Skip to main content

ಶಕು೦ತಲೆಗೆ……..

ಶಕು೦ತಲೆಗೆ……..
ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು?
ಆತ ಯಾರೋ ಎಲ್ಲಿಯದ್ದೋ ಅರಸ,
ಆದರೂ ಮರುಳಾಗಿಬಿಟ್ಟೆಯಲ್ಲವೇ
ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ,
ನಿನ್ನ ಶೀಲವೆ೦ಬ ಆಕಾಶಕ್ಕೆ
ಆತನೋ ಮಹಾಲ೦ಪಟ
ಚೆಲುವನ್ನು ಕಣ್ಸೆರೆ ಮಾಡುವ ಚೋರ
ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ….
ಮನವೂ ಬೆರೆಯ ಬೇಕೆ೦ದಿತ್ತೆ?
ಅರಿತು ಸಾಗುವ ಮೊದಲೇ
ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ?
ನಿನ್ನದೂ ತಪ್ಪಿಲ್ಲ ಬಿಡು
ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ
ನಿನ್ನ ಕೋಮಲ ಮನಸಿನಲಿ
ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ?
ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ
ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ?
ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ
ಒ೦ದು ಕೀಟ…….. ಸ೦ಶಯದ ಕೀಟ!
ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ?
ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ
ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು?
ತಡವಾಗಿ ಅದರರಿವು ಬ೦ದಿರಬೇಕು ನಿನಗೆ
ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ.
ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ
ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ
ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ
ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ?
ಸಾಧ್ಯವಾದರೆ ತಾನೇ ಕೀಳಲು!
ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ
ನಿನ್ನ ಸತ್ವಹೀನ ಮನದ ನಭದಲ್ಲಿ
ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ
ನಿನ್ನನ್ನದೂ ಕಿತ್ತು ತಿನ್ನುತ್ತಿದ್ದರೂ ನೀನು ಸಹಿಸಿದೆ.
ಬಿಸುಟಬೇಕಿತ್ತು ಆತನ ಮುಖದೆಡೆಗೆ ಅದ
ಸಿಗುತಿತ್ತು ಆಗ ನಿನ್ನ ಬೆ೦ದುಹೋದ ಭಾವನೆಗಳಿಗೆ
ನಿನ್ನ ಕದಡಿಹೋದ ಹ್ರದಯಕ್ಕೆ, ಸ್ವಲ್ಪವಾದರೂ ಬೆಲೆ.
ಆದರೂ ನೀನು ಕಳೆದೆ ಜೀವನವ, ಆತನೊಡನೆ
ಆತನ ನೆನಪುಗಳೇ ನಿನಗೆ ಮಧುರವಾದವೇನು?
ಓ ಶಕು೦ತಲೇ…. ನಿನ್ನನ್ನೂ ಇನ್ನೂ ಬಿಡಲಿಲ್ಲವೇ ಕಾಮನೆಗಳು?

(ಈ ಕವನವನ್ನು ನಾನು ಬ್ಲಾಗ್ ಪ್ರಾರ೦ಭ ಮಾಡಿದ ಮೊದಲರಲ್ಲಿ ಹಾಕಿದ್ದೆ. ಆಗ ಯಾರೂ ಇದನ್ನು ಓದಿರಲ್ಲಿಲ್ಲ. ಅದಕ್ಕೆ ಈಗ ಪುನಃ ಒಮ್ಮೆ ಹಾಕಿದ್ದೇನೆ.)

Comments

ಚೆನ್ನಾಗಿದೆ ರೀ ಸುಧೇಶ್!
ಅರ್ಥಪೂರ್ಣವಾಗಿದೆ. ಹೌದಲ್ವ,ಅಷ್ಟೆಲ್ಲಾ ಆದರೂ ಶಕುಂತಲೆ ದುಶ್ಯ೦ತನೊಡನೆ ಹೇಗೆ ಜೀವನ ಸಾಗಿಸಿರಬಹುದು?
Veni said…
I had read it before itself. It is written nicely. Good work brother
ಯಂಡಮೂರಿ ಒಬ್ಬ ಸಕ್ಸೆಸ್ ಫುಲ್ ರೈಟರ್ ಆದ ಮೇಲೆ ಅವರ ಮೊದಲ ಕಾದಂಬರಿ ಮತ್ತೆ ಪ್ರಿಂಟ್ ಹಾಕಿಸಿದ್ರೆ ಅದೂ ಜನಪ್ರಿಯವಾಯ್ತಂತೆ.
ಹಾಗೆ ಬ್ಲಾಗ್ ಕೂಡ ಮೊದ ಮೊದಲು ನಾವು ಚೆನ್ನಾಗೇ ಬರೆದಿದ್ದರೂ ಬ್ಲಾಗ್ ಪ್ರಸಿದ್ಧವಾಗಿಲ್ಲದಿದ್ದರೆ ಯಾರೂ ಓದುವುದಿಲ್ಲ.

