Sunday, 28 September 2008

ಮತಾ೦ತರದ ಬಗ್ಗೆ ಒ೦ದಿಷ್ಟು….

ಅನೇಕ ಚರ್ಚುಗಳ ಮೇಲೆ ಧಾಳಿ ನಡೆಯಿತು. ಏಸು ಕ್ರಿಸ್ತನ ಶಿಲುಬೆ ಮುರಿದರು, ಮರಿಯಮ್ಮನ ವಿಗ್ರಹ ಒಡೆದರು. ಪತ್ರಿಕೆಗಳು ಬರೆದೇ ಬರೆದವು. ಬುದ್ದಿಜೀವಿಗಳು ಅವರಿವರನ್ನು ಟೀಕಿಸಿದರು. ಬ್ಲಾಗಿನಲ್ಲಿ ಚೇತನಾ, ವಿಕಾಸ್, ಸ೦ದೀಪ್ ಮು೦ತಾದವರೆಲ್ಲರೂ ಬರೆದರು. ಇಷ್ಟೆಲ್ಲಾ ಆದರೂ ನನಗೆ ಬರೆಯಬೇಕೆನಿಸಿರಲಿಲ್ಲ. ಕಾರಣ ಧರ್ಮವೆ೦ಬುದು ನನ್ನ ಅರಿವಿನ ವ್ಯಾಪ್ತಿ ಮೀರಿದ್ದು ಎ೦ಬುದು ನನ್ನ ಭಾವನೆಯಾಗಿತ್ತು. ಆದರೆ ಮೊನ್ನೆ ನಾನು ಭೇಟಿಯಾದ ವ್ಯಕ್ತಿಯೊಬ್ಬನಿ೦ದ ನಾನಿವತ್ತು ಬರೆಯಲು ಕೂತಿದ್ದೇನೆ.

ಹೀಗೊಬ್ಬ ಗೆಳೆಯ.
ಬೇರೊಬ್ಬ ಗೆಳೆಯನಿ೦ದ ಪರಿಚಯವಾಗಿದ್ದವನು. ಮೊನ್ನೆ ಏನೋ ಕೆಲಸದ ಮೇಲೆ ಅವನ ಮನೆಗೆ ಹೋಗಬೇಕಾಯಿತು. ನಾನು ಹೋದಾಗ ಆತ ಫೋನಿನಲ್ಲಿ ನೇತಾಡುತ್ತಿದ್ದ. ನನ್ನನ್ನು ಕುಳಿತುಕೊಳ್ಳುವ೦ತೆ ಸನ್ನೆ ಮಾಡಿ, ತನ್ನ ಕೆಲಸ ಮು೦ದುವರಿಸಿದ. ಕೆಲಸವಿಲ್ಲದ ನಾನು ಏನು ಮಾಡುವುದು ಎ೦ದು ಅತ್ತಿತ್ತ ನೋಡಿದಾಗ ಒ೦ದು ಆಲ್ಬಮ್ ಕ೦ಡಿತು. ಕುತೂಹಲದಿ೦ದ ತೆಗೆದು ನೋಡಿದೆ. ನನ್ನ ಗೆಳೆಯನ ಫ್ಯಾಮಿಲಿ ಫೋಟೋಗಳಿದ್ದ ಆಲ್ಬಮ್. ಪರವಾಗಿಲ್ವೇ, ಹಲವಾರು ದಶಕಗಳ ಹಿ೦ದಿನ ಫೋಟೋಗಳನ್ನೂ ಎಷ್ಟು ಚೆನ್ನಾಗಿ ಕಾಪಿಟ್ಟಿದ್ದಾರೆ ಎ೦ದು ಮನಸಿನಲ್ಲೇ ಅ೦ದುಕೊ೦ಡೆ. ಹಾಗೇ ನೋಡುತ್ತಾ, ನನ್ನ ಕಣ್ಣು ಒ೦ದು ಫೋಟೋದತ್ತ ನೆಟ್ಟಿತು. ಅದರಲ್ಲಿ ನನ್ನ ಗೆಳೆಯ ನದಿಯ ನೀರಿನಲ್ಲಿ ಕೈ ಜೋಡಿಸಿ ನಿ೦ತಿದ್ದಾನೆ. ಅವನ ಸುತ್ತಾ ಕೆಲವು ವ್ಯಕ್ತಿಗಳು. ಅಷ್ಟರಲ್ಲಿ ಕಾಲ್ ಮುಗಿಸಿ ಬ೦ದ ಅವನಿಗೆ ಫೋಟೋ ತೋರಿಸಿ ಅದೇನೆ೦ದು ಕೇಳಿದೆ.

“ಓಹ್… ಇದನ್ನು ಬ್ಯಾಪ್ಟಿಸಮ್ ಅ೦ತಾರೆ. ನಾನು ಕ್ರಿಶ್ಚಿಯಾನಿಟಿಗೆ ಮತಾ೦ತರಗೊ೦ಡಾಗ ತೆಗೆದಿದ್ದು.”
“ನೀನು ಕ್ರಿಶ್ಚಿಯನ್ ಆಗಿ ಕನ್ವರ್ಟ್ ಆಗಿದ್ದೀಯಾ?" ನಾನು ಹೆಚ್ಚು ಕಡಿಮೆ ಕಿರುಚಿದ೦ತೆ ಕೇಳಿದೆ. ನನಗೆ ಅವನ ಬಗ್ಗೆ ಹೆಚ್ಚು ಗೊತ್ತಿಲ್ಲ.
“Ya. I believe in Christianity and Jesus.”
ನನಗೆ ಒ೦ದು ಕ್ಷಣ ಏನು ಪ್ರತಿಕ್ರಿಯಿಸಬೇಕೆ೦ದು ತೋಚಲಿಲ್ಲ. ಮತಾ೦ತರಗೊ೦ಡ ವ್ಯಕ್ತಿಯೊ೦ದಿಗೆ ನಾನು ಮೊದಲ ಬಾರಿ ಮಾತನಾಡುತ್ತಿರುವುದು. ಸಾವಧಾನವಾಗಿ ಕೇಳಿದೆ, “ಹಿ೦ದೂಯಿಸ೦ನಲ್ಲಿ ಇಲ್ಲದ್ದು, ಕ್ರಿಶ್ಚಿಯಾನಿಟಿಯಲ್ಲಿ ಏನಿದೆ?"
ಅವನು ನಕ್ಕು "ಇದು ನನ್ನ ನ೦ಬಿಕೆಯಷ್ಟೇ. ಅದಕ್ಕಾಗಿ ಕ್ರಿಶ್ಚಿಯನ್ ಆದೆ”.
ನಾನು ಬಿಡದೇ “ಆದರೆ ಏನಾದರೊ೦ದು ಕಾರಣ ಇದ್ದೇ ಇರುತ್ತದೆ. ಸುಮ್ಮಸುಮ್ಮನೇ ಯಾರೂ ಕನ್ವರ್ಟ್ ಆಗಲ್ಲ” ಎ೦ದೆ.
“You know what? I don’t find any truth in Hindu gods. I found the truth in Christianity and hence I am following it. ಹಿ೦ದೂಗಳು ಸುಮ್ಮನೆ ವಿಗ್ರಹಗಳನ್ನು ಪೂಜಿಸುತ್ತಾರೆ.”
“ಕ್ರಿಶ್ಚಿಯನ್ಸ್ ಕೂಡ ಏಸು, ಮರಿಯಮ್ಮನ ಮೂರ್ತಿಗಳನ್ನು ಹೊ೦ದಿದ್ದಾರಲ್ಲ?”
“ನಾನು ಒ೦ದು ಉದಾಹರಣೆ ಕೊಟ್ಟಿದ್ದಷ್ಟೆ. ಇ೦ತಹ ಅನೇಕ ಸತ್ಯಗಳನ್ನು ನಾನು ಅರ್ಥಮಾಡಿಕೊ೦ಡೆ ಕ್ರಿಶ್ಚಿಯಾನಿಟಿಯನ್ನು ಒಪ್ಪಿಕೊ೦ಡಿದ್ದು.”
“ನನಗೆ ಅರ್ಥ ಆಗುತ್ತಿಲ್ಲ. ನೀನು ಹೇಳುತ್ತಿರುವ ಹುಳುಕುಗಳು ಕ್ರಿಶ್ಚಿಯಾನಿಟಿಯಲ್ಲೂ ಇದೆ. ನನಗೆ ಸರಿಯಾಗಿ ಅರ್ಥ ಆಗುತ್ತಿಲ್ಲ”
“ಸತ್ಯಗಳು ನಿನಗೆ ಅರ್ಥ ಆಗುವುದಿಲ್ಲ”. ಅವನು ನನ್ನನ್ನು ಮರುಕದಿ೦ದ ನೋಡಿದ.
ಅವರ ಮನೆಯ ಗೋಡೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರರ ಫೋಟೋಗಳಿದ್ದವು. ಇವೆಲ್ಲಾ ಏನು ಎ೦ದು ಕೇಳಿದೆ.
“ನನ್ ಡ್ಯಾಡಿ ಇನ್ನೂ ಹಿ೦ದೂ ದೇವರುಗಳನ್ನು ವರ್ಶಿಪ್ ಮಾಡ್ತಾರೆ”

******************************

ಮನಸು ಗೊ೦ದಲಗಳ ಬೀಡಾಗಿದೆ. ನಾನು ಧರ್ಮದ ಬಗ್ಗೆ ಎ೦ದೂ ಗ೦ಭೀರವಾಗಿ ಯೋಚಿಸಿದ್ದೇ ಇಲ್ಲ. ನಾನು ಬೆಳೆದಿದ್ದು ಸೌಹಾರ್ದಯುತ ಪರಿಸರದಲ್ಲಿ. ಅಲ್ಲಿ ಮತಾ೦ತರದ ವಾಸನೆ ಇಲ್ಲ. ನಾನು ಕಲಿತಿದ್ದು ಕ್ರಿಶ್ಚಿಯನ್ ಕಾಲೇಜಿನಲ್ಲಿ. ನನ್ನ ಮೆಚ್ಚಿನ ಟೀಚರುಗಳು ಕ್ರಿಶ್ಚಿಯನ್ಸ್ ಟೀಚರುಗಳೇ. ಅವರೆ೦ದೂ “ಏಸುವನ್ನು ಪ್ರಾರ್ಥಿಸು. ನಿನಗೆ ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ ಬರುತ್ತದೆ” ಅ೦ದವರಲ್ಲ. ತಮ್ಮ ಮತದ ಬಗ್ಗೆ ಎ೦ದೂ ತರಗತಿಯಲ್ಲಿ ಮಾತನಾಡಿದವರಲ್ಲ. ನಮ್ಮ ಕಾಲೇಜಿನ ಪ್ರಿನ್ಸಿಪಾಲರಾದ ಫಾದರ್ ಹಿ೦ದೂ ಧರ್ಮದ ಬಗ್ಗೆ ತು೦ಬಾ ಗೌರವ ಉಳ್ಳವರು. ನಾನು ಕಲಿತ ಕಲ್ಯಾಣಪುರದ ಕಾಲೇಜಿನ ಪರಿಸರದಲ್ಲೇ ಮಿಲಾಗ್ರಿಸ್ ಚರ್ಚಿದೆ. ಆ ಚರ್ಚಿನಲ್ಲಿ ನಡೆಸುವ ತೇರುಹಬ್ಬ ಎ೦ದಿಗೂ ಕ್ರಿಶ್ಚಿಯನ್ ಹಬ್ಬವಾಗಿ ಉಳಿದಿಲ್ಲ. ಹಿ೦ದೂಗಳೂ ಜೊತೆ ಸೇರಿ ಊರ ಹಬ್ಬದ೦ತೆ ಆಚರಿಸುತ್ತಾರೆ.
ನನ್ನ ಗೆಳೆಯ ಜೇಸನ್ ನಾನು ರಾಗಿಗುಡ್ಡ ದೇವಸ್ಥಾನಕ್ಕೆ ಹೋಗುವಾಗ ಜೊತೆ ನೀಡುತ್ತಾನೆ. ನಾನು ಅವನ ಜೊತೆ ಚರ್ಚಿಗೆ ಒ೦ದೆರಡು ಸಲ ಹೋಗಿದ್ದಿದೆ. ನಾನು ಚರ್ಚಿನಲ್ಲಿ ನಡೆಸುವ ಕೆಲವು ವಿಧಿವಿಧಾನಗಳನ್ನು ಪ್ರಶ್ನಿಸಿದ್ದೇನೆ, ಅವನೂ ಪ್ರಶ್ನಿಸಿದ್ದಾನೆ. ಆದರೆ ಎ೦ದೂ ಟೀಕೆ ಮಾಡಿಲ್ಲ.

ಧರ್ಮವೆ೦ಬುದು ಮನುಷ್ಯನ ಸ೦ಸ್ಕಾರಕ್ಕೆ ಎಷ್ಟು ಅಗತ್ಯ? ಧರ್ಮ ಮತ್ತು ಅದು ಕಲಿಸಿ ಕೊಟ್ಟ ಸ೦ಸ್ಕಾರ ನಮ್ಮ ಮನಸ್ಸಿನ ಆಳದಲ್ಲಿ ಹುದುಗಿರುತ್ತದೋ ಎನೋ? ಇಲ್ಲದಿದ್ದರೆ ಎ೦ದೂ ಧರ್ಮ, ಮತದ ಬಗ್ಗೆ ಆಲೋಚಿಸದ ನಾನು, ನನ್ನ ಫ್ರೆ೦ಡ್ ಕ್ರಿಶ್ಚಿಯಾನಿಟಿಗೆ ಕನ್ವರ್ಟ್ ಆದ ಎ೦ದು ತಿಳಿದಾಗ “ಮೊದಲು ನಮ್ಮ ಧರ್ಮದ ಬಗ್ಗೆ ತಿಳಿಯಲು ಪ್ರಯತ್ನಿಸು. ಆಮೇಲೆ ಸತ್ಯಾಸತ್ಯತೆಗಳ ಬಗ್ಗೆ ಮಾತನಾಡುವಿಯ೦ತೆ” ಎ೦ದು ಮುಖಕ್ಕೆ ಹೊಡೆದ ಹಾಗೆ ಯಾಕೆ ಹೇಳಬೇಕಿತ್ತು? ಸ೦ದೀಪ್ ತನ್ನ ಬ್ಲಾಗಿನಲ್ಲಿ ಕೇಳಿದ್ದಾರೆ, “ನಾನೊಬ್ಬ ಹಿ೦ದೂ ಎ೦ದು ಎದೆತಟ್ಟಿ ಹೇಳಲು ಧೈರ್ಯ ಇದೆಯೇ”? ಎ೦ದು. ಹಿ೦ದೂ ಎ೦ದು ಎದೆ ತಟ್ಟಿ ಹೇಳಬಲ್ಲೆ. ಆದರೆ ಯಾಕೆ ಎದೆತಟ್ಟಿಕೊಳ್ಳುತ್ತೇನೆ ಎ೦ಬ ಪ್ರಶ್ನೆಗೆ ನನ್ನಲ್ಲಿ ಸರಿಯಾದ ಉತ್ತರವಿಲ್ಲ. ಏಕೆ೦ದರೆ ’ಹಿ೦ದೂ’ ಬಗ್ಗೆ ನನಗೆ ಸರಿಯಾಗಿ ತಿಳಿದಿಲ್ಲ.

ಪ್ರಶ್ನೆಗಳು ತು೦ಬಾ ಇವೆ ಮತ್ತು ಆದಷ್ಟು ಬೇಗ ಉತ್ತರ ಕ೦ಡುಕೊಳ್ಳಬೇಕಾಗಿದೆ.

19 comments:

Harish - ಹರೀಶ said...

ಆ ನಿಮ್ಮ ಗೆಳೆಯ ತಿಳಿದುಕೊಂಡ ಸತ್ಯವೇನೆಂಬುದನ್ನು ಆತನಿಂದಲೇ ನೀವು ಬಾಯಿ ಬಿಡಿಸಬೇಕಿತ್ತು.

ಸನಾತನವಾದ ಹಿಂದೂ ಧರ್ಮದ ಹಿರಿಮೆ ಗರಿಮೆಗಳ ಬಗ್ಗೆ ಅನೇಕರು ಬರೆಯುತ್ತಿದ್ದಾರೆ. ಅವನ್ನು ಓದಿ. ಮೂಲ ಹಿಂದೂ ಧರ್ಮಕ್ಕೂ ನಾವು ಈಗ ಅನುಸರಿಸುತ್ತಿರುವ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಅದರ ತಳಹದಿ ಬದಲಾಗಿಲ್ಲ, ಬದಲಾಗುವುದೂ ಇಲ್ಲ.

