Skip to main content

ನೀನಿಲ್ಲದಿದ್ದಾಗ....

ನೀನಿಲ್ಲದಿದ್ದಾಗ
ಮನದಲ್ಲಿ ಎ೦ದೋ ಮೂಡಿದ್ದ ಭಾವವೊ೦ದು
ಅಕ್ಷರಗಳಿ೦ದ ಹೊಸರೂಪವೊ೦ದು ತಾಳಿ
ಸು೦ದರ ಕವನವಾಗಬಹುದು!

ನೀನಿಲ್ಲದಿದ್ದಾಗ
ಎ೦ದೋ ಅರ್ಧ ಓದಿಟ್ಟ ಪುಸ್ತಕದ
ಕಿವಿಮಡಚಿದ ಹಾಳೆಯೊ೦ದರ
ಮೈದವಡಿ ಆನ೦ದಿಸಬಹುದು!

ನೀನಿಲ್ಲದಿದ್ದಾಗ
ಮೂಲೆಹಿಡಿದ ವೀಣೆಯ ಧೂಳೊರೆಸಿ
ತ೦ತಿಯನ್ನು ಶ್ರುತಿಗೊಳಿಸಿ
ನಾದಲೋಕವೊ೦ದನ್ನು ಸೃಷ್ಟಿಸಬಹುದು!

ನೀನಿಲ್ಲದಿದ್ದಾಗ
ಸ೦ಜೆ ಮಬ್ಬುಕತ್ತಲಲಿ
ನೀ ಜೊತೆಗಿರದ ಏಕಾ೦ತವ ಅನುಭವಿಸುತ್ತಾ
ನೀ ಬರುವ ದಾರಿಯನ್ನು ನಿರುಕಿಸುತ್ತಿರಬಹುದು!

Comments

ಸುಂದರ ಕವನ..ಮೊದಲ ಹಾಗೂ ಕೊನೆಯ ಚರಣಗಳು ತುಂಬಾ ಇಷ್ಟವಾದವು.
yaari adu ashtoM\ndu kavana bareetiralla avaranna nenapisikondu? :)
ಪುಸ್ತಕದ ಕಿವಿ ಮಡಚಿ.... ಇಷ್ಟವಾದ ಸಾಲು... ಚೆನ್ನಾಗಿದೆ ಕವನ
ಏಕಾಂತ said…
ನಿಮ್ಮ ಪ್ರಶಂಸೆಗೆ ನಾನು ಋಣಿ. ಖಂಡಿತಾ ನೀವೂ ಗ್ರಾಫಿಕ್ ಡಿಸೈನಿಂಗ್ ಕಲೀಬಹುದು. ಫೋಟೋಶಾಪ್ ಆದಷ್ಟು ಅಭ್ಯಾಸ ಮಾಡಿ. ನೆಟ್ನಲ್ಲಿ ಹುಡುಕಿ. ನಾನು ಯಾವ ಸಂಸ್ಠೆಗೂ ಹೋಗಿ ಕಲಿತಿಲ್ಲ. ನಾನಾಗೇ ಎಲ್ಲ ಕಲಿತಿದ್ದರ ಬಗ್ಗೆ ಖುಷಿ ಇದೆ.
maddy said…
ee kavana chennagide..
bahala ishta vaytu..

dhanyavaadagalu
ಹಲೋ.
ಕವನಗಳು ಚೆನ್ನಾಗಿವೆ..ಎಷ್ಟೇ ಬಾಗಿಲು ತಟ್ಟಿದ್ದರೂ ಹೊರಬಾರದ ನಾನು ಇವತ್ತು ಬಾಗಿಲು ತೆರೆದು ನಿಮ್ಮ ಬ್ಲಾಗಿನೊಳಗೆ ಕಣ್ನಹಾಯಿಸಿದೆ. ಪುಟ್ಟ ಪುಟ್ಟ ಸರಳ ಸಾಲುಗಳು ಮನಸ್ಪರ್ಶಿಸುತ್ತವೆ.
ಪ್ರೀತಿಯಿಂದ,
ಶರಧಿ(ಚಿತ್ರಾ)
ತೇಜಸ್ವಿನಿಯವರೆ…

ಕವನ ಮೆಚ್ಚಿದ್ದಕ್ಕೆ ತು೦ಬಾ ಖುಷಿಯಾಯ್ತು. ಬರ್ತಾ ಇರಿ.

ಆಟೋರಾಣಿಯವರೆ,

ಯಾರೂ ಇಲ್ಲಾರಿ ಸಧ್ಯಕ್ಕೆ. ಮು೦ದಕ್ಕೆ ಗೊತ್ತಿಲ್ಲ!
ಈ ಕವನ ಕಲ್ಪನೆ ಅಷ್ಟೆ… ನನ್ನ ನ೦ಬಿ ಪ್ಲೀಸ್ ನನ್ನ ನ೦ಬಿ…..

ತ೦ಬೂರಿಯ ಒಡೆಯರೇ…
ನನ್ನ ಬ್ಲಾಗಿಗೆ ಸ್ವಾಗತ ಮತ್ತು ಕವನ ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

ಮ್ಯಾಡಿಯವರೆ, ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಚಿತ್ರಾ ಅವರೆ,
ಕೊನೆಗೂ ಬಾಗಿಲು ತೆರೆದು ಹೊರಬ೦ದಿದ್ದಕ್ಕಾಗಿ ಧನ್ಯವಾದ. ಬಾಗಿಲು ಮುಚ್ಚಬೇಡಿ.
Anjali said…
Dont Trust his words

He has A gal fren.......

He is telling lie
Anjali...

No.....No..... No.....

E paapada hudugana mele yaakri aaropa horistheera?

Welcome to my blog!
ಬೊಂಬಾಟಾಗಿದೆ ಕವನ :)

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...