ಇನ್ನೂ ಸ್ವಲ್ಪ ನೆನಪುಗಳು….!
“lol! Whoever you are! Today is not my birth day. I was already over a few days back… Cheers”.
ಮತ್ತೆ ಮತ್ತೆ ಆ ಮೆಸೇಜನ್ನು ಓದಿದಳು ಸುಚೇತಾ.
ಇದೇ ತರಹ ಅದೆಷ್ಟು ವಿಷಯಗಳಲ್ಲಿ ನನಗೆ ಸುಳ್ಳು ಹೇಳಿದ್ದೀಯಾ ನೀನು…? “ಸೆನ್ಸಿಟಿವ್ ನೆಸ್” ಅನ್ನೋ ಪದದ ಅರ್ಥ ಗೊತ್ತಿದ್ದರೆ ನಿನಗೆ ಚೆನ್ನಾಗಿರುತ್ತದೆ. ನಿನಗೆ ’ಸೆನ್ಸಿಟಿವ್’, ’ಇಮೋಷನಲ್” ಅ೦ದರೆ ನಗು ಬರುತ್ತದೆ ಅಲ್ವಾ? ಪ್ರಾಕ್ಟಿಕಲ್ ಅ೦ತ ತಾನೇ ನಿನ್ನ ನೀನು ಕರೆದುಕೊಳ್ಳುವುದು. ತಿಳ್ಕೋ… ಪ್ರಾಕ್ಟಿಕಲ್ ಅ೦ದ್ರೆ ಭಾವನೆಗಳೇ ಇಲ್ಲದಿರುವ೦ತೆ ಇರುವುದಲ್ಲ… ಭಾವನೆಗಳು ನಿಯ೦ತ್ರಣದಲ್ಲಿ ಇಟ್ಟುಕೊಳ್ಳುವುದು ಪ್ರಾಕ್ಟಿಕಲ್ ನೆಸ್…..
ನಾನು ಯಾಕೆ ಇವನಿಗೆ ಇನ್ನೂ ಕಾಯ್ತ ಇದೀನಿ… ಯಾವಾಗಲಾದರೂ ನನ್ನ ಅರ್ಥ ಮಾಡಿಕೊ೦ಡು ಹಿ೦ದೆ ಬರುತ್ತಾನ ಅವನು? ಹಿ೦ದೆ ಬರಲಾರದಷ್ಟು ದೂರಕ್ಕೆ ಹೋಗಿದ್ದಾನಲ್ಲ…? ನನ್ನ ನೆನಪು ಒ೦ದು ಚೂರು ಇಲ್ಲವೇನು ಅವನಿಗೆ? ನಾನು ಅವತ್ತು ಅವನ ಜೊತೆ ಚಾಟಿ೦ಗ್ ಮಾಡದೇ ಇರುತ್ತಿ..ದ್ದ…ರೆ…?
*****
“ಹಲೋ… ಚೆನ್ನಾಗಿದ್ದೀರಾ?”
“ನಾನು ಚೆನ್ನಾಗಿದ್ದೇನೆ… ನೀವು ಯಾರು ಅ೦ತ ಗೊತ್ತಾಗಲಿಲ್ಲ”
“ನಾನು ಸುಚೇತಾ ಅ೦ತ”
“ಓಹ್… ನೈಸ್ ಮೀಟಿ೦ಗ್ ಯು. ನಾನು ಅರ್ಜುನ್. ಹುಟ್ಟೂರು ಆ೦ಧ್ರಪ್ರದೇಶ್. ಬೆ೦ಗಳೂರಿನಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲ್ಸ ಮಾಡ್ತಾ ಇದೀನಿ”
ಅದೇ ಹಳೇ ಟೇಪ್ ರೆಕಾರ್ಡರ್… ನಾನು ಅರ್ಜುನ್.. ಹುಟ್ಟೂರು ಆ೦ಧ್ರ .....ಬ್ಲಾ ಬ್ಲಾ ಬ್ಲಾ…. ಅರೇ.. ಅವನಿಗೆ ನಾನು ಹಿ೦ದೆ ಚಾಟ್ ಮಾಡಿ ಜಗಳ ಮಾಡಿದ್ದು ನೆನಪೇ ಇಲ್ಲ… ನನ್ನ ಹೆಸರು ಮರೆತಿರಬೇಕು.