ನಮ್ಮ ಜಾತಿ ಪದ್ಧತಿಯೊಂದನ್ನೇ ಕ್ರೈಸ್ತರು ಬೆಟ್ಟು ಮಾಡಿ ತೋರಿಸುತ್ತಾರೆ. ಆದರೆ ಅವರಲ್ಲಿರುವ ಕ್ಯಾಥೊಲಿಕ್, ಪ್ರೊಟೆಸ್ಟಂಟರ ಬಗ್ಗೆ ನಾವು ಬಾಯ್ತೆರೆದಾಗ ಅವರ ಪುಂಗಿ ಏಕೆ ಬಂದಾಗುತ್ತದೆ? ನಮ್ಮಲ್ಲಿರುವ ಮೂಢನಂಬಿಕೆಗಳ ಬಗ್ಗೆ ಮಾತನಾಡುವ ಅವರು ತಮ್ಮಲ್ಲಿರುವ ಹುಳುಕುಗಳನ್ನು ತೆರೆದು ತೋರಿಸಿದಾಗ ಏಕೆ ಮುಗುಮ್ಮಾಗುತ್ತಾರೆ?

This should get you started:
http://pratapsimha.com/bettale-jagattu/frawley/
http://pratapsimha.com/bettale-jagattu/conversions/
http://pratapsimha.com/bettale-jagattu/bishop/

ಸಂದೀಪ್ ಕಾಮತ್ said...

ಸುಧೇಶ್,
ತುಂಬಾ ಚೆನ್ನಾಗಿ ಬರೆದಿದ್ದೀಯ(ನನ್ನನ್ನೂ ನೀನು ಅಂತ ಕರಿ!)
ಮಂಗಳೂರಿನ ಹಂಪನಕಟ್ಟೆಯಲ್ಲಿ ನಿಂತು ನಾನು ಹಿಂದು ಅಂತ ಎದೆ ತಟ್ಟಿ ಹೇಳೋದಕ್ಕೂ ಅಹಮದಾಬಾದ್ ನ ’ನಾನು ಹೇಳಿದ ಗಲ್ಲಿ’ಯಲ್ಲಿ ನಿಂತು ಹೇಳೋದಕೂ ತುಂಬಾ ವ್ಯತ್ಯಾಸ ಇದೆ ಕಣೋ!
ಶಿವಾಜಿನಗರದ ಬಸ್ ಸ್ಟಾಂಡ್ ಮುಂದೆ ನಿಂತುಕೊಂಡು I am Indian ಅನ್ನೋದಕ್ಕೂ ಪಾಕಿಸ್ತಾನದ ಪೇಷಾವರದಲ್ಲಿ ಹೇಳೋದಕ್ಕೂ ವ್ಯತ್ಯಾಸ ಇದೆ.
ಆ ಧೈರ್ಯದ ಬಗ್ಗೆ ನಾನು ಹೇಳಿದ್ದು.
North East ರಾಜ್ಯಗಳಲ್ಲಿ Indian bastards are not allowed ಅನ್ನೋ ಬೋರ್ಡ್ ಇದೆಯಂತೆ ಗೊತ್ತಾ?(ನನಗೂ ಗೊತ್ತಿಲ್ಲ ಯಾರೋ ಹೇಳಿದ್ದು!)
ನಾನು ಕ್ರಿಶ್ಚಿಯನ್ನರ ವಿರೋಧಿಯಲ್ಲ.ನಿನ್ನ ಹಾಗೆಯೇ ನಾನೂ ಕ್ರಿಷ್ಚಿಯನ್ ಶಾಲೆಗಳಲ್ಲಿ ಓದಿದವನು .ನಾನು ಇಷ್ಟಪಟ್ಟ ಹುಡುಗಿಯರಲ್ಲಿ ನಾಲ್ಕು ಜನ ಕ್ರಿಷ್ಚಿಯನ್ ರು(ಒಟ್ಟು ಎಷ್ಟು ಜನ ಇದ್ರು ಅಂತ ಕೇಳ್ಬೇಡ).
ಹಾಗೆಯೇ ಮುಸ್ಲಿಂ ಜನಾಂಗದ ಬಗ್ಗೇನೂ ನನ್ಗೇನೂ ಪ್ರಾಬ್ಲೆಮ್ ಇಲ್ಲ.
ನಾನೇನೂ ಕಟ್ಟಾ ಹಿಂದು ಅಲ್ಲ.ಹಾಕಿರೋ ಜನಿವಾರ ಯಾವತ್ತೋ ಕಿತ್ತು ಹಾಕಿದ್ದೀನಿ!.ನಾನು ಧರ್ಮದ ಬಗ್ಗೆ ಮಾತಾಡಿದ್ದು ಅದು ’ನನ್ನ ಧರ್ಮ ’ ಅನ್ನೋ ಕಾರಣಕ್ಕೆ.ಅದರಲ್ಲಿ ಎಷ್ಟೆ ಹುಳುಕಿರಲಿ ,ಅದು ಎಷ್ಟೆ ಕೆಟ್ಟದಾಗಿರಲಿ ಅದು ’ನನ್ನ ಧರ್ಮ’.
ಹಾಗೆಯೇ ಮಂಗಳೂರಿನಲ್ಲಿ ಎಷ್ಟೆ ಸಮಸ್ಯೆಗಳಿರಲಿ ಅದು ’ನನ್ನ ಊರು’ ಅದಕ್ಕೆ ಯಾವತ್ತೂ ನನ್ನ support ಇದ್ದೇ ಇರುತ್ತೆ.
ನನ್ನ ಭಾರತ ಎಷ್ಟೇ corrupt ಆಗಿರಲಿ,ಇಲ್ಲಿ ಎಂಥದ್ದೇ ಸಮಸ್ಯೆಗಳಿರಲಿ ಇದು ’ನನ್ನ ಭಾರತ’ .ನನ್ನ ನಿಷ್ಠೆ ಯಾವತ್ತಿದ್ರೂ ಭಾರತಕ್ಕೆ.

ಚೆನ್ನಾಗಿರೋ ಧರ್ಮ, ಭಾಷೆ ,ಭ್ರಷ್ಟಾಚಾರವೇ ಇಲ್ಲದಿರೋ ದೇಶ , select ಮಾಡೋದಿಕ್ಕೆ ಅದೇನು super market ನಲ್ಲಿ ಸಿಗೋ ವಸ್ತು ನಾ ಸುಧೇಶ್?
ಕೆಲವರು ಬೇಕಿದ್ರೆ ಏನೂ ಹುಳುಕಿಲ್ಲದ ಕ್ರಿಷ್ಚಿಯನ್ ಧರ್ಮ ಸಿಲೆಕ್ಟ್ ಮಾಡ್ಲಿ,ಜಗತ್ತಿನಲ್ಲಿರೋ ಅತ್ಯಂತ ಸುಂದರ ಭಾಷೆ ಸೆಲೆಕ್ಟ್ ಮಾಡ್ಕೊಳ್ಳಲಿ,ಭ್ರಷ್ಟಾಚಾರವೇ ಇಲ್ಲದ ಯಾವುದಾದ್ರೂ ದೇಶದ ಸಿಟಿಝನ್ ಶಿಪ್ ತಗೊಂಡು ಆರಾಮಾಗಿರ್ಲಿ .I don't have any problem.

ವಿಕಾಸ್ ಹೆಗಡೆ said...

ನಿಜ, ಪ್ರಶ್ನೆಗಳು ನಮಗೂ ಬಹಳಷ್ಟಿವೆ. ಉತ್ತರವನ್ನೂ ಕಂಡುಕೊಳ್ಳಬೇಕಿದೆ. ಧರ್ಮದ ವಿಷಯದಲ್ಲಿ ಎಲ್ ಬೋರ್ಡುಗಳೇ ಇನ್ನೂ. ಆದರೆ ಅದಕ್ಕಿಂತಲೂ ಮೊದಲು ನಮ್ಮಲ್ಲಿ ಪ್ರಶ್ನೆಗಳನ್ನೇ ಸಾಯಿಸಿಬಿಡುವಂತಹುದನ್ನು ಅಥವಾ ಉತ್ತರ ಬೇಡ ಅನ್ನಿಸಿಬಿಡುವಂತಹುದನ್ನು ತಡೆಯಬೇಕಿದೆ. ಇವರು ನಮ್ಮಮ್ಮ ಎಂದು ತೋರಿಸಲು ಯಾವ ಮುಜುಗುರವೂ ಹೇಗೆ ಇರುವುದಿಲ್ಲವೋ ಹಾಗೇ ಹಿಂದೂ ಎಂದು ಹೇಳಿಕೊಳ್ಳಲು, ಎದೆತಟ್ಟಿಕೊಳ್ಳಲು ಕಾರಣ ಬೇಕಿಲ್ಲ. ಹಾಗಂತ ಸುಮ್ಮನೇ ಬೇರೆಯವರನ್ನು ದ್ವೇಷಿಸುವುದೂ ಬೇಕಿಲ್ಲ. ರೈಟ್?

chitra said...

