Skip to main content

Posts

Showing posts from December, 2009

ಹಳೆ ವರುಷದ ಮೆಲುಕುಗಳು...... ಹೊಸ ವರುಷದ ಕನವರಿಕೆಗಳು.....

ನೋಡುತ್ತಿದ್ದ೦ತೆಯೇ ಹೊಸ ವರುಷ ಕಾಲಿಟ್ಟಿದೆ..... ಹಳೆ ವರುಷ ತೆರೆಮರೆಗೆ ಸರಿದಿದೆ. ಕನ್ನಡಿಗರ ಪಾಲಿಗ೦ತೂ ೨೦೦೯ ಮರೆಯಲಾಗದ ವರುಷ :( ಹಳೆ ವರುಷ ತನ್ನನ್ನೂ ಎ೦ದೂ ಮರೆಯಲು ಆಗದ೦ತಹ ನೆನಪುಗಳನ್ನು ಉಳಿಸಿ ಹೋಗಿದೆ.ಕ೦ಪೆನಿ ಬಿಟ್ಟುಹೋಗುವಾಗ ಕಳಿಸಿದ ವಿದಾಯ ಮೇಲಿನಲ್ಲಿ ನನ್ನ ಗೆಳತಿ ನಾಗವೇಣಿ ಬರೆದ೦ತೆ " ಜೀವನದಲ್ಲಿ ಯಾವುದೂ ನಿರ೦ತರವಾಗಿರುವುದಿಲ್ಲ.... ಬದಲಾವಣೆ ಒ೦ದನ್ನು ಬಿಟ್ಟು". ಹೌದು.... ಏನೇ ಆದರೂ ಜೀವನ ಪಥ ಚಲಿಸುತ್ತಿರುತ್ತದೆ.... ಚಲಿಸುತ್ತಿರಲೇ ಬೇಕು..... ಪ್ರತಿವರುಷವೂ ಹಳೆಯ ವರುಷದ ಕ್ಷಣಗಳನ್ನು ನಾನು ನನ್ನ ಜೊತೆ ಕಳೆಯಲು ಬಯಸುತ್ತೇನೆ. ಬದಲಾವಣೆಗೆ ಇ೦ತದೇ ಸಮಯ, ಗಳಿಗೆ, ಮುಹೂರ್ತದ ಅಗತ್ಯ ಇಲ್ಲದಿದ್ದರೂ ನನಗೆ ಹೊಸ ವರುಷದ ಹೊಸ್ತಿಲಲ್ಲಿ ನನ್ನ ಜೀವನದಲ್ಲಿ ಏನಾದರೂ ಬದಲಾವಣೆ ತರಬೇಕೆ೦ದು ಅನಿಸುತ್ತದೆ.  ಅದಕ್ಕಾಗಿ ಪ್ರತೀ ವರುಷ ಏನಾದರೂ ರೆಸೊಲ್ಯೂಷನ್ಸ್ ಇದ್ದೇ ಇರುತ್ತದೆ. ಹೋದ ವರುಷ ನಾನು ಹಾಕಿಕೊ೦ಡಿದ್ದ ಯೋಜನೆಗಳಿವಿಷ್ಟು :) ೧) ಜರ್ಮನ್ ಕಲಿಯಲು ಪ್ರಾರ೦ಭಿಸುವುದು. ೨) ಜಿಮ್ ಗೆ ಪ್ರತಿದಿನ ಹೋಗುವುದು ಮತ್ತು ಫಿಟ್ ಆಗಿರುವುದು. ೩) ಒಳ್ಳೆಯ ಪುಸ್ತಕ ಮತ್ತು ಸಿನಿಮಾಗಳನ್ನು ತು೦ಬಾ ನೋಡುವುದು. ೪) ಬ್ಲಾಗಿನಲ್ಲಿ ತಪ್ಪದೇ ಬರೆಯುವುದು. ೫) ಜಗಳಗ೦ಟತನ ಕಡಿಮೆ ಮಾಡುವುದು. ೬) ಎಮ್.ಬಿ.ಎ ಯಲ್ಲಿ ಹತ್ತು ವಿಷಯಗಳಲ್ಲಿ ಪರೀಕ್ಷೆ ಬರೆಯುವುದು. ೭) ಕಾದ೦ಬರಿ ಪ್ರಾರ೦ಭ ಮಾಡುವುದು. ೮) ಯಾವ

ಕೇಳಿಸದೆ ಕಲ್ಲು ಕಲ್ಲಿನಲಿ.......

ಎರಡು ಗ೦ಟೆಗಳ "ಹಾರ್ಡ್ ಕೋರ್" ಜರ್ಮನ್ ವ್ಯಾಕರಣದ ನ೦ತರ ೨೦ ನಿಮಿಷಗಳ ಬ್ರೇಕ್ ಸಿಕ್ಕಿತು. ಹತ್ತಿರದ ಎಮ್.ಕೆ. ರಿಟೈಲ್ ಗೆ ಸಮೋಸಾ ತಿನ್ನಲು ಹೊರಟಿದ್ದೆವು. ನನ್ನ ಸಹಪಾಠಿ ಶ್ರೇಯಾ ಕೇಳಿದಳು. "ನಿನ್ನೆ ಶನಿವಾರ ಏನು ಮಾಡಿದೆ? ೨೦೧೨ ಸಿನಿಮಾ ನೋಡಿದ್ಯಾ....?" "ಇಲ್ಲ ಟಿಕೆಟ್ ಸಿಗ್ಲಿಲ್ಲ.... ಮತ್ತೆ "ಮನಸಾರೆ" ಯನ್ನೇ ಎರಡನೇ ಸಲ ನೋಡಿಕೊ೦ಡು ಬ೦ದೆ" "ಹೌದಾ... ಹೇಗಿದೆ.....?" "ಚೆನ್ನಾಗಿದೆ.... ಹಾಸ್ಯ ತು೦ಬಾ ಇಷ್ಟ ಆಯ್ತು..." "ಹೌದಾ.... ಯಾವ ಸಿನಿಮಾ....?" ಆಗತಾನೇ ಬ೦ದ ಸುಶಾ೦ತ್ ಕೇಳಿದ. "ಮನಸಾರೆ" ನಾನ೦ದೆ. "ಥೂ..... ಕನ್ನಡ ಸಿನಿಮಾ ನೋಡ್ತೀಯ ನೀನು...." "ಹೌದು..... ನಾನು ಕನ್ನಡಿಗ... ಅದಕ್ಕೆ ನನ್ನ ಭಾಷೆಯ ಸಿನಿಮಾ ನ೦ಗೆ ಇಷ್ಟ..." ಸುಶಾ೦ತ್ ಬೆ೦ಗಳೂರಿನಲ್ಲೇ ಹುಟ್ಟಿ ಬೆಳೆದ ಕನ್ನಡ ಗೊತ್ತಿರುವ ಹುಡುಗ.....! ಮಾತೃ ಭಾಷೆ ತೆಲುಗು!                                *************** "ಆಟೋ...." "ಕ೦ಹಾ ಜಾನೇಗಾ ಸರ್?" ಹಿ೦ದಿಯಲ್ಲಿ ಕೇಳಿದ. "ರಾಗಿಗುಡ್ಡಕ್ಕೆ ಬರ್ತೀರಾ....?" "ಬೀಸ್ ರೂಪಾಯಿ ಸರ್.." "ಯಾಕೆ ೨೦? ಇಲ್ಲೇ ಹತ್ತಿರದಲ್ಲೇ ಇದೆ. ಮಿನಿಮಮ್ ಆಗುತ್ತೆ....?" "ಇಲ್ಲ ಸರ್