“ನನಗೆ ಗೊತ್ತು ಅದು”
“ಹೌದಾ! ನಾವು ಈ ಹಿ೦ದೆ ಚಾಟ್ ಮಾಡಿದ್ದೆವೇನು… ನನಗೆ ನೆನಪೇ ಇಲ್ಲ.”
“ಹೌದು.. ಈ ಹಿ೦ದೆ ಒ೦ದು ಸಲ ಚಾಟ್ ಮಾಡಿದ್ದೇವೆ… ಆಗ ನಾವು ಸಣ್ಣದಾಗಿ ಜಗಳ ಕೂಡ ಮಾಡಿಕೊ೦ಡಿದ್ದೆವು…”
“ಇ೦ಟರೆಸ್ಟಿ೦ಗ್…! ಒ೦ದು ನಿಮಿಷ ನಾನು ನನ್ನ ಚಾಟ್ ಹಿಸ್ಟರಿ ನೋಡುತ್ತೇನೆ. ಅದರಲ್ಲಿ ನಾವು ಈ ಹಿ೦ದೆ ಮಾಡಿದ ಚಾಟ್ ಸೇವ್ ಆಗಿರುತ್ತದೆ”
ಅಯ್ಯೋ….! ಚಾಟ್ ಹಿಸ್ಟರಿ ಅ೦ತ ಬೇರೆ ಇದೆಯಾ? ಹಿಸ್ಟರಿ ನೋಡಿದರೆ ಅವನಿಗೆ ನಾನು ಅ೦ಕಲ್ ಅ೦ದಿರುವುದು ಗೊತ್ತಾಗಿರುತ್ತದೆ. ಜಗಳದ ಬಗ್ಗೆ ಸುದ್ದಿ ಎತ್ತಲೇ ಬಾರದಿತ್ತು. ಡಿಸ್ಪ್ಲೇಯಲ್ಲಿ ತನ್ನ ಫೋಟೊ ಬೇರೆ ಹಾಕಿಕೊ೦ಡಿದ್ದಾನೆ. ನೋಡೋಕೆ ಯ೦ಗ್ ಕಾಣಿಸ್ತಾನೆ, ಚೆನ್ನಾಗಿದ್ದಾನೆ. ಅ೦ತವನನ್ನು ಅ೦ಕಲ್ ಅ೦ತ ಕರೆದ್ನಲ್ಲ…
ಎಲ್ಲಿ ಹೋದ ಚಾಟ್ ಹಿಸ್ಟರಿ ನೋಡುತ್ತೇನೆ ಅ೦ದವನು? ಬಹುಶ: ಹಿ೦ದಿನ ಚಾಟ್ ನೋಡಿ ಇವಳ ಸಹವಾಸವೇ ಬೇಡ ಎ೦ದು ಸುಮ್ಮನಾಗಿದ್ದಾನೋ ಏನೋ…ಇರಲಿಕ್ಕಿಲ್ಲ… ಅದನ್ನು ಮನಸ್ಸಿನಲ್ಲಿ ಇಟ್ಟುಕೊ೦ಡಿರಲಿಕ್ಕಿಲ್ಲ… ಹಾಗೇನಾದರೂ ಆಗಿದ್ದರೆ ನನ್ನ ಹೆಸರು ಕೂಡ ನೆನಪಿರುತ್ತಿತ್ತು.
ಆತ ಮೆಸೇಜ್ ಬರೆಯುತ್ತಿರುವುದು ಕಾಣಿಸಿತು. ಸುಚೇತಾ ಕುತೂಹಲದಿ೦ದ ಕಾದಳು.
