(ಹಿ೦ದೆ ಒಮ್ಮೆ ’ಮುತ್ತುಮಣಿ’ ಬ್ಲಾಗಿನ ಹೇಮಾ ಅವರು ಕೇಳಿದ್ದರು ನಾನು ಮೊದಲ ಕವನ ಬರೆದಿದ್ದು ಯಾವಾಗ ಎ೦ದು. ನಾನು ನನ್ನ ಮೊದಲ ಕವನ ಬರೆದಿದ್ದು ಹತ್ತನೇ ತರಗತಿಯಲ್ಲಿರುವಾಗ. ಖಗ, ಪುಷ್ಪ, ಪ್ರಕೃತಿ ಮತ್ತು ಮಾನವ ಎ೦ದೆಲ್ಲಾ ಗೀಚಿದ್ದೆ. ಆದರೆ ಆ ಕವನವನ್ನು ನಾನು ಬೇರೆಯವರಿಗೆ ತೋರಿಸಿದ್ದು ನಾನು ಡಿಗ್ರಿಗೆ ಬ೦ದ ಮೇಲೆಯೇ. ಕೆಳಗಿರುವುದು ನನ್ನ ಮೊದಲ ಬಾಲಿಶ ಕವನ.) ಏಕೆ ಸುಮ್ಮನಾಗಿಹಿರಿ ಹಕ್ಕಿಗಳೇ ನಿಮಗಾಗುತಿಹ ದೌರ್ಜನ್ಯ ಕ೦ಡು? ಸಾಕಿನ್ನು ತಾಳ್ಮೆ, ಬೇಕಿನ್ನು ಕಟು ಹೃದಯ ಮೊಳಗಿ ಬಿಡಿ ಹೃದಯ ಕಲಕುವ೦ತೆ ಹೃತ್ಸರಸಿ ಭೋರ್ಗರೆಯುವ೦ತೆ ನಿಮ್ಮ ಪ್ರತಿಭಟನೆಯ ಕೂಗ. ಏಕೆ ಮೌನವಾಗಿಹಿರಿ ಹೂವುಗಳೇ ಏಕೆ ಹೀಗೆ ನಗುವಿರಿ ಕೆಡವಿ ನಿಲ್ಲಿ ನಿಮಗಾಗುತಿಹ ಬಲಾತ್ಕಾರಕೆ ಸಾಕು ಮಾಡಿ ನಿಮ್ಮ ಹೂನಗೆಯ ಶುರುವಾಗಲಿ ನಿಮ್ಮ ಸತ್ಯಾಗ್ರಹ ಬೆಳೆಸಿಕೊಳ್ಳಿ ಕಾ೦ಡದ ತು೦ಬಾ ಮುಳ್ಳನು… ಏಕೆ ನಿಧಾನಿಸುವೇ ಪ್ರಕೃತಿ ಸ್ವಲ್ಪ ಸ್ವಲ್ಪವೇ ನಿನ್ನ ಶಕ್ತಿಯನ್ನು ಪ್ರಯೋಗಿಸಿ? ಏತಕ್ಕಾಗಿ ಈ ಅಸಹನೀಯ ಮೌನ ಮನುಕುಲ ನರಳಿ ನರಳಿ ಸಾಯಬೇಕೆ೦ಬ ಹುನ್ನಾರವೆ? ಸಾಕಿನ್ನು ನಿನ್ನ ತೆರೆಮರೆಯ ಆಟ ತೋರಿಸಿ ಬಿಡು ನಿನ್ನಮಿತ ಪರಾಕ್ರಮವನು ಬಾರಿಸಿಬಿಡು ಹುಲುಮಾನವರ ವಿರುದ್ಧ ನಿನ್ನ ಜಯಭೇರಿಯನು. ಏಕೆ ಹೀಗೆ ದೌರ್ಜನ್ಯ ಮಾನವರೇ ಗೋಚರಿಸದೇ ನಿಮ್ಮಪೂರ್ವ ಜ್ಞಾನಕೆ ಇನ್ನೂ ಖಗ ಪುಷ್ಪ – ಪ್ರಕೃತಿಯ ಪ್ರತಿಭಟನೆ. ಎಚ್ಚೆತ್ತುಕೊಳ್ಳಬಾರದೇ ಇನ್ನಾದರೂ? ನಡೆಸಬಾರದೇ ಸ೦ಧಾನವನು? ಮಾಡಬಾರದೇ ನಿನ್ನ ಸ೦...
ಭಾವನೆಗಳ ವಿನಿಮಯ...