Skip to main content

ನೀ ಬರುವ ಹಾದಿಯಲಿ....... [ಭಾಗ 33]


ಅ೦ತೂ ಮತ್ತೆ ಬ೦ದಿದ್ದೀನಿ ತಿರುಗಿ.... ತು೦ಬಾ ದಿನಗಳು ಆಗಿವೆ. ನಾನು ಮನೆ ಶಿಫ್ಟ್ ಮಾಡಬೇಕಾಗಿ ಬ೦ತು. ಹಾಗಾಗೀ ಆ ವಿಷಯದಲ್ಲಿ ತು೦ಬಾ ಬ್ಯುಸಿ ಇದ್ದೆ. ನಡುವೆ ಆರೋಗ್ಯ ಸಮಸ್ಯೆ ಬ೦ತು, ಆನ೦ತರ ಊರಿಗೆ ಹೋಗಬೇಕಾಗಿ ಬ೦ದು ಅದರ ನಡುವೆ ನನ್ನ ಪರೀಕ್ಷೆಗಳು ಇದ್ದು, ಇವೆಲ್ಲಾ ಕಾರಣಗಳಿ೦ದ ಬ್ಲಾಗ್ ಮೂಲೆ ಸೇರಿತ್ತು. ಈಗ ಎಲ್ಲವೂ ಒ೦ದು ಹ೦ತಕ್ಕೆ ಬರುತ್ತಾ ಇದೆ ನಿಧಾನವಾಗಿ. ಇ೦ಟರ್ನೆಟ್ ಕನೆಕ್ಷನ್ ಇನ್ನೂ ತಗೊ೦ಡಿಲ್ಲ. ಮೊಬೈಲ್ ಅನ್ನೇ ಲ್ಯಾಪ್‍ಟಾಪಿಗೆ ಕನೆಕ್ಟ್ ಮಾಡಿ ಹಾಗೋ ಹೀಗೆ ಕಷ್ಟಪಟ್ಟು ಬರೋಬ್ಬರಿ ಆರು ಗ೦ಟೆಗಳ ಕಾಲ ಮೊಬೈಲಿನಲ್ಲಿರುವ ಅತಿ ನಿಧಾನ ಇ೦ಟರ್ನೆಟ್ ಕನೆಕ್ಷನ್ ಜೊತೆ ಹೋರಾಟ ಮಾಡಿ ಈ ಭಾಗವನ್ನು ಬರೆದು ಮುಗಿಸಿದ್ದೇನೆ. ಇಷ್ಟು ದಿನ ಕಾಯಿಸಿದ ಸಿಟ್ಟನ್ನು ಹೊಟ್ಟೆಗೆ ಹಾಕಿಕೊಳ್ಳಿ :)

ಕಾದ೦ಬರಿಯ ಲಿ೦ಕ್ ಕೆಳಗಿದೆ....

ನೀ ಬರುವ ಹಾದಿಯಲಿ..... [ಭಾಗ ೩೩]

Comments

Ravi said…
office nalli internet ide tane? post madokke yenu problem?

Popular posts from this blog

ತೀರ....

ಈ ತೀರದಲ್ಲೀಗ ಕತ್ತಲು ನಾನು ಚೆನ್ನಾಗಿದ್ದೇನೆ...  ಕಾರಣಗಳು ಇಲ್ಲ ಅಂತೇನಿಲ್ಲ  ಚೆನ್ನಾಗಿಲ್ಲದಿರಲು! ಕೋಣೆಯಲ್ಲಿ  ಇನ್ನೂ ಸತ್ತು ಮಲಗಿದೆ  ನಾನೇ ಬಡಿದು ಕೊಂದ ಲಕ್ಷ್ಮಿ ಚೇಳು ಇನ್ನು ರಾತ್ರಿ ಮಲಗಿದ ಹಾಗೆಯೇ ಅಮ್ಮ ಚೇಳು ಕಡಿದು  ಸೇಡು ತೀರಿಸಿಕೊಳ್ಳಬಹುದೇ? ಇವೆಲ್ಲವನ್ನೂ ಪರಿಗಣಿಸಿದರೆ ಹೌದು ಚೆನ್ನಾಗಿಲ್ಲ ನಾನು! ನನ್ನ ಮನದಲ್ಲಿ ನೀರವ ಮೌನ  ಕಾರಣ ಹುಡುಕುತ್ತಿದ್ದೇನೆ ಎಲ್ಲೋ ಗಾಡಿ ಓಡುವ ಸದ್ದು  ಇರುಳಿನಲ್ಲೂ ಧಾವಂತಕ್ಕಿಲ್ಲ ವಿಶ್ರಾಂತಿ ಈ ವಿಷಯಗಳಲ್ಲ ನಾ ಹೇಳ ಹೊರಟಿದ್ದು  ಬಿಡು, ಎಲ್ಲವನ್ನೂ ಹೇಳಬೇಕಾದ ಜರೂರತ್ತೇನಿದೆ? ಹೇಗಿದ್ದೀಯ ನೀನು? ಆ ತೀರದಲ್ಲಿನ ಸಂಗತಿಗಳೇನು?

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....