Skip to main content

ದಾರಿ...

ಹಲವಾರು  ದಾರಿಗಳಿದ್ದವು ಅಲ್ಲಿ...
ಕೆಲವು ತಿರುವುಗಳೂ ಸಹ
ನಾ ನಡೆವ ದಾರಿಯಲೇ ಏಕೆ ಎದುರಾದೆ?
ನಿನ್ನ ಹಾದಿಗೆ ದೀಪವಾಗಲು ಹೋಗಿ
ಮರೆತೇಬಿಟ್ಟೆ ನನ್ನ ಗಮ್ಯ.....

ನಿನ್ನ ದಾರಿಯಲಿ ಜೊತೆಜೊತೆಗೆ ನಡೆಯುವ ಆಸೆಯಿತ್ತು
ನನ್ನ ಬಟ್ಟಲು ಕ೦ಗಳಲ್ಲಿ ನಿನ್ನ ಕನಸುಗಳನ್ನು,
ತು೦ಬಿಸಿಕೊಳ್ಳುವ ಆಸೆಯೂ ಇತ್ತು.
ಹ೦ಬಲವಿತ್ತು ತಾರೆಗಳನ್ನು,
ನಿನ್ನ ಕಣ್ಣುಗಳ ಬೆಳದಿ೦ಗಳಿನಲ್ಲಿ ಹುಡುಕುವ ಆಸೆ.
ಅನ೦ತದ ಮಾತಿರಲಿ...
ಕವಲೊಡೆಯಿತಲ್ಲ ದಾರಿ
ನೂರು ಹೆಜ್ಜೆಗಳು ಮುಗಿಯುವ ಮೊದಲೇ....

ಹಾಗೊ೦ದು ವೇಳೆ ನೀ ನನಗೆ
ಸಿಗದಿರುತ್ತಿದ್ದರೆ....
ರೆ.....................
ಹುಡುಕುತ್ತಿದ್ದೇನೆ ಉತ್ತರ ಇನ್ನೂ...!

Comments

shivu.k said…
ಸುಧೇಶ್,

ಸೊಗಸಾದ ಭಾವನಾತ್ಮಕ ಕವನ ಬರೆದಿದ್ದೀರಿ.
Shivanna...

Thumba kushi aayithu nimage kavana mechchuge aagidhdhakke :)
sudhesh,
sogasaada kavana...
chennagide...
ಸುಧೇಶ್,
ಅಪರೂಪಕ್ಕೊಂದು ಬಲು ಚಂದದ ಕವಿತೆ !! ತುಂಬಾ ಇಷ್ಟ ಆಯ್ತು.
" ಕವಲೊಡೆಯಿತಲ್ಲ ದಾರಿ
ನೂರು ಹೆಜ್ಜೆಗಳು ಮುಗಿಯುವ ಮೊದಲೇ.... " ಚೆನ್ನಾಗಿದೆ ..
ಬರೀತಾ ಇರಿ ಕವನವನ್ನೂ..
ಸರ್, ಕೆಳಗಿನ ಸಾಲುಗಳು
ನಿನ್ನ ಹಾದಿಗೆ ದೀಪವಾಗಲು ಹೋಗಿ
ಮರೆತೇಬಿಟ್ಟೆ ನನ್ನ ಗಮ್ಯ.....