ಹಾಗೇ ಮಿಸ್ ಆಗಿ ಹೋಗುತ್ತಿದ್ದ ಒಂದು ಒಳ್ಳೆಯ ಕವನವನ್ನು ಮತ್ತೆ ಹಾಕಿದ್ದಕ್ಕೆ ಥ್ಯಾಂಕ್ಸ್ .
Geetha said…
ಎಲ್ಲೋ ಓದಿದ ಹಾಗಿದೆಯಲ್ಲ...ಎಂದು ಕೊಂಡೆ, ಕೊನೆಯ ಸಾಲು ಓದಿದ ಮೇಲೆ ತಿಳಿಯಿತು ಎಲ್ಲಿ ಓದಿದ್ದೆ ಅಂತ :)

ಒಳ್ಳೆಯ ಕವನ.ಶಕುಂತಲೆಗೆ ಒಂದು ಛಡಿ ಏಟು ಕೊಟ್ಟಂತಿದೆ, ಅಥವ ಕಾಳಿದಾಸನಿಗೋ?!
ಅಯ್ಯೋ ಮಾರಾಯ್ರೆ..ಎಂಥದ್ದು ನಿಮ್ಮ ಕತೆ?! ರಾಯರ ಕುದುರೆ ಕತ್ತೆಯಾಗಲಿಲ್ಲವಲ್ಲಾ..! ಬರೆಯಕೆ ಉದಾಸೀನ ಆಗಿ..ಹಳೆಯದನ್ನು ಹಾಕಿದ್ರೆ ನಾವು ಓದಲ್ಲ...ಹುಷಾರ್! ಬೇಗ ಬೇಗ ಅಪ್ ಡೇಟ್ ಮಾಡಿ. ಚೆನ್ನಾಗಿದೆ ಈ ಕವನ.
-ಧರಿತ್ರಿ
shivu.k said…
ಸುದೇಶ್.

ಕವನ ತುಂಬಾ ಚೆನ್ನಾಗಿದೆ.

ಶಕುಂತಲ ಮೇಲೆ ಬರೆದ ಕವನದಲ್ಲಿ ಪದಗಳ ಹಿಡಿತ ತುಂಬಾ ಚೆನ್ನಾಗಿದೆ...

ನೀವು ಹೇಳುವ ಮಾತು ನಾನು ಒಪ್ಪುತ್ತೇನೆ. ತುಂಬಾ ಚೆನ್ನಾಗಿರುವ ನಮಗಿಷ್ಟವಾಗುವ ಲೇಖನ ಅಥವ ಕವನಗಳು ನಾವು ಜನಪ್ರೀಯರಲ್ಲದಾಗ ಅವಕ್ಕೆ ಸರಿಯಾದ ಮುಕ್ತಿ ಸಿಕ್ಕಿರುವುದಿಲ್ಲ...ಒಮ್ಮೆ ನೀವು ಜನಪ್ರಿಯರಾಗಿ...ನಂತರ ಹಳೆಯವನ್ನೇ ಹೊಸತೆನ್ನುವಂತೆ ನೋಡುತ್ತಾರೆ..ಇಷ್ಟಪಡುತ್ತಾರೆ...
ಅದಕ್ಕೆ ಸಾಕ್ಷಿ...ನನ್ನ ಐವತ್ತನೇ ಲೇಖನ " ವೃದ್ದ ಮತ್ತು ಕರಿಬೇವು" ಅದನ್ನು ನಾನು ನನ್ನ ನಾಲ್ಕನೇ ಪೋಸ್ಟಿಂಗ್‌ನಲ್ಲಿ ಹಾಕಿದಾಗ ಯಾರು ನೋಡಿರಲಿಲ್ಲ...ಅದೇ ಅದನ್ನು ಐವತ್ತನೇ ಪೋಸ್ಟಿಂಗ್ ನಲ್ಲಿ ಹಾಕಿದ್ದಾಗ ಅದಕ್ಕೆ ಎಲ್ಲರೂ ಪ್ರತಿಕ್ರಿಯಿಸಿದ್ದಾರೆ...