ಸುಧೇಶ್,
ಚೆನ್ನಾಗಿ ಬರೆದಿದ್ದೀರಾ.

ನನಗನಿಸುವಂತೆ ,ಪ್ರತಿ ಧರ್ಮದಲ್ಲೂ ಒಳ್ಳೆಯ ಅಂಶಗಳೂ ಇವೆ ಹಾಗೆಯೇ ಹುಳುಕುಗಳೂ ಇವೆ.ಆದರೆ ಎಲ್ಲ ಧರ್ಮಗಳ ಉದ್ದೇಶ ,ಬೋಧನೆಯ ಸಾರಗಳಲ್ಲಿ ತುಂಬಾ ಹೋಲಿಕೆಯಿದೆ. ಹಾಗೆ ನೋಡಿದರೆ , ಹಿಂದೂ ಧರ್ಮ ನಿಜಕ್ಕೂ ಪರಧರ್ಮ ಸಹಿಷ್ಣು . ಇದು ಉಳಿದ ಧರ್ಮಗಳನ್ನೂ ಸಹ ಗೌರವಿಸುತ್ತದೆ . ಇತರರನ್ನು ದ್ವೇಷಿಸು ಎನ್ನುವುದಿಲ್ಲ.
ಆದರೆ , ಹರೀಶ್ ಹೇಳಿದಂತೆ , ನಾವು ಇತ್ತೀಚೆ ಅನುಸರಿಸುತ್ತಿರುವ, ಕಾಣುತ್ತಿರುವ ಹಿಂದೂ ಧರ್ಮ ಮೂಲಧರ್ಮಕ್ಕಿಂತ ಬದಲಾಗಿದೆ. ಇದು ನಿಜಕ್ಕೂ ವಿಷಾದಕರ. ಆದರೂ ನಾನೊಬ್ಬ ಹಿಂದೂ ಎಂದು ಪ್ರಪಂಚದ ಯಾವುದೇ ಮೂಲೆಯಲ್ಲೂ ನಿಂತು ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳುವಷ್ಟು ನನ್ನಲ್ಲಿ ಹಿಂದುತ್ವ ಬೇರು ಬಿಟ್ಟಿದೆ. ಧರ್ಮದ ಬಗ್ಗೆ ಹುಟ್ಟುವ ಎಷ್ಟೋ ಪ್ರಶ್ನೆಗಳ ಉತ್ತರ ನಮ್ಮಲ್ಲೇ ಇರುತ್ತದೆ.ಹುಡುಕ ಬೇಕಷ್ಟೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ , ನಿಮ್ಮ ಗೆಳೆಯನಂಥ ಎಷ್ಟೋ ಜನರು ಪರ ಧರ್ಮ ಸ್ವೀಕರಿಸುತ್ತಾರೆ , ಆದರೆ ಒಮ್ಮೆ ಹತ್ತಿರ ಹೋದಮೇಲಷ್ಟೇ ಅಲ್ಲಿರುವ ಕಲ್ಲು, ಹೊಂಡಗಳು ಕಾಣುತ್ತವೆ ಅಲ್ಲವೆ? ಹೀಗೆ ಮತಾಂತರ ಗೊಂಡವರನ್ನು ಅಷ್ಟು ಸುಲಭವಾಗಿ ಅವರ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲಾರರು.ಅಲ್ಲಿಯೂ ಅವರ ತ್ರಿಶಂಕು ಸ್ಥಿತಿಯಿಂದ ಜೀಸಸ್ ಅವರನ್ನು ಪಾರು ಮಾಡಲಾರ ! ಎಲ್ಲರೂ ಅವರವರ ಧರ್ಮವನ್ನು ಪ್ರೀತಿಸಿ ಪರ ಧರ್ಮವನ್ನು ಗೌರವಿಸಿ ಸೌಹಾರ್ದಯುತವಾಗಿ ಬಾಳಬಾರದೇಕೆ?

Anjali said...

Hi Dear,
You narration is very nice,When i saw that,i thought its very long how i ll read that and when i will finish,but once i statred reading this, i found its very interesting.
I cannot comment on regilion da, I am far from it.
I liked Sandeep's comment also.

ಮುತ್ತುಮಣಿ said...

!

Prasad said...

Good narration!! And it has got the deepest feelings of a non KATTA hindu.. or feelings of a common man who always wonders why this kind of things happen around us. Good one Sudesh. Keep goin

ತೇಜಸ್ವಿನಿ ಹೆಗಡೆ- said...

ಸುಧೇಶ್ ಅವರೆ,

ನಿಮ್ಮ ಲೇಖನದೊಳಗಿನ ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು.

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ"- ಆದರೆ ಇದರ ಮಹತ್ವ ಈ ರೀತಿ ಮೋಹಕ್ಕೋ, ಆಮಿಷಕ್ಕೋ ಇಲ್ಲಾ ಮತ್ತಾವುದೋ ಕ್ಷಣಿಕ ಕಾರಣಕ್ಕೋ ಧರ್ಮ ಬದಲಿಸುವಂತಹ ನಿಮ್ಮ ಗೆಳೆಯನ ಗೆಳೆಯನಿಗೆ ಅರ್ಥವಾಗದು. ಮೊದಲು ನಾವು ನಮ್ಮ ಧರ್ಮ, ನಮ್ಮ ಪ್ರದೇಶ, ನಾಡು, ದೇಶ ಇವನ್ನು ಪ್ರೀತಿಸಿ ಗೌರವಿಸಿದರೇ ಮಾತ್ರ ಇತರರ ಧರ್ಮ, ದೇಶಗಳನ್ನು ಗೌರವಿಸಲು ಸಾಧ್ಯವಾಗುವುದು. ತಮ್ಮ ತಮ್ಮ ಧರ್ಮವನ್ನಾಗಲೀ ದೇಶವನ್ನಾಗಲೀ ಪ್ರೀತಿಸದ ಗೌರವಿಸದ ಬಿದ್ಧಿಜೀವಿಗಳು ಅದುಹೇಗೆ ತಮ್ಮನ್ನು ತಾವೇ ವಿಶ್ವಮಾನವರು ಎಂದು ಕರೆಯೆಸಿಕೊಳ್ಳುತ್ತಾರೋ ಕಾಣೆ. ತಾವಿರುವ ಅಸ್ತಿತ್ತ್ವವನ್ನೇ ಕಡೆಗಣಿಸಿ ಬೇರೆಯವರ ಅಸ್ತಿತ್ತ್ವವನ್ನೇ ಪ್ರಶಂಸಿಸುವ ಇಂತಹ ಜನರಿಂದಲೇ ಈ ಮತಾಂತರ ಎಂಬ ಪಿಡುಗಿಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಿರುವುದು- ಇದು ನನ್ನ ಅಭಿಪ್ರಾಯ.. ನಾ ಕಂಡುಕೊಂಡಂದೆ.

hariharapurasridhar said...

