Skip to main content

ಪ್ರತಿಭಟನೆ…..

(ಹಿ೦ದೆ ಒಮ್ಮೆ ’ಮುತ್ತುಮಣಿ’ ಬ್ಲಾಗಿನ ಹೇಮಾ ಅವರು ಕೇಳಿದ್ದರು ನಾನು ಮೊದಲ ಕವನ ಬರೆದಿದ್ದು ಯಾವಾಗ ಎ೦ದು. ನಾನು ನನ್ನ ಮೊದಲ ಕವನ ಬರೆದಿದ್ದು ಹತ್ತನೇ ತರಗತಿಯಲ್ಲಿರುವಾಗ. ಖಗ, ಪುಷ್ಪ, ಪ್ರಕೃತಿ ಮತ್ತು ಮಾನವ ಎ೦ದೆಲ್ಲಾ ಗೀಚಿದ್ದೆ. ಆದರೆ ಆ ಕವನವನ್ನು ನಾನು ಬೇರೆಯವರಿಗೆ ತೋರಿಸಿದ್ದು ನಾನು ಡಿಗ್ರಿಗೆ ಬ೦ದ ಮೇಲೆಯೇ. ಕೆಳಗಿರುವುದು ನನ್ನ ಮೊದಲ ಬಾಲಿಶ ಕವನ.)

ಏಕೆ ಸುಮ್ಮನಾಗಿಹಿರಿ ಹಕ್ಕಿಗಳೇ
ನಿಮಗಾಗುತಿಹ ದೌರ್ಜನ್ಯ ಕ೦ಡು?
ಸಾಕಿನ್ನು ತಾಳ್ಮೆ, ಬೇಕಿನ್ನು ಕಟು ಹೃದಯ
ಮೊಳಗಿ ಬಿಡಿ ಹೃದಯ ಕಲಕುವ೦ತೆ
ಹೃತ್ಸರಸಿ ಭೋರ್ಗರೆಯುವ೦ತೆ
ನಿಮ್ಮ ಪ್ರತಿಭಟನೆಯ ಕೂಗ.

ಏಕೆ ಮೌನವಾಗಿಹಿರಿ ಹೂವುಗಳೇ
ಏಕೆ ಹೀಗೆ ನಗುವಿರಿ
ಕೆಡವಿ ನಿಲ್ಲಿ ನಿಮಗಾಗುತಿಹ ಬಲಾತ್ಕಾರಕೆ
ಸಾಕು ಮಾಡಿ ನಿಮ್ಮ ಹೂನಗೆಯ
ಶುರುವಾಗಲಿ ನಿಮ್ಮ ಸತ್ಯಾಗ್ರಹ
ಬೆಳೆಸಿಕೊಳ್ಳಿ ಕಾ೦ಡದ ತು೦ಬಾ ಮುಳ್ಳನು…

ಏಕೆ ನಿಧಾನಿಸುವೇ ಪ್ರಕೃತಿ
ಸ್ವಲ್ಪ ಸ್ವಲ್ಪವೇ ನಿನ್ನ ಶಕ್ತಿಯನ್ನು ಪ್ರಯೋಗಿಸಿ?
ಏತಕ್ಕಾಗಿ ಈ ಅಸಹನೀಯ ಮೌನ
ಮನುಕುಲ ನರಳಿ ನರಳಿ ಸಾಯಬೇಕೆ೦ಬ ಹುನ್ನಾರವೆ?
ಸಾಕಿನ್ನು ನಿನ್ನ ತೆರೆಮರೆಯ ಆಟ
ತೋರಿಸಿ ಬಿಡು ನಿನ್ನಮಿತ ಪರಾಕ್ರಮವನು
ಬಾರಿಸಿಬಿಡು ಹುಲುಮಾನವರ ವಿರುದ್ಧ ನಿನ್ನ ಜಯಭೇರಿಯನು.

ಏಕೆ ಹೀಗೆ ದೌರ್ಜನ್ಯ ಮಾನವರೇ
ಗೋಚರಿಸದೇ ನಿಮ್ಮಪೂರ್ವ ಜ್ಞಾನಕೆ ಇನ್ನೂ
ಖಗ ಪುಷ್ಪ – ಪ್ರಕೃತಿಯ ಪ್ರತಿಭಟನೆ.
ಎಚ್ಚೆತ್ತುಕೊಳ್ಳಬಾರದೇ ಇನ್ನಾದರೂ?
ನಡೆಸಬಾರದೇ ಸ೦ಧಾನವನು?
ಮಾಡಬಾರದೇ ನಿನ್ನ ಸ೦ತಾನದ ಉಳಿವನು?

