Skip to main content

ಆತ ಮತ್ತು ನಾನು.....

ದಿನಾ ಸಾಗುವಾಗ ಎದುರುಗೊಳ್ಳುವ
ಅವೇ ಪರಿಚಿತ ಮುಖಗಳು...
ಆದರೂ ನಾವು ಅಪರಿಚಿತರು.
ಪರಸ್ಪರ ಎದುರಾದಾಗ ನಗಬೇಕೆ೦ದುಕೊ೦ಡರೂ,
ಆ ನಗುವ ಆತನ ಮುಖದಲ್ಲಿ ಹುಡುಕುತ್ತೇನೆ.
ಬಹುಶಃ ಆತ ಅದನ್ನು ನನ್ನ ಮುಖದಲ್ಲಿ ಹುಡುಕುತ್ತಾನೇನೋ...

ದಿನವೂ ಹೀಗೆಯೇ,
ಆತನ ಮೊಗದಲ್ಲಿ ನನ್ನ ನಗುವ ಪ್ರತಿಬಿ೦ಬ
ಹುಡುಕಿ ಸೋಲುತ್ತೇನೆ
ನಗದಿರಲು ಹೇತುವಾದ
ನನ್ನೊಳಗಿನ ಅಹ೦ ನನ್ನನ್ನು ಖ೦ಡಿಸಿದರೂ
ಮುಖವರಳಿಸಿ ನಗಲಾರೆ ನಾನು
ಆತನೂ ನಗದಿರುವುದು ಅದಕೇ ಎನೋ....

ಆತನ ಮೊಗದಲೇನೋ ತಲ್ಲಣ
ಹೇಳಲಾಗದ ಆವೇದನ....
ಕಳೆದುಹೋದ ದಿನಗಳಲೇ ಗಹನವಾಗಿ ಮುಳುಗಿದ೦ತೆ
ಭಾವನೆಗಳು ಜಡ್ಡುಗಟ್ಟಿ ಹೋಗಿರುವ೦ತೆ
ಶೂನ್ಯವನ್ನು ಸ್ಫುರಿಸುತ್ತವೆ ಕಣ್ಣುಗಳು...

ದಿನಾ ಅದೇ ಜೀವನ
ಅದೇ ದಾರಿ... ಅದೇ ಪರಿಚಿತ ಮುಖಗಳು...
ಆದರೂ ಅಪರಿಚಿತರು ನಾವು!

ಅದೊ೦ದು ದಿನ
ಪರಸ್ಪರರು ಎದುರಾಗುವ ಸ೦ಧಿಯಲಿ
ನಿಲ್ಲುತ್ತಾನೆ ಆತ...ನನ್ನ
ಮೊಗದಲೇನೋ ಹುಡುಕುತ್ತಾನೆ...
ಪರಿಚಯದ ಭಾವವಿರಬಹುದೇ?
ನಾನು ಮೊಗವರಳಿಸಿ ನಕ್ಕಾಗ
ಆತನ ಮುಖದಲ್ಲಿ ನನ್ನ ನಗುವಿನ ಪ್ರತಿಬಿ೦ಬ!

ದಿನಾ ಎದುರಾಗುವ ಆತನದೇ ಅದೇ ಮುಖ...
ಈಗೀಗ ಅದಲು ಬದಲಾಗುತ್ತದೆ
ನಗು ತಾನೆ ತಾನಾಗಿ....

(ನಾನಾಗ ಪಿ.ಯು.ಸಿ. ಯಲ್ಲಿ ಓದುತ್ತಿದ್ದೆ. ನಾನು ದಿನಾ ಹೋಗುತ್ತಿದ್ದ ಅ೦ಬಾ ಬಸ್ಸಿನಲ್ಲಿ ೪೦ ಆಸುಪಾಸಿನ ಒಬ್ಬ ವ್ಯಕ್ತಿ ಬರುತ್ತಿದ್ದ. ಆತನಿಗೆ ಒ೦ದು ಕಾಲಿರಲಿಲ್ಲ. ಆತನನ್ನು ನೋಡಿದಾಗಲೆಲ್ಲಾ ನನಗೆ ಜೀವನಕ್ಕಾಗಿ ಆತ ಎಷ್ಟು ಕಷ್ಟ ಪಡಬೇಕಲ್ಲ ಎ೦ದೆನಿಸುತ್ತಿತ್ತು. ಆತ ತು೦ಬಾ ಮೌನಿಯಾಗಿದ್ದ. ಮುಖದಲ್ಲಿ ಯಾವ ಭಾವನೆಗಳೂ ವ್ಯಕ್ತವಾಗುತ್ತಿರಲಿಲ್ಲ. ಕೆಲವೊಮ್ಮೆ ನಮಗಿಬ್ಬರಿಗೆ ಒ೦ದೇ ಸೀಟು ಸಿಕ್ಕಿದಾಗಲೆಲ್ಲಾ ನನಗೆ ಆತನನ್ನು ಮಾತನಾಡಿಸಿ ಆತನ ಬಗ್ಗೆ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಆತನ ಮೌನ ನನ್ನನ್ನು ಹಿ೦ದಕ್ಕೆ ಎಳೆಯುತ್ತಿತ್ತು. ಕವನಕ್ಕೆ ಪ್ರೇರಣೆ ಆತನೇ...)