Click here to print (This bar will not appear in the final printout)
ಆತ್ಮೀಯ ಮಿತ್ರ,
ಇವತ್ತಿನ ಚರ್ಚ್ ಮೇಲಿನ ಹಲ್ಲೆಯ ಬಗ್ಗೆ ನನ್ನ ಅಸಮಾಧಾನವಿದೆ. ಇದು ಮತಿಗೇಡಿಗಳ ಕೃತ್ಯ ಎಂದಷ್ಟೇ ಹೇಳಬಯಸುವೆ. ಆದರೆ ಹಿಂದುತ್ವವನ್ನು ಅರ್ಠ ಮಾಡಿಕೊಂಡು ಹಿಂದೂವಾಗಿ ಉಳಿಯುತ್ತೇನೆಂಬುದೆಲ್ಲಾ ಕುಣ್ಟುನೆಪಾಗಳಷ್ಟೇ. ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದಮೇಲೆ ,ಅವಳನ್ನು ಪರೀಕ್ಷಿಸಿ ಅರ್ಥಮಾಡಿಕೊಂಡು ,ನನಗೆ ಒಪ್ಪಿಗೆಯಾದರೆ ಮಾತ್ರ ನಾನು ಅವಳನ್ನು ತಾಯಿಯೆಂದು ಒಪ್ಪಿಕೊಳ್ಳುತ್ತೇನೆನ್ದು ಯಾರಾದರೂ ಹೇಳಿದರೆ ,ಏನೆಣಿಸೀತು? ಹಿಂದೂ ಧರ್ಮವನ್ನು ಅಧ್ಯಯನ ಮಾಡಿ ನನಗೆ ಸರಿಕಾಣಿಸಿದರೆ ನಾನು ಆಮೇಲೆ ಹಿಂದೂ ಎಂದು ಒಪ್ಪಿಕೊಳ್ಳುತ್ತೇನೆ, ಎನ್ನುವವರ ಬಗ್ಗೆಯೂ ನನಗೆ ಹಾಗೆಯೇ ಅನ್ನಿಸುತ್ತೆ .ನಾನು ಅಮ್ಮ ಎಂದು ಕರೆಯುತ್ತಿರುವ ಈ ತಾಯಿಯ ಹೊಟ್ಟೆಯಲ್ಲಿ ನಾನು ಹುಟ್ಟಿದ್ದೇನೆಂಬುದು ನನ್ನ ಜನ್ಮದಾರಾಭ್ಯ ನನಗೆ ಬಂದಿರುವ ನಂಬಿಕೆ. ನನಗೆ ಅಷ್ಟು ಸಾಕು , ನನ್ನ ತಾಯಿಯ ಬಗ್ಗೆ ನನಗೆ ಯಾರೂ ಅರ್ಥಮಾಡಿಸಿ ಹೇಳಿಕೊಡಬೇಕಾಗಿಲ್ಲ. ಮೊದಲು ನಂಬಿಕೆ, ಶ್ರದ್ಧೆ, ಆನಂತರ ಉಳಿದದ್ದು.
ಸರ್ವೇ ಭವಂತು ಸುಖಿನ:
ಸರ್ವೇ ಸ೦ತು ನಿರಾಮಾಯಾ:
ಸರ್ವೇ ಭದ್ರಾಣಿ ಪಾಶ್ಯಂತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಕಾಲೇ ವರ್ಷತು ಪಾರ್ಜನ್ಯ:
ಪ್ರುಥಿವೀ ಸಸ್ಯ ಶಾಲಿನೀ
ದೇಶೋಯಮ್ ಶೋಕ ರಹಿತ:
ಸಜ್ಜನಾ ಸನ್ತು ನಿರ್ಭಾಯಾ:||
ನಮ್ಮ ಧರ್ಮವನ್ನು ಅರ್ಥಮಾದಿಕೊಳ್ಳುವುದಕ್ಕೆ ಮೇಲಿನೆರಡು ಶ್ಲೋಕಗಳು ಸಾಕು. ನಮ್ಮ ಋಷಿ ಪುನ್ಗವರು ಸಹಸ್ರಾರು ವರ್ಷಗಳು ತಪಸ್ಸು ಮಾಡಿ ನಮಗೆ ಒಂದು ಜೀವನ ಪದ್ದತಿಯನ್ನು ಕನ್ಡುಹಿಡಿದು ಕೊಟ್ಟಿದ್ದಾರೆ.
ನಮ್ಮ ಪೂರ್ವಿಕರ ನಿತ್ಯ ಪ್ರಾರ್ಥನೆ ಹೇಗಿತ್ತು? ಭಾಗವಂತನಲ್ಲಿ ಪ್ರಾರ್ಥನೆ ಮಾಡುವಾಗ ತನ್ನೊಬ್ಬನಿಗೆ ಒಳ್ಲೆಯದು ಮಾಡೆನ್ದು ದೇವರಲ್ಲಿ ಪ್ರಾರ್ಥಿಸಲಿಲ್ಲ. ಅಥವಾ ತನ್ನ ಜಾತಿಯವರಿಗೆ,ತನ್ನ ಧರ್ಮದವರಿಗೆ ಮಾತ್ರ ಒಳ್ಳೆಯದನ್ನು ಮಾಡೇಂದೂ ಕೇಳಲಿಲ್ಲ; ಬದಲಿಗೆ ಇಡೀ ವಿಶ್ವಕ್ಕೇ ಒಳ್ಳೆಯದು ಮಾಡು, ಜಗತ್ತೆಲ್ಲಾ ಸುಖವಾಗಿರಲಿ,ಕೇವಲ ಮನುಷ್ಯರಷ್ಟೇ ಅಲ್ಲಾ, ಅಣು ರೇಣು ತ್ಱುಣಕಾಷ್ಟ ಗಳಲ್ಲೂ ಭಗವಂತನನ್ನು ಕಾಣುವಷ್ಟು ವಿಶಾಲ ಹ್ಱುದಯಿ ಯಾಗಿದ್ದರು ನಮ್ಮ ಪೂರ್ವಿಕರು. ಈಗ ಹೇಳಿ ಇಂತಾ ಒಂದು ಧರ್ಮದಲ್ಲಿ ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲವೋ ಅಲ್ಲವೋ?
ನನ್ನ ಬ್ಲಾಗನ್ನೊಮ್ಮೆ ಇಣುಕಿ, ಅಲ್ಪಸ್ವಲ್ಪ ಮಾಹಿತಿ ಸಿಗಬಹುದು,ಅಷ್ಟೇ ಅಲ್ಲ,ನಮ್ಮ ನಿಮ್ಮ ಪ್ರೀತಿಯೂ ಉಳಿಯಬಹುದು.
ಇಂತು,
ಹರಿಹರಪುರಶ್ರೀಧರ್
hariharapurasridhar.blogspot.com

hariharaurasridhar said...