Comments

ವಾಹ್! ತುಂಬಾನೇ ಚೆನ್ನಾಗಿದೆ....ಬಾಲಿಶ ಅಂತ ಸುಮ್ನೆ ಹೇಳ್ಕೊಂಡಿದೀರ..:-)
ನಿಮ್ಮ postings ಎಲ್ಲ ಓದೀದಿನಿ ನಾನು, ತೆಳು ಹಾಸ್ಯದ ಜೊತೆಗೆ ಚೆನ್ನಾಗಿ ಬರೀತೀರ..
ಸಾಗಲಿ ಬರವಣಿಗೆ :-)
ಇದೇನು ಸುಧೇಶ?
ಯಾಕೆ ಅನಿಸಿತು ನಿನಗೀ ಕವಿತೆ ಬಾಲಿಶ?
ನಿನಗೆ ಹಾಗನಿಸಿದ್ದರೆ ಅದು Foolisha...
PARAANJAPE K.N. said…
ಇದು ಖ೦ಡಿತವಾಗಿಯೂ ಬಾಲಿಶ ಅಲ್ಲ, ಪ್ರಬುದ್ಧವಾಗಿದೆ. ಚೆನ್ನಾಗಿದೆ.ನನ್ನ ಬ್ಲಾಗಿಗೂ ಭೇಟಿ ಕೊಡಿ.
www.nirpars.blogspot.com
Ittigecement said…
ಸುಧೇಶ್....

ಕವಿತೆ ನನಗೆ ಇಷ್ಟವಾಯಿತು...

ಆ ವಯಸ್ಸಿನಲ್ಲಿಯೇ ಚಂದವಾಗಿ ರಚಿಸಿದ್ದೀರಿ...

ಮುಂದುವರೆಸಿರಿ...

ಹೊಸವರ್ಷದ ಶುಭಾಶಯಗಳು...
Hmmm.. i didnt knew by the time when you were on call with me, that u were about to post a poem..yeah i remember u saying that u r posting a poem requested to post by one of ur blogger frnds and that to written by you in your 10th standard....
It was again a very difficult task for me to understand your poem sudesh...but to be honest, i anyhow managed to crack your poem.

I can get your mindset when you were in your 10th standard, where in this krantikari(rebel) feelings keep running in our minds...that is such an age..

I liked the way you tried to picturise your request asking nature( generalised) to get back to work and stand for herself.

Sometimes birds,sometimes flowers, anmd sometimes nature..all the three are being inspired to do something for themselves...
Atlast the man is being asked to wake up...
Good man..
i remember me writing such poem at some point of my life...
let me get that back and will post it sometime.....
It was meaning ful and beautiful too..

Keep writing buddy, for sure it inspires someone..

Cheers...
Geetha said…
ಸುಧೇಶ್
ಇದು ನಿಮ್ಮ ಮೊದಲ ಕವನವೆ?!!!
ನೀವು ಇತ್ತೀಚೆಗೆ ಬರೆದಿರುವ ಕವನಗಳಿಗಿಂತಲೂ ಚೆನ್ನಾಗಿದೆ!!
ಪದಗಳು ಜೋರಾಗಿವೆ, ಭಾವವೂ ಜೋರಾಗಿದೆ!
೧೦ನೇ ಕ್ಲಾಸಿಗೆ ಇಂಥ ಒಳ್ಳೆಯ ಪದ್ಯ ಬರಿದಿದ್ದೀರಲ್ಲ :)

ಇನ್ನು ಹಳೆಯ ಖಜಾನೆಯಲ್ಲಿ ಏನಾದರು ಇದ್ದರೆ ಹೊರಗೆ ತೆಗೆಯಿರಿ...
ಸುಧೇಶ್,

ಚಿಕ್ಕ ವಯಸ್ಸಿನಲ್ಲೇ ಎಂತಹ ವಿಚಾರ ಬರೆದಿದ್ದೀರ. ಸೂಪರಾಗಿದೆ ಕವನ.
Veni said…
Hi da, its really nice. I think you were in love with nature at that time and felt bad the way human were exploiting it for their greeds. It has been written and presented in a nice way. Not at all kiddish.
Hi Sudesh,

There are few widgets that are very helpful and interesting.
Add them to your blog too..
here goes the link for adding recent post and recent comments widget. Add if u find it interesting to add..

http://www.madtomatoe.com/recent-comments-widget-for-blogger/

One more buddy,its a comment chat box..
Go to the website http://cbox.ws/?r=3-2943685 (this is the one I use in my blog). Register yourself and get the code, add the same in your blog.

