Skip to main content

ಸಂದೀಪ್ ಮಲಾನಿಯವರ ಎರಡು ಚಿತ್ರಗಳು ವಿಶ್ವ ಕನ್ನಡ ಸಮ್ಮೇಳನದಲ್ಲಿ....


ಅಮೇರಿಕಾದ ಜಾರ್ಜಿಯ (ಅಟ್ಲಾಂಟ) ದಲ್ಲಿ ಪ್ರತಿ ವರ್ಷ ನಡೆಸಲ್ಪಡುವ "ಅಕ್ಕ" ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂದೀಪ್ ಮಲಾನಿಯವರ ಎರಡು ಕನ್ನಡ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಆ ಚಿತ್ರಗಳು "SMS 6260" ಮತ್ತು "ಜೋ ಜೋ ಲಾಲಿ". 'ಜೋ ಜೋ ಲಾಲಿ' ಹಲವಾರು ಪ್ರಶಸ್ತಿ ಗಳಿಸಿರುವ ಚಿತ್ರವಾದರೆ, 'SMS 6260' ಬಾಕ್ಸ್ ಆಫೀಸಿನಲ್ಲಿ ಯಶಸ್ವಿ  ಎನಿಸಿಕೊಂಡ ಚಿತ್ರ. ಎರಡೂ ಚಿತ್ರಗಳು ಸಾಮಾಜಿಕ ಸ೦ದೇಶ ಹೊಂದಿವೆ.

 'ಜೋ ಜೋ ಲಾಲಿ'  ಒ೦ದು ಸು೦ದರ ಕನ್ನಡ ಚಿತ್ರ. ಇದು ಒಬ್ಬ ಏಕಾಂಗಿ ತಾಯಿಯ ಕಥೆ. ಆಕೆ ಒಬ್ಬ ಶಾಸ್ತ್ರೀಯ ನೃತ್ಯ ಕಲಾವಿದೆ ಕೂಡ ಹೌದು. ತನ್ನ ಪ್ರೀತಿಯ ಫಲವಾಗಿ ಹುಟ್ಟಿದ ನಾಲ್ಕು ವರುಷದ ಮಗುವಿಗೆ ತನ್ನ ಮೂಲಕ ಏಡ್ಸ್ ಹಬ್ಬಿದೆ ಎ೦ದು ಆರಿವಾದಾಗ ಆಕೆ ಅನುಭವಿಸುವ ಹತಾಶೆ, ತುಮುಲ, ಕೋಪಗಳನ್ನು ನೃತ್ಯ ಮತ್ತು ಸಂಗೀತದ ಮೂಲಕ ಅದ್ಭುತವಾಗಿ ನಿರೂಪಿಸಲಾಗಿದೆ. ಸಮಾಜಕ್ಕೆ ಒಂದು ಶಕ್ತಿಯುತ ಸ೦ದೇಶ ನೀಡುತ್ತದೆ ಈ ಚಿತ್ರ.

'SMS 6260' ಆರರಿಂದ ಅರುವತ್ತರವರೆಗೆ ಎಲ್ಲರಿಗೂ ಅನ್ವಯವಾಗುವ ಸಿನಿಮಾ. ಇಂದಿನ ಜನಾ೦ಗ, ಮೊಬೈಲ್ ಫೋನುಗಳ ದುರ್ಬಳಕೆ ಮತ್ತು ಅದರ ಪರಿಣಾಮಗಳು ಈ ಚಿತ್ರದ ವಸ್ತು.

'ಜೋ ಜೋ ಲಾಲಿ'ಯು ಹೌಸ್ ಆಫ್ ಪಂಡಿತ್ ಪ್ರೊಡಕ್ಷನ್ ಅವರಿಂದ ನಿರ್ಮಿಸಲ್ಪಟ್ಟಿದ್ದು, ಕಲ್ಪನಾ ಪಂಡಿತ್, ಆಕಾಶ್ ಹೋರಾ ಮತ್ತು ಶ್ರೇಯ್ ತೇಜಾನಿ ಅವರುಗಳು ಮುಖ್ಯ ಭೂಮಿಕೆಯಲ್ಲಿದ್ದಾರೆ. 'SMS 6260' ಯಲ್ಲಿ ದಿಗಂತ್, ಜಾನು, ಸ್ಮೃತಿ ಮತ್ತು ಕಿರಣ್ ಮು೦ತಾದವರು ಅಭಿನಯಿಸಿದ್ದು, ''ಶಿರಡಿ ಎಂಟರ್ ಪ್ರೈಸಸ್ ಇ೦ಕ್' ಅವರಿಂದ ನಿರ್ಮಿಸಲ್ಪಟ್ಟಿದೆ. ಇವೆರಡೂ ಚಿತ್ರಗಳು ನಿರ್ಮಿಸಲ್ಪತ್ತಿರುವುದು ಅಮೆರಿಕಾದ ನಿರ್ಮಾಣ ಸಂಸ್ಥೆಗಳಿಂದ. ಸಂದೀಪ್ ಮಲಾನಿಯವರು ಇವೆರಡೂ ಚಿತ್ರಗಳಿಗೆ ಕತೆ ಬರೆದಿದ್ದು ನಿರ್ದೇಶಿಸಿದ್ದಾರೆ.

ಈ ಸಿನಿಮಾಗಳು ಸಪ್ಟೆಂಬರ್ ಒ೦ದು ಮತ್ತು ಎರಡರಂದು ಇಂಟರ್ ನ್ಯಾಷನಲ್ ಕನ್ವೆನ್ಶನ್ ಸೆಂಟರಿನಲ್ಲಿ ಪ್ರದರ್ಶಿಲ್ಪಡುತ್ತವೆ.




Comments

tumba dina aagittu, neevu maatadi (i mean baredu) :-)

Box office hit andiddiri, aadre aa cinema hesare kelilla naanu.... oh! outdate aagbittidineno ansitide!

ಮೊದಲನೆಯದಾಗಿ ಅಭಿನಂದನೆ ಅನುಭೂತಿಯನ್ನು ನೆನಪಿಸಿಕೊಂದಿದ್ದಕ್ಕೆ !!!

ಮಾಹಿತಿಗೆ ಧನ್ಯವಾದ !
Muttumani avare...

haudu :) swalpa blog nenegudhige biddide..

neevu hegideeri!

sms 6262 bandu thumba varushagaLe aadhavu... itteechege bidugade aada cinema alla adu :)
ಚಿತ್ರಾ,

ನೆನಪಿಸಿ ಕೊಂದಿದ್ದಕ್ಕೆ!!!!

ha ha ha :)

thank u :)
ಓಹ್ ನಾನು ಚೆನ್ನಾಗಿದ್ದೀನಿ...
ಹೌದಾ!! ನನಗೆ ಆಗಲೂ ಗೊತ್ತಾಗಿಲ್ಲ ನೋಡಿ...
snehabhandu said…
I Need Your book Hejje Moodada haadi, where it is available please tell me...

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...