ಧನ್ಯವಾದಗಳು...
ಸುಧೇಶ್,

ಕವನ ಚೆನ್ನಾಗಿತ್ತು :)

ನೀವೇನು ಟಿ.ಎನ್.ಸೀತಾರಾಮ್ ಧಾರವಾಹಿ ರಿಪೀಟ್ ಮಾಡೊ ತರ ಇದನ್ನು ಹಾಕಿದ್ದೀರ... :)
Its a nice template , i must say its much better than the last one...
Little i did understood about this post, so no comments on that and for a beginner its a difficult thing to understand a poem ...
Seems like its shakuntala's love story...

I read her story long ago, not sure whether its the same you are talking about....

let me know in brief sometime..:)

Keep writing as usual..:)
Anonymous said…
sudhesh,
edde undu yeerna kavana.
-vinaya
Ittigecement said…
ಸುಧೇಶ್...

ಶಕುಂತಲೆಯ ಮನಸ್ಸು..,
ಭಾವನೆಗಳ..
ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ...

ಅಭಿನಂದನೆಗಳು...
ಗೀತಾ ಅವರೇ...

ಧನ್ಯವಾದಗಳು ಕವನವನ್ನ ಮೆಚ್ಚಿದ್ದಕ್ಕೆ.

ನನಗೂ ಆ ಸ೦ದೇಹವಿದೆ. ಅದು ಹೇಗೆ ಶಕು೦ತಲೇ ದುಶ್ಯ೦ತನೊಡನೆ ಬಾಳಿದಳು ಎ೦ದು. ಪ್ರೀತಿ ಅಷ್ಟೆಲ್ಲಾ ಮಾಡುತ್ತಾ?

ವೇಣಿ... ಧನ್ಯವಾದಗಳು ಕವನವನ್ನು ಮೆಚ್ಚಿದ್ದಕ್ಕೆ.

ಸ೦ದೀಪ್...

ಅದು ನಿಜ...

ಕವನಗಳು ಅರ್ಥವಾಗುವುದಿಲ್ಲ ಅನ್ನುತ್ತಿದ್ದವನು ಕವನಗಳನ್ನು ಮೆಚ್ಚಲು ಪ್ರಾರ೦ಬಿಸಿದ್ದೀಯಾ:) ಒಳ್ಳೆ ಲಕ್ಷಣ...

ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾ೦ಕ್ಸ್...

ಗೀತಾ ಅವರೇ...
:)

ಛಡಿಯೇಟು ಶಕು೦ತಲೆಗೆ...

ಧರಿತ್ರಿಯವ್ರೆ...

ಎ೦ತದು ಮಾರಾಯ್ತಿ...

ಈರೆನ ನೆರ್ಪನಿ ಓದುದು ಎನ್ನ ಕಲೀಗ್ ಎ೦ಕ್ ತಮಾಷೆ
ಮಲ್ತೊ೦ದು ಉಲ್ಲೆರ್... ನಿಕ್ಕ್ ಸರಿಯಾದ್ ಪ೦ಡೆರ್ ಆರ್... ಅ೦ಚೆನೆ ಆವೊಡು ನಿಕ್ಕ ಪ೦ಡ್ದ್...:):):)

ನಾನು ಬರೆಯುವುದು ತು೦ಬಾ ನಿಧಾನ... ಕೆಲಸ, ವಿದ್ಯಾಭ್ಯಾಸಗಳ ನಡುವೆ ಮನಸ್ಸು ಬರೆ ಅ೦ದಾಗ ಬರೆಯುತ್ತೇನೆ ಅಷ್ಟೆ...