Hope this helps.

Cheers... :)
ಗೀತಾ ಗಣಪತಿಯವರೆ...

ತು೦ಬಾ ಧನ್ಯವಾದಗಳು ನನ್ನ ಬ್ಲಾಗ್ ಓದುತ್ತಿರುವುದಕ್ಕೆ. ಪ್ರತಿಕ್ರಿಯಿಸುದದ್ದಕ್ಕೆ ಕೂಡ. ನಿಮ್ಮ ಬ್ಲಾಗ್ ಲಿ೦ಕ್ ಹಾಕಿಕೊಳ್ಳುತ್ತೀನಿ... ಹೀಗೆ ಬರುತ್ತಿರಿ.

ಸ೦ದೀಪ್....

:):):)

ತು೦ಬಾ ಚೆನ್ನಾಗಿದೆ ನಿನ್ನ ಕವನ...

ಕವನ ಎ೦ದರೆ ಏನು ಎ೦ದು ಗೊತ್ತಿಲ್ಲದ ಸಮಯದಲ್ಲಿ ಬರೆದದ್ದು ಈ ಕವನ (ಈಗ ಗೊತ್ತಿದೆ ಅ೦ತೇನಲ್ಲ). ಅದಕ್ಕೆ ಬಾಲಿಶ ಅ೦ದೆ. ತು೦ಬಾ ಥ್ಯಾ೦ಕ್ಸ್ ಮಾರಾಯ ಪೊರ್ಲುಡು ಕಮೆ೦ಟ್ ಮಲ್ತಿನೈಕ್...


ಪರಾ೦ಜಪೆಯವರೇ...

ವೆಲ್ ಕಮ್ ನನ್ನ ಬ್ಲಾಗಿಗೆ. ನಿಮ್ಮ ಬ್ಲಾಗನ್ನು ಓದಿದ್ದೇನೆ ಈ ಹಿ೦ದೆ, ಕಮೆ೦ಟಿಸಿರಲಿಲ್ಲ ಅಷ್ಟೆ. ಚೆನ್ನಾಗಿದೆ ನಿಮ್ಮ ಬ್ಲಾಗು.

ಪ್ರಕಾಶಣ್ಣ....

ಥ್ಯಾ೦ಕ್ಸು. ನಿಮಗೆಲ್ಲಾ ಕವನ ಇಷ್ಟವಾಯಿತು ಎ೦ದು ತಿಳಿದು ಖುಷಿಯಾಗುತ್ತಿದೆ....

Hi Mahesh...

Thank you very much dude for the comment.
You are trying to read more and more Kannada which gives me loads of pleasure. Whatever you understood about my poem is correct. Thank you for the efforts in understanding my poem, hence by encouraging.... Lemme take sometime and crack your English poems:)

Will try the gadgets soon and let you know.

ಗೀತಾ ಅವರೇ...

ನಿಮ್ಮ ಕಮೆ೦ಟಿನಿ೦ದ ನನಗೆ ಕೊ೦ಬು ಮೂಡುತ್ತಿದೆ. ನಿಮಗೆಲ್ಲಾ ನನ್ನ ಕವನ ಇಷ್ಟವಾಯಿತೆ೦ಬುದು ನನಗೆ ಖುಷಿ ಕೊಡುತ್ತಿದೆ. ಖಜಾನೆಯಲ್ಲಿ ತು೦ಬಾ ಕವನಗಳಿವೆ. ನೀವು ಹೇಳಿದ್ದೀರಾ.... ಆದ್ದರಿ೦ದ ಹಾಕಿಯೇ ಹಾಕುತ್ತೇನೆ... ನಿಮಗೆಲ್ಲಾ ಅವನ್ನು ಓದುವ ಶಿಕ್ಷೆ ಇದ್ದೇ ಇದೆ:)
ಹತ್ತನೇ ತರಗತಿಯಿ೦ದ ದ್ವಿತೀಯ ಪಿಯು ವರೆಗೆ ತು೦ಬಾ ಕವನಗಳನ್ನು ಬರೆದಿದ್ದೆ. ಆನ೦ತರ ಕವನ ಬರೆಯೋದು ಸ್ವಲ್ಪ ಕಡಿಮೆಯಾಯಿತು....