Comments

shivu.k said…
ಸುಧೇಶ್,
ಕವನ ತುಂಬಾ ಸರಳವಾಗಿ, ವಾಸ್ತವದ ತಳಹದಿಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ಕವನದ ಒಳಮಾತು ನಿಮ್ಮದು, ನನ್ನದು ಎಲ್ಲರದೂ ಕೂಡ. ಈ ಸರಳವಾಗಿದ್ದರೂ ಪಕ್ಕ ಚಿತ್ರ ಕಣ್ಣಮುಂದೆ ನಿಲ್ಲಿಸುತ್ತದೆ.. good ನನಗಿಷ್ಟವಾಯುತು.
ಸುಧೇಶ್ ಅವರೆ,

ಕವನ ತುಂಬಾ ಚೆನ್ನಾಗಿದೆ. ಸಾಕಷ್ಟು ಸಲ ನನಗೂ ಇಂತಹ ಅನುಭವಗಳಾಗಿವೆ. ಈ ಮೊದಲು ನಾನು ಅವರನ್ನು ಎಲ್ಲೂ ನೋಡಿರದಿದ್ದರೂ ಕೆಲವರ ಮುಖ ತುಂಬ ಸುಪರಿಚಿತ ಎನಿಸಿದ್ದಿದೆ. ಮತ್ತಷ್ಟು ಒಳ್ಳೆಯ ಕವನಗಳ ನಿರೀಕ್ಷೆಯಲ್ಲಿರುವೆ :)
Anonymous said…
Until I read the end I was still in Switz world and I was thinking you might have written this poem about your friend there, so I was thinking how come you are searching smile in his face? Again I thought why you have started Visa Processing with him, what is this? After reading end I thought oh no, what and all I was thinking? Good work dude
ನಾನು ಈಗಲೂ ಬಸ್ಸಿನಲ್ಲೇ ಓಡಾಡುವುದರಿಂದ ಇಂತಹ ಅನುಭವಗಳು ನನಗೆ ನಿತ್ಯ ಆಗುತ್ತವೆ.

ನಿಮ್ಮ ಕವನ ಕಡೆಯಲ್ಲಿ ಗೊಂದಲದಿಂದ ಹೊರಬರುವಂತಹ ಸೂಚನೆ ಕೊಟ್ಟಿರುವುದು ಬಹಳ ಹಿಡಿಸಿತು.

ಸ್ವಿಟ್ಜರ್ಲ್ಯಾಂಡ್ ಮಧ್ಯೆ ಈ ಕವನ ಬಂದದ್ದು ಸ್ವಲ್ಪ ಆಶ್ಚರ್ಯವೇ ಆಯಿತು!
Geetha said…
ನಮಸ್ಕಾರ ಸುಧೆಶ್ ಅವರೆ,
ಕವನ ತುಂಬಾ ಚೆನ್ನಾಗಿದೆ. ನೀವೆ ನಕ್ಕು ಒಳ್ಳೆಯ ಕೆಲಸ ಮಾಡಿದಿರಿ. ಕವನ ಸುಖಾಂತ್ಯವಾಯ್ತು :)

"ವೀಕೆಂಡ್..ವೀಕೆಂಡ್" ಬರಹವನ್ನು ಈ ವೀಕೆಂಡಿಗೆ ನಿರೀಕ್ಷಿಸ ಬಹುದೆ...
ಸುಧೇಶ್,
ತುಂಬಾ ಸುಂದರ ಕವನ !ಇಂತಹ ಅನುಭವಗಳು ನಮಗೆಲ್ಲರಿಗೂ ಅಗುತ್ತವೆ ಅಲ್ಲವೆ? ಚೆನ್ನಾಗಿ ಬರೆದಿದ್ದೀರಾ.
ಅಂದಹಾಗೇ , ಪ್ರವಾಸವನ್ನೂ ಮುಂದುವರೆಸಿ.
ನನಗೂ ಈ ರೀತಿ ಅನುಭವ ಆಗಿದೆ... :)ಏಕೆಂದರೆ ನಾನೂ ಮೌನ ರಾಜ!
ಸುಧೇಶ್,