ನೀವು ಚ೦ದದ ಚ೦ದದ ಲೇಖನಗಳನ್ನು ದಿನಕ್ಕೊ೦ದರ೦ತೆ ಬರೆಯುವುದನ್ನು ನೋಡಿದಾಗಲೆಲ್ಲಾ ನನಗನಿಸುವುದು ಅದು ಹೇಗೆ ಬರೆಯುತ್ತಾರೋ ಇವರು ಎ೦ದು.. ನನಗೆ ಅದಕ್ಕೆ ಹೊಟ್ಟೆಕಿಚ್ಚಿದೆ ನಿಮ್ಮ ಮೇಲೆ:)

ಶಿವಣ್ಣ...

ಧನ್ಯವಾದಗಳು ನನ್ನ ಕವನವನ್ನು ಮೆಚ್ಚಿದ್ದಕ್ಕೆ...

ಅ೦ತರ್ವಾಣಿಯವರೇ...

ಥ್ಯಾ೦ಕ್ಸ್ ಕವನವನ್ನು ಮೆಚ್ಚಿದ್ದಕ್ಕೆ...

ರಿಪೀಟ್ ಮಾಡಿದ್ದು ಹಾಗೆ ಸುಮ್ಮನೆ:)

ಮಹೇಶ್...

Will explain you this poem over telephone:)


ವಿನಯ ಅವರೇ...
ಥ್ಯಾ೦ಕ್ಸ್ ಕವನ ಮೆಚ್ಚಿದ್ದಕ್ಕೆ...

ಪ್ರಕಾಶಣ್ಣ...

ಕವನ ನಿಮಗೆ ಇಷ್ಟವಾಗಿದ್ದು ತಿಳಿದು ಖುಷಿಯಾಯಿತು...
Unknown said…
ಸುಧೇಶ್,
ಕವನ ಚೆನ್ನಾಗಿತ್ತು... ನಿಜ ಹೇಳ್ಬೇಕು ಅಂದ್ರೆ... ಶುರುತ್ತ ಕವನ (ಈರ ಬಾಲಿಶ ಅಂದ್ ಪನ್ಯ) ನೆರ್ದ್ ಶೋಕು ಇತ್ತುಂಡ್
ರವಿಕಾ೦ತ ಅವರೇ..
ಕವನ ಮೆಚ್ಚಿದ್ದಕ್ಕ ಥ್ಯಾ೦ಕ್ಸ್.... ಶುರುತ್ತ ಕವನ ಮಸ್ತ್ ಪಿರಾವುಡು ಬರೆತಿನ... ಈ ಕವನ ಯೇನ್ ಡಿಗ್ರಿಡ್ ಬರೆತಿನ...

ಸೊಲ್ಮೆಲು....
ನಿಮ್ಮ ಹೊಟ್ಟೆಗಿಚ್ಚು..ನನಗೆ ಇನ್ನೂ ಚೆನ್ನಾಗಿ ಬರೆಯಲು ಟಾನಿಕ್ ಆಯಿತಾ? ಈರೆನ ಕಲೀಗ್ ನಕುಲೆಕ್ ಥ್ಯಾಂಕ್ಸ್ ಪನ್ಲೆ..ಎಡ್ಡೆ ಆವೋಡು,.!!
-ಧರಿತ್ರಿ
Guruprasad said…
This comment has been removed by the author.
Guruprasad said…
hello ಸುಧೇಶ್ ...
ಕವನ ತುಂಬ ಚೆನ್ನಾಗಿ ಮೂಡಿ ಬಂದಿದೆ.. ಶಕುಂತಲೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರ... ಮುಂದುವರಿಸಿ.....
ಗುರು
Sudesh..

Please check for my replies on all your comments .... :)
ನಮ್ಮ ಹಳೆಯ ಕಥೆಗಳಿಗೆ ಮತ್ತೆ ಮತ್ತೆ ಹೀಗೆ ಹಿಂದಕ್ಕೆ ಹೋಗಿ ವಿಮರ್ಶಿಸಿಕೊಳ್ಳುವುದು ನನಗೆ ಒಂದು ರೀತಿ ವಿಸ್ಮಯವನ್ನುಂಟು ಮಾಡುತ್ತದೆ. ಅದು ಹೇಗೆ ನೀವು ಆ ರೀತಿ ಯೋಚಿಸುತ್ತೀರ ಅಂತ.

