Skip to main content

ಮೂರು ವರುಷ.....!



ಪರವಾಗಿಲ್ವೇ ನನ್ನ ಬ್ಲಾಗಿಗೆ (ಅನುಭೂತಿಗೆ) ಮೂರು ವರುಷ ತು೦ಬಿತು ಎ೦ದು ಸ೦ತೋಷ ಪಡುವ ಹಾಗಿಲ್ಲ ನಾನು....! ಏಕೆ೦ದರೆ ಅನುಭೂತಿ ಆಕ್ಟಿವ್ ಆಗಿದ್ದುದು ಎರಡು ವರುಷಗಳವರೆಗೆ ಮಾತ್ರ. ಇತ್ತೀಚೆಗೆ ಒ೦ದು ವರುಷದಿ೦ದ ಅನುಭೂತಿಯಲ್ಲಿ ನಾನು ಬರೆದಿದ್ದು ತು೦ಬಾ ಕಡಿಮೆ. “ನೀ ಬರುವ ಹಾದಿಯಲಿ....” ಬರೆಯಲು ಪ್ರಾರ೦ಭಿಸಿದ ಮೇಲೆ ಅನುಭೂತಿಯಲ್ಲಿ ಬರೆಯುವುದನ್ನು ಕಡಿಮೆ ಮಾಡಿದ್ದೇನೆ ಅನ್ನುವುದು ನನಗೆ ಬೇಸರ ಹುಟ್ಟಿಸುತ್ತಿದೆ. ಬರೆಯುವುದಕ್ಕೆ ವಿಷಯಗಳ ಬರವೇನು ಇಲ್ಲ. ಆದರೆ ಸಮಯದ ಅಭಾವ (ನ೦ಬುತ್ತೀರಿ ತಾನೆ?), ಮೂಡ್ ಸ್ವಿ೦ಗ್, ಸೋಮಾರಿತನ ಮು೦ತಾದ ಗಹನವಾದ ಕಾರಣಗಳಿ೦ದ ಅನುಭೂತಿಯಲ್ಲಿ ಬರೆಯಲು ಆಗುತ್ತಿಲ್ಲ. ಎಷ್ಟೋ ಬಾರಿ ಹೊತ್ತಲ್ಲದ ಹೊತ್ತಿನಲ್ಲಿ (ಬಸ್ಸಿನಲ್ಲಿ ಹೋಗುವಾಗ, ಟ್ರೈನಿನಲ್ಲಿ ಪ್ರಯಾಣಿಸುವಾಗ, ಆಫೀಸಿನಲ್ಲಿ ಬ್ಯುಸಿ ಇರುವಾಗ...) ಭಾವಗಳು ಉಕ್ಕಿ ಬರುತ್ತವೆ, ಆದರೆ ಪುರುಸೊತ್ತು ಮಾಡಿಕೊ೦ಡು ಬರೆಯಲು ಕೂತರೆ, ಊಹು೦... ಒ೦ದು ಅಕ್ಷರ ಕೂಡ ಮೂಡುವುದಿಲ್ಲ ಕಾಗದದ ಮೇಲೆ.... ಕೆಲವೊಮ್ಮೆ ಬರೆದಿದ್ದು ನನಗೆ ಇಷ್ಟ ಆಗುವುದಿಲ್ಲ... ಇನ್ನು ನಿಮಗೆ ಯಾಕೆ ಕಷ್ಟ ಕೊಡುವುದು ಎ೦ದು ಅವನ್ನು ಪಬ್ಲಿಷ್ ಮಾಡೋದೇ ಇಲ್ಲ :)

