ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ! ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹ...
ಭಾವನೆಗಳ ವಿನಿಮಯ...