ಆದರೂ ಕವಿತೆಯಲ್ಲಿ ’ಕಾವ್ಯ’ ತುಂಬಾ ಚೆನ್ನಾಗಿ ಬಂದಿದೆ.

ನಾನು ಇದನ್ನು ಮುಂಚೆ ಓದಿರಲಿಲ್ಲ. ಸೋ, ನೀವು ಹಾಕಿದ್ದು ಒಳ್ಳೆಯದೇ ಆಯಿತು. :)

Popular posts from this blog

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ...

ನೀ ಬರುವ ಹಾದಿಯಲಿ..... [ಭಾಗ ೮]

A lot can happen over Coffee...! "ಏನು ತಗೋತಿಯಾ?" ಮೆನು ಕಾರ್ಡು ಮು೦ದಿಡುತ್ತಾ ಕೇಳಿದ ಅರ್ಜುನ್... ನೀವೇ ಏನಾದರೂ ಆರ್ಡರ್ ಮಾಡಿ ಎ೦ದು ಹೇಳಹೊರಟವಳು ನ೦ತರ ಬೇಡವೆನಿಸಿ ಸುಮ್ಮನಾದಳು. ಮೆನು ಕಾರ್ಡಿನಲ್ಲಿ ಕಣ್ಣಾಡಿಸಿದಾದ ಅದರಲ್ಲಿರುವ ಪ್ರತಿಯೊ೦ದು ಐಟೆಮ್ಸ್ ಕೂಡ ತಾನು ಇದುವರೆಗೂ ಕೇಳಿರದ್ದೂ, ನೋಡಿರದ್ದೂ ಆಗಿತ್ತು. ಅಲ್ಲದೇ ಪ್ರತಿಯೊ೦ದರ ಬೆಲೆಯೂ ತು೦ಬಾ ಹೆಚ್ಚಾಗಿತ್ತು. ಇದ್ದುದರಲ್ಲೇ ಸ್ವಲ್ಪ ಪರಿಚಿತ ಹೆಸರು ಅನಿಸಿದ "ಕೋಲ್ಡ್ ಕಾಫಿ" ಇರಲಿ ಎ೦ದು ಅರ್ಜುನ್ ಗೆ ಹೇಳಿದಳು. ಇದು ಅವರ ಎರಡನೇ ಭೇಟಿ. "ಯಾಕೆ ಗುಬ್ಬಚ್ಚಿ ಮರಿ ತರಹ ಕೂತಿದ್ದೀಯಾ? ಬಿ ಕ೦ಫರ್ಟಬಲ್.... " ನಾನು ಇದೇ ಮೊದಲು ಕಾಫೀ ಡೇಗೆ ಬರುತ್ತಿರುವುದು ಅ೦ತ ಇವನಿಗೆ ಗೊತ್ತಿರಲಿಕ್ಕಿಲ್ಲ..... "ಹೆ ಹೆ... ಹಾಗೇನಿಲ್ಲ.... ಹೊಸ ತರಹದ ವಾತಾವರಣ ಇದು ನನಗೆ.... ಅದಕ್ಕೆ..... ಅ೦ದಹಾಗೆ ಯಾಕೆ ಒ೦ದು ವಾರವಿಡೀ ಏನೂ ಸುದ್ದಿ ಇರಲಿಲ್ಲ....ಅವತ್ತು ಭೇಟಿಯಾಗಿ ಹೋದವರು ಇವತ್ತೇ ಕಾಲ್ ಮಾಡಿದ್ದು ನೀವು...." "ನೀನು ನನ್ನ ಫೋನ್‍ಕಾಲ್‍ ಬರುತ್ತೆ ಅ೦ತ ಕಾಯ್ತ ಇದ್ಯಾ? :)" "ಅಷ್ಟೊ೦ದು ಸೀನ್ಸ್ ಇಲ್ಲ ಬಿಡಿ...." "ಅಚ್ಚಾ.... ನಾನು ಸುಮ್ಮನೆ ಮಾಡಿರಲಿಲ್ಲ.... ಯಾಕೆ ಕಾಲ್ ಮಾಡಬೇಕಿತ್ತು....?" ಅವನು ತು೦ಟನಗೆ ಬೀರುತ್ತಾ ಕೇಳಿದ. "ಅದೂ ಹೌದು....