here to print (This bar will not appear in the final printout)
ಆತ್ಮೀಯ ಮಿತ್ರ,
ಇವತ್ತಿನ ಚರ್ಚ್ ಮೇಲಿನ ಹಲ್ಲೆಯ ಬಗ್ಗೆ ನನ್ನ ಅಸಮಾಧಾನವಿದೆ. ಇದು ಮತಿಗೇಡಿಗಳ ಕೃತ್ಯ ಎಂದಷ್ಟೇ ಹೇಳಬಯಸುವೆ. ಆದರೆ ಹಿಂದುತ್ವವನ್ನು ಅರ್ಥ ಮಾಡಿಕೊಂಡು ಹಿಂದೂವಾಗಿ ಉಳಿಯುತ್ತೇನೆಂಬುದೆಲ್ಲಾ ಕುನ್ಟುನೆಪಗಳಷ್ಟೆ. ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದಮೇಲೆ ,ಅವಳನ್ನು ಪರೀಕ್ಷಿಸಿ ಅರ್ಥಮಾಡಿಕೊಂಡು ,ನನಗೆ ಒಪ್ಪಿಗೆಯಾದರೆ ಮಾತ್ರ ನಾನು ಅವಳನ್ನು ತಾಯಿಯೆಂದು ಒಪ್ಪಿಕೊಳ್ಳುತ್ತೇನೆನ್ದು ಯಾರಾದರೂ ಹೇಳಿದರೆ ,ಏನೆನ್ನಬೇಕು?ಹಿಂದೂ ಧರ್ಮವನ್ನು ಅಧ್ಯಯನ ಮಾಡಿ ನನಗೆ ಸರಿಕಾಣಿಸಿದರೆ ನಾನು ಆಮೇಲೆ ಹಿಂದೂ ಎಂದು ಒಪ್ಪಿಕೊಳ್ಳುತ್ತೇನೆ, ಎನ್ನುವವರ ಬಗ್ಗೆಯೂ ನನಗೆ ಹಾಗೆಯೇ ಅನ್ನಿಸುತ್ತೆ .ನಾನು ಅಮ್ಮ ಎಂದು ಕರೆಯುತ್ತಿರುವ ಈ ತಾಯಿಯ ಹೊಟ್ಟೆಯಲ್ಲಿ ನಾನು ಹುಟ್ಟಿದ್ದೇನೆಂಬುದು ನನ್ನ ಜನ್ಮದಾರಾಭ್ಯ ನನಗೆ ಬಂದಿರುವ ನಂಬಿಕೆ. ನನಗೆ ಅಷ್ಟು ಸಾಕು , ನನ್ನ ತಾಯಿಯ ಬಗ್ಗೆ ನನಗೆ ಯಾರೂ ಅರ್ಥಮಾಡಿಸಿ ಹೇಳಿಕೊಡಬೇಕಾಗಿಲ್ಲ. ಮೊದಲು ನಂಬಿಕೆ, ಶ್ರದ್ಧೆ, ಆನಂತರ ಉಳಿದದ್ದು.
ಸರ್ವೇ ಭವಂತು ಸುಖಿನ:
ಸರ್ವೇ ಸ0ಟು ನಿರಾಮಯಾ:
ಸರ್ವೇ ಭದ್ರಾಣಿ ಪಶ್ಯನ್ತು
ಮಾ ಕಶ್ಚಿತ್ ದು:ಖ ಭಾಗ್ಭವೇತ್||
ಕಾಲೇ ವರ್ಷತು ಪರ್ಜನ್ಯ:
ಪ್ರುಥಿವೀ ಸಸ್ಯ ಶಾಲಿನೀ
ದೇಶೋಯಮ್ ಶೋಕ ರಹಿತ:
ಸಜ್ಜನಾ ಸನ್ತು ನಿರ್ಭಯಾ:||
ನಮ್ಮ ಧರ್ಮವನ್ನು ಅರ್ಥಮಾದಿಕೊಳ್ಳುವುದಕ್ಕೆ ಮೇಲಿನೆರಡು ಶ್ಲೋಕಗಳು ಸಾಕು. ನಮ್ಮ ಋಷಿ ಪುನ್ಗವರು ಸಹಸ್ರಾರು ವರ್ಷಗಳು ತಪಸ್ಸು ಮಾಡಿ ನಮಗೆ ಜೀವನ ಪದ್ದತಿಯನ್ನು ಕನ್ಡುಹಿಡಿದು ಕೊಟ್ಟಿದ್ದಾರೆ.
ನಮ್ಮ ಪೂರ್ವಿಕರ ನಿತ್ಯ ಪ್ರಾರ್ಥನೆ ಹೇಗಿತ್ತು? ಭಗವಂತನಲ್ಲಿ ಪ್ರಾರ್ಥನೆ ಮಾಡುವಾಗ ತನ್ನೊಬ್ಬನಿಗೆ ಒಳ್ಳೆಯದು ಮಾಡೆನ್ದು ದೇವರಲ್ಲಿ ಪ್ರಾರ್ಥಿಸಲಿಲ್ಲ. ಅಥವಾ ತನ್ನ ಜಾತಿಯವರಿಗೆ,ತನ್ನ ಧರ್ಮದವರಿಗೆ ಮಾತ್ರ ಒಳ್ಳೆಯದನ್ನು ಮಾಡೇಂದೂ ಕೇಳಲಿಲ್ಲ; ಬದಲಿಗೆ ಇಡೀ ವಿಶ್ವಕ್ಕೇ ಒಳ್ಳೆಯದು ಮಾಡು, ಜಗತ್ತೆಲ್ಲಾ ಸುಖವಾಗಿರಲಿ,ಕೇವಲ ಮನುಷ್ಯರಷ್ಟೇ ಅಲ್ಲಾ, ಅಣು ರೇಣು thruಣಕಾಷ್ಟ ಗಳಲ್ಲೂ ಭಗವಂತನನ್ನು kaaಣುವ ವಿಶಾಲ ಭಾವವನ್ನು ಹೊಂದಿದ್ದರು ನಮ್ಮ ಪೂರ್ವಿಕರು. ಈಗ ಹೇಳಿ ಇಂತಾ ಒಂದು ಧರ್ಮದಲ್ಲಿ ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಪುಣ್ಯದ ಫಲವೋ ಅಲ್ಲವೋ?
ನನ್ನ ಬ್ಲಾಗನ್ನೊಮ್ಮೆ ಇಣುಕಿ, ಅಲ್ಪಸ್ವಲ್ಪ ಮಾಹಿತಿ ಸಿಗಬಹುದು,ಅಷ್ಟೇ ಅಲ್ಲ,ನಮ್ಮ ನಿಮ್ಮ ಪ್ರೀತಿಯೂ ಉಳಿಯಬಹುದು.
ಇಂತು,
ಹರಿಹರಪುರಶ್ರೀಧರ್
hariharapurasridhar.blogspot.com

VENU VINOD said...

sudesh,

ಯಾರೋ ಎಲ್ಲಿಯೋ ಹೇಳಿದ್ದು ನೆನಪಾಯ್ತು...
goes like this
‘ಬೇರೆ ಧರ್ಮವನ್ನು ಗೌರವಿಸೋಣ, ನಮ್ಮ ಧರ್ಮದಲ್ಲಿ ಬದುಕೋಣ’
thought provoking write up

ಸುಧೇಶ್ ಶೆಟ್ಟಿ said...

ಹರೀಶ್,
ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸಿದೆ. ಆದರೆ ಆತ ಅರ್ಥವಾಗದ೦ತೆ ಮಾತನಾಡುತ್ತಾನೆ. ಅಲ್ಲದೆ ಅವನು ನನಗೆ ಅಷ್ಟೊ೦ದು ಆತ್ಮೀಯನಲ್ಲ. ಆದರೆ ನಾನು ಅವನಲ್ಲಿ ಆ ಸತ್ಯವೇನೆ೦ಬುದನ್ನು ತಿಳಿದೇ ತಿಳಿಯುತ್ತೇನೆ:)
ನೀವು ಬರೆದದ್ದು ಅಕ್ಷರಶ: ನಿಜ. ಪ್ರತಾಪ್ ಸಿ೦ಹರ ಬರಹಗಳನ್ನು ಈಗಾಗಲೇ ಓದಿದ್ದೇನೆ. ಹಿ೦ದುತ್ವದ ಬಗ್ಗೆ ಚೆನ್ನಾಗಿ ಬರೆದಿದ್ದಾರೆ.
ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ.

ಸ೦ದೀಪ್,
ಥ್ಯಾ೦ಕ್ಸ್ ಕಣೋ:)
ನನಗೆ ನಿನ್ನ ವಿಚಾರಧಾರೆ ತು೦ಬಾ ಇಷ್ಟ ಆಯಿತು.
ಇತ್ತೀಚೆಗೆ ಧರ್ಮದ ಬಗ್ಗೆ ಯೋಚಿಸಲು ಪ್ರಾರ೦ಬಿಸಿದ್ದೇನೆ. ನನ್ನ ಧರ್ಮದ ಬಗ್ಗೆ ನನಗೆ ಗೊತ್ತಿರಬೇಕು ಎನ್ನುವ ಆಶಯವೇ ಹೊರತು, ಇತರ ಧರ್ಮಕ್ಕಿ೦ತ ನನ್ನ ಧರ್ಮ ಎಷ್ಟು ಉತ್ತಮ ಎ೦ದು ತಿಳಿದುಕೊಳ್ಳಲಲ್ಲ.

ಚಿತ್ರಾ,

ನೀವು ಹೇಳಿದ೦ತೆ ಹಿ೦ದೂ ಧರ್ಮ ಪರಧರ್ಮ ಸಹಿಷ್ಣು. ಈ ಗುಣವೇ ಅದಕ್ಕೆ ಮುಳುವಾಗಿರುವುದು ಮಾತ್ರ ವಿಷಾದನೀಯ. ಹಿ೦ದಿನ ಹಿ೦ದೂ ಧರ್ಮಕ್ಕೂ ಈಗಿರುವುದಕ್ಕೂ ತು೦ಬಾ ವ್ಯತ್ಯಾಸವಿರುವುದು ನಿಜ. ಅದು ಆಚರಣೆಯಲ್ಲಿರಬಹುದು. ಆದರೆ ನಮ್ಮ ಧರ್ಮ ಏನು ಎ೦ದು ಸರಿಯಾಗಿ ಯೋಚಿಸದೇ, ಯಾರದೋ ಮಾತಿನ ಪ್ರಭಾವದಿ೦ದ ಮತಾ೦ತರಗೊ೦ಡ ನನ್ನ ಗೆಳೆಯನ ಬಗ್ಗೆ ಬೇಸರ. ನಿಮ್ಮೆಲ್ಲರ ಕಮೆ೦ಟುಗಳನ್ನು ಆತ ಓದಬೇಕು. ಆಗಲಾದರೂ ತಿಳಿದೀತು ತಾನು ಕಳೆದುಕೊ೦ಡಿದ್ದು ಏನೆ೦ದು.