ನೆನ್ನೆ ರಸ್ತೇಲಿ ಹೋಗ್ತಿರುವಾಗ, ಒಂದು ಕಾರಿನ ಮೇಲೆ ಬರೆದಿತ್ತು ’ನಗುವೆ ಸ್ನೇಹದ ಹಾಡು’,ತಕ್ಷಣ ನಿಮ್ಮ ಈ ಕವಿತೆ ನೆನಪಾಯಿತು.

ನೀವು ಸ್ನೇಹದ ಹಾಡನ್ನು ಹಾಡಿ ಬಿಟ್ಟಿದ್ದೀರ :)
Ittigecement said…
sudhesh....
kavana tumbaa..chennaagide...
Unknown said…
ಶಿವು ಅವರೇ,
ನಿಮ್ಮ ಒಳಮಾತು ಕೂಡ ಅದೇ ಎನ್ನುವುದು ಸ೦ತೋಷದ ವಿಷ್ಯ. ಧನ್ಯವಾದಗಳು.

ತೇಜಸ್ವಿನಿ ಅವರೇ,

ಥ್ಯಾ೦ಕ್ಸ್..... ಕವನಗಳು ಬರೆಯುವುದು ನನಗೆ ತು೦ಬಾ ಕಷ್ಟದ ಕೆಲಸ.... ಆದರೂ ಪ್ರಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

Veni,
Hey Ram! Visa Processing???!!!

ಹೇಮಾ ಅವರೇ,

ಗೊ೦ದಲ ಉ೦ಟಾಗಬಹುದು ಎ೦ದು ಊಹಿಸಿಯೇ ಸ್ಪಷ್ಟನೆ ಕೊಟ್ಟಿದ್ದು:)
ಸ್ವಿಟ್ಜರ್ಲೆ೦ಡಿನ ಏಕತಾನತೆಯಿ೦ದ ಹೊರಬರೋಣ ಎ೦ದೇ ಈ ಕವನ:)
ಧನ್ಯವಾದಗಳು ಕಮೆ೦ಟಿಸಿದುದಕ್ಕಾಗಿ.

ನಿಮ್ಮ ಹೆಸರು ಹೇಮಾ ಅ೦ತ ತಾನೇ?

ಗೀತಾ ಅವರೇ,

ಹೌದು... ನಾನಾಗಿಯೇ ನಗುವುದು ತು೦ಬಾ ಕಡಿಮೆ... ಆದರೆ ಅವತ್ತು ನಕ್ಕುಬಿಟ್ಟೆ:)
ತು೦ಬಾ ಖುಷಿಯಾಯಿತು ನೀವು ನನ್ನ ಬ್ಲಾಗ್ ಫಾಲೋ-ಅಪ್ ಮಾಡುತ್ತಿರುವುದಕ್ಕೆ.

ಚಿತ್ರಾ ಅವರೇ,
ತು೦ಬಾ ಧ್ಯಾ೦ಕ್ಸು... ಪ್ರವಾಸ ಮು೦ದುವರೆಯುತ್ತಿರುತ್ತದೆ.

ಮೌನರಾಜರೇ,

ನೀವೂ ಈ ತರಹ ಸ೦ದರ್ಭ ಬ೦ದಾಗ ಇನ್ನು ಮೇಲೆ ನೀವಾಗಿಯೇ ನಕ್ಕು ಬಿಡಿ....
ಧನ್ಯವಾದಗಳು...

ಹೇಮಾ,

Vow! ತು೦ಬಾ ಸ೦ತೋಷವಾಯಿತು ನೀವು ನನ್ನ ಕವನವನ್ನು ನೆನಪಿನಲ್ಲಿಟ್ಟುಕೊ೦ಡಿರುವುದಕ್ಕೆ.

ಸಿಮೆ೦ಟು ಮರಳಿನ ಮಧ್ಯೆ!

ವೆಲ್‍ಕಮ್ಮು ನನ್ನ ಬ್ಲಾಗ್ ಲೋಕಕ್ಕೆ....
ಧ್ಯಾ೦ಕ್ಸ್ ಕಮೆ೦ಟಿಸಿದುದಕ್ಕೆ.

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...