ತುಂಬಾ ಇಷ್ಟ ಆಯಿತು
\
ಒಳ್ಳೆಯ ಕವನ
'ದಾರಿ ' ಸುಗಮವಾಗಿ ಚೆನ್ನಾಗಿದೆ:) ಎಲ್ಲಿ ತಲುಪ್ಕೋ ಬೇಕೋ ಅಲ್ಲಿಗೆ ತಲುಪಿಕೊಂಡೆ ಯಾವುದೇ ಅಡ್ಡ ದಾರಿ ಇಲ್ಲದೆ :)
Guruprasad said…
sudesh, yenri,, istond feelingu...
chennagi ide....
Veni said…
Looks like completely fallen in love with someone
Unknown said…
ಚೆನ್ನಾಗಿದೆ... ತುಂಬಾ ದಿನ ಆಗಿತ್ತು ಬರಹ-ಕವನ ನೋಡದೆ.. ಕವನ ನೋಡಿದ್ಕೂಡ್ಲೆ ಪಂಚಾಂಗ ನೋಡಿದೆ.. ಇವತ್ತೆನಾದ್ರು ಹುಣ್ಣಿಮೇನಾ ಅಂತ? :-) ಹಾಹಾಹಾ.
ಚೆನ್ನಾಗಿದೆ ಕವಿತೆ. `ರೆ’ಪ್ರಶ್ನೆಗಳ ಸಾಮ್ರಾಜ್ಯದಲ್ಲಿ ‘ರೆ’ ಗಳೇ ಉತ್ತರ!
Nisha said…
Nice one. Kavana with a lot of feelings. ನಿನ್ನ ಹಾದಿಗೆ ದೀಪವಾಗಲು ಹೋಗಿ
ಮರೆತೇಬಿಟ್ಟೆ ನನ್ನ ಗಮ್ಯ..... very nice.
V.R.BHAT said…
'daari'kanditu !
ARUN MANIPAL said…
nice Sudesh...;).
Eer mast update ullar..yane blog barevere avande kulde..;(
yan sudharun laxana tojujiye..sayyad undu mata enadth api kelasa att....
erna blog tunags kushi apundu..;)
'ಸುಧೇಶ್ ಶೆಟ್ಟಿ' ಅವ್ರೆ..,

ಬಾಳ ಚಂದೈತೆ..

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/
ಸವಿಗನಸು ಅವರೇ...

ತು೦ಬಾ ಥ್ಯಾ೦ಕ್ಸ್... :)
ಚಿತ್ರಾ ಅವರೇ...

ಕವನ ಮೆಚ್ಚಿದ್ದಕ್ಕೆ ಥ್ಯಾ೦ಕ್ಸ್... ತು೦ಬಾ ಸೀರಿಯಸ್ ಆಗಿ ಯೋಚಿಸಿ ಬರೆದಿದ್ದಲ್ಲ...

ಬರೆಯಲು ಪ್ರಯತ್ನಿಸುತ್ತೇನೆ....
ಗುರುಮೂರ್ತಿಯವರೇ...

ಕವನ ಮೆಚ್ಚಿದ್ದಕ್ಕೆ ಥ್ಯಾ೦ಕ್ಸ್...
ಗೌತಮ್...

ದಾರಿ ಸರಿಯಾಗಿ ಇನ್ನೂ ಕ೦ಡಿಲ್ಲ :)
ಗುರು ಅವರೇ...

ಹೆ ಹೆ ಹೆ... ಫೀಲಿ೦ಗ್ಸ್ ಏನೂ ಇಲ್ಲ.... ಹೀಗೆ ಖಾಲಿ ಕುಳಿತಿದ್ದಾಗ ಬರೆದಿದ್ದು :)
ಪರಾ೦ಜಪೆ ಅವರೇ...

ಥ್ಯಾ೦ಕ್ಸ್...
ರವಿಕಾ೦ತ್...

:):):)

ಹೌದು.. ಕಾದ೦ಬರಿ ಪ್ರಾರ೦ಭಿಸಿದ ಮೇಲೆ ಅನುಭೂತಿಯಲ್ಲಿ ಅಷ್ಟೊ೦ದು ಬರೆಯಲು ಆಗುತ್ತಿಲ್ಲ... ಸಮಯದ ಅಭಾವ... ಸಮಯ ಇದ್ದಾಗ ಮೂಡಿನ ಅಭಾವ...!
ತೇಜಕ್ಕ...

ಕೆಲವ ರೆ ಗಳಿಗೆ ಉತ್ತರವೇ ಇರಲ್ಲ :(
ನಿಶಾ...

ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು...
ವಿ. ಆರ್. ಭಟ್ ಅವರೇ...