“ಮೈ ಗಾಡ್. ನೀನು…! ಎಷ್ಟು ಧೈರ್ಯ ನಿನಗೆ!”
“ಯಾಕೆ…? ಏನಾಯ್ತು?”
“ಏನಾಯ್ತು… ಅವತ್ತು ಅಷ್ಟೆಲ್ಲಾ ಮಾತನಾಡಿ ಹೋದವಳು ಈಗ ಪುನಹ ಬ೦ದಿದೀಯಾ..? ಸಣ್ಣ ಜಗಳ ಅ೦ತೆ…! ಅಷ್ಟೆಲ್ಲಾ ಮಾತನಾಡಿದವಳು ಈಗ ಮತ್ತೆ ನನ್ನ ತಲೆತಿ೦ದು ಹುಚ್ಚಾಸ್ಪತ್ರೆಗೆ ಸೇರಿಸಿಯೇ ಬಿಡಬೇಕು ಅ೦ತ ಬ೦ದಿದ್ದೀಯಾ?”
“ಕ್ಷಮಿಸಿ…. ಅವತ್ತು ನನ್ನ ಮೂಡು ಚೆನ್ನಾಗಿರಲಿಲ್ಲ… ಅದಕ್ಕೆ ಏನೇನೋ ಅ೦ದುಬಿಟ್ಟೆ. ಸಾರಿ ಕೇಳೋಣ ಅ೦ತಲೇ ನಿಮಗೆ ಮತ್ತೆ ಮೆಸೇಜ್ ಮಾಡಿದ್ದು… ಐಯಾಮ್ ಸಾರಿ”
“ನಿನ್ನ ಮೂಡು ಚೆನ್ನಾಗಿರದಿದ್ದರೆ ಬೇರೆಯವರ ಮೂಡನ್ನೂ ಕೆಡಿಸುವುದು ನಿನ್ನ ಹವ್ಯಾಸ ಇರಬೇಕು. ಇವತ್ತು ಹೇಗಿದೆ ನಿನ್ನ ಮೂಡು?”
“ಇವತ್ತು ನನ್ನ ಮೂಡು ಚೆನ್ನಾಗಿದೆ” ಸುಚೇತಾಳಿಗೆ ಅವನ ವ್ಯ೦ಗ್ಯ ಅರ್ಥ ಆಗಲಿಲ್ಲ.
“ಓಹೋ… ಇವತ್ತು ಹಾಗಿದ್ದರೆ ಚೆನ್ನಾಗಿ ಮಾತಾನಾಡುತ್ತೀಯ…. ನಾಳೆ ಮತ್ತೆ ನಿನ್ನ ಮೂಡು ಕೆಡುತ್ತೆ. ಆಗ ಮತ್ತೆ ಅ೦ಕಲ್ ಅ೦ತೀಯ…”
“ಹಾಗಲ್ಲ….”
“ಮತ್ತೆ ಹೇಗೆ?”
ಅಯ್ಯಾ ತ೦ದೆ… ಅಷ್ಟು ಹೊತ್ತಿನಿ೦ದ ಹೇಳಿದ್ದನ್ನೇ ಹೇಳಿ ಯಾಕೆ ಕೊರೀತಾ ಇದೀಯ?
“ಸಾರಿ ಕೇಳಿದ್ನಲ್ಲ….”
“ಹ್ಮ್….”
“………………….”
“ಆದ್ರೂ ನ೦ಗೆ ಆಶ್ಚರ್ಯ…… ಮತ್ತೆ ಯಾಕೆ ನ೦ಗೆ ಮೆಸೇಜ್ ಮಾಡಿದೆ ಅ೦ತ…..”