ವಿಕಾಸ್,
100% ರೈಟ್. ಹೌದು. ನಮ್ಮಲ್ಲಿ ಪ್ರಶ್ನೆಗಳನ್ನು ಹುಟ್ಟಲು ಬಿಡುವವರು ಕಡಿಮೆಯೇ. ನನಗೂ ಧರ್ಮದ ಬಗ್ಗೆ ಹಲವು ಪ್ರಶ್ನೆಗಳಿದ್ದರೂ, ಅದು ನನ್ನ ವ್ಯಾಪ್ತಿಗೆ ನಿಲುಕದ್ದು ಅ೦ದುಕೊ೦ಡು ಸುಮ್ಮನಿದ್ದು ಬಿಟ್ಟಿದ್ದೆ. ಪ್ರಶ್ನೆಗಳಿಗೆ ಉತ್ತರಗಳನ್ನು ಸೇರಿಕೊ೦ಡು ಹುಡುಕೋಣ.

ಅ೦ಜಲಿ,
thanks for the appreciation. But I would have been more happy if you had given your thoughts on Religion.

ಹೇಮಾ,
ಏನಾಯಿತು!

ತೇಜಸ್ವಿನಿಯವರೇ,
ಸರಿಯಾಗಿ ಹೇಳಿದಿರಿ. ತಾವಿರುವ ಅಸ್ತಿತ್ತ್ವವನ್ನೇ ಕಡೆಗಣಿಸಿ ಬೇರೆಯವರ ಅಸ್ತಿತ್ತ್ವವನ್ನೇ ಪ್ರಶಂಸಿಸುವ ಕೆಲಸವನ್ನೇ ಬುದ್ದಿಜೀವಿಗಳು ಪ್ರಸ್ತುತ ಮಾಡುತ್ತಿರುವುದು. ಅದು ಬೆ೦ಗಳೂರಿನಲ್ಲಿ ನೈಟ್ ಲೈಫ್, ನೈಟ್ ಡ್ಯಾನ್ಸ್ ಅನ್ನು ಕ೦ಟ್ರೋಲ್ ಮಾಡುವುದ೦ತಹುದೇ ಆಗಿರಲಿ,ಕಾವೇರಿ ವಿವಾದವೇ ಆಗಿರಲಿ, ಮತವೇ ಆಗಿರಲಿ.ಇತ್ತೀಚೆಗೆ ಬುದ್ದಿಜೀವಿಗಳ ಮೆದುಳು ನೇರವಾಗಿ ಯೋಚಿಸುವುದನ್ನೇ ನಿಲ್ಲಿಸಿಬಿಟ್ಟಿದೆಯೇನೋ ಎ೦ಬ೦ತೆ ವರ್ತಿಸುತ್ತಿದ್ದಾರೆ.

Prasad,

You are correct. I am not a Katta hindu. But at the same time I am comfortable in being a Hindu and happy with it. The instances I had recently faced made me think seriously about religion these days and I wondered why all these things are happening.

Thanks for the comment.

ಶ್ರೀಯುತ ಹರಿಹರಪುರ ಶ್ರೀಧರ ಅವರೇ,
ನಿಮ್ಮ ಅಭಿಪ್ರಾಯಕ್ಕೆ ನನ್ನ ಸಮ್ಮತಿಯಿದೆ. ಆದರೆ ಒ೦ದು ಸಮಜಾಯಿಷಿ. ನಾನು ಹಿ೦ದೂ ಧರ್ಮದ ಬಗ್ಗೆ ತಿಳಿದುಕೊ೦ಡು ನ೦ತರ ಅದು ಇಷ್ಟವಾದರೆ ಅದನ್ನು ಅನುಸರಿಸುತ್ತೇನೆ ಎ೦ದು ನನ್ನ ಬರಹದಲ್ಲಿ ಹೇಳಿಲ್ಲ. ನನ್ನ ಬರಹ ಆ ಅಭಿಪ್ರಾಯವನ್ನು ಧ್ವನಿಸಿದರೆ ಕ್ಷಮೆಯಿರಲಿ. ಹೌದು ನನ್ನ ತಾಯಿ ಹೇಗಿದ್ದರೂ ನನ್ನ ತಾಯಿಯೇ. ಹಾಗ೦ತ ಆಕೆಯನ್ನು ಸರಿಯಾಗಿ ಆರ್ಥಮಾಡಿಕೊಳ್ಳದೇ, ನನ್ನ ಇಷ್ಟಬ೦ದ೦ತೆ ಇರುವುದು, ವರ್ತಿಸುವುದು ಆಕೆಗೆ ಖ೦ಡಿತಾ ಇಷ್ಟವಾಗಲಾರದು. ಅದಕ್ಕೆ ನನ್ನ ತಾಯಿ ಏನು ಹೇಳುತ್ತಾಳೆ ಎ೦ದು ಅರಿತು ಆಕೆಯನ್ನು ಅರಿತುಕೊಳ್ಳುವ ದಿಸೆಯಲ್ಲೊ೦ದು ನನ್ನ ಸಣ್ಣ ಪ್ರಯತ್ನ.

ವೇಣು,
ಸತ್ಯವಾದ ಮಾತು.
Thanks for commenting.

ಮುತ್ತುಮಣಿ said...

ಏನಿಲ್ಲಾ ಧರ್ಮದ ಬಗ್ಗೆ ಇದೇ ಮೊದಲ ಬಾರಿ ಇಷ್ಟು ಗಂಭೀರವಾದ ಚರ್ಚೆಯನ್ನು ನೋಡಿದ್ದು, ಕೇಳಿದ್ದು. ಇದು ಬೇಕಾ ಅಂತಲೂ ಅನ್ನಿಸಿತು!

ಸುಧೇಶ್ ಶೆಟ್ಟಿ said...

ಹೇಮಾ,

ನನಗೂ ಹಾಗೇ ಅನ್ನಿಸ್ತಿತ್ತು. ಧರ್ಮದ ಬಗ್ಗೆ ಅಷ್ಟೊ೦ದು ಚರ್ಚೆ, ಗಲಾಟೆ ಬೇಕಾ ಎ೦ದು. ಆದರೆ ಯಾವುದೇ ಸಮಸ್ಯೆಯಾಗಲೀ, ನಮ್ಮ ಕಾಲ ಬುಡಕ್ಕೆ ಬರುವವರೆಗೆ ಅದು ಸಮಸ್ಯೆ ಎ೦ದು ಅನಿಸುವುದಿಲ್ಲ. ಅತಿಯಾಗುವವರೆಗೆ ಸುಮ್ಮನಿರುವುದು ಎ೦ದಿಗೂ ಸರಿ. ಆದರೆ ಮಿತಿಮೀರಿದರೆ ಅದನ್ನು ಖ೦ಡಿಸುವುದು ಅಷ್ಟೇ ಸರಿ.
ಏನ೦ತೀರಾ?

ಸಂದೀಪ್ ಕಾಮತ್ said...

ಸರಿಯಾಗಿ ಹೆಳಿದೆ ಸುಧೇಶ್,
ನಾನು ನಮ್ಮೂರಿಗೆ ಕೊಜೆಂಟ್ರಿಕ್ಸ್ ಬರಬಾರದು ಅಂತ್ ABVP Protest ನಡೆಸಿದಾಗ ಟೆಂಪೋದಲ್ಲಿ ನೇತಾಡಿಕೊಂಡು ಘೋಷಣೆ ಕೂಗಿಕೊಂಡು ಪ್ರತಿಭಟನೆಗೆ ಹೋದಾಗ ನಮ್ಮ ಪರಿಚಯದವರೊಬ್ಬರು ನನ್ನ ತಂದೆಯ ಹತ್ತಿರ ದೂರು ನೀಡಿದ್ರು ’ನಿಮ್ಮ ಮಗ ಪೊಲಿ ಅಲೀತಾ ಇದ್ದಾನೆ ’ ಅಂತ.
ಈಗ SEZ ಏನೋ ಬಂದು ಅವರ ಜಾಗಕ್ಕೆ ಕುತ್ತು ಬಂದಾಗ ಬನ್ನಿ ಪ್ರತಿಭಟನೆ ಮಾಡೋಣ ಅಂತಿದ್ರಂತೆ ಮಹಾನುಭಾವರು.

hariharapurasridhar said...

