Skip to main content

Posts

Showing posts from June, 2009

ಆಟೋಗ್ರಾಫ್ ಪ್ಲೀಸ್….

ನಾಲ್ಕು ದಿನಗಳಿ೦ದ ದೇಹಕ್ಕೆ ಹಿಡಿದಿದ್ದ ಜ್ವರ ಬಿಟ್ಟರೂ ಮನಸಿಗೆ ಹಿಡಿದಿದ್ದ ಜ್ವರ ಬಿಟ್ಟಿರಲಿಲ್ಲ . ಸಹಜವಾಗಿಯೇ ನನ್ನ ಕ್ಲಾಸುಗಳಿಗೆ ಹೋಗಿ ಬ೦ದು , ಫ್ರೆ೦ಡ್ಸ್ ಅನ್ನು ಭೇಟಿಯಾಗಿ ಬ೦ದರೂ ಮನಸಿನೊಳಗೊ೦ದು ಏನೋ ಕೊರೆತ ನಡೆದಿದ್ದು . ಬ್ಲಾಗುಗಳಿಗೆ ಮೊರೆಹೊಕ್ಕು ನನ್ನ ಇಷ್ಟದ ಬ್ಲಾಗುಗಳನ್ನು ಓದಿದಾಗ ಸ್ವಲ್ಪ ನೆಮ್ಮದಿ ಸಿಕ್ಕರೂ ಮನಸಿಗೆ ಹಿಡಿದಿದ್ದ ಜೋಮು ಪೂರ್ತಿಯಾಗಿ ಮಾಯ ಆಗಲೇ ಇಲ್ಲ . ಭೈರಪ್ಪನವರ “ ಧರ್ಮಶ್ರೀ ”, “ ನಾಯಿ ನೆರಳು ” ಅವುಗಳನ್ನು ಓದುತ್ತಿರುವಷ್ಟು ಕಾಲ ಮಾತ್ರ ಮೈ ಮರೆಸಿದವು . ಹಾಗೆ ಕಣ್ಣಾಡಿಸುತ್ತಿದ್ದಾಗ ಒ೦ದು ಕಿತ್ತಳೆ ಬಣ್ಣದ ಡೈರಿ ಕಣ್ಣಿಗೆ ಬಿತ್ತು . ಅದೇನೆ೦ದು ಎತ್ತಿಕೊ೦ಡಾಗ ಅದು ನನ್ನ ಡಿಗ್ರಿಯ ಕೊನೆ ವರುಷದ ಆಟೋಗ್ರಾಫ್ ಪುಸ್ತಕ . ಅದರ ಒ೦ದೊ೦ದು ಪುಟಗಳನ್ನೂ ಹಿತವಾಗಿ ಸವರುವಾಗ ಮನಸಿನ ತು೦ಬೆಲ್ಲಾ ನೆನಪಿನ ಜೋಗುಳ . ಎಷ್ಟು ಸು೦ದರ ಆ ದಿನಗಳು ಮತ್ತು ಎಷ್ಟು ಮಾಧುರ್ಯ ಆ ಸ್ನೇಹದಲ್ಲಿ . ಮನಸ್ಸು ಆ ದಿನಗಳಿಗೆ ಜಾರಿ ಹಿ೦ದಿರುಗೆ ಬರುವ ಹೊತ್ತಿಗೆ ಉಲ್ಲಸಿತಗೊ೦ಡಿತ್ತು . ಹಿ೦ದೊಮ್ಮೆ ಯಾವುದೋ ಸ೦ದರ್ಭಕ್ಕೆ ಮುನಿಸಿಕೊ೦ಡಿದ್ದ ಗೆಳೆಯ ಆಟೋಗ್ರಾಫ್ ಪುಸ್ತಕದಲ್ಲಿ ಕ್ಷಮೆ ಕೇಳುತ್ತಾನೆ . ಅವರಲ್ಲಿ ಕೆಲವರೂ ಇ೦ದು ಎಲ್ಲಿ ಇದ್ದಾರೋ , ಏನೂ ಮಾಡುತ್ತಿದ್ದಾರೋ ಅ೦ತ ಕೂಡ ನನಗೆ ಗೊತ್ತಿಲ್ಲ . ಆ ಸ್ನೇಹವನ್ನು

ಕವನ..... ಕನಸು.....

ನನ್ನ ಒ೦ದೊ೦ದು ಕನಸಿನಲಿ.... ಅರಳುತ್ತವೆ... ಕಮರುತ್ತವೆ.... ನೂರಾರು ಕವನಗಳು ನೂರಾರು ಆಸೆಗಳು.... ಎದೆ ಉಕ್ಕಿ ಹರಿದಾಗ ಭಾವಗಳು ಮನಕಲಕಿ ಅತ್ತಾಗ ನೋವುಗಳು ಒ೦ದೊ೦ದು ಕನಸಿನಲ್ಲೂ ಭಾವನೆಗಳು ಹರಿಯುತ್ತವೆ ಕವನದ ಸಾಲುಗಳಾಗಿ ಕಲ್ಪನೆಯಾಗಸದಿ ಹಕ್ಕಿಯಾಗಿ.... ಅದೇ ನಾ ಬರೆಯಹೊರಟಾಗ ಎನೇನೂ ತೋಚದ೦ತಾಗಿ ನಡುಗುತ್ತವೆ ಬೆರಳುಗಳು ಅಳುಕುತ್ತವೆ ಭಾವನೆಗಳು ಸ್ಥಗಿತಗೊಳ್ಳುತ್ತವೆ ಸ್ಫೂರ್ತಿಗಳು ಸುಪ್ತವಾಗುತ್ತವೆ ಸದ್ದುಮಾಡುವ ಕಲ್ಪನೆಗಳು ಯಾವ ಭಾವವೂ ಇಲ್ಲದೆ ಶೂನ್ಯ ತು೦ಬಿದ ಮನ, ತು೦ಬದೇ ಉಳಿದಿರುವ ಖಾಲಿ ಹಾಳೆಗಳು ಅಣಕಿಸುತ್ತವೆ! ಪುನ: ಜಾರುತ್ತವೆ ಭಾವಗಳು ಇಳಿಯುತ್ತವೆ ಕನಸುಗಳು ತಮ್ಮ ಬೇರುಗಳೆಡೆಗೆ..... [ಇದು ನಾನು ಮೊದಲನೆಯ ಪಿ.ಯು.ಸಿ. ಓದುತ್ತಿರುವಾಗ ಬರೆದಿದ್ದು. ಎಡಿಟ್ ಮಾಡದೇ ಹಾಗೆ ಹಾಕಿದ್ದೇನೆ :)]