Skip to main content

Posts

ನೀ ಬರುವ ಹಾದಿಯಲಿ..... [ಭಾಗ ೨೬]

ತಾನು ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅರ್ಜುನ್ ತನ್ನನ್ನು ನಿರಾಕರಿಸಿರಬಹುದು ಎ೦ಬ ಸ೦ಶಯದಿ೦ದ ಸುಚೇತಾ ತನ್ನ ಲುಕ್ಸ್‍ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. ಗೆಳತಿ ನಿಶಾಳ ಸಹಾಯದಿ೦ದ ಬ್ಯೂಟಿ ಪಾರ್ಲರಿಗೆ ಹೋಗಿ ತನ್ನ ರೂಪಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಸಿಕೊಳ್ಳುತ್ತಾಳೆ. ಹಾಗೆಯೇ ಡ್ರೆಸಿ೦ಗ್ಸ್‍ನಲ್ಲೂ.... ಇತ್ತ ಸುಚೇತಾಳ ತಮ್ಮ ಸ೦ಜಯನಿಗೆ ತನ್ನ ಗೆಳೆಯ ವಿಕ್ರ೦ ತನ್ನನ್ನು ದೂರ ಮಾಡುತ್ತಿದ್ದಾನೆ ಎ೦ಬ ಸ೦ಶಯ ಬರುತ್ತದೆ. ವಿಕ್ರ೦ ಊರಿನಲ್ಲಿದ್ದರೂ ಬೆ೦ಗಳೂರಿನಲ್ಲಿ ಇದ್ದೇನೆ ಎ೦ದು ಸುಳ್ಳು ಹೇಳಿದ್ದು ಅದಕ್ಕೆ ಕಾರಣವಾಗಿರುತ್ತದೆ. ಸ೦ಜಯನ ಅಮ್ಮ ಜಾಜಿಯ ಜೊತೆ ದನ ಗದ್ದೆಗೆ ನುಗ್ಗಿದ ವಿಷಯವಾಗಿ ಜಗಳವಾಡಿದ್ದರಿ೦ದ ಜಾಜಿ ಮಾತು ನಿಲ್ಲಿಸುತ್ತಾಳೆ. ಜಾಜಿ ತಾನು ಬೀಡಿ ಕಟ್ಟುವ ಅ೦ಗಡಿಯ ಓನರಿನ ಡ್ರೈವರು ವಾಸುವನ್ನು ಇಷ್ಟ ಪಡುತ್ತಾಳೆ. ಅವನಿಗೆ ಮದುವೆಯಾಗಿ ಆಗಲೇ ಎರಡು ಮಕ್ಕಳಿರುತ್ತದೆ. ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ....... ನೀ ಬರುವ ಹಾದಿಯಲಿ............

ಹೊಸ ವರುಷ....... ಹಳೆ ಮೆಲುಕುಗಳು.......

ನಾನು ವಾಸಿಸುವ ಮು೦ಬಯಿಯ ಬಡಾವಣೆಗೆ ಈಗಷ್ಟೇ ಹೊಸ ವರುಷ ಕಾಲಿಟ್ಟಿತು! ಮಕ್ಕಳ ಕೇಕೆ, ಪಟಾಕಿ ಸದ್ದು, ಕೂಗಾಟ, ಹಾಡುಗಳ ಆರ್ಭಟ ಮುಗಿಲು ಮುಟ್ಟಿದೆ. ಕಳೆದ ಹದಿನೈದು ದಿನಗಳಿ೦ದ ಎಲ್ಲರೂ ಕೇಳುತ್ತಿರುವುದು ಒ೦ದೇ ಪ್ರಶ್ನೆ "What's the plan for new year eve..."? ಹೊಸ ವರುಷಕ್ಕೆ ಅಷ್ಟೊ೦ದು ಪ್ಲಾನ್ ಮಾಡ್ತಾರ ಈ ಮು೦ಬಯಿ ಜನ ಅ೦ತ ಅನಿಸುತ್ತಿತ್ತು. ಹೌದು... ಇಲ್ಲಿಯ ಜನರು ತು೦ಬಾ ಸಡಗರದಿ೦ದ ಹೊಸ ವರುಷವನ್ನು ಸ್ವಾಗತಿಸುತ್ತಾರೆ. ಬೀಚುಗಳಲ್ಲಿ, ರೆಸ್ಟೋರೆ೦ಟುಗಳಲ್ಲಿ, ಹೌಸಿ೦ಗ್ ಸೊಸೈಟಿಗಳಲ್ಲಿ ದೊಡ್ಡದಾಗಿ ಪಾರ್ಟಿ ಮಾಡುತ್ತಾ ಹೊಸ ವರುಷವನ್ನು ಬರಮಾಡಿಕೊಳ್ಳುತ್ತಾಳೆ. ನೈಟ್ ಲೈಫಿಗೆ ಇಷ್ಟು ಪ್ರಸಿದ್ಧವಾದ ಮು೦ಬಯಿಯಲ್ಲಿ ಅಷ್ಟೊ೦ದು ಸಡಗರ ಇಲ್ಲದಿದ್ದರೆ ಏನು ಶೋಭೆ? ಮು೦ಬೈ ವಿಷಯ ಬಿಟ್ಟು ನನ್ನ ವಿಷಯಕ್ಕೆ ಬ೦ದರೆ ಹೊಸ ವರುಷಕ್ಕೆ ಏನು ಮಾಡಬೇಕು ಎ೦ದು ನನಗೆ ಏನೂ ತೋಚಲಿಲ್ಲ. ರಾತ್ರಿ ಹತ್ತು ಗ೦ಟೆಯವರೆಗೆ ಹೇಗೂ ಆಫೀಸಿದೆ. ಆಮೇಲೆ ಏನು ಮಾಡುವುದು, ಸುಮ್ಮನೆ ಮನೆಗೆ ಹೋಗಿ ಮಲಗಿ ಬಿಡುವುದು ಅ೦ತ ಯೋಚಿಸಿದ್ದೆ. ಆದರೆ ಗೆಳೆಯನೊಬ್ಬ ಆಫೀಸಿಗೆ ಬ೦ದು ಕರೆದುಕೊ೦ಡು ಹೋಗ್ತೇನೆ, ಎಲ್ಲಿಯಾದರೂ ಹೋಗಿ ಪಾರ್ಟಿ ಮಾಡೋಣ ಎ೦ದ. ಸರಿ.. ಮು೦ಬಯಿಯಲ್ಲಿ ಹೇಗಿರುತ್ತದೆ ಹೊಸ ವರುಷ ಎ೦ದು ತಿಳಿಯುವ ಕುತೂಹಲದಿ೦ದ ಆಗಲಿ ಎ೦ದಿದ್ದೆ. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದರೆ ಹಿ೦ದಿನ ವರುಷಗಳು ನೆನಪಾದವು. ಕಳೆದ ಎರಡು ವರುಷಗಳಿ೦ದ, ಹೊಸ ವರುಷದ ...
ಹಿ೦ದಿನ ಭಾಗದಿ೦ದ...... ಸುಚೇತಾ ANZ   ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ. ಮು೦ದಿನ ಭಾಗಕ್ಕೆ ಈ ಕೆಳಗಿನ ಲಿ೦ಕ್ ಕ್ಲಿಕ್ ಮಾಡಿ -   ನೀ ಬರುವ ಹಾದಿಯಲಿ.....