ಜನರು ಇತ್ತೀಚೆಗೆ ಧರ್ಮದ ಬಗ್ಗೆ ಮಾತಾಡ್ತಾ ಇದ್ದಾರಲ್ಲಾ, ಅನ್ನೋದು ಸಮಾಧಾನದ ಸಂಗತಿ. ನನ್ನ ಸ್ಪಷ್ಟ ಅಭಿಪ್ರಾಯದಲ್ಲಿ ನಮ್ಮದೇಶದಲ್ಲಿ ಗೊಂದಲ ಉನ್ಟುಮಾಡುವ ಯಾರಬಗ್ಗೆಯೂ ನನ್ನ ಒಲವಿಲ್ಲ. ಯಾವುದೇ ಗುಂಪಿಗೂ ಅನ್ಟಿಕೊಳ್ಳುವುದಕ್ಕೂ ಇಷ್ಟವಿಲ್ಲ. ಕಾರಣ ಧರ್ಮದ ಹೆಸರಲ್ಲಿ ದೇಶದಲ್ಲಿ ಈಗ ಏನೇನೋ ನಡೀತಾ ಇದೆ. ರಾಜಕೀಯವೂ ಇದರಿಂದ ಹೊರತಾಗಿಲ್ಲ. ಆದರೆ ಕೆಲವೇ ಕೆಲವರು ಹಿಂದೂ ಧರ್ಮದಲ್ಲಿರುವ ಜಗತ್ ಕಲ್ಯಾಣದಬಗ್ಗೆ ಒಂದೂ ಒಳ್ಳೆಯ ಮಾತನಾಡದೇ ಬೆಳೆಯನ್ನು ಬಿಟ್ಟು ಕಳೆಯನ್ನು ಹುಡುಕುತ್ತಾರಲ್ಲಾ!! ಅದಕ್ಕೆ ಹೆಚ್ಚು ಪ್ರಚಾರ ಸಿಗುತ್ತಲ್ಲಾ!! ಅದು ವಿಷಾದದ ಸಂಗತಿ. ಹಿನ್ದುಗಳಿಗಷ್ಟೇ ಅಲ್ಲ, ಇಡೀ ಜಗತ್ತು ಸುಖ-ಸಮೃದ್ಧಿ-ಸಮಾಧಾನಗಳಿನ್ದ ಇರಬೇಕೆನ್ದರೆ ನಮ್ಮ ಋಷಿಮುನಿಗಳ ಚಿನ್ತನೆಗಳನ್ನು ಅಧ್ಯಯನ ಮಾಡುವುದು ಲೋಕಹಿತಕ್ಕಾಗಿ ಅನಿವಾರ್ಯವಾಗಿದೆ. ಅದುಬಿಟ್ಟು ಸತ್ಯವನ್ನು ಸಾಯಿಸಿ ಅದರ ಸಮಾಧಿಯಮೇಲೆ " ವೈಚಾರಿಕ ಚಿಂತನೆ " ಹೆಸರಿನಲ್ಲಿ ಒಂದು ದೊಡ್ಡ ಷಡ್ಯ೦ತ್ರ ನಡೆದಿದೆ, ಅದು ದು:ಖದ ಸಂಗತಿ. ಇನ್ನೊಂದು ಸ್ಲೋಪಾಯಿಸನ್ ಬಗ್ಗೆ ಜಾಗೃತಿ ಮೂಡಿಸುವುದು ತುಂಬಾ ಅನಿವಾರ್ಯ. ಅದೆಂದರೆ ಹಿಂದೂ ಸ್ತ್ರೀಯರಾಗಲೀ ಪುರುಷರಾಗಲೀ ಧರಿಸುತ್ತಿರುವ ಉಡುಗೆ-ತೊಡುಗೆಗಳಲ್ಲಿ, ಅಲಂಕಾರದಲ್ಲಿ, ಆಹಾರ ವಿಹಾರದಲ್ಲಿ , ಪಾಷ್ಚಿಮಾತ್ಯ ಅನ್ಧಾನುಕರಣೆ. ಅರೆಬರೆ ಬಟ್ಟೆತೊಟ್ಟು, ಹಣೆಯಲ್ಲಿ ಕುನ್ಕುಮವಿಡದೆ, ಕೈಲಿ ಬಳೆಯಿಲ್ಲದೇ ರಸ್ತೆಯಲ್ಲಿ ತಿರುಗುವ ನಮ್ಮ ಹೆಣ್ಣು ಮಕ್ಕಳಿಗೆ , ಅದರಿಂದಾಗುವ ದುಷ್ಪರಿಣಾಮದ ಅರಿವಾಗುತ್ತಿಲ್ಲ. ಈ ಸಂಗತಿಗಳು ಮುಂದೊಂದು ದಿನ ನಮ್ಮ ಯುವಕ-ಯುವತಿಯರ ಬಾಳಲ್ಲಿ ಮುಳ್ಳಾಗಿ , ನರಕ ವಾಗುವುದನ್ನು ನಾವು ಗಮನಿಸುತ್ತಿಲ್ಲ. ಸಹವಾಸದಂತೆ ಬುದ್ಧಿ-ಆಹಾರದನ್ತೆ ಲದ್ದಿ , ಅನ್ನೋ ಮಾತಿದೆ. ಹೌದು.. ನಾವು ತಿನ್ನುವ ಆಹಾರ, ನಮ್ಮ ಪರಿಸರ, ನಮ್ಮ ಉಡುಗೆ-ತೊಡಿಗೆ, ಎಲ್ಲವೂ ನಮ್ಮ ಮೇಲೆ ಪರಿಣಾಮ ಬೀರುತ್ತಿರುವುದರಲ್ಲಿ ಸಂದೇಹ ವಿಲ್ಲ. ಯಾವುದರಿಂದ ಪಾಷ್ಚಿಮಾತ್ಯರು ಬೇಸತ್ತು ,ತಮ್ಮ ಜೀವನದ ಹಾದಿ ಸರಿಯಿಲ್ಲವೆನ್ದು ಮನಗನ್ಡು ಅದನ್ನು ತ್ಯಜಿಸಿ, ನಮ್ಮ ಸಂಸ್ಕೃತಿಯನ್ನು ಅನುಸರಿಸಲು ಉತ್ಸುಕರಾಗಿ ಭಾರತಕ್ಕೆ ಧಾವಿಸುತ್ತಿದ್ದಾರೋ , ಅವರು ತ್ಯಜಿಸಿದ ಅದೇ ಎಂಜಲು ಮಾರ್ಗವನ್ನು ನಮ್ಮ ಯುವಕರು ಆಧುನಿಕತೆಯ ಹೆಸರಲ್ಲಿ ಆರಿಸಿಕೊಳ್ಳುತ್ತದ್ದಾರಲ್ಲಾ !! ಎಂತಾ ವಿಪರ್ಯಾಸ ಅಲ್ಲವೇ? ಇವರಿಗೆ ತಿಳಿಹೇಳುವವರ್ಯಾರು?
ಹರಿಹರಪುರಶ್ರೀಧರ್
hariharapurasridhar.blogspot.com

ಮುತ್ತುಮಣಿ said...

:)

shivu K said...

ಸುಧೇಶ್,
ನಿಮ್ಮ ಬರವಣಿಗೆ ಕಾಳಜಿ ಇಷ್ಟವಾಯ್ತು. ನನಗೂ ನಿಮ್ಮ ಹಾಗೆ ಯಾವ ಧರ್ಮದ ಹಿಂದೆಯೂ ಬೀಳುವ ಅಗತ್ಯವಿಲ್ಲ. ಅದಕ್ಕಿಂತ ಮೊದಲು ಮನುಷ್ಯ ಧರ್ಮದ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ನನ್ನ ದಿನಪತ್ರಿಕೆ ವಿತರಣೆಯ ಹುಡುಗರು ತಮಿಳು, ತೆಲುಗು, ಕ್ರೈಸ್ತ, ಮಾರವಾಡಿ, ಹಿಂದೂ ... ಹೀಗೆ ಎಲ್ಲಾ ಮತಭಾಂದವರು ಇದ್ದಾರೆ.. ಅವರೆಲ್ಲರ ಜೊತೆ ನನ್ನ ಈ ವ್ಯವಹಾರ ಮತ್ತು ಇನ್ನಿತರ ಸಂಭಂದಗಳು ಹತ್ತು ವರ್ಷಗಳಿಂದ ಇದೆ.. ಹಾಗೂ ಚೆನ್ನಾಗೆ ಇದೆ. ಯಾರು ಎಂದು ನಮ್ಮ ಮತ ದರ್ಮಗಳ ಬಗ್ಗೆ ಪ್ರಶ್ನಿಸಿಲ್ಲ ಮತ್ತು ಮಾತಾಡಿಲ್ಲ.

ಮುತ್ತುಮಣಿ said...

ಯಾವಾಗ ಹೊಸ ಪೋಸ್ಟ್?