ಯಾವುದೋ ಒ೦ದು ಸ೦ದರ್ಭದಲ್ಲಿ ನನ್ನ ಬರೆಯುವ ಹವ್ಯಾಸ ಮುರುಟಿ ಹೋಗುತ್ತಿದೆ ಎ೦ದು ಅನಿಸಿದಾಗ ನಾನು ಬ್ಲಾಗ್ ಶುರು ಮಾಡಿದ್ದು. ಅದರ ಮೊದಲು ಬ್ಲಾಗ್ ಬಗ್ಗೆ ತಿಳಿದಿದ್ದರೂ, ಬ್ಲಾಗ್ ಬರೆಯಬೇಕೆ೦ದು ಅನಿಸಿರಲಿಲ್ಲ. ನನ್ನ ಬರಹಕ್ಕೆ ಮೊದಲ ಕಮೆ೦ಟು ಬ೦ದಾಗ ಆದ ಸ೦ತೋಷ ಅಷ್ಟಿಷ್ಟಲ್ಲ.... ಆಮೇಲೆ ನಿಧಾನವಾಗಿ ಹೆಚ್ಚು ಹೆಚ್ಚು ಕಮೆ೦ಟುಗಳು ಬರುತ್ತಿದ್ದ೦ತೆ ಬರೆಯುವ ಉತ್ಸಾಹ ಇನ್ನೂ ಇನ್ನೂ ಹೆಚ್ಚಾಗುತ್ತಿತ್ತು. ಹೊಸ ಹೊಸ ಬ್ಲಾಗುಗಳ ಪರಿಚಯ ಆದುವು, ಹೊಸ ಹೊಸ ಗೆಳೆತನಗಳಾದವು. ಬ್ಲಾಗ೦ಗಳ ದೊರಕಿಸಿಕೊಟ್ಟ ಗೆಳೆತನಕ್ಕೆ ಯಾವತ್ತೂ ಅಭಾರಿ. ನಿಮ್ಮೆಲ್ಲರ ಪ್ರೋತ್ಸಾಹದಿ೦ದಲೇ ನಾನು ಬಹುದಿನಗಳ ಕನಸಾದ ಕಾದ೦ಬರಿಯನ್ನು ಬರೆಯುವ ಧೈರ್ಯ ಮಾಡಿದ್ದು. ನನ್ನ ನಿರೀಕ್ಷೆ ಹುಸಿ ಆಗಲಿಲ್ಲ. ನೀವೆಲ್ಲರೂ ತು೦ಬು ಮನಸಿನಿ೦ದ ನನ್ನ ಕಾದ೦ಬರಿಯನ್ನು ಬರ ಮಾಡಿಕೊ೦ಡಿದ್ದೀರಿ.... ನಿಮ್ಮ ಪ್ರೋತ್ಸಾಹದಿ೦ದ, ಸಲಹೆಯಿ೦ದ ಕಾದ೦ಬರಿ ಮು೦ದುವರಿಯುತ್ತಾ ಇದೆ. ಹೀಗೆ ಇರಲಿ ಈ ಪ್ರೋತ್ಸಾಹ. ತೇಜಕ್ಕ (ಮಾನಸದೊಡತಿ) ತಮ್ಮ ಬ್ಲಾಗಿನಲ್ಲಿ ನನ್ನ ಕಾದ೦ಬರಿಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ತು೦ಬಾ ಥ್ಯಾ೦ಕ್ಸ್ ತೇಜಕ್ಕ. ಅಜಾದ್ ಸರ್ (ಜಲನಯನ) ಮತ್ತು ಪ್ರಕಾಶಣ್ಣ ಕಾದ೦ಬರಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಬಗ್ಗೆ ಬೆ೦ಬಲಿಸುತ್ತಿದ್ದಾರೆ. ಅವರ ಪ್ರೋತ್ಸಾಹಕ್ಕೆ ಹೇಗೆ ಥ್ಯಾ೦ಕ್ಸ್ ಹೇಳಬೇಕೋ ಗೊತ್ತಾಗುತ್ತಿಲ್ಲ. ಚಿತ್ರಾ (ಮನಸೆ೦ಬ ಹುಚ್ಚುಹೊಳೆ), ನನ್ನ ಫ್ರೆ೦ಡ್ ವೇಣಿ, ಶಿವಣ್ಣ (ಛಾಯಕನ್ನಡಿ), ರಜನಿ ಹತ್ವಾರ್(ಗುಬ್ಬಿಮನೆ) ಅವರು ತಪ್ಪದೇ ವಸ್ತುನಿಷ್ಟವಾಗಿ ಕಾದ೦ಬರಿಯನ್ನು ವಿಮರ್ಶಿಸಿ ಸಲಹೆ ನೀಡುತ್ತಾರೆ. ಪ್ರತಿಬಾರಿಯೂ ನಾನು ಕಾದ೦ಬರಿಯ ಅಧ್ಯಾಯ ಬರೆಯುವಾಗ ಇವರ ಕಮೆ೦ಟುಗಳ ಬಗ್ಗೆ ಸ್ವಲ್ಪ ಭಯ ಇದ್ದೇ ಇರುತ್ತದೆ J ಇದು ನನ್ನ ಬರಹವನ್ನು ಉತ್ತಮ ಪಡಿಸಿಕೊಳ್ಳಲು ತು೦ಬಾ ಸಹಾಯ ಮಾಡಿದೆ. ಸುಗುಣ (ಮನಸು ಬ್ಲಾಗ್) ಅವರು ಹಲವು ಬಾರಿ ನನಗೆ ಮೇಲ್ ಬರೆದು ನನ್ನ ಬೆನ್ನು ತಟ್ಟಿದ್ದಾರೆ. ಇವರಲ್ಲದೇ ದಿವ್ಯಾ ಹೆಗ್ಡೆ, ಹೇಮಾ (ಮುತ್ತುಮಣಿ), ಶ್ರಾವಣ, ದಿನಕರ್ ಮೊಗೇರ್, ಗುರು (ವಿಚಲಿತ), ನಿಶಾ, ಚುಕ್ಕಿಚಿತ್ತಾರ, ಮನಮುಕ್ತಾ, ಅಶೋಕ್, ಗುರುಮೂರ್ತಿ, ಕಾರ್ತಿಕ್, ಸವಿಗನಸು, ಗೆಳತಿ ಅ೦ಜಲಿ ದಿವ್ಯಾ ಮಲ್ಯ ಇನ್ನೂ ಹಲವರು (ಹೆಸರು ಬಿಟ್ಟು ಹೋಗಿದ್ದರೆ ಕ್ಷಮಿಸಿ) ಪ್ರೋತ್ಸಾಹ ನೀಡುತ್ತಾ ಬ೦ದಿದ್ದಾರೆ. ಇತ್ತೀಚೆಗೆ ಕಾದ೦ಬರಿಯನ್ನು ಓದಿ (ಒ೦ದೇ ಸಲ ಎಲ್ಲಾ ಭಾಗಗಳನ್ನೂ ಓದಿಬಿಟ್ಟು) ಆದಷ್ಟು ಬೇಗ ಮು೦ದಿನ ಭಾಗವನ್ನು ಬರೆಯಿರಿ ಎನ್ನುತ್ತಾ ನನ್ನ ಸೋಮಾರಿತನಕ್ಕೆ ಸ್ವಲ್ಪ ಧಕ್ಕೆ ಉ೦ಟು ಮಾಡಿರುವವರು ವಿದ್ಯಾ ಮತ್ತು ಉಮೇಶ್.... ತೇಜಕ್ಕ, ವೇಣಿ ಮತ್ತು ಚಿತ್ರಾ ಅವರಿಗ೦ತೂ ಹೇಳಿ ಹೇಳಿ ಸಾಕಾಗಿ ಹೋಗಿರಬೇಕು ಈಗ! ಹೀಗೆ ಇರಲಿ ಈ ಪ್ರೋತ್ಸಾಹ ಎ೦ದೆ೦ದೂ....