ನನ್ನ ಬ್ಲಾಗಿಗೆ ಸ್ವಾಗತ.... :)

ದಾರಿ ಕ೦ಡಿಲ್ಲ ಇನ್ನೂ!
ಚುಕ್ಕಿ ಚಿತ್ತರ ಅವರೇ...

ಥ್ಯಾ೦ಕ್ಸು :)
ಗುರು ದೆಸೆ...

ಬೋ ಖುಸಿ ಆತು :)
ಅರುಣ್...

ಥ್ಯಾ೦ಕ್ಸ್...

ಇರೆನ ಬ್ಲಾಗ್ ಅಪ್‍ಡೇಟ್ ಆಪು೦ಡು ಪ೦ದ್ ಕಾತ್ ಕಾತ್ ಸಾಕ್ ಆ೦ಡ್.... ಮಸ್ತ್ ಎಡ್ಡೆ ಬರೆಪರ್ ಈರ್...ಇರೆನ ಕತೆ, ಕವನೊಲು ಮಸ್ತ್ ಇಷ್ಟ ಆಪು೦ಡು.... ಪ್ಲೀಸ್ ಬರೆವುನ ಉ೦ತಾವಡೆ... ದಾದಾ೦ಡಲ ಬರೆಲೆ... ಪಿದಯೂರುಡು ಉಲ್ಲರ್... ಇರೆಗ್ ಮಸ್ತ್ ವಿಷಯ ತಿಕ್ಕು೦ಡು ಬರೆವರೆ....

ಕಾಪುವೆ.... :)
ನೀವೇನು ’ರೆ’ ಪ್ರಪಂಚಕ್ಕೆ ಆಗಾಗ ಹೋಗುತ್ತಿರುತ್ತೀರೇನು? ಮುಂಚೆಯೂ ಒಮ್ಮೆ ಇದನ್ನು ಬಳಸಿದ್ದ ಹಾಗೆ ನೆನೆಪು,

ಕವನ ತುಂಬಾ ಚೆನ್ನಾಗಿ ಬಂದಿದೆ :)
ಒಳ್ಳೆಯ ಕವನ ಸುಧೇಶ್
ಹೇಮಾ ಅವರೇ....

ನೀವು ಹೇಳಿದ್ದು ಸರಿ.... ಕೆಲವೊಮ್ಮೆ ರೆ ಪ್ರಪ೦ಚಕ್ಕೆ ಹೋಗುವುದು ಉ೦ಟು... ಅದರಲ್ಲಿ ಏನೋ ಖುಶಿ ಇದೆ..

ಹಿ೦ದೆ ಯಾವಾಗ ನನ್ನ ಬರಹದಲ್ಲಿ ರೆ ಪ್ರಪ೦ಚಕ್ಕೆ ಹೋಗಿದ್ದೆ ಅ೦ತ ನೆನಪು ಇಲ್ಲ....

ರುಕ್ಮಿಣಿಗೆ ಬೇಗ ಗುಣವಾಗಲಿ ;)
ದೀಪಸ್ಮಿತ ಅವರೇ....

ಥ್ಯಾ೦ಕ್ಸು :)
Ravi said…
ನಂದು ಒಂದು ಚಿಕ್ಕ ಕವನ :-)

ದಾರಿಗಳು ಒಂದಾದವು, ಜೀವಗಳು ಒಂದಾದವು
ಮತ್ತೆ ಶುರುವಾಯಿತು ನಮ್ಮ ಪ್ರೀತಿ...

ಪಯಣ ರೋಮಾಂಚನ, ಸೊಗಸಾದ ದಾರಿ
ಮೊಳಕೆ ವಡೆಯಿತು ಪ್ರೀತಿಯ ಸಸಿ...

ಸಸಿಗಯೇಲ್ಲವು ಗಿಡವಾಗವು, ನಿಸರ್ಗದ ಇದೆ ಪ್ರತಿ,
ಹಾಗೆಂದು ನನ್ನ ದೂರ ಮಾಡಬೇಡ, ಓ ನನ್ನ ಪ್ರೀತಿ

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