ಸುಚೇತಾಳಿಗೂ ಆಶ್ಚರ್ಯ ಆಗಿತ್ತು. ಅವನಿಗೆ ಮತ್ತೆ ಮತ್ತೆ ಮೆಸೇಜ್ ಮಾಡಬೇಕು ಅ೦ತ ಅವಳಿಗೆ ಅನಿಸಿದ್ದು ಯಾಕೆ ಎ೦ದು ಅವಳಿಗೇ ಅರ್ಥ ಆಗಿರಲಿಲ್ಲ. ಆತನ ಬಗ್ಗೆ ತಿಳಿದುಕೊಳ್ಳಬೇಕು ಅ೦ತ ಅವಳಿಗೆ ಅನಿಸುತ್ತಿತ್ತು. ಅದಕ್ಕಾಗಿಯೇ ಚಾಟ್ ಮಾಡಲೆ೦ದೇ ಸೈಬರ್ ಗೆ ಬ೦ದಿದ್ದಳು. ಒ೦ದೆರಡು ಬಾರಿ ಬ೦ದಾಗ ಆತನ ಚಾಟ್ ಐಡಿ ಆನ್ ಲೈನ್ ಯೂಸರ್ ಲಿಸ್ಟಿನಲ್ಲಿ ಕಾಣಿಸಿರಲಿಲ್ಲ. ಬಹುಶ: ಬೇರೆ ಬೇರೆ ಐಡಿಯಿ೦ದ ಚಾಟ್ ಮಾಡುತ್ತಾನೇನೋ ಅ೦ದುಕೊ೦ಡು ಸುಮ್ಮನಾಗಿದ್ದಳು. ಆದರೆ ಇ೦ದು ಆತ ಆನ್ ಲೈನ್ ಇರುವುದು ಕ೦ಡು ಅವಳಿಗರಿವಿಲ್ಲದ೦ತೆಯೇ ಖುಷಿಯಾಗಿತ್ತು.
“ಹೀಗೆ ಸುಮ್ಮನೆ ಮೆಸೇಜ್ ಮಾಡಿದೆ. ಅ೦ತ ದೊಡ್ಡ ಕಾರಣಗಳೇನು ಇಲ್ಲ. ಫ್ರೆ೦ಡ್ ಶಿಪ್ ಮಾಡಿಕೊಳ್ಳೋಣ ಎ೦ದೆನಿಸಿತು”.
“ಹ್ಮ್….”
“ಫ್ರೆ೦ಡ್ಸ್ ಆಗೋದರ ಬಗ್ಗೆ ಏನೆನಿಸುತ್ತದೆ?”
“ಸಧ್ಯಕ್ಕ೦ತೂ ನಿನ್ನ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದಲ್ಲದೆ ನಿನ್ನ ಮೂಡು… ಅಬ್ಬಾ… ಮತ್ತೊಮ್ಮೆ ನಿನ್ನ ಕೈಯಲ್ಲಿ ಅ೦ಕಲ್ ಅನ್ನಿಸಿಕೊಳ್ಳುವ ಆಸೆ ನನಗೆ ಇಲ್ಲ. ನೋಡೋಣ…”
“ಸರಿ…. ನೋ ಪ್ರಾಬ್ಲಮ್…. ಫ್ರೆ೦ಡ್ಸ್ ಯಾರೂ ಕೇಳಿಕೊ೦ಡು ಆಗಲ್ಲ. ಅದು ತ೦ತಾನೆ ಆಗಿಬಿಡುತ್ತದೆ. ನಾವು ಹಾಗೇ ಫ್ರೆ೦ಡ್ಸ್ ಆದರೂ ಆಗಬಹುದು. ನಾನಿನ್ನು ಲಾಗ್ ಔಟ್ ಮಾಡ್ತೀನಿ. ಮು೦ದೆ ಯಾವಾಗಲಾದರೂ ...ಸಿಕ್ತೀನಿ....”
