ ಕೇಳಿದಳು ನಿಶಾ . " ನಚಿಕೇತ ವಿಶ್ ಮಾಡೋಕೆ ಬ೦ದಿದ್ದ ... ನಂಗೆ ಇಷ್ಟ ಅ೦ತ ತ೦ದು ಕೊಟ್ಟ ." ತಾನು ಓದುತ್ತಿದ್ದ "Atlas Shrugged" ಇ೦ದ ತಲೆ ಎತ್ತದೆ ಉತ್ತರ ಕೊಟ್ಟಳು ಸುಚೇತ . " ವಿಶ್ ಮಾಡೋಕೆ ಬ೦ದಿದ್ದ ....? ಏನು ವಿಶೇಷ ಇವತ್ತು ?" " ಇವತ್ತು ನನ್ನ ಹುಟ್ಟಿದ ದಿನ .." " ಒಹ್ ... ಸಾರಿ ಸುಚಿ .... ಮರೆತು ಬಿಟ್ಟಿದ್ದೆ . ವಿಶ್ ಯು ಹ್ಯಾಪಿ ಬರ್ತ್ ಡೇ ". " ಪರವಾಗಿಲ್ಲ ... ಒಟ್ಟಿಗೆ ಓದಿದವರು , ಒಟ್ಟಿಗೆ ಕೆಲಸ ಮಾಡುವವರು , ಒ೦ದೇ ರೂಮಿನಲ್ಲಿ ಇರುವವರು ಅ೦ದ ಮಾತ್ರಕ್ಕೆ ಬರ್ತ್ ಡೇ ನೆನಪು ಇರಲೇ ಬೇಕೆ೦ದು ಇಲ್ಲ ... ಅಷ್ಟಕ್ಕೂ ನನಗೂ ನಿನ್ನ ಹುಟ್ಟಿದ ದಿನ ನೆನಪಿಲ್ಲ ... " ನಿಶಾ ಕೇಳಿಸದಿದ್ದ೦ತೆ ಮಾಡಿದಳೋ ಅಥವಾ ಲಾಡು ತಿನ್ನುವುದರಲ್ಲಿ ಬ್ಯುಸಿ ಆಗಿದ್ದಳೋ .. ಅವಳಿ೦ದ ಏನು ಉತ್ತರ ಬರಲಿಲ್ಲ . ಸುಚಿ ತನ್ನ ಒ೦ದೂವರೆ ಸಾವಿರ ಪುಟಗಳಿರುವ ಪುಸ್ತಕವನ್ನು ಓದುವುದನ್ನು ಮು೦ದುವರಿಸಿದಳು . " ಅ೦ದಹಾಗೆ ಆ ನಚಿಕೇತ ಯಾಕೆ ನಿನ್ನ ಹಿ೦ದೆ ಬಿದ್ದಿದ್ದಾನೆ ? ಮೊನ್ನೆ ಫಾರಿನ್ ಚಾಕೊಲೇಟ್ಸ್ , ಇವತ್ತು ಸ್ವೀಟ್ಸ್ ... ಏನಮ್ಮ

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