ನಿಮ್ಮ ಮೊದಲ ಕವನವನ್ನೂ ಪೋಸ್ಟಿಸಿ... ನಾನು ಕುತೂಹಲಿಯಾಗಿದ್ದೇನೆ....

ಜೇ...

ಥ್ಯಾ೦ಕ್ಸ್ ಕಣ್ರಿ... ಏನೇ ಆಗಲೀ.. ಕವನ ಬರೆಯುವುದನ್ನು ನಿಮ್ಮಿ೦ದ ಕಲಿಯಬೇಕು. ನನಗೆ ಅದರ ಬಗ್ಗೆ ಹೊಟ್ಟೆಕಿಚ್ಚಿದೆ ನಿಮ್ಮ ಮೇಲೆ....
Hi Nagaveni....

I don't exactly remember what made me to write this poem. But yes, I was in love with nature as the place where I hail from is full of greenery. So that might have inspired me to write this poem.

Thank you for liking the poem....
shivu.k said…
ಸುಧೇಶ್,

ನಿಮ್ಮ ಕವನ ನಿಮಗೆ ಬಾಲಿಶ ಅನ್ನಿಸಿದರೂ ಚೆನ್ನಾಗಿದೆ ಅನ್ನಿಸಿದೆ ನಮಗೆ.

ನಿಮ್ಮ ಅನಿಸಿಕೆ ಸರಿ...ಪಕ್ಷಿಗಳೆಲ್ಲಾ ಒಮ್ಮೆ ದೊಡ್ಡ ಹೋರಾಟವನ್ನು ಮಾಡಲೇ ಬೇಕಾದ ಪರಿಸ್ಥಿತಿಯಿದೆ...
ಧನ್ಯವಾದಗಳು...
ಹೈ ಸುಧೇಶ್,

ಪ್ರತಿಭಟನೆ ಬಹಳ ಜೋರಾಗಿದೆ! ಹೌದು, ನಿಮ್ಮ ಮೊದಲ ಬರಹ ಹೇಗಿರುತ್ತದೋ ಎಂಬ ಕುತೂಹಲವಿತ್ತು. ಬಹಳ ಚೆನ್ನಾಗಿದೆ ಕವನ. ಪೋಸ್ಟಿಸಿದ್ದಕ್ಕೆ ’ತುಂಬಾ ಥ್ಯಾಂಕ್ಸ್’:)
Dude..

i have tagged u with 100 truth's...

You got to answer all those questions truthfully :P

visit my page to know more...

Take care...

Cheers...
ಯಾರು ಹೇಳಿದ್ದು ಬಾಲಿಶ ಅಂತ? ಚೆನ್ನಾಗಿ ಬರೆದಿದ್ದೀರಿ. ಪುಟ್ಟ ವಯಸ್ಸಿನಲ್ಲಿ ಹೇಗೆ ಯೋಚನೆ ಮಾಡಿದ್ದೀರಿ ನೋಡಿ...keep it up
ನನ್ನ ಕಡೆ ಬಂದು ಹೋಗ್ತೀರಾ..?
-ಧರಿತ್ರಿ
Anonymous said…
ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
ಪ್ರತಿಭಟಿಸ್ತಾನೆ ಇರ್ತೀರಾ..ಅಲ್ಲ ಮುಂದಿನ ಫೋಸ್ಟ್ ಬೇಗ ಹಾಕ್ತೀರಾ..ಇಲ್ಲಾಂದ್ರೆ ನಿಮ್ ವಿರುದ್ಧನೇ ಪ್ರತಿಭಟಿಸಬೇಕಾಗುತ್ತದೆ. ಹುಷಾರ್ ....
(::::)
-ಧರಿತ್ರಿ
Unknown said…
ಪೊರ್ಲುದ ಕವನ.... ಸೂಪರಾಗಿದೆ...
I Have posted the English version of this poem on my blog and it would be a great honor if you take a look and drop your views on it.
Deepa Gopal said…
Hi Sudesh

First time here...
I am here via Anubhav. Wanted to read the original first and then Mahesh's translation. Its really superb!!! Wonderful expressions and wonderful feeling. Loved reading it!!!

Good Luck!

Warm Regds
Deepa from
http://deepazworld.blogspot.com/
Mahesh,

Would see and comment there..

Thanks for the translation....
Thanks Deepa for the appreciation....:) keep coming to my blog...

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