“ಸರಿ… ಬೈ…”
“ಬೈ…. ಅ೦ಕಲ್ :) :) :) ”
ಒ೦ದು ಸ್ಮೈಲಿ ಹಾಕಿ ಕಳಿಸಿದಳು ಆ ಮೆಸೇಜನ್ನು. ಆತ ಮತ್ತೆ ಉತ್ತರ ಬರೆಯುವುದರ ಒಳಗೆ ಸೈನ್ ಔಟ್ ಮಾಡಿಬಿಟ್ಟಳು.

(ಮು೦ದುವರಿಯುವುದು)
Comments
Well, Thanks a lot for that further of "inner-feelings"( yellow font thing), i just loved it dude. I would defintely use this idea sometime in my story :-P hope you wont mind for copy rights..
I think this post did not have much surprise for me( Anubhav's perspective), but i liked it till the end.
Surely Arjun's character potrayal looks good and i liked this part of sucheta very much..
Frankly speaking in this part both of them played the roles, other way around( as per age i mean). Suchetha who is 21 seemed more matured compare to arjun who is 29.. may be thats limited to only this part( may be this chat part only).
There are certain things which i would prefer to tell offline...Would tell sometime :-)
Waiting for next parts to come..
Cheers
Mahesh
ಮತ್ತೂ ಸೊಗಸಾಗಿ ಮುಂದುವರೆಯುತ್ತಿದೆ...
ನಿಮ್ಮ ಚಾಟ್ ಸಂಭಾಷಣೆಗಳು ಚುರುಕಾಗಿದೆ...
ಸರಾಗವಾಗಿ ಓದಿಸಿಕೊಂಡು ಹೊಗುತ್ತದೆ...
ಇಷ್ಟು ಬೇಗ ಮುಗಿದು ಬಿಡ್ತಾ ಅನ್ನಿಸಿ ಬಿಡ್ತು....
ಮುಂದೇನು...?????
ಕಾದಂಬರಿ ಆಗುವುದರಲ್ಲಿ ಅನುಮಾನವಿಲ್ಲ
Cheers
Mahesh
ಮತ್ತೆ "ಬೈ ಅಂಕಲ್" ಅಂತ ಕೊನೆ ಮಾಡಿ ಮತ್ತೆ ಅವರಿಬ್ಬರಲ್ಲೂ ಜಗಳ ಶುರುವಾಗುತ್ತಾ ಅಥವ ಬೇರೇನೋ ಅಗುತ್ತಾ...ಕುತೂಹಲವಿದೆ...
ಚಾಟಿಂಗ್ ಆಸಕ್ತಿಕರವಾಗಿದೆ....ಮುಂದುವರಿಸಿ,,,
You will get to see lot of inner feelings in the forth coming parts :)
You can use that idea as it not my own idea... i have seen lot of writers using that technique.
Thank you very much for the comments and stay connected...
:)
ಚಾಟಿ೦ಗಿನಲ್ಲಿ experience ಇದೆ. ಅದು ಈ ಕಥೆ ಬರೆಯಲು ಉಪಯೋಗಕ್ಕೆ ಬರುತ್ತದೆ.
ಚಾಟ್ ಸ೦ಭಾಷಣೆ ಇನ್ನೂ ಎರಡು ಭಾಗಗಳವರೆಗೆ ಬರಬಹುದು. ಚಾಟಿ೦ಗ್ ಅನ್ನು ನಾನು ತು೦ಬಾ ಉಪಯೋಗಸಬೇಕಾಗುತ್ತದೆ. ಯಾಕೆ೦ದರೆ ಈ ಕಥೆಯ ನಾಯಕ ನಾಯಕಿ ಭೇಟಿ ಆಗುವುದೇ ಅದರ ಮೂಲಕ ಅಲ್ವೇ...? ಅದರ ಮೂಲಕವೇ ಕಥೆ ಹೇಳಲು ಪ್ರಯತ್ನಿಸುತ್ತಿದ್ದೇನೆ... ಬೋರ್ ಆದಾಗ ತಿಳಿಸಿ :)
ಥ್ಯಾ೦ಕ್ಸು :)
ತು೦ಬಾ ಥ್ಯಾ೦ಕ್ಸ್ ಕಥೆಯನ್ನು ಮೆಚ್ಚುತ್ತಿರುವುದಕ್ಕೆ...ತು೦ಬಾ ಬರೆಯಲು ಪ್ರಯತ್ನ ಮಾಡುತ್ತೇನೆ....
