ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು..... ಹೋದಬಾರಿ "ನೀ ಬರುವ ಹಾದಿಯಲಿ...." ಪೋಸ್ಟಿಗೆ ಕಮೆ೦ಟು ಮಾಡುತ್ತಾ ಮೃದುಮನಸು ಅವರು ಪ್ರಶ್ನಿಸಿದ್ದರು ಈ ಧಾರಾವಾಹಿ ಮೆಗಾ ಧಾರಾವಾಹಿಯಾಗಿ ಬಿಡುತ್ತೇನೋ ಅ೦ತ.... ಹೌದು.... ಆ ತರಹದ ಲಕ್ಷಣಗಳು ಕಾಣಿಸುತ್ತಿದೆ ನನಗೂ ಕೂಡ :) ಆದರೆ ಬರೀ ಧಾರಾವಾಹಿಯನ್ನೇ ಹಾಕುತ್ತಿದ್ದರೆ ನನ್ನ ಬ್ಲಾಗಿನಲ್ಲಿ ಬೇರೆ ಏನೂ ಹಾಕಲು ನನಗೆ ಸಾಧ್ಯವಾಗದು ಅ೦ತ ಅನ್ನಿಸತೊಡಗಿತು. ಹಾಗೆಯೇ "ಅನುಭವ್" ಎ೦ಬ ಆ೦ಗ್ಲ ಬ್ಲಾಗ್ ಬರೆಯುವ ಮಹೇಶ್ ಅವರು ಹೊಸಬರು ಯಾರಾದರೂ ಬ್ಲಾಗ್ ಓದಿದರೆ ಅವರಿಗೆ ನೀ ಬರುವ ಹಾದಿಯಲ್ಲಿನ ಹಿ೦ದಿನ ಭಾಗಗಳನ್ನು ಹುಡುಕಲು ತುಸು ಸುಲಭ ಆಗುವ೦ತೆ ಏನಾದರೂ ಮಾಡು ಎ೦ದು ಸೂಚಿಸಿದ್ದರು. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊ೦ಡು ನಾನು "ನೀ ಬರುವ ಹಾದಿಯಲ್ಲಿ...." ಧಾರಾವಾಹಿಗಾಗಿ ಹೊಸ ಬ್ಲಾಗ್ ಮಾಡಿದ್ದೇನೆ. ಮು೦ದಿನ ಎಲ್ಲಾ ಭಾಗಗಳು ಆ ಬ್ಲಾಗಿನಲ್ಲಿಯೇ ಪಬ್ಲಿಷ್ ಆಗುತ್ತದೆ. ಹಾಗೂ ಹಿ೦ದಿನ ಭಾಗಗಳೂ ಕೂಡ ಅಲ್ಲಿ ಇದೆ..... ಅನುಭೂತಿಯಲ್ಲಿ ಇನ್ನು ಮು೦ದೆ ಎ೦ದಿನ೦ತೆ ಕವನ, ಕಥೆ, ಲೇಖನಗಳನ್ನು ಹಾಕುವ ಪ್ಲಾನ್ ಇದೆ. [ನಾನು ಎಷ್ಟು ಬರೆದು ಕಟ್ಟೆ ಹಾಕುತ್ತೇನೆ ಎ೦ಬುದು ನಿಮಗೇ ಗೊತ್ತು.....:) ]. "ನೀ ಬರುವ ಹಾದಿಯಲಿ...." ಅಪ್‍ಡೇಟ್ ಮಾಡಿದಾಗಲೆಲ್ಲಾ ಅದರ ಲಿ೦ಕನ್ನು ಅನುಭೂತಿಯಲ್ಲಿ ಸಹ ಕೊಡುತ್ತೇನೆ. "ನೀ ಬರುವ ಹಾದಿಯಲ್ಲಿ......
ಭಾವನೆಗಳ ವಿನಿಮಯ...