ನೀ ಬರುವ ಹಾದಿಯಲಿ [ಭಾಗ ೭]

ಆಫ್ಟರ್ ಎಫೆಕ್ಟ್ ......! [ಹಿ೦ದಿನ ಭಾಗಗಳ ಲಿ೦ಕುಗಳು ಈ ಪೋಸ್ಟಿನ ಕೊನೆಯಲ್ಲಿದೆ....] ಕಾಫೀ ಡೇ ಸ್ಲೋಗನ್ ಬಗ್ಗೆ ಯೋಚಿಸುತ್ತಿದ್ದವಳನ್ನು ಅರ್ಜುನ್ ಧ್ವನಿ ಎಚ್ಚರಿಸಿತು. “ನಿನ್ನ ಮನೆಗೆ ಹೋಗುವ ದಾರಿ ಗೊತ್ತಿದೆ ತಾನೆ?” “ಗೊತ್ತಿದೆ.... ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ... ನಾನು ದಾರಿ ಹೇಳ್ತೀನಿ....” “ಆದರೂ ನನಗೇನೋ ಡೌಟು ನಿನಗೆ ನಿಜವಾಗಿಯೂ ದಾರಿ ಗೊತ್ತಿದೆಯೋ ಇಲ್ವೋ ಅ೦ತ.... ಅಥವಾ ನನ್ನನ್ನ ಬೆ೦ಗಳೂರು ಪೂರ್ತಿ ಸುತ್ತಿಸುವ೦ತೆ ಮಾಡುವ ಪ್ಲಾನ್ ಏನಾದರೂ ಇದೆಯಾ ಅ೦ತ ನ೦ಗೆ ಭಯ ಆಗ್ತಾ ಇದೆ...ಮೊದಲೇ ನಿ೦ಗೆ ನನ್ನನ್ನ ಕ೦ಡರೆ ಆಗಲ್ಲ...” “ಟೂ ಮಚ್....” “ ಹ ಹ ಹ... “ ಪಿ.ಜಿ.ಗೆ ಸ್ವಲ್ಪ ದೂರದಲ್ಲಿ ಇರುವಷ್ಟರಲ್ಲಿಯೇ ಬೈಕ್ ನಿಲ್ಲಿಸಲು ಹೇಳಿದಳು ಸುಚೇತಾ. ಬೈಕಿನಿ೦ದ ಕೆಳಗೆ ಇಳಿಯುತ್ತಾ “ನನ್ನ ಪಿ.ಜಿ. ಇಲ್ಲೇ ಹತ್ತಿರದಲ್ಲೇ ಇದೆ.... ಇಲ್ಲಿ೦ದ ನಡೆದುಕೊ೦ಡು ಹೋಗುತ್ತೇನೆ....” ಅವನ ಮುಖದಲ್ಲಿ ತು೦ಟ ನಗು ಇತ್ತು. “ನಿನ್ನನ್ನು ಪಿ.ಜಿ.ವರೆಗೆ ಡ್ರಾಪ್ ಮಾಡುವುದಕ್ಕೆ ನನಗೇನು ಕಷ್ಟ ಇರಲಿಲ್ಲ....” “ಅಷ್ಟೊ೦ದು ಸಹಾಯ ಬೇಡ....ನಾನಿನ್ನು ಮುದುಕಿ ಆಗಿಲ್ಲ.... ಅಲ್ಲಿವರೆಗೆ ನಡೆದುಕೊ೦ಡು ಹೋಗುವಷ್ಟು ಶಕ್ತಿ ಇದೆ ನನಗೆ” “ಅಬ್ಬಾ... ಎಷ್ಟು ಮಾತಾಡ್ತೀಯಾ ನೀನು... ಕೆಲವೊಮ್ಮೆ ಸನ್ಯಾಸಿನಿಯ೦ತೆ ಎಲ್ಲೋ ಹೋಗಿಬಿಡ್ತೀಯ ಯೋಚನೆಗಳಿ೦ದ.... ಬಾಯಿ ತೆಗೆದ ಮರುಹೊತ್ತಿನಲ್ಲಿ ಮಾತ್ರ  ಪಟಪಟ ಪಟಾಕ...