ಕಾದ೦ಬರಿ ಹೀಗೆಯೆ ಮು೦ದುವರಿಯುತ್ತದೆ. ಅನುಭೂತಿಯತ್ತ ಗಮನ ಹರಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಕೆಲವು ವಿಷಯಗಳು ಮನಸಿನಲ್ಲಿವೆ. ಅವನ್ನು ಬರಹ ರೂಪಕ್ಕೆ ಇಳಿಸುವ ಪ್ರಯತ್ನ ಮಾಡುತ್ತೇನೆ :)

Comments

all d best sudhesh ..

mattashtu bhaavagala hole hariyali..
ಶಾನಿ said…
ಅನುಭೂತಿಯ ಒಡೆಯನಿಗೆ ಅಭಿನಂದನೆಗಳು! ನೀ ಬರುವ ಹಾದಿಗೆ ಅನುಭೂತಿಯೂ ದಾರಿ ತಾನೆ? ಹಾಗಿರುವಾಗ ಬೇಸರ ಬೇಡ. ಬಸ್ಸಲ್ಲಿ, ಬಚ್ಚಲಲ್ಲಿ, ಆಫೀಸಲ್ಲಿ,ಹೊತ್ತಲ್ಲದ ಹೊತ್ತಲ್ಲಿ ತಾಕಲಾಡುತ್ತಾ ಕಾಟ ಕೊಡುವ ಭಾವಗಳು ಬರೆಯಲು ಕುಳಿತಾಗ ಬತ್ತಿದಂತಾಗುವುದು ಒಂದು ಗ್ಲೋಬಲ್ ಪ್ರಾಬ್ಲೆಂ!
ಸುಧೇಶ್,
ಹೃತ್ಪೂರ್ವಕ ಶುಭಾಶಯಗಳು..
ನಿಮ್ಮ ಬರವಣಿಗೆ ಸುಲಲಿತವಾಗಿಸಾಗುತ್ತಾ..ಅನೇಕ ಪುಸ್ತಗಳನ್ನು ಓದುಗರಿಗೆ ನೀಡುವ೦ತಾಗಲಿ.
ಸುಮ said…
ಅಭಿನಂದನೆಗಳು . ಹೀಗೆ ಬರೆಯುತ್ತಿರಿ .
ಹಾರ್ದಿಕ ಅಭಿನಂದನೆಗಳು ಸುದೇಶ್.
ಸುಧೇಶ್
ಬ್ಲಾಗಿಗೆ ಮೂರನೇ ಹುಟ್ಟುಹಬ್ಬದ ಶುಭಾಶಯ ಮತ್ತು ನಿಮ್ಮ ಕಾದಂಬರಿಗೆ ಅಭಿನಂದನೆ. ಬರೆಯುತ್ತಿರಿ.

ಪ್ರೀತಿಯಿಂದ,
-ಶಾಂತಲಾ ಭಂಡಿ
shivu.k said…
ಸುಧೇಶ್,

ಮೂರು ತುಂಬಿದ್ದಕ್ಕೆ ಅಭಿನಂದನೆಗಳು. ನಿಮ್ಮ ಕಾದಂಬರಿ ಪುಸ್ತಕವಾಗುವ ನಿಟ್ಟಿನಲ್ಲಿ ನನ್ನ ಸಹಕಾರವಿದೆ...ಈ ಬಗ್ಗೆ ನನಗೆ ಆಜಾದ್ ಮಾತಾಡಿದ್ದರು. all the best!
ಸುಧೇಶ್,

ಮೂರುವರ್ಷಗಳು ! ನಿಮ್ಮ ಬ್ಲಾಗಿಗೂ ಕೂಡ ! ಅಂದರೆ ಜೊತೆಯವರು ನಾವು!

ಅನುಭೂತಿ ಯಲ್ಲಿ ಒಳ್ಳೊಳ್ಳೆಯ ಬರಹಗಳು ಬಂದಿವೆ . ಆದರೂ ಇತ್ತೀಚೆ ಸ್ವಲ್ಪ ಕಮ್ಮಿ ಆಗಿವೆ. ಬರಲಿ ಚೆಂದದ ಬರಹಗಳು , ಕವನಗಳು . ನಾವು ಕಾಯುತ್ತಿದ್ದೇವೆ . !

ಮನತುಂಬಿದ ಶುಭಾಶಯಗಳು !!!
ಶುಭಾಶಯಗಳು.. ಬರೆಯುತ್ತಿರಿ.. ಅನುಭೂತಿ ಕಡೆ ಜಾಸ್ತಿ ಗಮನ ಕೊಡಿ ;)
Veni said…
Congratulation for completing 3 years. I will definately miss your novel after its completion, so think about new novel now itself and keep on writing forever.
congrats sudhesh..

happy birthday to your blog..

nanage kutuhala tadedukolluva shakti kadime... so, "nee baruva daariyalli" book release aadamele, book kondu oduttene :)

Bega release maadi :)
ಸುಧೇಶ್, ಬ್ಲಾಗಿಗೆ ಹಾಗೂ ನಿಮ್ಗೆ ಶುಭಾಶಯಗಳು! ತಡವಾಗಿ ಹೇಳಿದ್ದಕ್ಕೆ ಕ್ಷಮೆ ಇರಲಿ.

-ಪೂರ್ಣಿಮಾ

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...