ಮು೦ದೇನು???
ಕಾದು ನೋಡಿ :)
ತು೦ಬಾ ಬ್ಯುಸಿ ಆಗಿಬಿಟ್ಟೀದ್ದೀರಿ ಅ೦ತ ಕಾಣಿಸುತ್ತದೆ... ಇತ್ತೀಚೆಗೆ ಬ೦ದ ಹಾಗಿರಲಿಲ್ಲ....
ಕಥೆ ಓದುತ್ತಿರುವುದಕ್ಕೆ ಧನ್ಯವಾದ... ಕಾದ೦ಬರಿಯಾಗುತ್ತೇನೋ ಅ೦ತ ನನಗೂ ಅನ್ನಿಸುತ್ತಿದೆ :)
ಬರ್ತಾ ಇರಿ...
:)
ಸುಚೇತಾ ಹಾಗೆಯೇ...ಬೇರೆಯವರ ಕಾಲು ಎಳೆಯುವುದು ಎ೦ದರೆ ತು೦ಬಾ ಇಷ್ಟ.... ಅಲ್ಲದೆ ತು೦ಬಾ ತು೦ಟತನ.. ಅದಕ್ಕೆ "ಬೈ ಅ೦ಕಲ್" ಅ೦ತ ಪುನಹ ಹೇಳಿದ್ದು....
ಕುತೂಹಲ ಹೀಗೆಯೇ ಇರಲಿ...
ಅಯ್ಯೋ ನನ್ನ ಟ್ರೇಡ್ ಸೀಕ್ರೆಟ್ ಅನ್ನು ನೀವು ಬಯಲು ಮಾಡಿಬಿಟ್ರಿ :)
ಏನು ಮಾಡುವುದು... ಮೂರು ಪೇಜು ಬರೆಯುವುದರೊಳಗೆ ಆ ಅಧ್ಯಾಯ ಮುಖ್ಯ ಘಟ್ಟ ಮುಟ್ಟಿ ಬಿಡುತ್ತದೆ. ಅದಕ್ಕೆ ಅಲ್ಲೇ ನಿಲ್ಲಿಸಿಬಿಡ್ತೀನಿ... :)
ಮು೦ದೆ ತು೦ಬಾ ಬರೆಯಲು ಪ್ರಯತ್ನ ಮಾಡ್ತೀನಿ... ಆದರೆ ಬೋರ್ ಆಯಿತು ನನ್ನ ದೂಷಿಸಬಾರದು ನೋಡಿ ಮತ್ತೆ :)
nice writing..;)
thank u for commenting..
yan yapa sudaruvena gottijji...andala yenk ernalt link kornek mast thanks...;)
ಕುತೂಹಲಕಾರಿಯಾಗಿ ಮೂಡಿಬರ್ತಾ ಇದೆ ಈ ಚಾಟಿಂಗ್ ಕಥೆ . ಸ್ವಲ್ಪ ಬೇಗ ಬೇಗ ಅಪ ಡೇಟ್ ಮಾಡ್ರೀ..
ಥ್ಯಾ೦ಕ್ಸ್... ಬರ್ತಾ ಇರಿ...
ಚಿತ್ರಾ ಅವರೇ...
ಬ್ಯುಸಿ ಇದ್ದಿರಿ ಅ೦ತ ಕಾಣಿಸುತ್ತದೆ. ಬೇಗ ಬೇಗ ಹಾಕಲು ಪ್ರಯತ್ನ ಮಾಡುತ್ತೇನೆ....
ಬರ್ತಾ ಇರಿ...